Bigg Boss: ಬಿಗ್‌ಬಾಸ್ ಮನೆಯಿಂದ ಹೊರ ಬಂದ ಭವ್ಯಾ ಗೌಡ ಫಸ್ಟ್ ರಿಯಾಕ್ಷನ್
ಬಿಗ್‌ಬಾಸ್ ಕನ್ನಡ ಸೀಸನ್ 11 ಇಂದು ಮುಕ್ತಾಯವಾಗಲಿದೆ. ಸಂಜೆ ಗ್ರ್ಯಾಂಡ್ ಫಿನಾಲೆಯಲ್ಲಿ ಉಳಿದ ಐದು ಜನ ಸ್ಪರ್ಧಿಗಳಲ್ಲಿ ಟ್ರೋಫಿ ಯಾರ ಕೈ ಸೇರಲಿದೆ ಎನ್ನುವುದು ಗೊತ್ತಾಗಲಿದೆ. ಇದೀಗ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಭವ್ಯಾ ಗೌಡ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಾಗಾದರೆ ಭವ್ಯಾ ಗೌಡ ಹೇಳಿದ್ದೇನು?
ಬಿಗ್ ಬಾಸ್ ಮನೆಯಿಂದ ಹೊರ ಬಂದ ಟಾಪ್ 6 ಸ್ಪರ್ಧಿ ಭವ್ಯಾ ಗೌಡ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಕಳೆದ ದಿನ ಭವ್ಯಾ ಗೌಡ ಅವರನ್ನು ಆರತಿ ಬೆಳಗಿಸಿ ಮನೆ ಒಳಗೆ ಕರೆದುಕೊಳ್ಳಲಾಯಿತು. ಸ್ನೇಹಿತರು, ಕುಟುಂಬಸ್ಥರು ಎಲ್ಲರೂ ಸೇರಿ ಪಟಾಕಿ ಸಿಡಿಸಿ ಭವ್ಯಾ ಗೌಡ ಅವರನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ಅಲ್ಲದೆ ಅವರ ಆಟದ ವೈಖರಿಗೆ ಫುಲ್ ಮಾರ್ಕ್ಸ್ ಕೂಡ ಕೊಟ್ಟಿದ್ದಾರೆ.

ಜನರ ಪ್ರೀತಿ ಹಾಗೂ ತಮ್ಮ ಮೇಲೆ ಇಟ್ಟ ನಂಬಿಕೆ ಕಂಡು ಭ್ಯವಾ ಸಖತ್ ಖುಷಿ ಆಗಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ ಭವ್ಯಾ. ಹಾಗಾದರೆ ಪೋಸ್ಟ್‌ನಲ್ಲಿ ಭವ್ಯಾ ಗೌಡ ತಿಳಿಸಿದ್ದೇನು? ಅದರಲ್ಲಿ ಭವ್ಯಾ ಏನೆಂದು ಬರೆದಿದ್ದಾರೆ?
'ಪ್ರೀತಿಯ ಜನರೇ 17 ವಾರಗಳ ಈ ಸುದೀರ್ಘ ಪಯಣ ಇಲ್ಲಿಗೆ ಬಂದು ತಲುಪಿತು. ಇದು ಮುಕ್ತಾಯವಲ್ಲ ಹೊಸ ಆರಂಭದ ನಾಂದಿಗೆ ಸೂಚನೆ. ಕನ್ನಡಿಗರ ಮನಸ್ಸನ್ನು ಇಷ್ಟು ದಿನ ರಂಜಿಸಿ ಅವರ ಮನ ಗೆಲ್ಲುವ ಅವಕಾಶ ಸಿಕ್ಕಿದ್ದೇ ದೊಡ್ಡ ಪುಣ್ಯ. ಇದೇ ಭವ್ಯಾ ಗೌಡಗೆ ಸಿಕ್ಕ ನಿಜವಾದ ಗೆಲುವು. ಇಷ್ಟು ದಿನ ಪ್ರೀತಿಸಿ ಬೆಂಬಲಿಸಿ ಓಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ವಿಶ್ವಾಸ ಹೀಗೆ ಮುಂದುವರೆಯಲಿ. it is not end its beginning. ನಿಮ್ಮ ಪ್ರೀತಿಯ ಭವ್ಯಾ ಗೌಡ' ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭವ್ಯಾ ಗೌಡ ಬರೆದುಕೊಂಡಿದ್ದಾರೆ. ಭವ್ಯಾ ಗೌಡ ಅವರ ಪೋಸ್ಟ್‌ಗೆ ಸಾಕಷ್ಟು ಲೈಕ್ಸ್ ಬಂದಿವೆ. ಜೊತೆಗೆ ಜನ ನೀವು ನಮ್ಮ ನೆಚ್ಚಿನ ಸ್ಪರ್ಧಿ, ನೀವೇ ಈ ಬಾರಿಯ ವಿನ್ನರೆ ಅಂತೆಲ್ಲಾ ಬರೆದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಭವ್ಯಾ ಗೌಡ ಟಾಪ್ 6 ಸ್ಪರ್ಧಿಯಾಗಿ ಬಂದಿದ್ದಕ್ಕೆ ಮನೆ ದೇವರಿಗೆ ಪೂಜೆ ಸಲ್ಲಿಸಲು ಬಯಸಿದ್ದಾರೆ. ಇಷ್ಟರಲ್ಲಿ ಭವ್ಯಾ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೆ ಬಿಗ್‌ಬಾಸ್‌ನ ಇಂದಿನ ಗ್ರ್ಯಾಂಡ್ ಫಿನಾಲೆಯಲ್ಲೂ ಭವ್ಯಾ ಗೌಡ ಭಾಗವಹಿಸುವ ಸಾಧ್ಯತೆ ಇದೆ.
ತ್ರಿವಿಕ್ರಮ್ ಗೆಲ್ಲುವ ನಿರೀಕ್ಷೆಯಲ್ಲಿ ಭವ್ಯಾ
ತ್ರಿವಿಕ್ರಮ್ ಭವ್ಯಾ ಅವರಿಗೆ ಪ್ರಪೋಸ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಭವ್ಯಾ ಅವರಿಗೂ ತ್ರಿವಿಕ್ರಮ್ ಅವರನ್ನು ಕಂಡರೇ ಪ್ರೀತಿ ಇರುವುದು ಅವರ ನಡುವಳಿಕೆಯಿಂದಲೇ ಗೊತ್ತಾಗುತ್ತದೆ. ಇನ್ನೂ ಬಿಗ್‌ಬಾಸ್ ಮನೆಯಲ್ಲಿ ತಾನು ಗೆಲ್ಲದೇ ಇದ್ದರೂ ತ್ರಿವಿಕ್ರಮ್ ಗೆಲ್ಲಬೇಕು ಅನ್ನೋ ಆಸೆಯನ್ನು ಭವ್ಯಾ ಹೊಂದಿದ್ದಾರೆ.
ಹೀಗಾಗಿ ಇಂದಿನ ಗ್ರ್ಯಾಂಡ್ ಫಿನಾಲೆಯಲ್ಲಿ ಭವ್ಯಾ ಭಾಗವಹಿಸುವುದು ಪಕ್ಕಾ ಎನ್ನಲಾಗುತ್ತಿದೆ. ಅಲ್ಲದೆ ಭವ್ಯಾ ಗೌಡ ಅವರು ಈ ದಿನ ವೇದಿಕೆ ಮೇಲೆ ನೃತ್ಯ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತತೆ ಇಲ್ಲ. ಆದರೆ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.












Click it and Unblock the Notifications