Bigg Boss: ಜೈ ಬಿಗ್‌ಬಾಸ್ ಎಂದ ಹನುಮಂತನಿಗೆ ಜಯ- ತಾವೇ ವಿನ್ ಎಂದುಕೊಂಡವರೆಲ್ಲಾ ಸೈಲೆಂಟ್
ಬಿಗ್‌ಬಾಸ್ ಮನೆಯಲ್ಲಿ ಘಟಾನುಘಟಿಗಳು ಗಪ್‌ಚಿಪ್ ಆಗುವಂತೆ ಆಟ ಆಡಿ ಫಿನಾಲೆ ಟಿಕೆಟ್ ಅನ್ನು ಸಿಂಪಲ್ ಸ್ಟಾರ್ ಹನುಮಂತ ಪಡೆದುಕೊಂಡಿದ್ದಾರೆ. ಈ ಟಿಕೆಟ್ ನೀಡಲು ನಟಿ ಆದಿತಿ ಪ್ರಭುದೇವ ಹಾಗೂ ನಟ ಶರಣ್ ಅವರು ಬಿಗ್‌ಬಾಸ್ ಮನೆಗೆ ಆಗಮಿಸಿದ್ದರು. ಈ ಇಬ್ಬರು ತಾರೆಯರು ಮನೆಯಲ್ಲಿ ಜಯ ಗಳಿಸಿದ ಹನುಮಂತಗೆ ಟಿಕೆಟ್ ಟು ಫಿನಾಲೆಯನ್ನು ನೀಡಿ ಶುಭ ಹಾರೈಸಿದ್ದಾರೆ. ಹಾಗಾದರೆ ರಜತ್, ತ್ರಿವಿಕ್ರಮ್, ಭವ್ಯಾ ಸರಿಯಾಗಿ ಆಡಲಿಲ್ವಾ? ಹನುಮಂತ ವಿನ್ ಆಗಲು ಕಾರಣ ಏನು? ಮೋಸದ ಆಟಕ್ಕೆ ಉತ್ತರ ಕೊಟ್ರಾ ಹನುಮಂತ?
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯಲು ಎರಡೇ ವಾರಗಳು ಬಾಕಿ ಇದೆ. ಮುಂದಿನ ವಾರದ ಕಡೆಯ ಕ್ಯಾಪ್ಟನ್ ಅನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಉಗ್ರಂ ಮಂಜು ಅವರಿಗೆ ಕಳಪೆ ಪಟ್ಟ ನೀಡಿ ಜೈಲಿಗೆ ಕಳುಹಿಸಲಾಗಿದೆ. ಇನ್ನೂ ಗಾಯಕ ಹನುಮಂತ ಅವರು ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದು ಬಿಗ್‌ಬಾಸ್ ಮನೆಯ ಕೊನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ಹನುಮಂತ ಅವರು ಬಿಗ್‌ಬಾಸ್ ಮನೆಗೆ ಬರುವಾಗಲು ಕ್ಯಾಪ್ಟನ್ ಆಗಿ ಬಂದರು. ಈಗ ಹೋಗುವಾಗಲೂ ಅಂದರೆ ಬಿಗ್‌ಬಾಸ್ ಕೊನೆಯ ಕ್ಯಾಪ್ಟನ್ ಕೂಡ ಅವರೇ ಆಗಿದ್ದಾರೆ. ಅಷ್ಟೇ ಅಲ್ಲ ಹನುಮಂತ ಬಿಗ್‌ಬಾಸ್ ಮನೆಗೆ ಬರುವಾಗ ಹೇಗಿದ್ದರೋ ಈಗಲೂ ಕೂಡ ಹಾಗೇ ಇದ್ದಾರೆ. ಅವರು ನಡೆ, ನುಡಿ ಯಾವುದೂ ಕೂಡ ಬದಲಾಗಿಲ್ಲ. ಹಾಡಿನ ಮೂಲಕ ಎಲ್ಲರನ್ನೂ ಖುಷಿ ಪಡಿಸುತ್ತಾ ಅವರ ಮಾತಿನಿಂದ ಎಲ್ಲರನ್ನು ನಗಿಸುತ್ತಾ ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಈಗಾಗಲೇ ಗೆದ್ದುಬಿಟ್ಟಿದ್ದಾರೆ. ಬಿಗ್‌ಬಾಸ್ ವೀಕ್ಷಕರಿಗಂತೂ ಹನುಮಂತನ ಸರಳತೆ, ಕಾಮಿಡಿ ಎಲ್ಲವೂ ಇಷ್ಟವಾಗಿದೆ. ಹೀಗಾಗಿ ಈ ಬಾರಿ ಹನುಮಂತ ಜಯ ಗಳಿಸುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ಮನೆಯಲ್ಲಿ ಉಳಿದ ಒಂಬತ್ತು ಸ್ಪರ್ಧಿಗಳಲ್ಲಿ ಯಾರು ನೇರವಾಗಿ ಫಿನಾಲೆಗೆ ಹೋಗುತ್ತಾರೆ ಎನ್ನುವುದಕ್ಕೆ ಬಿಗ್‌ಬಾಸ್ ಈ ವಾರ ಸರಣಿ ಟಾಸ್ಕ್‌ಗಳನ್ನು ನೀಡಿದ್ದರು. ಈ ಸರಣಿ ಟಾಸ್ಕ್‌ಗಳಲ್ಲಿ ಕೊನೆಯಲ್ಲಿ ಗೆದ್ದು ಉಳಿದುಕೊಂಡಿದ್ದು ನಾಲ್ಕು ಜನ ಮಾತ್ರ. ಟಿಕೆಟ್ ಟು ಫಿನಾಲೆಯ ಅಂತಿಮ ಟಾಸ್ಕ್ ಆಡಲು ಭವ್ಯಾ, ತ್ರಿವಿಕ್ರಮ್, ರಜತ್ ಹಾಗೂ ಹನುಮಂತ ಆಯ್ಕೆ ಆಗಿದ್ದರು.
ಈ ನಾಲ್ಕು ಜನರಿಗೆ ಬಿಗ್‌ಬಾಸ್ ಮನೆಯಲ್ಲಿ ಕಳೆದ ದಿನ ಟಿಕೆಟ್ ಟು ಫಿನಾಲೆಯ ಅಂತಿಮ ಟಾಸ್ಕ್ ನೀಡಲಾಗಿತ್ತು. ಇನ್ನೂ ಕಳೆದ ದಿನದ ಟಾಸ್ಕ್ ಪ್ರತೀ ಸ್ಪರ್ಧಿಗಳ ವೈಯಕ್ತಿಕ ಶಕ್ತಿ ಮೇಲೆ ಆಡಿ ಗೆಲ್ಲಬೇಕಾದಂತಹ ಟಾಸ್ಕ್ ಆಗಿತ್ತು.
ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಹಗ್ಗಗಳಿಗೆ ತೂಗಿ ಹಾಕಿದ ಕೀಲಿಗಳನ್ನು ಹಗ್ಗದ ಸಹಾಯದಿಂದ ಮೇಲೆ ಹತ್ತಿ ಸಂಗ್ರಹಿಸಿ ಕೆಳಗೆ ತಂದು ಪೆಟ್ಟಿಗೆಯನ್ನು ತೆಗೆದು ಆ ಪೆಟ್ಟಿಯಲ್ಲಿ ಇರುವ ಬಾವುಟವನ್ನು ಅದೇ ಹಗ್ಗದ ಸಹಾಯದಿಂದ ಮೇಲೆ ಹತ್ತಿ ತುತ್ತತುದಿಗೆ ಹಾರಿಸಬೇಕು. ಬಾವುಟ ಹಾರಿಸಿ 'ಬಿಗ್‌ಬಾಸ್' ಎಂದು ಘೋಷಣೆ ಮಾಡಬೇಕು. ಯಾರು ಕಡಿಮೆ ಸಮಯದಲ್ಲಿ ಈ ಆಟವನ್ನು ಪೂರ್ಣಗೊಳಿಸುತ್ತಾರೋ ಅವರೇ ಈ ಆಟದಲ್ಲಿ ಗೆಲ್ಲುತ್ತಾರೆ. ಹನುಮಂತ ಅತ್ಯಂತ ಕಡಿಮೆ ಸಮಯದಲ್ಲಿ ಈ ಆಟವನ್ನು ಪೂರ್ಣಗೊಳಿಸಿ 'ಜೈ ಬಿಗ್‌ಬಾಸ್' ಎಂದು ಘೋಷಣೆ ಮಾಡಿದರು.
ಇದರೊಂದಿಗೆ ಟಿಕೆಟ್ ಟು ಫಿನಾಲೆಯನ್ನು ಗಾಯಕ ಹನುಮಂತ ಪಡೆದುಕೊಂಡಿದ್ದಾರೆ. ಟಾಸ್ಕ್ ವೈಯಕ್ತಿಕ ಸಾಮಾರ್ಥ್ಯದ ಮೇಲೆ ನಿರ್ಧಾರವಾಗಿದ್ದರಿಂದ ಇಲ್ಲಿ ಯಾರೂ ಕೂಡ ಯಾರನ್ನೂ ಮೋಸ ಮಾಡಲು ಆಗಿಲ್ಲ. ಘಟಾನುಘಟಿ ಸ್ಪರ್ಧಿಗಳೆಲ್ಲರೂ ಹನುಮಂತನ ಆಟವನ್ನು ತಲೆ ಬಾಗಿ ಒಪ್ಪಿಕೊಂಡಿದ್ದಾರೆ.
ಅಲ್ಲದೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಅದಿತಿ ಪ್ರಭುದೇವ ಹಾಗೂ ಶರಣ್ ಅವರು ಟಿಕೆಟ್ ಟು ಫಿನಾಲೆಯನ್ನು ಹನುಮಂತುಗೆ ನೀಡಿ ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ಹನುಮಂತ ಟಾಸ್ಕ್್ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದು ಈ ಬಾರಿಯ ಕಿಚ್ಚನ ಚಪ್ಪಾಳೆ ಹನುಮಂತನಿಗೆ ಹೋಗುವ ಸಾಧ್ಯತೆ ಇದೆ.












Click it and Unblock the Notifications