Trivikram: ರಾಧಾ ಕೃಷ್ಣ ರುಕ್ಮಿಣಿ- ನಿಜವಾಯ್ತು ತ್ರಿವಿಕ್ರಮ್ ತಾಯಿ ಹೇಳಿದ ಮಾತು

ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಮೇಲೆ ಸ್ಪರ್ಧಿಗಳು ರೋಡ್‌ ಶೋಗಳನ್ನು ಮಾಡುತ್ತಿದ್ದಾರೆ. ಹನುಮಂತ ಅವರಂತೆ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಕೂಡ ಭರ್ಜರಿ ರೋಡ್ ಶೋ ಮಾಡಿದರು. ಈ ವೇಳೆ ತ್ರಿವಿಕ್ರಮ್ ಜೊತೆ ಭವ್ಯಾ ಹಾಗೂ ಅನುಷಾ ರೈ ಕೂಡ ಭಾಗಿಯಾಗಿದ್ದು ಕಂಡು ಬಂದಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಅಲ್ಲದೆ ಇದೇ ವೇಳೆ ತ್ರಿವಿಕ್ರಮ್ ಹೇಳಿದ ಆ ಒಂದು ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗಾದರೆ ರೋಡ್‌ ಶೋ ಬಳಿಕ ತ್ರಿವಿಕ್ರಮ್ ಹೇಳಿದ್ದೇನು? ತ್ರಿವಿಕ್ರಮ್ ತಾಯಿ ಹೇಳಿದ ಮಾತು ನಿಜವಾಯ್ತಾ?

ತ್ರಿವಿಕ್ರಮ್ ಅವರು ತಮ್ಮ ಹುಟ್ಟೂರಿನಲ್ಲಿ ರೋಡ್ ಶೋ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನನಗೆ ನನ್ನ ಹುಟ್ಟೂರಿಗೆ ಬಿಗ್‌ಬಾಸ್‌ ಸ್ನೇಹಿತರನ್ನು ಕರೆದುಕೊಂಡು ಬಂದಿದ್ದು ತುಂಬಾನೇ ಖುಷಿ ಆಗಿದೆ' ಎಂದರು. ಇದೇ ವೇಳೆ ಅನುಷಾ ಸಿಸ್ಟರ್ ಅವರನ್ನು ನಿಮ್ಮ ಹುಟ್ಟೂರಿಗೆ ಕರೆದುಕೊಂಡು ಬಂದಿದ್ದು ಹೇಗೆ ಅನಿಸುತ್ತಿದೆ ಎಂದು ಸುದ್ದಿಗಾರರು ಕೇಳಿದ್ದಕ್ಕೆ ತ್ರಿವಿಕ್ರಮ್ ಥಟ್ ಅಂತ 'ಅನುಷಾ ನನ್ನ ಸಿಸ್ಟರ್ ಅಲ್ಲ. ಅವರು ನನ್ನ ಫ್ರೆಂಡ್' ಎಂದು ಹೇಳಿದ್ದಾರೆ. ಇದಕ್ಕೆ ಭವ್ಯಾ ಮುಖದಲ್ಲಿ ನಗು ಕಾಣಿಸುತ್ತದೆ. ಆದರೆ ಅದು ಮನಸ್ಸಿನಿಂದ ಬಂದಂತೆ ಇರಲಿಲ್ಲ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

bhavya-radha trivikram-krishna anusha-rukmini what trivikrams mother said came true

ಮುಂದುವರೆದು ಮಾತನಾಡಿದ ತ್ರಿವಿಕ್ರಮ್ ಅವರು ನನ್ನ ಹುಟ್ಟೂರಿಗೆ ರಜತ್, ಧನ್‌ರಾಜ್‌ ಕೂಡ ಬರಬೇಕಿತ್ತು. ಆದರೆ ಅವರಿಗೆ ಸಂದರ್ಶನ ಇದ್ದರಿಂದ ಬರಲು ಆಗಿಲ್ಲ. ಭವ್ಯಾ ಹಾಗೂ ಅನುಷಾ ಬಂದಿದ್ದಕ್ಕೆ ತುಂಬಾ ಖುಷಿ ಆಗಿದೆ ಎಂದಿದ್ದಾರೆ. ತ್ರಿವಿಕ್ರಮ್ ಅನುಷಾ ಬಗ್ಗೆ ಹೇಳಿದ ಈ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ತ್ರಿವಿಕ್ರಮ್ ತಾಯಿಯ ಕನಸು ನನಸಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ತ್ರಿವಿಕ್ರಮ್ ತಾಯಿ ಹೇಳಿದ್ದೇನು?

ನಿಜವಾಯ್ತು ತ್ರಿವಿಕ್ರಮ್ ತಾಯಿ ಹೇಳಿದ ಮಾತು

ಬಿಗ್‌ಬಾಸ್‌ ಮನೆಗೆ ಹೋದಾಗ ತ್ರಿವಿಕ್ರಮ್ ತಾಯಿ ಗೆದ್ದು ಬಾ ಮಗನೆ ಎಂದು ಹೇಳಿದ್ದರು. ಜೊತೆಗೆ ಭವ್ಯಾ ಹಾಗೂ ತ್ರಿವಿಕ್ರಮ್ ಜೋಡಿಯನ್ನು ರಾಧಾ ಕೃಷ್ಣನಿಗೆ ಹೋಲಿಸಿದ್ದರು. ಆದರಿಲ್ಲಿ ತ್ರಿವಿಕ್ರಮ್ ತಾಯಿ ಹೇಳಿದ ಆ ಒಂದು ಮಾತನ್ನು ನಿಜ ಮಾಡಿದ್ದಾರೆ. ತ್ರಿವಿಕ್ರಮ್ ಬಿಗ್‌ಬಾಸ್‌ ಗೆಲ್ಲಲಿಲ್ಲ. ಬದಲಿಗೆ ತಾಯಿ ಹೇಳಿದಂತೆ ರಾಧಾ ರುಕ್ಮಿಣಿಯನ್ನು ಹುಡುಕಿಬಿಟ್ಟರು ಎಂದು ಜನ ಮಾತನಾಡುತ್ತಿದ್ದಾರೆ.

bhavya-radha trivikram-krishna anusha-rukmini what trivikrams mother said came true

ರೋಡ್‌ ಶೋ ಬಳಿಕ ತ್ರಿವಿಕ್ರಮ್ ಅನುಷಾ ನನ್ನ ಫ್ರೆಂಡ್ ಸಿಸ್ಟರ್ ಅಲ್ಲ ಎಂದಾಕ್ಷಣ ಅವರ ಅಭಿಮಾನಿಗಳು ಭವ್ಯಾ, ತ್ರಿವಿಕ್ರಮ್ ಹಾಗೂ ಅನುಷಾ ಅವರನ್ನು ರಾಧಾ ಕೃಷ್ಣ ರುಕ್ಮಿಣಿಗೆ ಹೋಲಿಸಿದ್ದಾರೆ. ತ್ರಿವಿಕ್ರಮ್ ಬಿಗ್‌ಬಾಸ್‌ ಮನೆಯಲ್ಲಿ ಭವ್ಯಾ ಅವರಿಗೆ ಪ್ರಪೋಸ್ ಮಾಡಿದ್ದರು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅತ್ತ ಮೋಕ್ಷಿತಾ ಅವರಿಗೂ ಲೈನ್ ಹೊಡೆಯುತ್ತಿದ್ದರು. ಆದರೆ ಅದು ಕೊನೆ ಕೊನೆಗೆ ಯಾಕೋ ವರ್ಕೌಟ್ ಆಗಲಿಲ್ಲ. ಹೀಗಾಗಿ ಮೋಕ್ಷಿತಾ ಜಾಗಕ್ಕೆ ಅನುಷಾ ಬಂದಿದ್ದಾರೆ ಎನ್ನಲಾಗುತ್ತಿದೆ.

ರೋಡ್‌ ಶೋನ್‌ನಲ್ಲಿ ತ್ರಿವಿಕ್ರಮ್ ಅವರು ಭವ್ಯಾ ಹಾಗೂ ಅನುಷಾ ಹೆಗಲ ಮೇಲೆ ಕೈ ಹಾಕಿ ಜನರತ್ತ ಕೈ ಬೀಸಿದ್ದು ಕಂಡು ಬಂದಿದೆ. ಹೀಗಾಗಿ ಮೋಕ್ಷಿತಾ ಔಟ್ ಅನುಷಾ ಇನ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ರಜತ್, ತ್ರಿವಿಕ್ರಮ್, ಭವ್ಯಾ ಹಾಗೂ ಅನುಷಾ ನಾಲ್ಕು ಜನ ಚಾಮುಂಡಿ ಬೆಟ್ಟಕ್ಕೆ ಹೋಗಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದರಲ್ಲೂ ಅನುಷಾ, ಭವ್ಯಾ ಹಾಗೂ ತ್ರಿವಿಕ್ರಮ್ ಒಟ್ಟಿಗೆ ಕುಳಿತಿರುವುದು ಕಂಡು ಬಂದಿದೆ.

ಒಟ್ಟಿನಲ್ಲಿ ಮೋಕ್ಷಿತಾ ಇದ್ದಾರಾ ಅಥವಾ ಔಟ್ ಆಗಿದ್ದಾರೋ ಗೊತ್ತಿಲ್ಲ. ಇತ್ತ ತ್ರಿವಿಕ್ರಮ್, ಭವ್ಯಾ ಹಾಗೂ ಅನುಷಾ ಮಾತ್ರ ಭಾರೀ ಸುದ್ದಿ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+