ಕಿಚ್ಚ ಸುದೀಪ್‌ & ದರ್ಶನ್‌ ಒಂದಾದ್ರೆ ರಜತ್‌ ಮೊದಲು ಮಾಡೋ ಕೆಲ್ಸ ಏನು ಗೊತ್ತಾ?

ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಒಬ್ಬರ ಮೇಲೊಬ್ಬರ ಮೇಲೆ ವೈಮನಸ್ಸು ಇದ್ದೇ ಇರುತ್ತದೆ. ಅದರಲ್ಲೂ ಯಾರಾದರೂ ದೊಡ್ಡ ವ್ಯಕ್ತಿಗಳ ನಡುವೆ ಇಂತಹ ಬಿರುಕು ಕಂಡುಬಂದರೆ ಅದು ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿಬಿಡುತ್ತದೆ. ಹಾಗೆಯೇ ಕನ್ನಡ ಸಿನಿಮಾ ಇಂಡಸ್ಟ್ರೀಲಿ ನಟ ದರ್ಶನ್‌ & ಕಿಚ್ಚ ಸುದೀಪ್ ಒಂದಾನೊಂದು ಕಾಲದಲ್ಲಿ ಕುಚುಕುಗಳ ರೀತಿಯಲ್ಲಿ ಇದ್ದರು. ಈಗ ಇವರಿಬ್ಬರ ನಡುವಿನ ಈ ಬಾಂದವ್ಯ ಅಷ್ಟಕಷ್ಟೇ ಎಂಬಂತಾಗಿದೆ.

ಬರೀ ಕನ್ನಡ ಇಂಡಸ್ಟ್ರೀ ಅಷ್ಟೇ ಅಲ್ಲದೆ, ಎಲ್ಲಾ ಮನೆ ದೋಸೆ ತೂತು ಎನ್ನುವ ಹಾಗೆ ಎಲ್ಲಾ ಇಂಡಸ್ಟ್ರೀಗಳಲ್ಲೂ ಸಮಸ್ಯೆಗಳನ್ನು ಇವೆ. ಅದರಲ್ಲೂ ಕಿಚ್ಚ ಸುದೀಪ್‌ ಮತ್ತು ದರ್ಶನ್‌ ತೂಗುದೀಪ ಅವರು ಕನ್ನಡ ಇಂಡಸ್ಟ್ರೀಯಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸಿದವರಲ್ಲಿ ಇವರು ಇದ್ದಾರೆ. ಇನ್ನೂ ಇವರಿಬ್ಬರು ಒಂದಾನೊಂದು ಕಾಲದಲ್ಲಿ ಕುಚುಕುಗಳಂತೆ ಇದ್ದರು. ಈಗ ಮಾತ್ರ ಕಾರಣಾಂತರಗಳಿಂದ ದೂರ ದೂರ ಎನ್ನುವತಾಗಿದೆ. ಆದರೆ, ಭಾಷೆ, ನಾಡು, ನುಡಿ, ಜಲದ ವಿಚಾರಕ್ಕೆ ಬಂದ್ರೆ ಮಾತ್ರೆ ಎಲ್ಲಾರೂ ಒಂದೇ.

Bigg Boss 2nd Runner-up Rajat Reaction on Kiccha Sudeep and Darshan s Friendship

ಈ ನಡುವೇಯೇ ಬಹುತೇಕ ಕನ್ನಡಿಗರ ಒಂದೇ ಒಂದು ಆಸೆ ಎಂದರೆ ಅದು ಕಿಚ್ಚ ಸುದೀಪ್‌ ಹಾಗೂ ದರ್ಶನ್‌ ತೂಗುದೀಪ ಮೊದಲಿನಂತ ಆಗಬೇಕು. ಅವರಿಬ್ಬರೂ ಸೇರಿ ಸಿನಿಮಾ ಮಾಡಬೇಕಂತ. ಇದೇ ಪ್ರಶ್ನೆಯನ್ನು ಇದೀಗ ಬಿಗ್‌ ಬಾಸ್‌ ಕನ್ನಡ 11 ಸೀಸನ್‌ 2ನೇ ರನ್ನರ್ ಅಪ್‌ ಅಗಿರುವ ರಜತ್‌ಗೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಇದಕ್ಕೆ ಅವರು ಕೊಟ್ಟ ಉತ್ತರವಂತೂ ಅದ್ಭುತವಾಗಿದೆ.

ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಮತ್ತೆ ಮೊದಲಿನಂತೆ ಯಾವಾಗ ಕುಚುಕುಗಳಾಗುತ್ತಾರೆ. ಅವರಿಬ್ಬರ ನಡುವೆ ಮೊದಲಿನ ರೀತಿ ಉತ್ತಮ ಬಾಂದವ್ಯ ನೋಡುವುದೇಗೆ? ಎಂದು ಅಭಿಮಾನಿಗಳು ಕೇಳುತ್ತಿದ್ಧಾರೆ. ಅಲ್ಲದೆ, ಇಬ್ಬರ ಸ್ಟಾರ್ ನಟರಿಗೆ ರಜತ್‌ ಬೆಸುಗೆಯಾಗಬಹುದಾ ಎಂದು ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ ಎಂದು ಕೇಳುತ್ತಾರೆ.

ಆಗ ಪ್ರತಿಕ್ರಿಯಿಸಿದ ರಜತ್‌, ಅವರಿಗೆ ಹೇಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಆ ಧೈರ್ಯನೂ ಮಾಡುವುದಕ್ಕೆ ಹೋಗುವುದಿಲ್ಲ. ಅವರಿಬ್ಬರಿಗಿರುವ ಆಲೋಚನೆ ಬಗ್ಗೆ ಅವರಿಗೆ ಮಾತ್ರ ಗೊತ್ತಿದೆ. ಅವರು ಹೊಂದಿರುವ ಕೊಟ್ಯಾಂತರ ಜನ ಅಭಿಮಾನಿಗಳಲ್ಲಿ ನಾನೂ ಒಬ್ಬ ಅಷ್ಟೇ. ಅವರಿಬ್ಬರನ್ನ ಜೊತೆಗೆ ನೋಡಲು ನಾನು ಕಾಯುತ್ತಿದ್ದೇನೆ. ಕೈಮುಗಿದುಕೊಳ್ಳುತ್ತೇನೆ ಅವರಿಬ್ಬರು ಬೇಗ ಒಂದಾಗಲಿ ಅಂತಾ. ಅಲ್ಲದೆ, ಅವರಿಬ್ಬರೂ ಒಟ್ಟಿಗೆ ಆದರೆ ಮತ್ತೊಮ್ಮ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇನ್ನು ರಜತ್‌ ಬಗ್ಗೆ ಹೇಳೋದಾದ್ರೆ, ಈ ಬಾರಿ ಬಿಗ್‌ ಬಾಸ್‌ಗೆ ವೈಲ್ಡ್ ಎಂಟ್ರಿ ಕೊಟ್ಟು ತಮ್ಮ ಖಡಕ್‌ ಮಾತಿನಿಂದಲೇ ಸಖತ್‌ ಸೌಂಡ್‌ ಮಾಡಿದ್ದಾರೆ. ಈ ಮೂಲಕ ಮಂಕಾಗಿದ್ದ ಬಿಗ್‌ ಬಾಸ್‌ 11 ಸೀಸನ್‌ ಮನೆಗೆ ಕಳೆ ಬರುವಂತೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್‌ ಅವರೇ ಹೇಳಿದ್ದಾರೆ. ಯಾವ ಸೀಸನ್‌ನಲ್ಲೂ ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟವರು ತುಂಬಾ ದಿನ ಇರದೇ ಹೊರಗಡೆ ಬಂದಿದ್ದರು. ಆದರೆ, ರಜತ್ ಮಾತ್ರ ಸೌಂಡ್‌ ಮಾಡುವ ಮೂಲಕ ಜನರ ಮನ ಗೆದ್ದು ಕೊನೆವರ್ಗೂ ಬಿಗ್‌ ಬಾಸ್‌ ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲದೆ, 2ನೇ ರನ್ನರ್ ಅಪ್‌ ಕೂಡ ಆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+