Ayyana Mane: ಕನ್ನಡದಲ್ಲೂ ವೆಬ್ ಸಿರೀಸ್! ನೋಡಲು ಸಜ್ಜಾಗಿ: ರೋಚಕ ಕಥೆಯೊಂದಿಗೆ 'ಅಯ್ಯನ ಮನೆ' ನಿಮ್ಮ ಮುಂದೆ..
ಬೆಂಗಳೂರು, ಏಪ್ರಿಲ್ 15: ಸಿನಿಮಾ, ಸಿರೀಯಲ್ ಮಧ್ಯೆ ವೆಬ್ ಸಿರೀಸ್‌ಗಳ ಹಾವಳಿ ಹೆಚ್ಚಾಗಿದೆ. ನೋಡುಗರನ್ನು ಸಳೆಯುವಂತಹ ಕಥೆಗಳ ಹೂರಣದೊಂದಿಗೆ ತೆರೆಗೆ ಬಂದು ಜನರನ್ನು ರಂಜಿಸುವಲ್ಲಿ ಯಶಸ್ವಿಯಾತ್ತಿವೆ. ಹೀಗಾಗಿ ಜನರು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ವೆಬ್ ಸಿರೀಸ್‌ಗಳತ್ತ ಮುಖ ಮಾಡಿದ್ದಾರೆ. ಕೆಲವರು ಕನ್ನಡದಲ್ಲಿ ಇಂಥಹ ವೆಬ್‌ಸಿರೀಸ್ ಬರುತ್ತಿಲ್ಲ ಎನ್ನುವವರಿಗೆ ಇದೀಗ 'ಜೀ5' ಒಟಿಟಿಯಲ್ಲಿ 'ಅಯ್ಯನ ಮನೆ' ವೆಬ್ ಸಿರೀಸ್ ತೆರಗೆ ಬರಲು ಸಜ್ಜಾಗಿದೆ.
ಈ ಓಟಿಟಿ ವೇದಿಕೆಯಲ್ಲಿ ಒಂದೊಳ್ಳೆ ಕಥೆ ಸಹಿತ ಪರಿಪೂರ್ಣ ವೆಬ್ ಸಿರೀಸ್ ತೆರೆಗೆ ಬರುತ್ತಿದೆ. ಇದೇ ಏಪ್ರಿಲ್ 25ರಿಂದ ಬಿಡುಗಡೆ ಆಗಲಿದ್ದು, ಒಟ್ಟು 7 ಎಪಿಸೋಡ್‌ಗಳನ್ನು ಇದು ಹೊಂದಿರಲಿದೆ. ಶೃತಿ ನಾಯ್ಡು ಅವರು ಬಂಡವಾಳ ಹೂಡಿದ 'ಅಯ್ಯನ ಮನೆ' ಸರಣಿಗೆ ನಟ ರಮೇಶ್ ಇಂದಿರಾ ಅವರು ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. 'ಜೀ5' ವೇದಿಕೆಯಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಕನ್ನಡ ವೆಬ್ ಸಿರೀಸ್ ಇದಾಗಿದೆ.

ವೆಬ್‌ಸಿರೀಸ್ ಪ್ರೇಮಿಗಳಿಗೆ ಈ ಸರಣಿ ಒಂದೊಳ್ಳೆ ಅನುಭವ ನೀಡಲಿದೆ. ಚಿತ್ರಂಗದಲ್ಲಿ ಹೊಸ ಪ್ರಯೋಗಕ್ಕೆ ಕನ್ನಡಿಗರು ಸಾಕ್ಷಿಯಾಗಲಿದ್ದಾರೆ ಎಂದು ವಿಶ್ವಾಸ 'ಅಯ್ಯನ ಮನೆ'ಗೆ ಇದೆ. ವಾರಾಂತ್ಯದಲ್ಲಿ ಕೂತು ನೋಡಬಹುದಾದ ಕನ್ನಡ ವೆಬ್ ಸರಣಿ ಇದಾಗಿದೆ. ಈಗಾಗಲೇ ಟ್ರೈಲರ್ ಬಿಡುಗಡೆ ಮಾಡಿದ್ದು, ಹೆಚ್ಚು ಹೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.
ಪಾತ್ರವರ್ಗ ನೋಡುವುದಾದರೆ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಪ್ರಮುಖ ಫಾತ್ರ ನಿರ್ವಹಿಸಿದ್ದಾರೆ. ಮಲೆನಾಡು, ಕಾಡು, ಭಯ, ನಂಬಿಕೆ ಮತ್ತು ವಿಧಿ ನಡುವಿನ ಘರ್ಷಣೆಯ ರೋಚಕ ಕಥೆ ಹೊಂದಿದೆ ಎಂದು ತಿಳಿದು ಬಂದಿದೆ. ಇದೊಂದು ಕಾಲ್ಪನಿಕ ಕಥೆ ಆಗಿದೆ. ನಿರ್ದೇಶಕರು ಮಿಸ್ಟ್ರಿ (Mystery) ಕಥೆ ಹೇಳಲು ಹೊರಟಿದ್ದಾರೆ. ಅಂದರೆ ಅಸ್ಪಷ್ಟ, ಗೊಂಲದಮಯ, ವಿವರವಾಗಿದ್ದಲ್ಲದೇ ಕಥೆ ಎಳೆಯೊಂದಿಗೆ ವೆಬ್ ಸಿರೀಸ್ ಸಾಗಲಿದೆ ಅಂತಲೂ ಹೇಳಲಾಗುತ್ತಿದೆ.
ಹೊಸ ಪ್ರಯೋಗ ಯಶಸ್ವಿಯಾದರೆ ಬದಲಾವಣೆ..
ತೆಲುಗು, ಹಿಂದಿ, ತಮಿಳು ವೆಬ್ ಸಿರೀಸ್ ನೋಡಿ ಕೊಂಡಾಡುವವರು, ಕನ್ನಡದ ಈ ವೆಬ್ ಸಿರೀಸ್ ನೋಡಿ ವಿಮರ್ಶೆ ಮಾಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಇದೊಂದು ಪೂರ್ಣ ಪ್ರಮಾಣದ ವೆಬ್ ಸಿರೀಸ್ ಆಗಿದೆ. ಹೊಸ ಪ್ರಯೋಗ 'ಅಯ್ಯನ ಮನೆ' ಯಶಸ್ವಿಯಾದಲ್ಲಿ ಹೊಸ ಹೊಸ ಕನ್ನಡ ವೆಬ್ ಸರಣಿಗಳು ಹುಟ್ಟಿಕೊಳ್ಳಲಿವೆ. ಧಾರವಾಹಿ, ಸಿನಿಮಾ ಜೊತೆಗೆ ಕಥೆಗಾರರಿಗೆ, ಬರವಣಿಗೆ ಪ್ರಿಯರಿಗೆ ವೆಬ್ ಸಿರೀಸ್‌ನಲ್ಲೂ ಅವಕಾಶ ಗಿಟ್ಟಲಿವೆ.












Click it and Unblock the Notifications