Darshan Case Twist: ರೇಣುಕಾಸ್ವಾಮಿ ಶವದ ಮರಣೋತ್ತರ ಪರೀಕ್ಷೆ ಮಾಡಿದ್ದು ಪವಿತ್ರಾ ಗೆಳತಿ ಸಮತ ಪತಿ ಡಾ. ಸುರೇಶ್!
ಬೆಂಗಳೂರು ಜುಲೈ 17: ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್ ಕೇಸ್ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ದರ್ಶನ್ ವಿಚಾರದಲ್ಲಿ ಬಗೆದಷ್ಟು ವಿಚಾರಗಳು ಹೊರಬರುತ್ತಲೇ ಇವೆ. ದರ್ಶನ್ ಈ ಪ್ರಕರಣದಿಂದ ಪಾರಾಗಲು ಮಾಡಿರುವ ಪ್ಲ್ಯಾನ್‌ಗಳನ್ನು ತಿಳಿದು ಪೊಲೀಸರೇ ಶಾಕ್ ಆಗಿದ್ದಾರೆ.
ಹೌದು... ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ಆತ್ಮೀಯ ಗೆಳತಿ ಸಮತ ಪತಿ ಡಾ. ಸುರೇಶ್‌ರಿಂದ ರೇಣುಕಾಸ್ವಾಮಿ ಶವದ ಮರಣೋತ್ತರ ಪರೀಕ್ಷೆ ಮಾಡಿರುವುದು ಬೆಳಕಿಗೆ ಬಂದಿದೆ. ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಪವಿತ್ರ ಗೆಳತಿ ಸಮತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೆಲವೊಂದಿಷ್ಟು ಬೆಚ್ಚಿ ಬೀಳಿಸುವ ವಿಚಾರಗಳು ಹೊರಬಿದ್ದಿದೆ.

ಪವಿತ್ರಾ ಗೆಳತಿ ಸಮತ ಪತಿ ಡಾ. ಸುರೇಶ್
ಹೌದು... ಸಮತ ವಿಚಾರಣೆ ವೇಳೆ ಪೊಲೀಸರೇ ಒಂದು ಕ್ಷಣ ಶಾಕ್ ಆಗೋ ಸಂಗತಿ ಬಯಲಾಗಿದೆ. ಪವಿತ್ರಾ ಗೆಳತಿ ಸಮತ ಪತಿ ಡಾ. ಸುರೇಶ್‌ರಿಂದ ರೇಣುಕಾಸ್ವಾಮಿ ಶವದ ಮರಣೋತ್ತರ ಪರೀಕ್ಷೆ ಮಾಡಿದ್ದು ಎನ್ನುವ ವಿಚಾರ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿ ಶಾಕ್ ಹಾಗೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಹೊಡೆತದಿಂದ ಸಾವನ್ನಪ್ಪಿದ್ರಾ ಅಥವಾ ಹೊಡೆತಕ್ಕೆ ಹೆದರಿ ಹೃದಯಾಘಾತವಾಯ್ತಾ ಎನ್ನುವ ಯಾವುದೇ ವಿಚಾರಗಳು ವರದಿಯಲ್ಲಿ ಇಲ್ಲ ಎನ್ನಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ತಯಾರಿಸಿದವರು ಸಮತ ಪತಿ ಡಾ. ಸುರೇಶ್ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಹೀಗಾಗಿ ವೈದ್ಯರ ಮೇಲೂ ಅನುಮಾನ ಶುರುವಾಗಿದೆ.

ಮರಣೋತ್ತರ ಶವ ಪರೀಕ್ಷೆಯ ವೈದ್ಯರ ತಂಡದಲ್ಲಿ ಸಮತ ಪತಿ
ಜೂನ್ 11 ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಶವ ಪರೀಕ್ಷೆಯನ್ನು ನಾಲ್ಕು ಜನರ ವೈದ್ಯರ ತಂಡ ಮಾಡುತ್ತದೆ. ಈ ತಂಡದಲ್ಲಿ ಸಮತ ಪತಿ ಇರುವುದು ಪೊಲೀಸರಿಗೆ ತಿಳಿದಿರುವುದಿಲ್ಲ. ಯಾವಾಗ ಸಮತ ಜೈಲಿಗೆ ಭೇಟಿ ನೀಡಿ ಪವಿತ್ರ ಗೌಡ ಹಾಗೂ ದರ್ಶನ್ ಅವರನ್ನು ಭೇಟಿ ಮಾಡುತ್ತಾರೋ ಆಗ ಪೊಲೀಸರಿಗೆ ಅನುಮಾನ ಶುರುವಾಗಿದೆ.
ಆಕೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಶುರು ಮಾಡುತ್ತಾರೆ. ಈ ಪರಿಶೀಲನೆ ವೇಳೆ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಡಲು ಬಳಸಲಾಗಿದ್ದ ಡವೈಸ್ ಅನ್ನು ಖರೀದಿ ಮಾಡಲು ಸಮತ ಆರೋಪಿಗೆ ಹಣವನ್ನು ನೀಡಿರುವುದು ತಿಳಿದು ಬರುತ್ತದೆ. ಹೀಗಾಗಿ ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತದೆ.

ಆಗ ಸಮತ ತನ್ನ ಪತಿಯೇ ರೇಣುಕಾಸ್ವಾಮಿ ಮರನೋತ್ತರ ಪರೀಕ್ಷೆಯನ್ನು ಮಾಡಿದ್ದು ಎನ್ನುವ ವಿಚಾರವನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಈ ವೇಳೆ ಪೊಲೀಸರಿಗೆ ಸಾಕ್ಷಿ ನಾಶದ ಅನುಮಾನ ಪೊಲೀಸರಿಗೆ ಶುರುವಾಗಿದೆ.
ಜೈಲಿಗೆ ಹೋಗಿ ಪವಿತ್ರ ಭೇಟಿ ಮಾಡಿದ್ದ ಸಮತ
ಪವಿತ್ರಾ ಗೌಡ ಆತ್ಮೀಯ ಗೆಳತಿ ಸಮತ ಜೈಲಿಗೆ ಹೋಗಿ ಪವಿತ್ರಾ ಗೌಡರನ್ನು ಭೇಟಿ ಮಾಡಿ ಮಾತನಾಡಿಸಿ ಬಂದಿದ್ದರು. ಜೈಲಿನಲ್ಲಿ ಪವಿತ್ರಾ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸಮತ ದರ್ಶನ್ ಜೊತೆಗೂ ಇದರ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಪೋಸ್ಟ್‌ಮಾರ್ಟಂ ರಿಪೋರ್ಟ್ ಪೊಲೀಸರ ಕೈ ಸೇರೋ ಹೊತ್ತಿಗೆ ದರ್ಶನ್ ಹಾಗೂ ಗ್ಯಾಂಗ್ ಅಲರ್ಟ್ ಆಗಿದೆ ಎನ್ನಲಾಗುತ್ತಿದೆ. ರಿಪೋರ್ಟ್‌ನಲ್ಲೂ ತಿದ್ದುವ ಕೆಲಸ ಆಗಿದೆ ಅನ್ನೋ ಅನುಮಾನ ಶುರುವಾಗಿದೆ. ಇದೇ ಅನುಮಾನದಲ್ಲಿ ಸಮತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿದ್ದುವ ಯತ್ನ?
ಸಮತ ಹಾಗೂ ಆಕೆಯ ಪತಿ ಡಾ. ಸುರೇಶ್ ಕಾಲ್ ಡಿಟೇಲ್ಸ್ ಚಾಟಿಂಗ್ಸ್ ಪರಿಶೀಲನೆ ಮಾಡಲಾಗುತ್ತಿದೆ. ಮತ್ತೊಂದು ವಿಚಾರ ಅಂದರೆ ರೇಣುಕಾಸ್ವಾಮಿ ಶವ ಮರಣೋತ್ತರ ಪರೀಕ್ಷೆ ವೇಳೆ ರಜೆ ಇದ್ರೂ ಸುರೇಶ್ ಕರ್ತವ್ಯಕ್ಕೆ ಹಾಜರಾಗಿರುವುದು ಬೆಳಕಿಗೆ ಬಂದಿದೆ. ಕೆಲಸಕ್ಕೆ ರಜೆ ಇದ್ದರು ಡ್ಯೂಟಿಗೆ ಹಾಜರಾಗಿದ್ರಂತೆ ಸಮತ ಪತಿ ಡಾ.ಸುರೇಶ್ ಎಂಬ ವಿಚಾರ ಸಮತ ವಿಚಾರಣೆಯಲ್ಲಿ ಪೊಲೀಸರಿಗೆ ಗೊತ್ತಾಗಿದೆ.
ಜೊತೆ ಡಾ ಸುರೇಶ್ ಅವರೇ ಖುದ್ದು ಮುಂದೆ ನಿಂತು ರೇಣುಕಾಸ್ವಾಮಿ ಶವ ಮರಣೋತ್ತರ ಪರೀಕ್ಷೆ ಮಾಡಿಸಿದ್ದರಂತೆ. ಹೀಗಿರುವಾಗ ವರದಿಯನ್ನೂ ತಿದ್ದಿರಬಹುದು ಎನ್ನುವ ಅನುಮಾನ ಬಂದಿದೆ. ಹೀಗಾಗಿ ಸಮತ ಪತಿ ಎಂಬ ಕಾರಣಕ್ಕೆ ಮರಣೋತ್ತರ ಪರೀಕ್ಷೆಯ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತಿದೆ.
ಮರಣೋತ್ತರ ಪರೀಕ್ಷೆ ಮತ್ತೊಮ್ಮೆ ಪರಿಶೀಲನೆ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಡಾ. ಸುರೇಶ್ ಅವರೊಂದಿಗೆ ಇದ್ದ ಡಾ. ಪ್ರದೀಪ್ ಅವರಿಂದ ಈ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿಲಾಗಿದೆ. ಪರೀಕ್ಷಾ ವರದಿಯನ್ನು ಮರಪರಿಶೀಲನೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ದರ್ಶನ್ ಹಾಗೂ ಗ್ಯಾಂಗ್ ಈ ಪ್ರಕರಣದಿಂದ ಪಾರಾಗಲು ನಾನಾ ಪ್ರಯತ್ನ ಮಾಡಿರುವುದು ಮಾತ್ರ ಸುಳ್ಳಲ್ಲ. ಇದೆಲ್ಲವೂ ಸಾಬೀತಾದರೆ ಪ್ರಕರಣ ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ.












Click it and Unblock the Notifications