Bhagya Lakshmi Serial: ಭಾಗ್ಯ-ಆದಿ ಹೊಸ ಬದುಕಿನ ಕನಸಿನಲ್ಲಿ, ಇತ್ತ ತಂದೆ - ತಾಯಿಗೆ ತಾಂಡವ್‌ನಿಂದ ಹೊಸ ಸಂಕಷ್ಟ

Bhagya Lakshmi Serial: ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಮಾತು ಎಲ್ಲರ ಮನಸ್ಸು ಗೆದ್ದಿದೆ. ಕೆಲಸದವರ ಬಗ್ಗೆ ಹಾಗೂ ಕೆಲಸಗಾರರಿಂದ ಕೆಲಸ ಮಾಡಿಸಿಕೊಳ್ಳುವ ಬಗ್ಗೆ ಭಾಗ್ಯ ಹೇಳಿರುವ ಮಾತುಗಳು ಸೊಗಸಾಗಿದೆ. ಆದರೆ, ತಾಂಡವ್ ದುಷ್ಟತನದಿಂದ ಇರೋ ಮನೇನೂ ಕಳೆದುಕೊಳ್ಳುವ ಆತಂಕದಲ್ಲಿ ಕುಸುಮಾ ಇದ್ದಾಳೆ. ಸಂಕಷ್ಟದಲ್ಲಿರುವ ಅತ್ತೆ - ಮಾನವನ್ನು ಭಾಗ್ಯ ಈಗ ಸಂಕಷ್ಟದಿಂದ ಪಾರು ಮಾಡುತ್ತಾಳೆಯೇ ಎನ್ನುವ ಕುತೂಹಲ ಹೆಚ್ಚಾಗಿದೆ. ಹೊಸ ಎಪಿಸೋಡ್‌ಗಳು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಾಂಡವ್ ಸೂರ್ಯವಂಶಿ ಅವರು ಈ ಮನೆಯನ್ನು ಮಾರಾಟ ಮಾಡುವುದಕ್ಕೆ ರೆಡಿಯಾಗಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಕುಸುಮಾ ಮನೆಗೆ ಬಂದಿರುವ ವಕೀಲರು ನಿಮ್ಮ ಮಗ ತಾಂಡವ್ ಸೂರ್ಯ ವಂಶಿ ಅವರು ಈ ಮನೆಯನ್ನು ಮಾರಾಟ ಮಾಡುವುದಕ್ಕೆ ರೆಡಿಯಾಗಿದ್ದಾರೆ ಎನ್ನುವ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನು ಕೇಳಿರುವ ತಾಂಡವ್ ಅವರ ಅಪ್ಪ - ಅಮ್ಮ ಕಂಗಾಲಾಗಿದ್ದಾರೆ. ಈ ಹೊಸ ಸಂಕಷ್ಟದಿಂದ ತಾಂಡವ್ ಅಪ್ಪ - ಅಮ್ಮನನ್ನು ಭಾಗ್ಯಲಕ್ಷ್ಮೀ ಕಾಪಾಡುತ್ತಾಳೆಯೇ ಎನ್ನುವ ಕುತೂಹಲ ಮೂಡಿದೆ.

Bhagya Lakshmi Serial

Bhagya Lakshmi Serial: ವಕೀಲರು ಹೇಳಿದ್ದೇನು

ಇನ್ನು ತಾಂಡವ್ ಅವರ ತಂದೆ - ತಾಯಿ ಇರುವ ಮನೆಯನ್ನು ಮಾರಾಟ ಮಾಡುವುದಕ್ಕೆ ತಾಂಡವ್ ಮುಂದ್ದಾಗಿದ್ದು, ಈ ಮನೆಯನ್ನು ಆದಷ್ಟು ಬೇಗ ಖಾಲಿ ಮಾಡುವಂತೆ ಪೋಷಕರಿಗೆ ವಕೀಲರು ಹೇಳಿದ್ದಾರೆ. ಇದನ್ನು ಕೇಳಿರುವ ಮಾಸನ ಅವರು ಏನಂದ್ರಿ ಈ ಮನೆಯನ್ನು ಮಾರಾಟ ಮಾಡುವುದಾ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನು ಭಾಗ್ಯ ಅವರು ಆದಿ ಅವರೊಂದಿಗೆ ಮಾತನಾಡುತ್ತಾ ಆದಿಯವರೆ ಒಂದು ಸಲ ಅತ್ತೆ - ಮಾವನ್ನ ನೋಡಿಕೊಂಡು ಬರೋಣ್ವಾ ಅಂತ ಕೇಳಿದ್ದಾರೆ. ಸತ್ಯನಾರಾಯಣ ಪೂಜೆಯಾದ ಮೇಲೆ ಅವರನ್ನ ನಾವು ಭೇಟಿಯೇ ಮಾಡಿಲ್ಲ. ಅದೂ ಅಲ್ಲದೆ ಮಾವನ ಚೆಕ್‌ಅಪ್‌ ಹತ್ತಿರ ಬಂತು, ಹೋದರೆ ಅದೂ ಸಹ ಮಾಡಿಸಿಕೊಂಡು ಬರಬಹುದು ನಾವು ಅಲ್ಲಿಗೆ ಹೋದರೆ ಅಂತ ಹೇಳಿದ್ದಾರೆ.

ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಅವರಿಗೆ ನಮ್ಮ ಹೊಸ ಬ್ಯುಸಿನೆಸ್ ಬಗ್ಗೆ ತಿಳಿಸಿ, ಇನ್ನು ಮುಂದೆ ದುಡ್ಡಿನ ಬಗ್ಗೆ ಯೋಚನೆ ಮಾಡಬೇಡಿ ಅಂತನೂ ಹೇಳಬೇಕು ಅಂತ ಭಾಗ್ಯ ಅವರು ಆದಿ ಅವರಿಗೆ ಹೇಳಿದ್ದಾರೆ.

ಹೊಸ ಬದುಕು ಕಟ್ಟಿಕೊಳ್ಳುವ ಹಂತದಲ್ಲಿ ಟ್ರಿಪ್ ಪ್ಲ್ಯಾನ್

ಇನ್ನು ಆದಿ ಹಾಗೂ ಭಾಗ್ಯ ಲಕ್ಷ್ಮೀ ಅವರು ಹೊಸ ಬದುಕು ಕಟ್ಟಿಕೊಳ್ಳುವ ಹಂತದಲ್ಲಿದ್ದಾರೆ. ಹೊಸ ಬದುಕಿನ ಕನಸಿನಲ್ಲಿ ಭಾಗ್ಯ ಮತ್ತು ಆದಿ ಇದ್ದಾರೆ. ಆದರೆ ಇದೇ ಸಂದರ್ಭದಲ್ಲಿ ತಾಂಡವ್ ಅವರ ಅತ್ತೆ ಮಾವನಿಗೆ ಸಂಕಷ್ಟ ಎದುರಾಗಿದೆ. ಮನೆ ಖಾಲಿ ಮಾಡಬೇಕು ಎನ್ನುವ ವಕೀಲರ ಮಾತನ್ನು ಅವರು ತಳ್ಳಿ ಹಾಕಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ನಾವು ಮನೆ ಖಾಲಿ ಮಾಡಲ್ಲ ಅಂತ ಹೇಳಿದ್ದಾರೆ.

ನೆಟ್ಟಿಗರು ಏನು ಹೇಳಿದ್ದಾರೆ

ಅಶ್ವಿನಿ ಭಟ್ ಎನ್ನುವವರು ಜೈಲಿನಲ್ಲಿ ಇರುವ ತಾಂಡವ್‌ಗೆ ನೇರವಾಗಿ ಮನೆ ಮಾರಲು ಸಾಧ್ಯವಿಲ್ಲ, ಯಾರಿಗಾದರೂ Power of attorney ಕೊಟ್ಟು ಮಾರಿಸಬಹುದು. ಅವನನ್ನು ಮದುವೆ ಕಾರ್ಯಕ್ರಮದಿಂದ ಎಳಕೊಂಡು ಹೋಗಿ ಜೈಲಿಗೆ ಹಾಕಿರೋ ಕಾರಣ ಮನೆಯ ಅಸಲಿ ಪತ್ರ ಅವನ ಬಳಿ ಇರೋದಿಲ್ಲ. ಹಾಗಿದ್ದ ಮೇಲೆ ಅವನಿಗೆ ಮನೆ ಮಾರಲು ಹೇಗೆ ಸಾಧ್ಯ ಅಂತ ಕೇಳಿದ್ದಾರೆ.

ಇನ್ನು ಲಲಿತಾ ಎಪಿ ಎನ್ನುವವರು ಈ ಮನೆಯ ವಿಷಯವನ್ನು ಒಂದೊಂದು ಸಲ ಒಂದೊಂದು ರೀತಿ ಬಿಂಬಿಸುತ್ತ ಬಂದಿದ್ದಾರೆ.

1)ನಿವೇಶನ ಇರುವುದು ತಾಂಡವನ ಅಪ್ಪನ ಹೆಸರಿನಲ್ಲಿ, ಇಲ್ಲದಿದ್ದರೆ ಮನೆ ಅವರಿಗೇ ಸೇರಬೇಕು.

2) ಭಾಗ್ಯನ ಹೆಸರಿಗೆ ಹಿಂದೊಮ್ಮೆ ಕುಸುಮ ಬರೆಸಿದ್ದಾರೆ

3) ಕಾಮತ್ ಸರ್ ಕೋರ್ಟ್ ಮೂಲಕ ತಾಂಡವನಿಗೆ ಶಿಕ್ಷೆ ಕೊಡಿಸಿದ್ದಾರೆ, ಮನೆಯನ್ನು ಖರೀದಿಸಿದ್ದಾರೆ

4) ಎಲ್ಲರೂ ಸುನಂದನ ಮನೆಯಲ್ಲಿದ್ದಾಗ, ತಾಂಡವ ತಾನು ಎಂದು ನಿರೂಪಿಸಲು ಒಳ್ಳೆಯವನ ಹೆಸರಿಗೆ ಬರೆದಿದ್ದಾನೆ. ಹೀಗೆ ಬಗೆ ಬಗೆಯಾಗಿ ಈ ಮನೆಯ ತಕರಾರು ಹಾಗೂ ಇತ್ಯರ್ಥ ನಡೆಯುತ್ತಲೇ ಇರುತ್ತದೆ. ಕಟ್ಟಕಡೆಗೆ ಉಳಿಯುವ ಪ್ರಶ್ನೆ, ಈ ಮನೆ ಯಾರಿಗೆ ಸೇರಿದ್ದು ಅಂತ ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+