Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಶುರುವಾಯ್ತು "ರಾಹುಕಾಲ"?!
Rashmika Mandanna: ಬಹುಭಾಷಾ ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ರಾಹುಕಾಲ ಶುರುವಾಗಿದೆ ಅಂತಲೇ ಹೇಳಲಾಗುತ್ತಿದೆ. ಸಾಲು.. ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ರಶ್ಮಿಕಾಗೆ ಇದೀಗ ಮೊದಲ ಬಾರಿಗೆ ಅಟ್ಟರ್ ಪ್ಲಾಫ್ ಆತಂಕ ಎದುರಾಗಿದೆ. ಈಚೆಗೆ ನಟಿಸಿದ್ದ ಮೂರು ಸಿನಿಮಾಗಳು ಭರ್ಜರಿ ಸಕ್ಸಸ್ ಕಂಡರೂ ಅದರಲ್ಲಿ ರಶ್ಮಿಕಾ ಅವರ ನಟನೆಗೆ ಒಳ್ಳೆಯ ಮೆಚ್ಚುಗೆ ಏನೂ ವ್ಯಕ್ತವಾಗಿರಲಿಲ್ಲ. ಇದೀಗ ರಶ್ಮಿಕಾಗೆ ಸೋಲಿನ ರುಚಿ ಶುರುವಾಗಿದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಹಿಟ್ ಸಿನಿಮಾಗಳನ್ನು ಕೊಟ್ಟ ರಶ್ಮಿಕಾ ಈಗ ಅಟ್ಟರ್ ಪ್ಲಾಫ್ ಸಿನಿಮಾಗೆ ಸಾಕ್ಷಿಯಾಗಿದ್ದಾರೆ.
ಹೌದು, ಸಾಲು ಸಾಲು ಹಿಟ್‌ಮೂವಿಗಳನ್ನು ಕೊಟ್ಟು ದಕ್ಷಿಣ ಭಾರತದಿಂದ ಉತ್ತರ ಭಾರತದ ಸಿನಿಮಾ ರಂಗಕ್ಕೆ ಜಿಗಿದಿದ್ದ ರಶ್ಮಿಕಾ ಅಲ್ಲಿ ಸೋಲಿನ ರುಚಿ ಕಂಡಿದ್ದಾರೆ. ಸಿಕಂದರ್ ಸಿನಿಮಾಗೆ ಸೋಲಾಗಿದ್ದು, ಇದು ನಿರೀಕ್ಷಿತ ಮಟ್ಟದಲ್ಲಿ ಆದಾಯ ಗಳಿಸಿಲ್ಲ. ಅಲ್ಲದೇ ಈ ಸಿನಿಮಾ ಸಕ್ಸಸ್ ಆಗದೆ ಇರುವುದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದೆಯಾದರೂ ಈ ಹಿಂದೆ ಹಿಟ್ ಆಗಿರುವ ಕೆಲವು ಸಿನಿಮಾಗಳಲ್ಲಿ ರಶ್ಮಿಕಾ ಅವರ ನಟನೆಗಿಂತಲೂ ಸಿನಿಮಾದ ಸ್ಕ್ರಿಪ್ಟ್ ಹಾಗೂ ನಟರ ಅಭಿನಯ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ಹಿಟ್ ಆಗಿದೆ ಅಂತಲೂ ಜನ ಕಮೆಂಟ್ ಮಾಡ್ತಿದ್ದಾರೆ.

ನಾನು ಹೈದರಾಬಾದ್‌ನವಳು ಅಂತ ಹೇಳಿಕೊಳ್ಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಅದಾದ ಮೇಲೆ ನಾನು ಕನ್ನಡದವಳು ಅಂದಿದ್ದರು. ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಶ್ಮಿಕಾ ಇದಾದ ಮೇಲೆ ತೆಲುಗು ಹಾಗೂ ತಮಿಳು ಚಿತ್ರರಂಗಕ್ಕೆ ಜಿಗಿದಿದ್ದರು. ಅಲ್ಲಿಂದ ಬಾಲಿವುಡ್‌ಗೂ ಹೋಗಿ ಎರಡು ಸಕ್ಸಸ್ ಮೂವಿಗಳನ್ನು ಕೊಟ್ಟ ಮೇಲೂ ರಶ್ಮಿಕಾ ಕನ್ನಡ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಲಿಲ್ಲ. ಆದರೆ, ಕನ್ನಡ ಸಿನಿಮಾ ಮಾಡದೆ ಇದ್ದಾಗಲೂ ಕನ್ನಡಿಗರು ಅವಕಾಶ ಸಿಕ್ಕರೆ ಮಾಡಬಹುದು ಅಂತಲೇ ಅಂದುಕೊಂಡಿದ್ದರು. ಆದರೆ ಈಚೆಗೆ ಅವರು ಹೈದರಾಬಾದ್‌ನವಳು ಎಂದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಸಿಕಂದರ್ ಮಕಾಡೆ ಮಲಗಿದೆ. ರಶ್ಮಿಕಾಗೆ ಭರ್ಜರಿ ಸಕ್ಸಸ್ ಸಿಗುತ್ತಿದ್ದ ಸಮಯದಲ್ಲೇ ಸಿನಿಮಾವೊಂದು ಸೋತಿದೆ. ಈಚೆಗೆ ರಶ್ಮಿಕಾ ನಟಿಸಿದ್ದ ಅನಿಮಲ್, ಪುಷ್ಪ 2 ಹಾಗೂ ಛಾವಾ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿವೆ. ಕೋಟ್ಯಾಂತರ ರೂಪಾಯಿ ಲಾಭವನ್ನು ತಂದು ಕೊಟ್ಟಿದೆ. ಈ ರೀತಿ ಇರುವಾಗಲೇ ಸಿಕಂದರ್ ಸಿನಿಮಾ ಸೋತಿದೆ.
ಕನ್ನಡಿಗರ ಅಸಮಾಧಾನ: ಇನ್ನು ಕಳೆದ ಎರಡು ವರ್ಷಗಳಿಂದಲೂ ಕನ್ನಡಿಗರ ಅಸಮಾಧಾನ ಹಾಗೂ ಕೋಪಕ್ಕೆ ರಶ್ಮಿಕಾ ಅವರು ಗುರಿಯಾಗುತ್ತಲ್ಲೇ ಇದ್ದಾರೆ. ನಿಮ್ಮಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗೆ ರಶ್ಮಿಕಾ ಅವರು ರಿಷಬ್ ಶೆಟ್ಟಿ ಅವರ ಹೆಸರನ್ನು ಹೇಳಿರಲಿಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅದಾದ ಮೇಲೆ ಕನ್ನಡ ಬರಲ್ಲ ಎಂದಿದ್ದು, ಹೈದರಾಬಾದ್‌ನವಳು ಎಂದಿದ್ದೆಲ್ಲವೂ ಭಾರೀ ವಿವಾದ ಸ್ವರೂಪವನ್ನು ಪಡೆದುಕೊಂಡಿದ್ದವು. ಇದೀಗ ಅವರಿಗೆ ಸೋಲಾಗುತ್ತಿದ್ದಂತೆಯೇ ಕೆಲವರು ಇದಕ್ಕೆ ಹೇಳುವುದು ಮೆರೆಯಬಾರದು ಅಂತ ಕಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications