Bigg Boss: ಸಖತ್ ಟ್ರೋಲ್ ಆದ ಚೈತ್ರಾ, ಧನು-ಹನು: ಸಿಕ್ಕಾಪಟ್ಟೆ ಎಂಜಾಯ್ ಮಾಡಿದ ಕಿಚ್ಚ
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಸಖತ್ ಟ್ರೋಲ್ ಆಗಿದ್ದಾರೆ. ಕದ್ದು ಕದ್ದು ನೋಡೋ ಕಳ್ಳ ಯಾರೋ ಅಂತ ಜನ ಧನು-ಹನುವನ್ನು ಟ್ರೋಲ್ ಮಾಡಿದ್ದಾರೆ. ಇದನ್ನು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಬಿಗ್‌ಬಾಸ್ ಮನೆ ಮಂದಿಗೆಲ್ಲಾ ತೋರಿಸಿ ಸಿಕ್ಕಾಪಟ್ಟೆ ನಗಾಡಿದ್ದಾರೆ. ಅಷ್ಟಕ್ಕೂ ಏನಿದು ಟ್ರೋಲ್ ಕತೆ? ಬಿಗ್‌ಬಾಸ್ ಮನೆಯಲ್ಲಿ ಯಾರೆಲ್ಲಾ ಟ್ರೋಲ್ ಆಗಿದ್ದಾರೆ? ಇದಕ್ಕೆ ಸುದೀಪ್ ಹೇಳಿದ್ದೇನು? ಇಂದು ಕಲರ್ಸ್ ಕನ್ನಡ ಕಂಚಿಕೊಂಡ ವೀಡಿಯೋದಲ್ಲಿ ಏನಿದೆ?
ಬಿಗ್‌ಬಾಸ್ ಕನ್ನಡ ಸೀಸನ್ 11 ಇನ್ನೇನು ಮುಗಿಯುವ ಹಂತವನ್ನು ತಲುಪಿದೆ. ಹೀಗಾಗಿ ಕಳೆದ ವಾರ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಫ್ಯಾಮಿಲಿ ರೌಂಡ್ ಅಲ್ಲಿ ಮನೆಯ ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು ದೊಡ್ಮನೆಗೆ ಆಗಮಿಸಿ ತಮ್ಮ ಮಕ್ಕಳಿಗೆ ಹೊಸ ಹುರುಪು ತುಂಬಿದ್ದಾರೆ. ಇದರಿಂದಾಗಿ ಮನೆಯ ಸ್ಪರ್ಧಿಗಳಿಗೆ ಗೆಲ್ಲುವ ಹುಮ್ಮಸ್ಸು ಹೆಚ್ಚಾಗಿದೆ. ಇದಕ್ಕಾಗಿ ಮನೆಯ ಎಲ್ಲಾ ಸದಸ್ಯರು ಹೈ ಅಲರ್ಟ್ ಆಗಿದ್ದಾರೆ.

ಇನ್ನೂ ವಾರಾಂತ್ಯದಲ್ಲಿ ಕಿಚ್ಚಾ ಸುದೀಪ್ ಹೊರಗಡೆ ಟ್ರೋಲ್ ಆದ ಚೈತ್ರಾ, ಧನ್‌ರಾಜ್ ಹಾಗೂ ಹನುಮಂತನ ವೀಡಿಯೋ ಕ್ಲಿಪ್ ತೋರಿಸುವ ಮೂಲಕ ಸಿಕ್ಕಾಪಟ್ಟೆ ನಗಾಡಿದ್ದಾರೆ. ಅಷ್ಟಕ್ಕೂ ಧನ್‌ರಾಜ್ ಹಾಗೂ ಹನುಮಂತ ಹೇಗೆ ಟ್ರೋಲ್ ಆಗುತ್ತಿದ್ದಾರೆ. ಚೈತ್ರಾ ಕುಂದಾಪುರ ಅವರನ್ನು ಜನ ಹೇಗೆ ಟ್ರೋಲ್ ಮಾಡುತ್ತಿದ್ದಾರೆ ಅನ್ನೋದನ್ನ ನೋಡೋಣ.
ಶನಿವಾರ ಕಿಚ್ಚಾ ಸುದೀಪ್ ಅವರು ವಾರದ ಕತೆಯನ್ನು ಸ್ಪರ್ಧಿಗಳೊಂದಿಗೆ ನಡೆಸಿದರು. ಪೋಷಕರನ್ನು ಭೇಟಿ ಮಾಡಿ ಯಾರು ಮೈಮರೆತಿದ್ದಾರೆ? ಯಾರು ಎಚ್ಚರವಾಗಿದ್ದಾರೆ? ಯಾರು ಚೆನ್ನಾಗಿ ಆಡುತ್ತಿದ್ದಾರೆ ಎಲ್ಲವನ್ನೂ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಸಿದ್ದಾರೆ. ಇದರೊಂದಿಗೆ ಬಿಗ್‌ಬಾಸ್ ಮನೆಯಲ್ಲಿ ಟ್ರೋಲ್ ಆದ ಸ್ಪರ್ಧಿಗಳ ಫೋಟೋಗಳನ್ನು ಹಂಚಿಕೊಂಡು ಕಾಮಿಡಿ ಸಂದರ್ಭವನ್ನು ಎಂಜಾಯ್ ಮಾಡಿದ್ದಾರೆ ಕಿಚ್ಚಾ ಸುದೀಪ್.
ಗೌತಮಿ-ಅಭಿ ಜೊತೆಗಿರುವಾಗ ಹನು-ಧನ ನೋಡಿದ್ದು ಹೇಗೆ?
ಗೌತಮಿ ಅವರ ಪತಿ ಅಭಿ ದೊಡ್ಮನೆಗೆ ಆಗಮಿಸಿ ಇಬ್ಬರೂ ಕೂಡ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಬಿಗ್‌ಬಾಸ್ ಮನೆಯಲ್ಲಿ ಆಚರಿಸಿಕೊಳ್ಳುತ್ತಾರೆ. ಈ ವೇಳೆ ಕೆಲ ಹೊತ್ತು ಬಿಗ್‌ಬಾಸ್ ಮನೆಯ ದ್ವಾರ ತೆರೆದಿರುವುದಿಲ್ಲ. ಎಲ್ಲಾ ಸದಸ್ಯರು ಮನೆಯ ಒಳಗೆ ಇರುತ್ತಾರೆ. ಗೌತಮಿ ಹಾಗೂ ಅವರ ಪತಿ ಅಭಿ ಮಾತ್ರ ಗಾರ್ಡನ್ ಏರಿಯಾದಲ್ಲಿ ಇರುತ್ತಾರೆ. ಈ ವೇಳೆ ಧನ್‌ರಾಜ್ ಹಾಗೂ ಹನುಮಂತ ಮನೆಯ ಮುಖ್ಯ ದ್ವಾರದ ಗ್ಲಾಸ್‌ನಿಂದ ಗಾರ್ಡನ್ ಏರಿಯಾದಲ್ಲಿ ಇರುವ ಗೌತಮಿ-ಅಭಿಯವರನ್ನು ನೋಡುತ್ತಾರೆ. ಗ್ಲಾಸ್‌ನಿಂದ ನೋಡಲು ಏನೂ ಕೂಡ ಕಾಣುವುದಿಲ್ಲ. ಆದರೂ ಇಬ್ಬರೂ ಕೂಡ ನೋಡಲು ತುಂಬಾ ಕಷ್ಟಪಡುತ್ತಾರೆ. ಈ ವೀಡಿಯೋ ಕ್ಲಿಪ್ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.

ಇದಕ್ಕೆ ಕಿಚ್ಚಾ ಸುದೀಪ್, ಧನ್‌ರಾಜ್ ಹಾಗೂ ಹನುಮಂತ ಅವರನ್ನು ಪ್ರರ್ಶನೆ ಮಾಡುತ್ತಾರೆ. ನೀವಿಬ್ಬರು ಏನ್ ನೋಡ್ತಾಯಿದ್ರಿ? ಆಗ ಹನುಮಂತ ಅಲ್ಲಿ ಏನೋ ಮಿಂಚುತ್ತಿತ್ತು ಅದನ್ನು ನೋಡ್ತಾಯಿದ್ದೆ ಎನ್ನುತ್ತಾರೆ. ಧನ್‌ರಾಜ್ ಉತ್ತರಿಸಿ, ಮೂರು ತಿಂಗಳಾಯ್ತು ಏನಾದ್ರು ಸಿಗುತ್ತಾ ಅಂತ ನೋಡ್ತಾಯಿದ್ದೆ ಸರ್ ಎನ್ನುತ್ತಾರೆ.
ಆಗ ಸುದೀಪ್ ನೋಡಲು ಏನಾದ್ರೂ ಕಂಟೆಂಟ್ ಸಿಕ್ಕಿದ್ರೆ ಏನ್ ಮಾಡ್ತಾಯಿದ್ರಿ? ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಧನ್‌ರಾಜ್ ಕಾಮಿಡಿಯಾಗಿ ಉತ್ತರ ಕೊಟ್ಟಿದ್ದಾರೆ. ಅದನ್ನೇ ರಿವೆಂಡ್ ಮಾಡಿಕೊಳ್ತಾಯಿದ್ದೆ ಸರ್ ಎಂದಿದ್ದಾರೆ. ಇದಕ್ಕೆ ಕಿಚ್ಚಾ ಸುದೀಪ್ ಸಿಕ್ಕಾಪಟ್ಟೆ ನಗಾಡಿದ್ದಾರೆ.
ಚೈತ್ರಾ ಕಾಳಿ ಅವತಾರ ಟ್ರೋಲ್
ಇನ್ನೂ ಚೈತ್ರಾ ಅವರು ಹೊರಬಂದು ಮತ್ತೆ ಮನೆ ಒಳಗೆ ಹೋದಾಗ ಅವರ ಎಕ್ಸಪ್ರೆಷನ್ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಅವರಿಗೆ ಕಿರೀಟ್, ತ್ರಿಶೂಲ ಹಾಗೂ ಕಾಳಿ ರೂಪವನ್ನು ನೀಡಿ ಟ್ರೋಲ್ ಮಾಡಲಾಗಿದೆ. ಈ ಕ್ಲಿಪ್ ಅನ್ನು ಹಂಚಿಕೊಂಡು ಕಿಚ್ಚಾ ಸುದೀಪ್ ಸಿಕ್ಕಾಪಟ್ಟೆ ನಗಾಡಿದ್ದಾರೆ.
ಇಂದು ಬಿಡುಗಡೆ ಮಾಡಿದ ವೀಡಿಯೋ ಕ್ಲಿಪ್‌ನಲ್ಲಿ ಇಷ್ಟು ಮಾತ್ರ ತೋರಿಸಲಾಗಿದೆ. ಇನ್ನು ಯಾರು ಯಾರು ಯಾವ ರೀತಿಯಾಗಿ ಟ್ರೋಲ್ ಆಗಿದ್ದಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಇದನ್ನು ನೋಡಿ ಎಂಜಾಯ್ ಮಾಡಲು ಇಂದಿನ ಸಂಚಿಕೆವರೆಗೂ ಕಾಯಲೇಬೇಕು.












Click it and Unblock the Notifications