'ಅಣ್ಣಾವ್ರ' ಸಿನಿಮಾ ಪ್ರದರ್ಶನದಿಂದ ಶುರುವಾಗಿದ್ದ 50 ವರ್ಷ ಹಳೆಯ 'ಕಾವೇರಿ ಥಿಯೇಟರ್' ಇನ್ನು ನೆನಪು
ಬೆಂಗಳೂರು, ಮೇ 06: ಓಟಿಟಿ, ಮಲ್ಪಿಫ್ಲೆಕ್ಸ್‌ಗಳ ಹಾವಳಿ ಮತ್ತು ಬದಲಾದ ಕಾಲಘಟ್ಟದಲ್ಲಿ ಅನೇಕ ಸಿನಿಮಾ ಪ್ರದರ್ಶನಗಳ ಮೂಲಕ ಅರ್ಧ ಶತಮಾನ ಕಂಡ ಬೆಂಗಳೂರು ಮತ್ತೊಂದು ಥಿಯೇಟರ್ ಇತಿಹಾಸ ಪುಟ ಸೇರಲಿದೆ. ಇಲ್ಲಿ ಅನೇಕ ದಿಗ್ಗಜರ ಸಿನಿಮಾ ಪ್ರದರ್ಶನ ಕಂಡಿವೆ. ಅಲ್ಲದೇ 'ಪುನೀತ್ ರಾಜಕುಮಾರ್' ಅವರ 'ಪರಮಾತ್ಮ' ಸಿನಿಮಾದ ದೃಶ್ಯಗಳನ್ನು ಈ ಥಿಯೇಟರ್‌ನಲ್ಲಿ ಸೆರೆ ಹಿಡಿಯಲಾಗಿದೆ.
ವರನಟ ಡಾ.ರಾಜಕುಮಾರ್ ಅವರ 'ಬಂಗಾರದ ಪಂಜರ' ಸಿನಿಮಾ ಮೂಲಕ ಆರಂಭವಾಗಿದ್ದ ಐಕಾನಿಕ್ 'ಕಾವೇರಿ' ಚಿತ್ರಮಂದಿರ (Cauvery Theatre) ಇನ್ನು ನೆನಪು ಮಾತ್ರ. ಏಕೆಂದರೆ ಒಂದು ಕಡೆ ಓಟಿಟಿ, ಸಿನಿಮಾಲ್ ಗಳ ಹಾವಳಿ ಮತ್ತೊಂದರೆ ಮೊದಲಿನಂತರ ಸಾಲು ಸಾಲು ಸಿನಿಮಾ ರೀಲೀಸ್ ಆಗುತ್ತಿಲ್ಲ. ಹೀಗಾಗಿ ಸಿನಿಮಾ ನಡೆಸುವುದು ಸವಾಲಾಗಿದೆ.

ಈ ಕಾರಣದಿಂದ ಈ ಚಿತ್ರಮಂದಿರ ಸ್ಥಗಿಗೊಳ್ಳಲಿದೆ. ಬೆಂಗಳೂರು ಮೆಜೆಸ್ಟಿಕ್ ಕಪಾಲಿ ಥಿಯೇಟರ್ ಬಿಟ್ಟರೆ ನಂತರ ಅತೀ ಹೆಚ್ಚು ಜನರು ಕೂತು ವೀಕ್ಷಿಸಬಹುದಾಗಿದ್ದ ದೊಡ್ಡ ಚಿತ್ರಮಂದಿರ ಇದಾಗಿತ್ತು.
1974ರಲ್ಲಿ ಆರಂಭವಾಗಿದ್ದ ಕಾವೇರಿ ಚಿತ್ರಮಂದಿರ
1974ರ ಜನವರಿ 11 ಅಣ್ಣಾವ್ರ 'ಬಂಗಾರದ ಪಂಜರ' ಸಿನಿಮಾ ಮೂಲಕ ಸಿಂಗಲ್ ಸ್ಕ್ರೀನ್ ನ ಈ ಕಾವೇರಿ ಚಿತ್ರಮಂದಿರ ಆರಂಭವಾಗಿತ್ತು. ಇತ್ತೀಚೆಗಷ್ಟೇ 50 ವರ್ಷ ಪೂರೈಸಿದ್ದಕ್ಕಾಗಿ ಸುವರ್ಣ ಮಹೋತ್ಸವ ಆಚರಿಸಲಾಯಿತು. ಅದಾಗಿ ಕೆಲವೇ ವಾರಗಳಲ್ಲಿ ಚಿತ್ರಮಮಂದಿರ ಸ್ಥಗಿತ ಸುದ್ದಿ ಹೊರ ಬಿದ್ದಿದೆ.
ಈ ಕಾವೇರಿ ಚಿತ್ರಮಂದಿರದ ಜಾಗದಲ್ಲಿ ಮುಂದಿನ ದಿನಗಳಲ್ಲಿ ವಾಣಿಜ್ಯ ಕಟ್ಟಡ ತಲೆ ಎತ್ತಲಿದೆ. ಈ ಮೂಲಕ ಐಕಾನಿಕ್ ಕಾವೇರಿ ಥಿಯೇಟರ್ ತನ್ನ ವೈಭವದ ಓಟವನ್ನು ಕೊನೆಗೊಳಿಸಲಿದೆ. ಅಂದಿನ ಕಾಲದಿಂದಲೇ ಕಳೆದ ಕೆಲವು ವರ್ಷಗಳವರೆಗೆ ಈ ಥಿಯೇಟರ್‌ನಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಿದ್ದರು. ಈ ಅನುಭವ ಕಂಡ ಹಳೆಯ ಬೆಂಗಳೂರು ನಿವಾಸಿಗಳಿಗೆ ಇದೊಂದು ಅವಿಸ್ಮರಣಿಯವಾಗಿ ಉಳಿದು ಬಿಡಲಿದೆ.

ತೆರೆಕಂಡ ಕೊನೆಯ ಸಿನಿಮಾಗಳು ಇವು
ಕಳೆದ ತಿಂಗಳು ಏಪ್ರಿಲ್ 20 ರಂದು ಥಿಯೇಟರ್‌ಗೆ ತೆರೆ ಬಿದ್ದಿದೆ. ಇದಕ್ಕೂ ಮೊದಲು 'ಬಡೇ ಮಿಯಾನ್ ಚೋಟೆ ಮಿಯಾನ್' ಮತ್ತು 'ಮೈದಾನ್' ಇಲ್ಲಿ ಪ್ರದರ್ಶನಗೊಂಡ ಕೊನೆಯ ಎರಡು ಹಿಂದಿ ಚಿತ್ರಗಳಾಗಿವೆ. ಇಲ್ಲಿ 1300 ಆಸನ ವ್ಯವಸ್ಥೆ ಇದ್ದು, ಮಿನಿ ಬಾಲ್ಕನಿ ಸಹ ಇತ್ತು. ಒಂದೆರಡು ಸಿನಿಮಾಗಳ ಶೂಟಿಂಗ್ ಸಹ ಇಲ್ಲಿ ನಡೆದಿದೆ. ಸದ್ಯ ಥಿಯೇಟರ್ ಸ್ಥಗಿತಗೊಂಡ ಕಾರಣ ಇಲ್ಲಿ ಹೊಸ ಕಟ್ಟಡ ನಿರ್ಮಿಸುವ ಕೆಲಸ ಆರಂಭವಾಗುತ್ತಿದೆ.
5 ವರ್ಷಗಳಿಂದ ಆದಾಯ ಕುಸಿತ
ದಶಕಗಳಿಂದ ಸಿನಿಮಾ ಪ್ರದರ್ಶನ ನಡೆಸಿಕೊಂಡು ಬಂದ ಈ ಥಿಯೇಟರ್ ಅನ್ನು ಇಂದು ಮುಚ್ಚಲು ನನಗೆ ಅತೀವ ಬೇಸರವಾಗಿದೆ. ಆದರೆ ಕಳೆದ 5 ವರ್ಷಗಳಲ್ಲಿ ಆದಾಯ ಸಂಗ್ರಹದಲ್ಲಿ ಭಾರೀ ಹಿನ್ನಡೆ ಆಗಿದೆ. 50 ವರ್ಷಗಳ ಹಿಂದೆ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ತಂದೆ ನರಸಿಂಹಯ್ಯನವರ ಈ ಪರಂಪರೆ ಮುಂದುವರೆಸಿದ್ದರು, ಇದೀಗ ಅನಿವಾರ್ಯವಾಗಿ ಚಿತ್ರಮಂದಿರ ಸ್ಥಗಿಗೊಳಿಸಬೇಕಾಗಿದೆ ಎಂದು ಥಿಯೇಟರ್ ಮಾಲೀಕ ಪ್ರಕಾಶ್ ನರಸಿಂಹಯ್ಯ ತಿಳಿಸಿದರು.
ಬದಲಾದ ಸನ್ನಿವೇಶದಲ್ಲಿ ಒಟಿಟಿ ಅಲೆ ಶುರುವಾಗಿದೆ. ಇದು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸರ್ವನಾಶಕ್ಕೆ ಕಾರಣವಾಗಿದೆ. ಅಲ್ಲದೇ ಸಿನಿಮಾ ನೋಡುವ ಶೈಲಿಯು ಬದಲಾಗಿದೆ. ಇದೀಗ ಎಲ್ಲವೂ ಆನ್‌ಲೈನ್ ಆಗಿಬಿಟ್ಟಿದೆ. ಇದಕ್ಕೆಲ ಕೊರೊನಾ ಸಾಂಕ್ರಾಮಿಕವೂ ಒಂದು ಕಾರಣವಾಯಿತು ಎಂದು ಅವರು ಭಾವುಕರಾಗಿ ಹೇಳಿದರು.












Click it and Unblock the Notifications