Allu Arjun: ಮಹಿಳಾ ಅಭಿಮಾನಿ ಸಾವು: 'ಅಲ್ಲು ಅರ್ಜುನ್ ಬಂಧನ?, 10 ಕೋಟಿ ಪರಿಹಾರ ಘೋಷಣೆ..?'
ಪುಷ್ಪ ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳ ನಂತರ ಪುಷ್ಪಾ 2 ಸಿನಿಮಾ ಭಾರೀ ನಿರೀಕ್ಷೆಯೊಂದಿಗೆ ಡಿಸೆಂಬರ್ 05 ರಂದು ಬಿಡುಗಡೆಯಾಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪುಷ್ಪಾ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದರೂ ಹೆಚ್ಚು ಜನರು ಬಂದು ಸಿನಿಮಾ ನೋಡುತ್ತಿದ್ದಾರೆ.
ಪುಷ್ಪಾ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಎಲ್ಲಾ ಶೋಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಪುಷ್ಪಾ 2 ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಪುಷ್ಪಾ 2 ನಟ ಅಲ್ಲು ಅರ್ಜುನ್ ಬಂಧನದ ಕೂಗು ಕೇಳಿ ಬಂದಿದೆ.

ಹೌದು, ಯಾವುದೇ ಹೀರೋ ತಮ್ಮ ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಜೊತೆ ನೇರವಾಗಿ ಥಿಯೇಟರ್ ನಲ್ಲಿ ಸಿನಿಮಾ ನೋಡುವುದು ಸಾಮಾನ್ಯ.ಆದರೆ ಅಭಿಮಾನಿಗಳ ಸುರಕ್ಷತೆ ಬಹಳ ಮುಖ್ಯ. ಅದರಲ್ಲೂ ಪ್ಯಾನ್ ಇಂಡಿಯಾ ಹೀರೋಗಳು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಅದೆಷ್ಟೋ ಅಭಿಮಾನಿಗಳೂ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಇವೆ.
ಪುಷ್ಪ-2 ದೇಶಾದ್ಯಂತ ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರವಾಗಿದೆ. ಭಾರೀ ನಿರೀಕ್ಷೆಗಳ ನಡುವೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರ ಡಿಸೆಂಬರ್ 5 ರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ. ಯಾವುದೇ ಸಿನಿಮಾ ರಿಲೀಸ್ ಆದಾಗ ತಮ್ಮ ನೆಚ್ಚಿನ ನಾಯಕ ಥಿಯೇಟರ್ ಗೆ ಬರುತ್ತಿದ್ದರೆ ಅಭಿಮಾನಿಗಳೂ ಅವರನ್ನು ನೋಡಲು ಮುಗಿಬೀಳುತ್ತಾರೆ.
ಪುಷ್ಪಾ 2 ಶೋಗಳು ರಾತ್ರಿಯಿಂದಲೇ ಆರಂಭವಾಗಿದ್ದು, ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಅಲ್ಲು ಅರ್ಜುನ್ ಕೂಡ ಹೈದ್ರಾಬಾದ್ ನ ಸಂಧ್ಯಾ ಥಿಯೇಟರ್ ಗೆ ಸಿನಿಮಾ ನೋಡಲು ತೆರಳಿದ್ದರು. ಈ ವೇಳೆ ಭಾರಿ ನೂಕುನುಗ್ಗಲು ಉಂಟಾಗಿದ್ದು, ಘಟನೆಯಲ್ಲಿ ಕಾಲ್ತುಳಿತ ಉಂಟಾಗಿ 39 ವರ್ಷದ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತದಲ್ಲಿ ರೇವತಿ ಎಂಬ ಯುವತಿ ಸಾವನ್ನಪ್ಪಿದ್ದಾಳೆ. ಅಲ್ಲು ಅರ್ಜುನ್, ಪೊಲೀಸರು ಮತ್ತು ನಿರ್ಮಾಪಕರು ಇದಕ್ಕೆ ಹೊಣೆಗಾರರಾಗಬೇಕೆಂದು ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ಒತ್ತಾಯಿಸಿದ್ದಾರೆ. ಅಲ್ಲದೇ ನಟ ಅಲ್ಲು ಅರ್ಜುನ್ ಅಲ್ಲಿಗೆ ರಾತ್ರಿ ಬರುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ ಅವರು, ನಟನನ್ನು ಬಂಧಿಸಿ ಮೃತನ ಕುಟುಂಬಕ್ಕೆ 10 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಇನ್ನು ಇದಕ್ಕೆ ಅಲ್ಲು ಅರ್ಜುನ್ ಚಿತ್ರತಂಡ ಪ್ರತಿಕ್ರಿಯಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ. ಸಂಧ್ಯಾ ಥಿಯೇಟರ್ನಲ್ಲಾದ ಘಟನೆಗೆ ಪ್ರತಿಕ್ರಿಯಿಸಿದ ಅಲ್ಲು ಅರ್ಜುನ್ ತಂಡ, ಕಾಲ್ತುಳಿತದ ಘಟನೆ ನಿಜಕ್ಕೂ ದುರಾದೃಷ್ಟಕರ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.












Click it and Unblock the Notifications