Bigg Boss: ಬಿಗ್‌ಬಾಸ್‌ ಮನೆಯಿಂದ ಚೈತ್ರಾ ಕುಂದಾಪುರ ಔಟ್

ಬಿಗ್‌ಬಾಸ್‌ ಕನ್ನಡ ಸೀಸನ್ 11 ಇನ್ನೇನು ಎರಡು ವಾರಗಳಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಲಿದೆ. ಬಿಗ್‌ಬಾಸ್‌ ಮನೆಯ ಒಂಬತ್ತು ಜನ ಸ್ಪರ್ಧಿಗಳಲ್ಲಿ ಹನುಮಂತ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಕಳೆದ ದಿನ ವೇದಿಕೆಗೆ ಬಂದ ಕಿಚ್ಚ ಸುದೀಪ್ ಅವರು ಹನುಮಂತ ಅವರಿಗೆ ವಿಶ್ ಮಾಡಿದರು. ನಂತರ ರಜತ್ ಹಾಗೂ ಭವ್ಯಾ ಗೌಡ ಅವರಿಗೆ ತರಾಟೆ ತೆಗೆದುಕೊಂಡರು. ಇದರ ಜೊತೆಗೆ ಎಲ್ಲಾ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಬುದ್ಧಿ ಮಾತುಗಳನ್ನೂ ಹೇಳಿದರು.

ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಟ್ ಆಗಲು ಐದು ಜನ ಸ್ಪರ್ಧಿಗಳು ನಾಮಿನೆಟ್ ಆಗಿದ್ದಾರೆ. ಇವರೆಂದರೆ ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಚೈತ್ರಾ ಮತ್ತು ಧನ್‌ರಾಜ್. ಇದರಲ್ಲಿ ಪ್ರಸ್ತುತ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಎಂಟು ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಹಾಗಾದರೆ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿ ಯಾರು? ಕಿಚ್ಚನ ಪಂಚಾಯಿತಿಯಲ್ಲಿ ಯಾರು ಪಾಸ್? ಯಾರು ಔಟ್ ಆದರು? ಎಲ್ಲವನ್ನ ಕಂಪ್ಲೀಟ್ ಆಗಿ ತಿಳಿಯೋಣ.

bigg boss chaithra kundapura is out of the house

ಕನ್ನಡದ ಬಿಗ್‌ಬಾಸ್ ಫಿನಾಲೆಗೆ ಇನ್ನೇನು ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡ್ಕೊಂಡು ಬಿಗ್‌ಬಾಸ್ ಮುನ್ನುಗ್ಗುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಇದ್ದ ಐದು ಜನ ಸ್ಪರ್ಧಿಗಳಲ್ಲಿ ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಚೈತ್ರಾ ಮತ್ತು ಧನ್‌ರಾಜ್ ನಾಮಿನೇಟ್ ಆಗಿದ್ದರು. ಇವರಲ್ಲಿ ಒಬ್ಬ ಸ್ಪರ್ಧಿ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಕಿಚ್ಚನ ಚಪ್ಪಾಳೆ ಯಾರಿಗೆ?

ಬಿಗ್‌ಬಾಸ್‌ ಮನೆಯಿಂದ ಯಾರು ಹೊರ ಹೋದರು ಅನ್ನೋದಕ್ಕಿಂತ ಮುಂಚೆ ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಎನ್ನುವ ಬಗ್ಗೆ ತಿಳಿಯೋಣ. ಈ ಬಾರಿ ಸುದೀಪ್ ಅವರು ಫಿನಾಲೆ ಟಿಕೆಟ್ ಗೆದ್ದು ಕ್ಯಾಪ್ಟನ್ ಆದ ಹನುಮಂತನಿಗೆ ಚಪ್ಪಾಳೆ ಹೊಡೆದಿದ್ದಾರೆ. ಈ ವಾರ ಹನುಮಂತ ಆಡಿದ ರೀತಿ, ಅವರು ಆಟದಲ್ಲಿ ಭಾಗವಹಿಸಿ ತಮ್ಮ ಸಾಮಾರ್ಥ್ಯವನ್ನು ತೋರಿಸಿಕೊಂಡ ರೀತಿ ತುಂಬಾ ಅದ್ಭುತವಾಗಿತ್ತು. ಹೀಗಾಗಿ ಹನುಮಂತನಿಗೆ ಕಿಚ್ಚಾ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.

ರಜತ್ ಹಾಗೂ ಭವ್ಯಾ ಆಡಿದ ರೀತಿಗೆ ಎಚ್ಚರಿಕೆ ನೀಡಿದ ಸುದೀಪ್ ಹನುಮಂತನ ಮೇಲೆ ಭವ್ಯಾ ಕೈ ಮಾಡಿದ್ದಕ್ಕೆ ಜೈಲು ಶಿಕ್ಷೆಯನ್ನು ಕೊಟ್ಟಿದ್ದಾರೆ. ಜೊತೆಗೆ ನಾಮಿನೇಟ್ ಆದ ಐದು ಸ್ಪರ್ಧಿಗಳಲ್ಲಿ ಯಾರು ಸೇವ್ ಆದರು ಯಾರು ಔಟ್ ಅನ್ನೋದನ್ನು ಸುದೀಪ್ ಬಹಿರಂಗಪಡಿಸಿದರು. ಹಾಗಾದರೆ ಈ ವಾರ ಸೇವ್ ಆಗಿದ್ದು ಯಾರು?

ಸೇವ್ ಆದ ಸ್ಪರ್ಧಿಗಳು

ಈ ವಾರ ಎಲಿಮಿನೇಷನ್‌ನಿಂದ ಸೇವ್ ಆಗಿದ್ದು ಮೊದಲು ಭವ್ಯಾ ಗೌಡ ಅವರು. ಇನ್ನೂ ಇವತ್ತಿನ ಎಪಿಸೋಡ್‌ನಲ್ಲಿ ಮೊದಲಿಗೆ ತ್ರಿವಿಕ್ರಮ್ ಅವರು ಸೇವ್ ಆಗ್ತಾರೆ. ಇವರಾದ ಬಳಿಕ ಧನ್‌ರಾಜ್ ಅವರು ಸೇವ್ ಆಗ್ತಾರೆ. ಕೊನೆಗೆ ಉಳಿದುಕೊಳ್ಳುವುದು ಚೈತ್ರಾ ಮತ್ತು ಮೋಕ್ಷಿತಾ ಅವರು ಮಾತ್ರ. ಇವರಿಬ್ಬರೂ ಕಠಿಣ ಸ್ಪರ್ಧಿಗಳೇ. ಪ್ರತೀ ವಾರ ನಾಮಿನೇಟ್ ಆದಾಗ ಇವರಿಬ್ಬರ ಹೆಸರು ಇದ್ದೇ ಇರುತ್ತಿತ್ತು.

ಇವರಿಬ್ಬರೂ ಕೂಡ ಎಲಿಮಿನೇಷನ್ ತುತ್ತ ತುದಿಗೆ ಬಂದು ಸೇವ್ ಆಗ್ತಾಯಿದ್ದರು. ಇವರಿಬ್ಬರಿಗೂ ಕೂಡ ಕಿಚ್ಚ ಸುದೀಪ್ ಅವರು ಎಲ್ಲಿ ಮಿಸ್ಟೇಕ್ ಆಯ್ತು. ಎಲ್ಲಿ ಎಡವಿದ್ರಿ ಅಂತ ಕೇಳುತ್ತಾರೆ. ಇದಕ್ಕೆ ಮೋಕ್ಷಿತಾ ಹಾಗೂ ಚೈತ್ರಾ ಉತ್ತರವನ್ನೂ ಕೊಡುತ್ತಾರೆ. ಇನ್ನೂ ಮಿಕ್ಕ ಸ್ಪರ್ಧಿಗಳಿಗೆ ಸುದೀಪ್ ಅವರು ಯಾರು ಇವರಿಬ್ಬರಲ್ಲಿ ಸೇವ್ ಆಗಬಾರದು ಎಂದು ಪ್ರಶ್ನೆ ಮಾಡುತ್ತಾರೆ. ಆಗ ಎಲ್ಲರೂ ಕೂಡ ಚೈತ್ರಾ ಅವರ ಹೆಸರು ಹೇಳುತ್ತಾರೆ. ಆದರೆ ಉಗ್ರಂ ಮಂಜು ಮಾತ್ರ ಮೋಕ್ಷಿತಾ ಅವರ ಹೆಸರು ಹೇಳುತ್ತಾರೆ.

ಚೈತ್ರಾ ಕುಮದಾಪುರ ಔಟ್

ಕೊನೆಗೆ ಸುದೀಪ್ ಅವರು ಮೋಕ್ಷಿತಾ ಅವರನ್ನು ಸೇವ್ ಮಾಡುತ್ತಾರೆ. ಅಲ್ಲಿಗೆ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆಗುತ್ತಾರೆ. ಬಿಗ್‌ಬಾಸ್‌ ಮನೆಯಲ್ಲಿ ಈಗ ಉಳಿದಿರುವುದು ಒಟ್ಟು ಎಂಟು ಜನ ಸ್ಪರ್ಧಿಗಳು ಮಾತ್ರ. ಇನ್ನೂ ಮೂರು ಜನ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಬೇಕು. ಇವರಲ್ಲಿ ಒಬ್ಬರು ಮಿಡ್‌ ವೀಕ್ ಎಲಿಮಿನೇಷನ್ ಮೂಲಕ ಮನೆಗೆ ಹೋದರೆ, ಮಿಕ್ಕ ಇಬ್ಬರು ವೀಕೆಂಡ್‌ನಲ್ಲಿ ಡಬಲ್ ಎಲಿಮಿನೇಷನ್ ಆಗುತ್ತಾರೆ. ಎರಡು ವಾರದಲ್ಲಿ ಬಿಗ್‌ಬಾಸ್‌ ಕನ್ನಡ ಗ್ರ್ಯಾಂಡ್ ಫಿನಾಲೆ ತಲುಪಲಿದೆ. ಐದು ಜನ ಸ್ಪರ್ಧಿಗಲ್ಲಿ ಯಾರು ವಿನ್ ಅನ್ನೋದು ಗ್ರಾಂಡ್ ಫಿನಾಲೆಯಲ್ಲಿ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+