Bengaluru Rave Party Case: ಬುರ್ಖಾದಲ್ಲಿ ಬಂದು ವಿಚಾರಣೆಗೆ ಹಾಜರಾಗಿದ್ದ ನಟಿ ಹೇಮಾಗೆ ಜೂ.14ರ ವರೆಗೆ ನ್ಯಾಯಾಂಗ ಬಂಧನ
ಬೆಂಗಳೂರು, ಜೂನ್. 04: ಇತ್ತೀಚೆಗೆ ಸಕತ್ ಸದ್ದು ಮಾಡಿದ್ದ ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಇಷ್ಟು ದಿನ ನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ತೆಲುಗು ನಟಿ ಹೇಮಾ ಕೊನೆಗೂ ಸಿಸಿಬಿ ಪೊಲೀಸರ ವಶವಾಗಿದ್ದಾರೆ. ಆರೋಪದಲ್ಲಿ ಸಿಕ್ಕಿಬಿದ್ದಿರುವ ನಟಿ ಹೇಮಾ (Hema) ಜೂನ್ 3 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಸಿಸಿಬಿ ವಿಚಾರಣೆಗೆ ಬುರ್ಖಾ ಧರಿಸಿ ಬಂದಿದ್ದ ಅವರನ್ನು ಬೆಂಗಳೂರಿನಲ್ಲಿ ರೇವ್ ಪಾರ್ಟಿ ಆಯೋಜಿಸಿ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಬಳಿಕ ಆನೇಕಲ್ನ 4ನೇ ಹೆಚ್ಚುವರಿ ಸಿವಿಲ್ ಜೆಎಂಎಫ್ಸಿ ನ್ಯಾಯಾಲಯದ ಜಡ್ಜ್ ಸಲ್ಮಾ ಎ.ಎಸ್. ಎದುರು ಹಾಜರುಪಡಿಸಲಾಗಿತ್ತು.

ವಿಚಾರಣೆ ನಡೆಸಿದ ನಟಿ ಹೇಮಾಗೆ ಜೂನ್ 14ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ಮಧ್ಯಾಹ್ನ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ನಟಿ ಹೇಮಾರನ್ನು ಬಂಧಿಸಿದ್ದಾರೆ. ಬುರ್ಖಾ ಧರಿಸಿ ಸಿಸಿಬಿ ಮುಂದೆ ಹಾಜರಾಗಿದ್ದರು. ಬುರ್ಖಾದಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವ ಮೂಲಕ ಮಾಧ್ಯಮಗಳಿಂದ ತನ್ನ ಗುರುತನ್ನು ಮುಚ್ಚಿಡಲು ಪ್ರಯತ್ನಿಸಿದರು.
ಹೇಮಾ ಬೇರೆ ಹೆಸರನ್ನು ಬಹಿರಂಗಪಡಿಸುವ ಮೂಲಕ ಪೊಲೀಸರನ್ನು ವಂಚಿಸಿದ್ದಾರೆ. ಕಳೆದ ತಿಂಗಳು ರೇವ್ ಪಾರ್ಟಿಯಲ್ಲಿ ತಾನು ಇರಲಿಲ್ಲ ಎಂದು ಹೇಳುವ ವೀಡಿಯೊವನ್ನು ಅಪ್‌ಲೋಡ್ ಮಾಡಿ, ಪೊಲೀಸರ ದಾರಿ ತಪ್ಪಿಸಿದ್ದರು. ಈ ರೇವ್ ಪಾರ್ಟಿಯಲ್ಲಿ ಹಾಜರಿದ್ದ 103 ರಲ್ಲಿ 86 ಮಂದಿ ಮಾದಕ ದ್ರವ್ಯ ಸೇವನೆ ಮಾಡಿರುವುದು ಪತ್ತೆಯಾಗಿದೆ.

ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಇದ್ದರು ಎಂದು ಪೊಲೀಸರು ಹೇಳಿದ ನಂತರವೂ, ಹೇಮಾ ಅವರು ಪಾರ್ಟಿಯಲ್ಲಿ ಭಾಗವಹಿಸಿಲ್ಲ ಎಂದು ತೋರಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಅವರ ರಕ್ತದ ಮಾದರಿಗಳನ್ನು ತೆಗೆದುಕೊಂಡು ಹೇಮಾ ಡ್ರಗ್ಸ್ ಸೇವಿಸಿದ್ದಾರೆ ಎಂಬ ಪಾಸಿಟಿವ್ ವರದಿ ಬಂದ ನಂತರ ಬೆಂಗಳೂರು ಪೊಲೀಸರು ಆಕೆಗೆ ನೋಟಿಸ್ ಜಾರಿ ಮಾಡಿದ್ದರು.












Click it and Unblock the Notifications