Bigg Boss: ಕಿಚ್ಚನ ಜೊತೆ ಹೂಸಿನ ಕಥೆ- 75ಕ್ಕೆ ಉದ್ಘಾಟನೆ...

ಈ ವಾರ ಬಿಗ್‌ಬಾಸ್‌ ಸ್ಪರ್ಧಿಗಳ ಜೊತೆ ಕಿಚ್ಚ ಸುದೀಪ್ ವಾರದ ಕಥೆ ನಡೆಸಿದರು. ಅದರಲ್ಲೂ ವಿಶೇಷವಾಗಿ ಕಿಚ್ಚನ ಜೊತೆ ಹೂಸಿನ ಕಥೆ ಕಳೆದ ದಿನ ದೊಡ್ಮನೆಯಲ್ಲಿ ಸಖತ್ ಸದ್ದು ಮಾಡಿದೆ. ಇದರಿಂದ ಬಿಗ್‌ಬಾಸ್‌ ಮನೆಯಂಗಳ ಕಾಮಿಡಿ ಶೋ ಆಗಿತ್ತು. ಅಷ್ಟಕ್ಕೂ ಈ ಕಥೆ ಶುರುವಾಗಿದ್ದು ಯಾರಿಂದ ಗೊತ್ತಾ?

ಹನುಮಂತ ಕ್ಯಾಪ್ಟನ್ ಆದರೂ ಕ್ಯಾಪ್ಟನ್ ರೂಮ್‌ನಲ್ಲಿ ಮಲಗುವುದಿಲ್ಲ. ಬದಲಿಗೆ ಅವರು ಧನರಾಜ್ ಹಾಗೂ ಮಾನಸ ಜೊತೆ ಹಾಲ್‌ನಲ್ಲಿ ಮಲಗುತ್ತಾರೆ. ಇದಕ್ಕೆ ಕಾರಣ ಕೇಳಿದ ಸುದೀಪ್ ಅವರಿಗೆ ಹನುಮಂತ ಹೇಳಿದಿಷ್ಟು... ಸರ್‌ ನನಗೆ ಕ್ಯಾಪ್ಟನ್‌ ರೂಂ ಅಲ್ಲಿ ನಿದ್ದೆ ಬರಲ್ಲ. ಹೀಗಾಗಿ ನಾನು ಅಲ್ಲಿ ಮಲಗಲ್ಲ. ನನ್ ಬದಲಿಗೆ ನಾನು ನನ್ನ ಲುಂಗಿ ಹಾಸಿರುತ್ತೇನೆ ಎಂದಿದ್ದಾರೆ.

Bigg Boss hanumantha farted 65 times in bigg boss house kichcha sudeep ask about it to dhanraj

ಈ ಮಾತು ಕೇಳಿ ಸುದೀಪ್ ಸಿಕ್ಕಾಪಟ್ಟೆ ನಗಾಡಿದ್ದಾರೆ. ಕ್ಯಾಪ್ಟನ್‌ ರೂಂನಲ್ಲಿ ಮಲಗಬೇಕು ಅಂತ ತುಂಬಾ ಜನ ಆಸೆ ಪಟ್ಟು ಏನೇಲ್ಲಾ ಪ್ರಯತ್ನ ಮಾಡುತ್ತಾರೆ. ಹೀಗಿರುವಾಗ ಹನುಮಂತ ಲುಂಗಿಗಾಗಿ ಕ್ಯಾಪ್ಟನ್ ರೂಂ ಬಳಕೆ ಮಾಡಿಕೊಳ್ಳುತ್ತಿರುವುದು ಮನೆ ಮಂದಿಗೆ ಮಾತ್ರವಲ್ಲ ಬಿಗ್‌ಬಾಸ್‌ ನೋಡುವ ಪ್ರೇಕ್ಷಕರಿಗೂ ಅವರ ಸರಳತೆ ಇಷ್ಟವಾಗಿದೆ.

ಕಿಚ್ಚನ ಜೊತೆ ಹೂಸಿನ ಕಥೆ..

ಬಿಗ್‌ಬಾಸ್‌ ಮನೆಯಲ್ಲಿ ಸದಾ ಹನುಮಂತ ಅವರ ಜೊತೆಯಾಗಿ ಇರುವ ಧನರಾಜ್ 63, 64, 65 ಅಂತ ನಂಬರ್‌ಗಳ ಲೆಕ್ಕಾ ಹಾಕುತ್ತಾರೆ. ಇದೇನು ಅಂತ ಸುದೀಪ್ ಕೇಳಿದ್ದಕ್ಕೆ ಧನರಾಜು, ಅದು ಹನುಮಂತು ಬಿಡುವ ಹೂಸಿನ ಲೆಕ್ಕಾಚಾರ ಎನ್ನುತ್ತಾರೆ. ಹೀಗೆ ಬಿಗ್‌ಬಾಸ್‌ ಮನೆಯಲ್ಲಿ ಹನುಮಂತ 65 ಬಾರಿ ಹೂಸು ಬಿಟ್ಟಿದ್ದಾರಂತೆ. ಅದನ್ನು ಧನರಾಜ್ ಮಿಸ್‌ ಮಾಡದೆ ಲೆಕ್ಕಹಾಕಿದ್ದಾರೆ. ಅಲ್ಲದೆ 25ಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಹೂಸಿನ ಉದ್ಘಾಟನೆ ಕೂಡ ಆಗಿದೆಯಂತೆ. ಈ ಉದ್ಘಾಟನೆಯನ್ನು ಗೋಲ್ಡ್‌ ಸುರೇಶ್ ಅವರು ಮಾಡಿದ್ದಾರಂತೆ.

ಅಲ್ಲದೆ ಧನರಾಜು ಅವರು 75ನೇ ಹೂಸಿನ ಉದ್ಘಾಟನೆ ಮಾಡಲು ಇಚ್ಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅದು ಹೇಗೆ ಅನ್ನೋದನ್ನು ಕೂಡ ಧನರಾಜ್ ಅವರು ವಿವರಿಸಿದ್ದಾರೆ. ಒಂದು ಬಲೂನ್ ಅನ್ನು ಹೊಡೆಯುವ ಮೂಲಕ ಧನರಾಜ್ ಅವರು 75ನೇ ಹೂಸಿನ ಉದ್ಘಾಟನೆ ಮಾಡಲಿದ್ದಾರಂತೆ. ಇದನ್ನು ಕೇಳಿ ಕಿಚ್ಚಾ ಸುದೀಪ್ ಹಾಗೂ ಪ್ರೇಕ್ಷಕರು ನಗೆ ಕಡಲಲ್ಲಿ ತೇಲಾಡಿದ್ದಾರೆ.

Bigg Boss hanumantha farted 65 times in bigg boss house kichcha sudeep ask about it to dhanraj

ಹನುಮಂತ ಕೊಟ್ಟ ಪ್ರತಿಕ್ರಿಯೆ ಏನು?

''ಬಿಗ್‌ಬಾಸ್‌ ಮನೆಯಲ್ಲಿ ಊಟ ಸರಿ ಆಗಲ್ಲ. ಟೈಮ್‌ ಟು ಟೈಮ್ ಊಟ ಆಗಲ್ಲ. ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್‌ ಹಿಡಿಯುತ್ತೆ. ಹೂಸ್ ಬರುತ್ತೆ ಎಂದು ಹನುಮಂತು ಹೂಸಿಗೆ ಕಾರಣ ಹೇಳಿದ್ದಾರೆ. ಇದಕ್ಕೆ ಸುದೀಪ್, 'ಎಲ್ಲರಿಗೂ ಅದು ಬರುತ್ತೆ. ಆದರೆ ಅದು ಗೊತ್ತಾಗಲ್ಲ. ನಿಮ್ದು ಮಾತ್ರ ಗೊತ್ತಾಗುತ್ತೆ ಅಲ್ವಾ ಮಂಜು..' ಅಂತ ಮಂಜು ಅವರಿಗೆ ಕೇಳಿದ ತಕ್ಷಣ ಮಂಜು ಅವರು ಕೂಡ 'ಹೌದು ಸರ್ ' ಎನ್ನುತ್ತಾರೆ. ಇದರಿಂದ ಮನೆ ಮಂದಿಯಲ್ಲೆ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.

ಬಿಗ್‌ಬಾಸ್‌ ಮನೆಗೆ ಇನ್ಮುಂದೆ ರೂಂ ಫ್ರೆಷ್ನರ್ ಸ್ಪಾನ್ಸರ್- ಸುದೀಪ್

ಬಿಗ್‌ಬಾಸ್‌ ಮನೆ ಹೀಗೆ ಆದರೆ ಹೊರಗಡೆಯಿಂದ ರೂಂ ಸ್ಪ್ರೇ ಹಾಗೂ ರೂಂ ಫ್ರೆಷ್ನರ್‌ಗೂ ಸ್ಪಾನ್ಸರ್ ಬರಲು ಆರಂಭವಾಗುತ್ತೆ ಅಂತ ಸುದೀಪ್ ಕಾಮಿಡಿ ಮಾಡಿದ್ದಾರೆ. ಬಿಗ್‌ಬಾಸ್‌ ತಂಡ ಇದೇ ಕಾರಣಕ್ಕೆ ಹನುಮಂತ ಅವರನ್ನು ಡೈರೆಕ್ಟ್ ಆಗಿ ಬಿಗ್‌ಬಾಸ್‌ ಮನೆಗೆ ಕಳುಹಿಸಿದ್ದು ಅನ್ಸುತ್ತೆ. ಹನುಮಂತನನ್ನ ಯಾಕೆ ನನ್ನ ಮುಂದೆ ವೇದಿಕೆಗೆ ಕರೆದಿಲ್ಲ ಅನ್ನೋದು ನನಗೀಗ ಅರ್ಥ ಆಗಿದೆ ಎಂದು ಸುದೀಪ್ ಮತ್ತೊಂದು ನಗೆ ಪಟಾಕಿ ಸಿಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+