Get Updates
Get notified of breaking news, exclusive insights, and must-see stories!

Bigg Boss: ಗೌತಮಿ ಕ್ಯಾಪ್ಟನ್ ಆಗಲು ಕಾರಣ ದೈವೀ ಶಕ್ತಿ: ಏನಿದು ಪವಾಡ?

ಬಿಗ್‌ಬಾಸ್ ಮನೆಯಲ್ಲಿ ಪ್ರಸ್ತುತ ಕ್ಯಾಪ್ಟನ್ ಆಗಿ ಗೌತಮಿ ಅವರು ಆಯ್ಕೆ ಆಗಿದ್ದಾರೆ. ವಿಶೇಷ ಅಂದರೆ ಬಿಗ್‌ಬಾಸ್ ಕನ್ನಡ ಸೀಸನ್ 11ರ 11ನೇ ವಾರದಲ್ಲಿ ಗೌತಮಿ ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ. ಗೌತಮಿ ಈ ವಾರ ಕ್ಯಾಪ್ಟನ್ ಆಗಿರುವುದು ಒಂದು ರೀತಿ ಅಚ್ಚರಿಯೇ ಹೌದು.. ಗೌತಮಿ ಈ ವಾರ ಮನೆಯ ಕ್ಯಾಪ್ಟನ್ ಆಗಲು ಕಾರಣ ಅವರು ನಂಬಿದ ದೈವೀ ಶಕ್ತಿ ಅಂತ ಹೇಳಲಾಗುತ್ತದೆ. ಇದನ್ನು ಗೌತಮಿ ಅವರು ಕೂಡ ಒಪ್ಪಿಕೊಂಡಿದ್ದಾರೆ.

ಹೌದು... ಗೌತಮಿ ಅವರಿಗೆ ಬಿಗ್‌ಬಾಸ್‌ ಮನೆಯಲ್ಲಿ ಬಲವಾಗಿದ್ದು, ಶಕ್ತಿ ನೀಡಿದ್ದು, ವರವಾಗಿದ್ದು, ಗೌತಮಿಯವರನ್ನು ಕ್ಯಾಪ್ಟನ್ಸಿ ಮಾಡಿದ್ದು ಅವರು ನಂಬಿದ ಅಮ್ಮ. ಗೌತಮಿ ಪಾಲಿನ ಅಮ್ಮ ಗೌತಮಿ ಅವರನ್ನು ಕೈ ಹಿಡಿದಿದ್ದಾರೆ. ಗೌತಮಿ ಅವರನ್ನು ಇಲ್ಲಿವರೆಗೂ ನಡೆಸಿಕೊಂಡು ಬಂದಿರುವುದು, ಮುಂದೆ ನಡೆಸಿಕೊಂಡು ಹೋಗುತ್ತಿರುವುದು ಇದೇ ಅಮ್ಮ ಎಂದು ಗೌತಮಿ ನಂಬುತ್ತಾರೆ. ಹಾಗಾದರೆ ಗೌತಮಿ ಬದುಕಿನಲ್ಲಿ ಈ ರೀತಿ ಪವಾಡ ಮಾಡುವ ಆ ಶಕ್ತಿ ಯಾವುದು? ಅವರ ಬದುಕನ್ನು ಬದಲಾಯಿಸಿದ ಶಕ್ತಿ ಯಾವುದು?

Bigg boss gauthami jadav believed god- divine power that made gauthami a captain

ಬದುಕು ಹೇಗೆ ಬದಲಾಯ್ತು ನೋಡಿ...

ಗೌತಮಿ ಕ್ಯಾಪ್ಟನ್ ಆದ ಬಳಿಕ ಧನ್‌ರಾಜ್ 'ನೋಡಿ ಬದುಕು ಹೇಗೆ ಬದಲಾಗುತ್ತದೆ' ಎಂದು ಹೇಳುತ್ತಾರೆ. ವಿಧಿಯಾಟ ಹೇಗೆಲ್ಲಾ ಬದಲಾಗುತ್ತದೆ ಮತ್ತು ಬಿಗ್‌ಬಾಸ್‌ ಮನೆಯಲ್ಲಿ ಆಟ ಹೇಗೆಲ್ಲಾ ಬದಲಾಗುತ್ತೆ ಅನ್ನೋದಕ್ಕೆ ಸಾಕ್ಷಿ ಇದು ಎಂದು ಧನ್‌ರಾಜ್ ಮಾತನಾಡಿಕೊಳ್ಳುತ್ತಾರೆ. ಈ ಮಾತು ಅಕ್ಷರಶ: ನಿಜ. ಯಾಕೆಂದರೆ ಗೌತಮಿ ಈ ವಾರ ಕ್ಯಾಪ್ಟನ್ ಆಗುವುದು ಒಂದು ಕಡೆ ಇರಲಿ, ಕ್ಯಾಪ್ಟನ್ಸಿ ಓಟದಲ್ಲೇ ಇರಲಿಲ್ಲ. ಕ್ಯಾಪ್ಟನ್ಸಿ ಟಾಸ್ಕ್‌ಗೆ ಬರಬೇಕಾದ ಯೋಗ್ಯತೆ ಕೂಡ ಗೌತಮಿ ಟೀಂಗೆ ಇರಲಿಲ್ಲ. ಆದರೆ ಬದಲಾದ ಸನ್ನಿವೇಶದಲ್ಲಿ ಗೌತಮಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವುದೇ ಒಂದು ರೋಚಕ.

ಕ್ಯಾಪ್ಟನ್ಸಿ ಓಟದಲ್ಲಿ ಇರಲೇ ಇಲ್ಲ ಗೌತಮಿ ಕ್ಯಾಪ್ಟನ್ ಆಗಿದ್ದು ಪವಾಡ

ಹೆಚ್ಚು ಅಂಕ ಗಳಿಸಿತ್ತು ಎನ್ನುವ ಕಾರಣಕ್ಕೆ ಧನ್‌ರಾಜ್ ಅವರು ಇದ್ದ ಟೀಂ ಅನ್ನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಲಾಗುತ್ತದೆ. ಆದರೆ ಧನ್‌ರಾಜ್ ಅವರು ಟೀಂನಲ್ಲಿ ಗೌತಮಿ ಇರಲಿಲ್ಲ. ಗೌತಮಿ ಅವರು ಕಡಿಮೆ ಅಂಕ ಗಳಿಸಿದ ಟೀಂನಲ್ಲಿ ಇರುತ್ತಾರೆ. ಅವರು ಕ್ಯಾಪ್ಟನ್ಸಿ ಟಾಸ್ಕ್ ಪಿಚ್‌ನಲ್ಲೇ ಇರೋದಿಲ್ಲ.

ಧನ್‌ರಾಜ್ ಅವರು ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವುದಿಲ್ಲ ಎಂದಾಗ ಬೇರೆಯವರಿಗೆ ಅವಕಾಶ ಸಿಗುತ್ತದೆ. ಆಗಲೂ ಗೌತಮಿ ಈ ಪಿಚ್ಚರ್‌ ಅಲ್ಲಿ ಇರಲೇ ಇಲ್ಲ. ಆದರೆ ಮೋಕ್ಷಿತಾ ಅವರು ಗೌತಮಿ ಅಥವಾ ಇನ್ನ್ಯಾರದ್ದೋ ಸಹಾಯ ಪಡೆದುಕೊಂಡು ಕ್ಯಾಪ್ಟನ್ ಟಾಸ್ಕ್ ಆಡೋದಿಲ್ಲ ಅಂತಾರಲ್ಲ ಆಗ ಅವಕಾಶ ಹುಡುಕಿಕೊಂಡು ಗೌತಮಿ ಅವರ ಬಳಿ ಬರುತ್ತದೆ.

ಗೌತಮಿ ಕ್ಯಾಪ್ಟನ್ ಆಗೋದಿಲ್ಲ ಎಂದುಕೊಂಡವರಿಗೆ ಬಿಗ್‌ ಶಾಕ್!

ಮನೆಯವರು ಕೂಡ ಗೌತಮಿ ಕ್ಯಾಪ್ಟನ್ ಟಾಸ್ಕ್ ಆಡಲು ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ ಈ ಅವಕಾಶವನ್ನು ಕಡಿಮೆ ಅಂಕ ಗಳಿಸಿದ ಗೌತಮಿ ಅವರೊಂದಿಗಿದ್ದ ಇತರ ಸದಸ್ಯರಾದ ತ್ರಿವಿಕ್ರಮ್ ಅಥವಾ ಮಂಜು ಅವರಿಗೆ ಕೊಟ್ಟರೆ ಡೇಂಜರ್, ಅಂದರೆ ಅವರು ಕ್ಯಾಪ್ಟನ್ ಆಗೋ ಸಾಧ್ಯತೆ ಇರುತ್ತದೆ. ಹೀಗಾಗಿ ಗೌತಮಿಗೆ ಕೊಟ್ಟರೆ ಸೇಫ್ ಅನ್ನೋ ರೀತಿ ಮನೆಯ ಸದಸ್ಯರು ಯೋಚನೆ ಮಾಡುತ್ತಾರೆ. ಹೀಗಾಗಿ ಗೌತಮಿಗೆ ಕ್ಯಾಪ್ಟನ್ಸಿ ಟಾಸ್ಕ್‌ ಆಡಲು ಒಪ್ಪಿಗೆ ನೀಡುತ್ತಾರೆ. ಮನೆಯ ಸದಸ್ಯರು ಗೌತಮಿ ಕ್ಯಾಪ್ಟನ್ ಆಗೋದಿಲ್ಲ, ಅವರು ವೀಕ್ ಅಂತ ಭಾವಿಸುತ್ತಾರೆ. ಹೀಗಾಗಿ ಗೌತಮಿ ಅವರನ್ನು ಸೆಲೆಕ್ಟ ಮಾಡುತ್ತಾರೆ.

ಈ ವೇಳೆ ಗೌತಮಿ ಇನ್ನೊಬ್ಬರ ಸಹಾಯ ಕೇಳಲು ಹೋಗುತ್ತಾರೆ. ಆರಂಭದಲ್ಲಿ ಯಾರೂ ಕೂಡ ಒಪ್ಪುವುದಿಲ್ಲ. ನಂತರ ಧನ್‌ರಾಜ್ ಇವರೊಂದಿಗೆ ಆಡಲು ಒಪ್ಪುತ್ತಾರೆ. ಆಗ ಬಾಲ್‌ಗಳನ್ನು ಒಟ್ಟುಗೂಡಿಸುವ ಟಾಸ್ಕ್‌ನಲ್ಲಿ ಗೌತಮಿ ಹಾಗೂ ಧನ್‌ರಾಜ್ ಸಕ್ಸಸ್ ಆಗುತ್ತಾರೆ. ಈ ಟಾಸ್ಕ್‌ ನಲ್ಲಿ ಅಂತಿಮವಾಗಿ ಉಳಿದುಕೊಳ್ಳೋದು ಶಿಶಿರ್ ಹಾಗೂ ಗೌತಮಿ. ಇವರಿಬ್ಬರಿಗೆ ಕ್ಯಾಪ್ಟನ್ಸಿ ಟಾಸ್ಕ್‌ ಕೊಡಲಾಗುತ್ತದೆ.

ಆಟದಲ್ಲಿ ದೇವಿಯ ಮಂತ್ರವನ್ನು ಜಪಿಸಿದ ಗೌತಮಿ

ಬಿಗ್‌ಬಾಸ್ ಶಿಶಿರ್ ಹಾಗೂ ಗೌತಮಿಗೆ ಕ್ಯಾಪ್ಟನ್ ಆಗಲು ಅಂತಿಮ ಟಾಸ್ಕ್‌ ಅನ್ನು ನೀಡುತ್ತಾರೆ. ಈ ಟಾಸ್ಕ್‌ನಲ್ಲಿ ಹಗ್ಗದ ಸಹಾಯದಿಂದ ಚಂಡನ್ನು ಸಾಗಿಸಿ ಬಾಸ್ಕೆಟ್‌ಗೆ ಹಾಕಬೇಕು. ಇದು ಅಷ್ಟೊಂದು ಸುಲಭವಾಗಿ ಇರಲಿಲ್ಲ. ಇದರಲ್ಲಿ ಆರಂಭದಲ್ಲಿ ಆಕಡೆ ಈಕಡೆ ಆದರೂ ಕೂಡ ಗೌತಮಿ ಅವರು ಅದನ್ನು ಸರಿಯಾಗಿ ನಿಭಾಯಿಸುತ್ತಾರೆ. ಈ ಸಂದರ್ಭದಲ್ಲಿ ಗೌತಮಿ ಒಂದು ಮಂತ್ರವನ್ನು ಹೇಳಿ ಕೈ ಮುಗಿದು ಚಂಡನ್ನು ಇಡುತ್ತಾರೆ. ಚಂಡನ್ನು ಇಟ್ಟ್ ಮೇಲೂ ಮಂತ್ರವನ್ನು ಹೇಳುತ್ತಾರೆ. ಆ ಚಂಡನ್ನು ಹಗ್ಗದ ಸಹಾಯದಿಂದ ಸಾಗಿಸುವಾಗಲೂ ಬಾಯಲ್ಲಿ ಮಂತ್ರವನ್ನು ಜಪಿಸುತ್ತಲೇ ಇರುತ್ತಾರೆ. ಗೌತಮಿ ಹಾಕುವ ಐದು ಚಂಡುಗಳಿಗೂ ಇದೇ ರೀತಿ ಮಂತ್ರವನ್ನು ಹೇಳುತ್ತಾ ಟಾಸ್ಕ್‌ ಅನ್ನು ಪೂರ್ಣಗೊಳಿಸುತ್ತಾರೆ. ಆದರೆ ಶಿಶಿರ್‌ಗೆ ಒಂದು ಬಾಲ್ ಹಾಕಲು ಕೂಡ ಆಗುವುದಿಲ್ಲ. ಹೀಗಾಗಿ ಗೌತಮಿ ಐದು ಬಾಲ್‌ ಅನ್ನು ಹಾಕಿ ಗೆದ್ದು ಕ್ಯಾಪ್ಟನ್ ಆಗುತ್ತಾರೆ.

ಬಳಿಕ ಗೌತಮಿ ಮನೆಯಲ್ಲಿರುವ ದೇವಿ ಬಳಿ ಹೋಗಿ ಕೈ ಮುಗಿದು ನಮಸ್ಕಾರ ಮಾಡುತ್ತಾರೆ. ಇಲ್ಲಿಗೆ ಕನ್ಫಾರ್ಮ್ ಗೌತಮಿಗೆ ಕ್ಯಾಪ್ಟನ್ ಆಗುವಂತೆ ಮಾಡಿದ್ದು ಗೌತಮಿ ಹಿಂದಿರುವ ಅದೊಂದು ವಿಶೇಷ ದೈವೀ ಶಕ್ತಿ ಅನ್ನೋದು ರುಜುವಾತಾಗುತ್ತದೆ. ಗೌತಮಿ ಆಡುವ ರೀತಿ, ನಡೆದುಕೊಂಡ ರೀತಿ, ಪಾಸಿಟಿವಿಟಿ ಪದ್ಮಾವತಿಗೆ ಶಕ್ತಿ ಆಗಿರುವುದು ದೇವಿ ಶಕ್ತಿ ಅನ್ನೋದು ಸ್ಪಷ್ಟವಾಗುತ್ತದೆ. ಹಾಗಾದರೆ ಗೌತಮಿ ನಂಬಿದ ಆ ದೇವರು ಯಾರು?

ಗೌತಮಿ ನಂಬಿರುವ ದೇವಿ ಯಾರು?

ಗೌತಮಿ ನಂಬಿರುವುದು ದುರ್ಗಾಂಬ ದೇವಿಯನ್ನು. ದುರ್ಗಾಂಬ ದೇವಿಯನ್ನು ಹಾಗೂ ಅವರ ಮಂತ್ರವನ್ನು ವಿಪರೀತವಾಗಿ ಪ್ರೀತಿಸುವ ಗೌತಮಿ ಅವರ ಬದುಕಿನಲ್ಲಿ ಇಷ್ಟೆಲ್ಲಾ ಪವಾಡಗಳು ಆಗಲು ಕಾರಣನೇ ಆ ದೇವೀ ಶಕ್ತಿ ಎಂದು ಅವರು ನಂಬಿದ್ದಾರೆ. ಹೀಗಾಗಿ ಆಟದಲ್ಲೂ ಸಹ ಅವರು ಅದೇ ದೇವಿಯ ಮಂತ್ರ ಜಪಿಸಿದ್ದಾರೆ. ಅವರು ಸದಾ ಹೇಳುವ ಅಮ್ಮ ಅಂದರೆ ದುರ್ಗಾಂಬ ದೇವಿಯಿಂದ ಅವರು ಕ್ಯಾಪ್ಟನ್ ಆದರು ಎಂದು ಗೌತಮಿ ಹೇಳಿಕೊಳ್ಳುತ್ತಾರೆ. ಹೀಗಾಗಿ ಗೌತಮಿ ನಂಬಿರುವ ಆ ದೇವಿ ಎಲ್ಲೂ ಕೂಡ ಕೈ ಬಿಡಲಿಲ್ಲ ಅನ್ನೋದು ಇಲ್ಲಿ ಸಾಬೀತಾಗಿದೆ. ನೀವೇ ಯೋಚನೆ ಮಾಡಿ ಗೌತಮಿ ಕ್ಯಾಪ್ಟನ್‌ ಟಾಸ್ಕ್‌ ಟೀಂ ಅಲ್ಲಿ ಇರಲೇ ಇಲ್ಲ. ಅಂತಹವರು ಕ್ಯಾಪ್ಟನ್ ಆಗ್ತಾರೆ ಅಂದ್ರೆ ಇದೊಂದು ಪವಾಡ ಅಲ್ಲದೆ ಇನ್ನೇನು?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+