Bigg Boss: ಬಿಗ್‌ಬಾಸ್‌ ಮನೆಯಲ್ಲಿ ಮಂಜು ತ್ರಿವಿಕ್ರಮ್ ನಡುವೆ ಬಿಗ್‌ ಫೈಟ್ - ಚೈತ್ರ ವಿರುದ್ಧ ರಜತ್ ಸೇಡು

ಬಿಗ್‌ಬಾಸ್‌ ಮನೆಯಿಂದ ಪ್ರೋಮೋವೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋ ಮಾತ್ರ ಎಕ್ಸಲೆಂಟಾಗಿದೆ. ''ಅಂಗಡಿ ಮುಚ್ಚೋಹಾಗಿಲ್ಲ ಲೆಕ್ಕ ತಪ್ಪೋ ಹಾಗಿಲ್ಲ'' ಎಂದು ಇದಕ್ಕೆ ಕ್ಯಾಪ್ಶನ್‌ ಕೂಡ ನೀಡಲಾಗಿದೆ. ಈ ಟಾಸ್ಕ್‌ನಲ್ಲಿ ಎದುರಾಳಿ ತಂಡದ ಮಂಜು ಹಾಗೂ ಚೈತ್ರಾ ಅವರು ರಜತ್ ಹಾಗೂ ತ್ರಿವಿಕ್ರಮ್ ಅವರಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದ್ದು ಕಂಡು ಬಂದಿದೆ. ಇದರಿಂದಾಗಿ ತ್ರಿವಿಕ್ರಮ್ ಹಾಗೂ ರಜತ್ ಸೇಡು ತೀರಿಸಿಕೊಳ್ಳುವ ಸಮಯಕ್ಕಾಗಿ ಕಾಯುತ್ತಿದ್ದಾರೆ. ಜೊತೆಗೆ ತಡರಾತ್ರಿವರೆಗೂ ಕೆಲಸ ಮಾಡಿಸಿಕೊಂಡಿದ್ದಕ್ಕಾಗಿ ಭವ್ಯಾ ಕಣ್ಣೀರು ಹಾಕಿದ್ದಾರೆ. ಹಾಗಾದರೆ ಇಂದಿನ ವೀಡಿಯೋದಲ್ಲಿ ಏನಿದೆ?

ಬಿಗ್ ಬಾಸ್ ರೆಸಾರ್ಟ್ ಟಾಸ್ಕ್‌ನಲ್ಲಿ ಎರಡು ತಂಡಗಳು ಇವೆ. ಒಂದರಲ್ಲಿ ಧನ್‌ರಾಜ್, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಭವ್ಯಾ ಇದ್ದಾರೆ. ಇವರೆಲ್ಲಾ ಹೋಟೆಲ್ ಸ್ಟಾಫ್ ಆಗಿ ಕೆಲಸ ಮಾಡುತ್ತಾರೆ. ಮತ್ತೊಂದು ತಂಡದಲ್ಲಿ ಗೌತಮಿ, ಚೈತ್ರಾ, ಐಶ್ವರ್ಯ, ಹನುಮಂತ, ಮಂಜು ಇದ್ದಾರೆ. ಇವರು ಹೋಟೆಲ್ ಕಸ್ಟಮರ್ಸ್ ಆಗಿದ್ದಾರೆ. ಕಸ್ಟಮರ್ಸ್ ಎಲ್ಲರೂ ಸ್ಟಾಫ್‌ಗಳ ಬಳಿ ಬೇಕಾದ ಅಡುಗೆ, ಬೇಕಾದ ಸೇವೆ ಮಾಡಿಸಿಕೊಳ್ಳಬಹುದು. ಅದನ್ನು ಸ್ಟಾಫ್‌ಗಳು ನಿರಾಕರಿಸಿದೆ ಮಾಡಬೇಕು. ಇದು ಟಾಸ್ಕ್‌ನ ನಿಯಮವಾಗಿದೆ.

big fight between manju and trivikram in the bigg boss house

ಆದರೆ ಈ ಟಾಸ್ಕ್‌ ಆಡುವಾಗ ಸ್ಟಾಫ್‌ಗಳ ಕೈಯಲ್ಲಿ ಕಸ್ಟಮರ್ಸ್ ತಂಡದಲ್ಲಿ ಇದ್ದ ಮಂಜು ಹಾಗೂ ಚೈತ್ರಾ ಸಿಕ್ಕಾಪಟ್ಟೆ ಕೆಲಸಗಳನ್ನು ಬೈದು ರೇಗಾಡಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಈ ಪ್ರೋಮೋದಲ್ಲಿ ಭವ್ಯಾ ಗೌಡ ಅವರು ಕನ್ಫೆಕ್ಷನ್ ರೂಮ್‌ಗೆ ಹೋಗಿ ನಮಗೆ ರೆಸ್ಟ್‌ ಬೇಡ್ವಾ ಬಿಗ್‌ಬಾಸ್‌ ಅಂತ ಕಣ್ಣೀರು ಹಾಕಿದ್ದು ಕಂಡುಬಂದಿದೆ.

ಮಂಜು-ಚೈತ್ರಾ ಫುಲ್ ಡಿಮ್ಯಾಂಡ್

ಟಾಸ್ಕ್‌ ಪ್ರಕಾರ ''ಅಂಗಡಿ ಮುಚ್ಚೋ ಹಾಗಿಲ್ಲ. ಲೆಕ್ಕ ತಪ್ಪೋ ಹಾಕಿಲ್ಲ'' ಅನ್ನೋ ರೂಲ್ ಇದೆ. ಆದರೆ ಎಲ್ಲರೂ ಎದ್ದಿರಬೇಕು ಅನ್ನೂ ನಿಯಮ ಇರಲಿಲ್ಲ. ಆದರೆ ಕಸ್ಟಮರ್ಸ್ ಸ್ಟಾಫ್‌ಗಳ ಕೈಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡಿಸಿಕೊಂಡಿದ್ದು ಕಂಡು ಬಂದಿದೆ. ವಿಶೇಷವಾಗಿ ಚೈತ್ರಾ ಕುಂದಾಪುರ ಅವರು ಸ್ವಲ್ಪ ಜಾಸ್ತಿಯಾಗೇ ರಿಯಾಕ್ಟ್ ಮಾಡಿದ್ದು ಕಂಡು ಬಂದಿದೆ.

ಲೈಟ್ ಆಫ್ ಆಗಿದ್ದರೂ ಕೂಡ ಚೈತ್ರಾ ಅವರು ಮಧ್ಯರಾತ್ರಿ ತ್ರಿವಿಕ್ರಮ್ ಅವರನ್ನು ಕರೆದು ಸರ್ವೀಸ್ ಕೊಡಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಇನ್ನೂ ಉಗ್ರಂ ಮಂಜು ಅವರು ಮೋಕ್ಷಿತಾ ಅವರನ್ನು ಕರೆದು ತಮಗೆ ಮ್ಯೂಸಿಕಲ್ ಲೈಟ್ ಬೇಕು ಅಂತ ಕೇಳುತ್ತಾರೆ. ಇನ್ನೂ ಚೈತ್ರಾ ಅವರು 'ಕಪ್ ಎಲ್ಲನೂ ಇಲ್ಲೇ ಇದೆ ಕ್ಲೀನ್ ಮಾಡಿಲ್ಲ' ಎಂದು ಸ್ಟಾಫ್‌ಗಳ ಮೇಲೆ ರೇಗಾಡುತ್ತಾರೆ.

ಕ್ಲೀನ್ ಮಾಡೋ ಟೈಮ್ ಬಂದಿದೆ- ತ್ರಿವಿಕ್ರಮ್ ಮಾತಿಗೆ ಮಂಜು ಗರಂ

ಈ ವೇಳೆ 'ಎಲ್ಲಾ ಮಾಡ್ತೀವಿ ಮೇಡಂ ಕ್ಲೀನ್ ಮಾಡೋ ಟೈಮ್ ಬಂದಿದೆ' ಎಂದು ತ್ರಿವಿಕ್ರಮ್ ಅವರು ಚೈತ್ರಾ ಅವರಿಗೆ ಹೇಳುತ್ತಾರೆ. ಆದರೆ ಈ ಸಂದರ್ಭದಲ್ಲಿ ಉಗ್ರಂ ಮಂಜು ಅವರು ಉರಿದು ಬೀಳುತ್ತಾರೆ. ಏನೇ ಇದ್ದರೂ ಕೂಡ ಡೈರೆಕ್ಟ್ ಆಗಿ ಹೇಳು ಎಂದು ರೇಗಾಡುತ್ತಾರೆ. ಕ್ಲೀನ್ ಮಾಡೋ ಟೈಮ್, ಕಳ್ಸೋ ಟೈಮ್ ಬಂದಿದೆ ಎಂದು ಹೇಳೋದು ಯಾರಿಗೆ ಎಂದು ಮಂಜು ತ್ರಿವಿಕ್ರಮ್ ಅವರನ್ನು ಕೋಪದಿಂದ ಪ್ರಶ್ನೆ ಮಾಡುತ್ತಾರೆ.

ಇಲ್ಲಿ ರಜತ್ ಅವರಿಗೂ ಮಂಜು ಅವರು ಇದೆಲ್ಲಾ ನನ್ನ ಬಳಿ ಇಟ್ಕೋಬೇಡ ಎಂದು ಹೇಳುತ್ತಾರೆ. ಇನ್ನೇನು ಇಲ್ಲಿ ಜಗಳ ಸ್ಟಾರ್ಟ್ ಆಗುತ್ತೆ ಅನ್ನೋ ಹೊತ್ತಿಗೆ ತ್ರಿವಿಕ್ರಮ್ ಅವರು ರಜತ್ ಅವರನ್ನು ಕರೆದುಕೊಂಡು ಹೋಗ್ತಾರೆ. ಎಲ್ಲಾ ಕೆಲಸ ಮಾಡಿದರೂ ಕೂಡ ಮಂಜು ಅವರು ಬಂದು ರಜತ್ ಹಾಗೂ ತ್ರಿವಿಕ್ರಮ್ ಅವರಿಗೆ ಹೇಳುತ್ತಾರೆ- 'ಟ್ಯಾಲೆಂಟ್ ಇಲ್ಲ ಅಂದರೆ, ಮಾಡಲು ಆಗಲ್ಲೆ ಎಂದು ಹೇಳ್ಬೇಕು' ಎಂದು ತ್ರವಿಕ್ರಮ್ ಹಾಗೂ ರಜತ್‌ ಅವರನ್ನು ರೊಚ್ಚಿಗೇಳಿಸುತ್ತಾರೆ.

ನನಗೂ ಟೈಮ್ ಬರುತ್ತೆ- ಹಲ್ಲು ಕಚ್ಚಿ ಕುಳಿತ ರಜತ್

ಎಲ್ಲಾ ಕೆಲಸ ಮಾಡಿ ಕೂಡ ಮಂಜು ಅವರು ಈ ಮಾತು ಹೇಳಿದ್ದು ಸರಿಯಾಗಿ ಕಾಣಿಸಲಿಲ್ಲ. ಓವರ್‌ ಆಗಿ ಮಂಜು ಹಾಗೂ ಚೈತ್ರಾ ಅವರು ಸ್ಟಾಫ್‌ಗಳನ್ನು ದುಡಿಸಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ರಜತ್, 'ನಮಗೂ ಚಾನ್ಸ್‌ ಬರುತ್ತದೆ. ಆಗ ಹಣ್ಣಗಾಯಿ ನೀರಗಾಯಿ ಮಾಡಿಲ್ಲ ಅಂದರೆ ನನ್ನ ಹೆಸರು ಬುಜ್ಜಿನೇ ಅಲ್ಲ' ಎಂದು ತ್ರಿವಿಕ್ರಮ್ ಬಳಿ ಹೇಳಿದ್ದಾರೆ. ಒಂದು ವೇಳೆ ಇದೇ ಟಾಸ್ಕ್‌ ಅನ್ನು ಬಿಗ್‌ಬಾಸ್‌ ಮತ್ತೆ ತಂಡವನ್ನು ಬದಲಾಯಿಸಿ ನೀಡಿದರೆ ರಜತ್ ಅವರು ಚೈತ್ರಾ, ಮಂಜು ಅವರನ್ನು ರುಬ್ಬಿಸಿಕೊಳ್ಳುವುದು ಗ್ಯಾರಂಟಿ.

ನಿಜ ಹೇಳ್ಬೇಕು ಅಂದರೆ ಈ ಟಾಸ್ಕ್ ಚೆನ್ನಾಗಿದೆ. ಆದರೆ ಮಿಡ್‌ನೈಟ್‌ ವರೆಗೂ ಸರ್ವೀಸ್ ಕೊಡಿ ಎನ್ನುವುದು ಸ್ಟಾಫ್ ಆಗಿರುವ ತಂಡದವರಿಗೆ ತುಂಬಾನೇ ಬೇಜಾರಾಗಿದೆ. ಸುಸ್ತು ಕೂಡ ಮಾಡಿದೆ. ಚೈತ್ರಾ ಹಾಗೂ ಮಂಜು ಅವರು ಈ ಟಾಸ್ಕ್‌ನಲ್ಲಿ ಸ್ವಲ್ಪ ಹೆಚ್ಚಾಗಿ ನಡೆದುಕೊಂಡಿದ್ದು ಕಾಲ ಬದಲಾಗುತ್ತೆ ಜಾಸ್ತಿ ಉರಿಬೇಡಿ ಎಂದು ಬಿಗ್‌ಬಾಸ್‌ ವೀಕ್ಷಕರು ಚೈತ್ರಾ ಹಾಗೂ ಮಂಜು ಅವರಿಗೆ ಪ್ರೋಮೋ ನೋಡಿಕೊಂಡೇ ಸಲಹೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ರಾತ್ರಿ ಇಡೀ ರೆಸಾರ್ಟ್‌ ಟಾಸ್ಕ್ ಮುಂದುವರಿತಾ ಅಥವಾ ಬದಲಾಯಿತಾ ಎಂದು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

This photos taken through Filmibeat kannada

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+