"ಭರ್ಜರಿ ಬ್ಯಾಚುಲರ್ಸ್‌" ಕಪ್‌ ಗೆದ್ದ ಸುನಿಲ್‌-ಅಮೃತ ಜೋಡಿ, ರನ್ನರ್‌ ಅಪ್‌ ಯಾರು?

Bharjari Bachelors Season 2: ಭರ್ಜರಿ ಬ್ಯಾಚುಲರ್ಸ್‌ ಸೀಸನ್-‌2 ರಿಯಾಲಿಟಿ ಶೋ ಗ್ರ್ಯಾಂಡ್‌ ಫಿನಾಲೆ ಕೊನೆಗೂ ಮುಗಿದಿದೆ. ಇಷ್ಟು ದಿನಗಳ ಕಾಲ ಕುತೂಹಲ ಮೂಡಿಸಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಜೀ ಕನ್ನಡ ವಾಹಿನಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ಈ ರಿಯಾಲಿಟಿ ಶೋ ಎರಡು ಸೀಸನ್‌ಗಳನ್ನು ಮುಗಿಸಿದೆ. ಈ ಸೀಸನ್‌ನ ಫಿನಾಲೆಯಲ್ಲಿ ಸುನಿಲ್‌ ಗುಜಗೊಂಡ-ಅಮೃತ ರಾಜ್‌ ಜೋಡಿ ಗೆದ್ದು ಬೀಗಿದೆ.

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಬಹಳ ಜನಪ್ರಿಯ ಆಗಿದ್ದು, ಹಲವು ಸ್ಪರ್ಧಿಗಳು ವಿಭಿನ್ನ ಟಾಸ್ಕ್‌ಗಳನ್ನು ಮಾಡಿ ಗಮನಸೆಳೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಶೋ ಕುರಿತ ಪ್ರಮುಖ ವಿಡಿಯೋಗಳು ವೈರಲ್ ಆಗಿದ್ದವು. ಇತ್ತೀಚಿನ ದಿನಗಳಲ್ಲಿ 'ಭರ್ಜರಿ ಬ್ಯಾಚುಲರ್ಸ್ 2' ಗ್ರ್ಯಾಂಡ್ ಫಿನಾಲೆ ಕೂಡ ಜರುಗಿದ್ದು, ಅಧಿಕೃತವಾಗಿ ವಿನ್ನರ್‌ ಯಾರು ಎಂಬ ವಿಚಾರ ಹೊರಬಿದ್ದಿದೆ.

bharjari-bachelors-2025-sunil-amrutha-pair-wins-the-crown-who-is-runner-up

ಈ ಸೀಸನ್‌ನಲ್ಲಿದ್ದ ಸ್ಪರ್ಧಿಗಳು ಕೂಡ ಕರ್ನಾಟಕದ ಜನತೆಗೆ ಚಿರಪರಿಚಿತರೇ ಆಗಿದ್ದ ಕಾರಣ ಹಲವು ಜೋಡಿಗಳು ಕಮಾಲ್‌ ಮಾಡಿದ್ದವು. ಈ ಪೈಕಿ ರಕ್ಷಕ್‌ ಬುಲೆಟ್‌-ರಮೋಲಾ, ಡ್ರೋನ್‌ ಪ್ರತಾಪ್‌-ಗಗನಾ, ಸುನಿಲ್‌ ಅಮೃತಾ ಜೋಡಿಗಳು ಕೂಡ ವೀಕ್ಷಕರ ಗಮನ ಸೆಳೆದಿತ್ತು. ಹಲವರು ರಕ್ಷಕ್‌ ಗೆಲ್ಲಬೇಕು ಅಂದರೆ, ಮತ್ತೊಂದೆಡೆ ಡ್ರೋನ್‌ ಪ್ರತಾಪ್‌ ಗೆಲ್ಲಬೇಕು ಎನ್ನುತ್ತಿದ್ದರು.

ಸುನೀಲ್-ಅಮೃತಾ, ದರ್ಶನ್-ಅಪೇಕ್ಷಾ, ಹುಲಿ ಕಾರ್ತಿಕ್-ಧನ್ಯ, ಗಾಬ್ರಿ-ಅನನ್ಯಾ, ಉಲ್ಲಾಸ್-ಪವಿ, ರಕ್ಷಕ್ ಬುಲೆಟ್-ರಮೋಲ, ಡ್ರೋನ್ ಪ್ರತಾಪ್-ಗಗನ, ಪ್ರವೀಣ್ ಜೈನ್-ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಸೂರ್ಯ-ಅಭಿಜ್ಞಾ ಜೋಡಿ ಈ ಸೀಸನ್‌ನ ಪ್ರಮುಖ ಆಕರ್ಷಣೆಯಾಗಿದ್ದವು. ಇನ್ನು ರಕ್ಷಕ್‌, ಪ್ರತಾಪ್‌, ಸುನಿಲ್‌ ಅವರಿಗೆ ಈ ಹಿಂದಿನಿಂದಲೂ ಕ್ರೇಜ್‌ ಇದ್ದಿದ್ದರಿಂದ ನಿರೀಕ್ಷೆಯಂತೆ ಆ ಮೂವರೂ ಅಂತಿಮ ಸ್ಥಾನಗಳಲ್ಲಿ ಉಳಿಯುತ್ತಾರೆ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಭವಿಷ್ಯ ನುಡಿಯಲಾಗಿತ್ತು.

ರಕ್ಷಕ್‌, ಪ್ರತಾಪ್‌ ಜೋಡಿ ರನ್ನರ್‌ ಅಪ್‌!

ನಿರೀಕ್ಷೆಯಂತೆ ಗ್ರ್ಯಾಂಡ್‌ ಫಿನಾಲೆಯಲ್ಲಿ ಸುನೀಲ್ ​ಹಾಗೂ ಅಮೃತಾ ವಿನ್ನರ್ ಎಂದು ಘೋಷಿಸಲಾಯಿತು. ಮೊದಲನೇ ರನ್ನರ್‌ ಅಪ್‌ ಆಗಿ ರಕ್ಷಕ್‌ ಬುಲೆಟ್‌ ಹಾಗೂ ರಮೋಲಾ ಜೋಡಿ ಗೆದ್ದಿದೆ. ಈ ಬಹುಮಾನದ ಮೊತ್ತ 10 ಲಕ್ಷ ರೂಪಾಯಿ. ಇನ್ನು ಎರಡನೇ ರನ್ನರ್‌ ಅಪ್‌ ಆಗಿ ಡ್ರೋನ್‌ ಪ್ರತಾಪ್‌ ಹಾಗೂ ಗಗನ ಭಾರಿ ಜೋಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಬಹುಮಾನದ ಮೊತ್ತ 3 ಲಕ್ಷ ರೂಪಾಯಿ. ಇದಲ್ಲದೆ ಈ ಸೀಸನ್‌ನಲ್ಲಿ ಸ್ಪೆಷಲ್‌ ಬ್ಯಾಚುಲರ್‌ ಆಗಿ ಸೂರ್ಯ ಹಾಗೂ ಅಭಿಜ್ಞಾ ಭಟ್‌ ಜೋಡಿ ಹೊರಹೊಮ್ಮಿದ್ದು, 1 ಲಕ್ಷ ರೂಪಾಯಿ ನಗದು ಬಹುಮಾನವೂ ನೀಡಲಾಗಿದೆ.

bharjari-bachelors-2025-sunil-amrutha-pair-wins-the-crown-who-is-runner-up

ಈ ಸೀಸನ್‌ನಲ್ಲಿ ಬ್ರಹ್ಮಚಾರಿ vs ಸಂಸಾರಿ, ಪ್ರಪೋಸ್ ರೌಂಡ್, ಸೀನಿಯರ್ಸ್ vs ಜೂನಿಯರ್ಸ್ ಸೇರಿ ಹಲವರು ರೌಂಡ್‌ಗಳು ಇದ್ದವು. ಇದರಲ್ಲಿ ಎಲ್ಲ ಜೋಡಿಗಳು ತಮ್ಮದೇ ಶೈಲಿಯಲ್ಲಿ ಮೋಡಿ ಮಾಡಿದ್ದವು. ಈ ರಿಯಾಲಿಟಿ ಶೋನಲ್ಲಿ 10 ಜೋಡಿಗ ತಮ್ಮ ಪ್ರತಿಭೆಯನ್ನು ತೋರಿಸಿ ಅಂತಿಮವಾಗಿ ಸುನಿಲ್‌ ಜೋಡಿಗೆ ಕಿರೀಟ ಮುಡಿಗೇರಿದೆ. ಈ ಶೋನಲ್ಲಿ "ಬ್ಯಾಚುಲರ್ಸ್" ಮತ್ತು "ಏಂಜಲ್ಸ್" ತಂಡಗಳ ನಡುವಿನ ಸ್ಪರ್ಧೆಗೆ ಫಿದಾ ಆಗಿದ್ದು, ಹೊಟ್ಟೆ ಹುಣ್ಣಾಗುವಂತೆ ನಕ್ಕು ನಲಿದ ಅದೆಷ್ಟೋ ನೆನಪುಗಳನ್ನು ಹೊತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+