Rajath kishan: ಬಿಗ್‌ಬಾಸ್‌ ರಜತ್‌ಗೆ ಪೊಲೀಸರಿಂದ ಮತ್ತೊಂದು ದೊಡ್ಡ ಶಾಕ್‌

ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಆರೋಪದ ಮೇರೆಗೆ ಬಿಗ್‌ಬಾಸ್‌ ಸ್ಪರ್ಧಿ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರ ಮೇಲೆ ಕೇಸ್‌ ದಾಖಲಾಗಿ, ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಈ ಕೇಸ್‌ ವಿಚಾರಣೆ ಚುರುಕುಗೊಂಡಿದ್ದು, ಜಾಮೀನು ಪಡೆದು ರಿಲೀಫ್‌ ಆಗಿದ್ದ ರಜತ್‌ಗೆ ಪೊಲೀಸರು ಮತ್ತೊಂದು ದೊಡ್ಡ ಶಾಕ್‌ ನೀಡಿದ್ದಾರೆ. ರೀಲ್ಸ್‌ ಮಾಡಿದ ಎಡವಟ್ಟಿನಿಂದ ಜೈಲು ಸೇರಿದ್ದ ರಜತ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ವೈರಲ್‌ ಆದ ರೀಲ್ಸ್‌ನಲ್ಲಿ ರಜತ್‌ ಮಚ್ಚು ಹಿಡಿದಿರುವ ಆರೋಪ ಕೇಳಿಬಂದಿತ್ತು. ಆದರೆ, ಮೊದಲಿಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅದು ಫೈಬರ್‌ ಮಚ್ಚು ಎಂದು ಹೇಳಿದ್ದರು. ಆದರೆ ಅದು ನಿಜವಾದ ಮಚ್ಚು ಎಂದು ಪೊಲೀಸರು ಪತ್ತೆ ಹಚ್ಚಿದ್ದರು. ಇದನ್ನು ರಜತ್‌ ಪೊಲೀಸರ ವಶಕ್ಕೆ ಈವರೆಗೆ ನೀಡಿರಲಿಲ್ಲ. ಸದ್ಯ ಜಾಮೀನು ಪಡೆದು ರಿಲೀಫ್‌ ಆಗಿದ್ದ ರಜತ್‌ಗೆ ಪೊಲೀಸರು ಬಾಗಿಲು ತಟ್ಟಿದ್ದಾರೆ. ಈ ಮಚ್ಚಿನ ಬಗ್ಗೆ ತಕ್ಷಣವೇ ವಿವರ ನೀಡುವಂತೆ ರಜತ್‌ಗೆ ನೋಟಿಸ್‌ ನೀಡಿದ್ದಾರೆ. ಇಂದೇ ವಿಚಾರಣೆಗೆ ಬರುವಂತೆಯೂ ಬಸವೇಶ್ವರ ನಗರ ಪೊಲೀಸರು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದರಿಂದ ರಜತ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.

Bigg Boss Contestant Rajath Kishan Gets Police Notice For Reel With Machete

ರೀಲ್ಸ್‌ ನೋಡಿದ ಬಳಿಕ ಪೊಲೀಸರು ರಜತ್‌ ಹಾಗೂ ವಿನಯ್‌ ಗೌಡರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಬಳಿಕ ಸ್ಪಷ್ಟನೆ ನೀಡಿದ್ದ ರಜತ್ ನಾವು ರೀಲ್ಸ್‌ಗೆ ಬಳಸಿದ ಮಚ್ಚು ಮಿಸ್‌ ಆಗಿದೆ. ಪೊಲೀಸರ ದಾರಿ ತಪ್ಪಿಸುವ, ಸುಳ್ಳು ಹೇಳುವ ಕೆಲಸವನ್ನು ನಾವು ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಪೊಲೀಸರು ಮಚ್ಚಿನ ಬೆನ್ನತ್ತಿದ್ದರು. ಈವರೆಗೂ ಆ ಮಚ್ಚಿನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗದ ಕಾರಣ ತನಿಖೆ ನಡೆಸುವುದು ಕಷ್ಟವಾಗಿದೆ. ಈ ಹಿನ್ನೆಲೆ ಕೂಡಲೇ ಈ ಮಚ್ಚಿನ ಮಾಹಿತಿ ನೀಡಲು ಪೊಲೀಸ್‌ ಸ್ಟೇಷನ್‌ಗೆ ಬರುವಂತೆ ರಜತ್‌ಗೆ ತಿಳಿಸಿದ್ದಾರೆ.

Take a Poll

ಜಾಮೀನಿನ ಮೇಲೆ ಹೊರಬಂದಿದ್ದ ರಜತ್‌, ನಾನು ಸುಮನಹಳ್ಳಿಯ ಮೋರಿಯಲ್ಲೇ ಮಚ್ಚು ಬಿಸಾಕಿದ್ದು, ಅದು ಫೈಬರ್ ಮಚ್ಚು. ರೀಲ್ಸ್ ಮಾಡಿದ ಮೇಲೆ ಕಾರಿನಲ್ಲಿ ಮಚ್ಚು ಇಡೋದು ಬೇಡ ಎಂದು ಅನಿಸಿತ್ತು. ಸ್ಟುಡಿಯೋಗೆ ಮಚ್ಚು ವಾಪಸ್‌ ಕೊಡಬೇಕಿತ್ತು. ಲಗ್ಗೆರೆಯಲ್ಲಿದ್ದ ಸೆಟ್‌ನವರ ಗೋಡೌನ್‌ಗೆ ಹೋಗೋಣ ಅಂದ್ರೆ ಅಷ್ಟು ದೂರ ಹೋಗುವ ತಾಳ್ಮೆ ಇರಲಿಲ್ಲ. ಈ ಮಚ್ಚು ನಿಮಗೇ ಅಗತ್ಯವೇ ಎಂದು ಸೆಟ್‌ನವರಿಗೆ ಕೇಳಿದ್ದೆ. ಅದಕ್ಕೆ ಅವರು ಈ ತರದ್ದು ಇನ್ನೂ ಸಾಕಷ್ಟು ಮಚ್ಚುಗಳಿವೆ ಎಂದಿದ್ದರು. ಹಾಗಾಗಿ ದಾರಿ ಮಧ್ಯೆಯೇ ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ನಾನು ಮಚ್ಚು ಬಿಸಾಡಿದ್ದೆ ಎಂದು ರಜತ್‌ ಹೇಳಿದ್ದರು.

Bigg Boss Contestant Rajath Kishan Gets Police Notice For Reel With Machete

ಆದರೆ ರಜತ್‌ ರೀಲ್ಸ್‌ನಲ್ಲಿ ತೋರಿಸಿದ್ದು ನಿಜವಾದ ಮಚ್ಚು ಎಂದು ಪೊಲೀಸರು ಪತ್ತೆ ಹಚ್ಚಿದ್ದು, ಇದೀಗ ಮತ್ತೆ ರಜತ್‌ ಬೆನ್ನುಬಿದ್ದಿದ್ದಾರೆ. ಇಂದು ವಿಚಾರಣೆಯಲ್ಲಿ ರಜತ್‌ಗೆ ಮತ್ತೆ ಮಚ್ಚಿನ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ. ಒಂದು ವೇಳೆ ಅದು ನಿಜವಾದ ಮಚ್ಚು ಆಗಿದ್ದರೆ, ರಜತ್‌ ಮತ್ತೆ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+