Amruthadhare serial: ಎಲ್ಲಾ ಕಷ್ಟಗಳನ್ನು ಮೀರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಭೂಮಿಕಾ: ಗೌತಮ್‌ ಕಣ್ಣೀರು

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಅಮೃತಧಾರೆ'ಯಲ್ಲಿ ಭೂಮಿಕಾ ಪಾತ್ರವು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಈ ಧಾರಾವಾಹಿಯ ಕಥಾವಸ್ತುವು ಮಧ್ಯಮ ವರ್ಗದ ಉಪನ್ಯಾಸಕಿ ಭೂಮಿಕಾ ಮತ್ತು ಉದ್ಯಮಿ ಗೌತಮ್ ಅವರ ವಿವಾಹದ ನಂತರದ ಜೀವನದ ಸುತ್ತ ಹೆಣೆದಿದೆ. ಭೂಮಿಕಾಳ ಜೀವನದಲ್ಲಿ ಅನೇಕ ಸವಾಲುಗಳು, ಕುಟುಂಬದ ಒತ್ತಡ, ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ ಈ ಎಲ್ಲ ಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವ ಧೈರ್ಯವಂತೆ.

ಸದ್ಯ ಭೂಮಿಕಾ 9 ತಿಂಗಳ ತುಂಬು ಗರ್ಭೀಣಿ. ಈ ನಡುವೆ ಕೇಡಿ ಪಾತ್ರದಾರಿಯಾಗಿರುವ ಶಕುಂತಳಾ ಸೇಡಿನಿಂದಾಗಿ ಗೌತಮ್‌ ಹಾಗೂ ಭೂಮಿಕಾಗೆ ಒಂದಲ್ಲ ಒಂದು ಕೇಡನ್ನ ಬಯಸುತ್ತಿರುತ್ತಾರೆ. ಇದೀಗ ಜಗತ್ತನೇ ನೋಡದ ಕಂದಮ್ಮನ್ನ ಕೊಲ್ಲಲು ಶಕುಂತಲಾ ಹಾಗೂ ಕೇಡಿ ಜೈದೇವ್‌ ಹಲವು ಕುತಂತ್ರ ನಡೆಸಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿದೆ. ಭೂಮಿಕಾಳ ಪಾತ್ರದಲ್ಲಿ ನಟಿಸಿರುವ ಛಾಯಾ ಸಿಂಗ್ ಅವರ ಅಭಿನಯವನ್ನು ಎಲ್ಲೆಡೆ ಪ್ರಶಂಸಿಸಲಾಗಿದೆ. ಈ ಭಾಗ ಪ್ರಸಾರವಾದ ನಂತರ ಧಾರಾವಾಹಿಯ ಟಿಆರ್‌ಪಿ ಕೂಡ ಹೆಚ್ಚಾಗಿದೆ.

Bhumika gives birth to a baby Girl

ದಿನದಿಂದ ದಿನಕ್ಕೆ ಅಮೃತಧಾರೆ ಸೀರಿಯಲ್‌ ಬಗ್ಗೆ ಸದ್ಯ ವೀಕ್ಷಕರಿಗೆ ಆತಂತ ಎದುರಾಗಿದೆ. ಭೂಮಿಕಾ ಹಾಗೂ ಅವರ ಜಗತ್ತನ್ನೆ ನೋಡದ ಪುಟ್ಟ ಕಂದನನ್ನ ಕೊಲ್ಲಲು ಹಾಲಿನಲ್ಲಿ ವಿಷ ಹಾಕಿದ್ದಾರೆ. ಹೀಗಾಗಿ ನಾಟಿ ಔಷದಿಗಾಗಿ ಅಜ್ಜಿಯ ಸೂಚನೆಯಂತೆ ಗೌತಮ್‌ ಅವರು ಭೂಮಿಕಾಳನ್ನ ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಇತ್ತ ಕಾಡಿನಲ್ಲೂ ಗೌತಮ್‌ ಹಾಗೂ ಭೂಮಿಕಾಗೆ ಹಲವು ಸವಾಲುಗಳು ಎದುರಾದವು. ಶಂಕುತಲಾ ರೌಡಿಗಳನ್ನ ಬಿಟ್ಟು ಗೌತಮ್‌ ಹಾಗೂ ಭೂಮಿಕಾಗಳನ್ನ ಮುಗಿಸಲು ಪ್ಲಾನ್‌ ಹಾಕಿದ್ರು. ಆದರೆ, ಮಾರಿಗುಡಿ ಶಿವು ಎಂಟ್ರಿಯಿಂದ ಶಂಕುತಲಾ ಕುತಂತ್ರ ವರ್ಕೌಟ್‌ ಆಗಲಿಲ್ಲ. ಶಿವು ಸಹಾಯದಿಂದಾಗಿ ಗೌತಮ್‌ ನಾಟಿ ಔಷದಿಯನ್ನ ಕೊಡಿಸಿದ್ದರು.

ಇತ್ತ ಭೂಮಿಕಾಗೆ ನಾಟಿ ಔಷದಿ ಕೊಡುತ್ತಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಕಾಡಿನಲ್ಲಿ ಗೌತಮ್‌ ಹಾಗೂ ಭೂಮಿಕಾಳ ಪಾಡು ಯಾರಿಗೂ ಬೇಡವಾಗಿತ್ತು. ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಮಾರಿಗುಡಿ ಶಿವು ತನ್ನ ಹೆಂಡತಿ ಪಾರುಗೆ ಕಾಲ್‌ ಮಾಡಿ ವಿಷಯವನ್ನ ತಿಳಿಸುತ್ತಾರೆ. ಭೂಮಿಕಾಗಳ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲೇ ಪಕ್ಕದಲ್ಲೇ ಇರುವ ಆಸ್ಪತ್ರೆಯಲ್ಲಿ ಭೂಮಿಕಾಗೆ ಹೆರಿಗೆ ಮಾಡಿಸುವ ತಯಾರಿಯನ್ನ ಮಾಡಿಕೊಳ್ಳುತ್ತಾರೆ. ಆದರೆ, ಆ ಸಂದರ್ಭದಲ್ಲಿಯೂ ಸಹ ರೌಡಿಗಳು ಮತ್ತೆ ಅಟ್ಯಾಕ್‌ ಮಾಡುತ್ತಾರೆ. ಈ ವೇಳೆ ಪಾರು ಜೊತೆಗೆ ಕರ್ಣ ಕೈ ಜೋಡಿಸುತ್ತಾರೆ.

ಕಾಡಿನ ನಡುವೆ ಒಂದು ಆಸ್ಪತ್ರೆಯಲ್ಲಿ ಭೂಮಿಕಾಗೆ ಹೆರಿಗೆ ನೋವಿನಿಂದ ನರಳುತ್ತಿದ್ದು, ತಕ್ಷಣ ಪೋಲಿಸ್‌ರನ್ನ ಕರೆದುಕೊಂಡು ಗೌತಮ್‌ ಸ್ನೇಹಿತ ಆನಂದ್‌ ಎಂಟ್ರಿಯಾಗುತ್ತಾರೆ. ಇತ್ತ ಹೆರಿಗೆ ಮಾಡಿಸುವಾಗಲೂ ಭೂಮಿಕಾಗೆ ಪ್ರಜ್ಞೆ ತಪ್ಪುತ್ತಿರುತ್ತದೆ. ಈ ವೇಳೆ ಡಾಕ್ಟರ್‌ ಕರ್ಣನ ಸಲಹೆಯಂತೆ ಗೌತಮ್‌ ಅವರು ಭೂಮಿಕಾಗೆ ಧೈರ್ಯ ತುಂಬುತ್ತಾರೆ. ಹಲವು ಕಷ್ಟ ಸಮಸ್ಯೆಗಳ ಗೆದ್ದ ಭೂಮಿಕಾ ಕೊನೆಗೆ ಹೆಣ್ಣು ಮಗುವಿಗೆ ಜನ್ಮ ನೀಡುವ ಮಹತ್ವದ ಘಟ್ಟವನ್ನು ತಲುಪಿದ್ದಾಳೆ. ಇತ್ತ ಭೂಮಿಕಾ ಕಷ್ಟವನ್ನ ಹಾಗೂ ಮಗುವಿನ ಧ್ವನಿ ಕೇಳಿ ಗೌತಮ್‌ ಕಣ್ಣೀರಿಟ್ಟಿದ್ದಾರೆ.
ಎಲ್ಲಾ ಕಷ್ಟಗಳನ್ನು ಮೀರಿ ಭೂಮಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ ದೃಶ್ಯವನ್ನು ಸೀರಿಯಲ್‌ನಲ್ಲಿ ತೋರಿಸಲಾಗಿದೆ. ಭೂಮಿಕಾಗೆ ಡಾಕ್ಟರ್‌ ಕರ್ಣ ನಾರ್ಮಲ್ ಡೆಲಿವರಿ ಮಾಡಿಸಿದ್ದಾರೆ. ಭೂಮಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಅಮೃತಧಾರೆ" ಧಾರಾವಾಹಿಯಲ್ಲಿ ಭೂಮಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ ದೃಶ್ಯ ಪ್ರಸಾರವಾಗಿದ್ದು, ಇದನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+