Kiccha Sudeepa: ಜಾಗರೂಕರಾಗಿರಿ..! ಬರ್ತಡೇ ದಿನವೇ ಕಿಚ್ಚನ ಭವಿಷ್ಯ ನುಡಿದ ಜ್ಯೋತಿಷಿ, ಫ್ಯಾನ್ಸ್ ಗರಂ...Viral

ಬೆಂಗಳೂರು, ಸೆಪ್ಟಂಬರ್ 02: ಸ್ಯಾಂಡಲ್‌ವುಡ್ ಬಾದಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 53ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಅಭಿಮಾನಿಗಳಿಗೆ ಹೊಸ ಸಿನಿಮಾ, ಗ್ಲಿಂಪ್ಸ್ ಮೂಲಕ ಗುಡ್‌ ನ್ಯೂಸ್ ನೀಡಿದ್ದಾರೆ. ಇದೇ ವೇಳೆ ಸ್ನೇಹಿತ ದರ್ಶನ್ ಪರವಾಗಿ ಮಾತನಾಡಿದ್ದಾರೆ. ಹೀಗಿರುವಾಗಲೇ ಕಿಚ್ಚನ ಭವಿಷ್ಯದ ಬಗ್ಗೆ ಜ್ಯೋತಿಷಿಯೊಬ್ಬರು ತಿಳಿಸಿದ ಭವಿಷ್ಯವಾಣಿ ವೈರಲ್ ಆಗುತ್ತಿದೆ.

'ಮ್ಯಾಕ್ಸ್' ಸಿನಿಮಾ ಸಕ್ಸಸ್ ಬಳಿಕ ಕಿಚ್ಚ ಸುದೀಪ್ ಮತ್ತದೇ ನಿರ್ದೇಶಕ ವಿಜಯ್ ಕಾತಿಕೇಯ್ ಅವರೊಂದಿಗೆ 'ಮಾರ್ಕ್' ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಸಿನಿಮಾದ ಗ್ಲಿಂಪ್ಸ್ ಸಹ ಬಿಡುಗಡೆ ಆಗಿದೆ. ಇದೇ ವೇಳೆ ಎದುರಾದ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಕಿಚ್ಚ ಕಳೆದಿದ್ದಾರೆ. ಹೀಗಿದ್ದಾಗ ಜ್ಯೋತಿಷಿ ಪ್ರಶಾಂತ್ ಕಿನಿ ಎಂಬುವವರು ಹೇಳಿರುವ ಕಿಚ್ಚನ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Astrologer s Viral Prediction on Kiccha Sudeep s Future Fans React Strongly Read more

ಕಿಚ್ಚನ ಸಕ್ಸಸ್, ಅವರು ಎದುರಿಸುವ ಅಡತಡೆ ಬಗ್ಗೆ, ಬೆನ್ನಿಗೆ ಚೂರಿ ಇರುವವರ ಬಗ್ಗೆ ಜಾಗರೂಕರಾಗಿರುವಂತೆ ಅವರು ಎಚ್ಚರಿಸಿದ್ದಾರೆ. ಮಾತ್ರವಲ್ಲದೇ ನಟ ದರ್ಶನ್ ತೂಗುದೀಪ ಮತ್ತು ಕಿಚ್ಚ ಸುದೀಪ್ ವಿಚಾರವನ್ನು ಪ್ರಸ್ತಾಪಿಸಿರುವ ಜ್ಯೋತಿಷಿ, ಇವರು ಮುಂದೆ ಒಂದಾಗುತ್ತಾರೆ ಎಂದು ದಿನಾಂಕ ತಿಳಿಸಿ ಪೋಸ್ಟ್ ಮಾಡಿದ್ದಾರೆ. ಜ್ಯೋತಿಷಿ ಭವಿಷ್ಯವಾಣಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಕಿಚ್ಚನಿಗೆ ಅಡೆತಡೆ ಉಂಟಾಗಲಿದೆ ಎಂಬ ಮಾತು ಕೇಳಿ ಕೆಲ ಫ್ಯಾನ್ಸ್‌ಗೆ ಆತಂಕ ಶುರುವಾಗಿದೆ ಎನ್ನಲಾಗಿದೆ. ಕೆಲವರು ಇದೆಲ್ಲ ಸುಳ್ಳು ಅಂತಲೂ ಕಿಡಿ ಕಾರಿದ್ದಾರೆ. ಇದೆಲ್ಲ ನಾವು ನಂಬುವುದಿಲ್ಲ ಎಂದಿದ್ದಾರೆ. ಹಾಗಾದ್ರೆ ಜ್ಯೋತಿಷಿ ಹೇಳಿದ್ದಾದರೂ ಏನು?

ಕಿಚ್ಚಿನ ಬಗ್ಗೆ ಜ್ಯೋತಿಷಿ ಹೇಳಿದ್ದೇನು?

''ಮುಂದಿನ 7 ವರ್ಷಗಳಲ್ಲಿ ಕಿಚ್ಚ ಸುದೀಪ್ ಅವರು ಖಂಡಿತವಾಗಿಯೂ ನಿಯಮಿತ ಅಂತರದಲ್ಲಿ ಯಶಸ್ಸಿನ ರುಚಿಯನ್ನು ಪಡೆಯುತ್ತಾರೆ. ಇದರೊಂದಿಗೆ ನಾನು ಒಂದು ವಿಷಯ ಹೇಳುತ್ತೇನೆ. ಗಾಯಗಳು ಮತ್ತು ಬೆನ್ನಿಗೆ ಇರಿತದ ಬಗ್ಗೆ ಅವರು ಜಾಗರೂಕರಾಗಿರಬೇಕು'' ಅಂತಲೂ ಹೇಳಿದ್ದಾರೆ.

''ಎಲ್ಲಾ ಕನ್ನಡ ಚಲನಚಿತ್ರ ತಾರೆಯರು ಸ್ವಾರ್ಥಕ್ಕಾಗಿ, ಆಳ್ವಿಕೆಗಾಗಿ ಸುತ್ತುವರಿಯುತ್ತಾರೆ. ಬೆನ್ನಿಗೆ ಇರುವವರಿಂದ ಜಾಗೃತೆ ವಹಿಸಬೇಕು. ನಟ ಕಿಚ್ಚ ಸುದೀಪ್ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. 2032 ರವರೆಗೆ ವೈಫಲ್ಯಗಳು, ಗಾಯಗಳು, ಆರ್ಥಿಕ ನಷ್ಟಗಳು ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗಬಹುದು'' ಎಂದು ಭವಿಷ್ಯ ನುಡಿದಿದ್ದಾರೆ.

''ಏಪ್ರಿಲ್ 2028 ರಿಂದ ಏಪ್ರಿಲ್ 2029 ರ ನಡುವೆ ಮತ್ತು ಏಪ್ರಿಲ್ 2030 ರಿಂದ ಮೇ 2031 ರವರೆಗೆ ಅವರು ಜಾಗರೂಕರಾಗಿರಬೇಕು'' ಎಂದಿದ್ದಾರೆ. ಜ್ಯೋತಿಷಿ ಸಾಮಾಜಿಕ ಜಾಲತಾಣದ ಪೋಸ್ಟ್ ನೋಡಿದ ಫ್ಯಾನ್ಸ್ ಆಕ್ರೋಶ ಹೊರ ಹಾಕಿದ್ದಾರೆ. ಪರರಿಗೆ ಸಹಾಯ ಮಾಡುವ ತಮ್ಮ ನೆಚ್ಚಿನ ನಟನಿಗೆ ಏನು ಆಗದು ಎಂದು ಜ್ಯೋತಿಷಿ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದಾರೆ.

ಸುದೀಪ್- ದರ್ಶನ್ ಒಂದಾಗುವ ಸಮಯ ಹತ್ತಿರ..!

'ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಂಡಿತವಾಗಿಯೂ ಮತ್ತೆ ಒಂದಾಗುತ್ತಾರೆ' ಜುಲೈ 2026 ರ ನಂತರ ಇವರಿಬ್ಬರು ಒಂದಾಗುತ್ತಾರೆ ಎಂದಿದ್ದಾರೆ. ಈ ಬಗ್ಗೆ 2024ರಲ್ಲಿ ನುಡಿದಿದ್ದ ಭವಿಷ್ಯದ ಪೋಸ್ಟ್ ಮರು ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.' ಇನ್ನೂ ಹುಟ್ಟು ಹಬ್ಬ ಪ್ರಯುಕ್ತ ಸುದ್ದಿಗೋಷ್ಠಿ ಮಾಡಿದ್ದ ಕಿಚ್ಚ ಸುದೀಪ್ ಮಾತುಗಳನ್ನು ಸ್ಮರಿಸಿದ ಜ್ಯೋತಿಷಿ ಪ್ರಶಾಂತ್ ಕಿನಿ ಅವರು ''ನಿನ್ನೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ತಮ್ಮ ಹೆಸರನ್ನು ಬಳಸಿಕೊಂಡು ಬೇರೆ ಯಾವುದೇ ಸ್ಟಾರ್‌ಗಳನ್ನು ದ್ವೇಷಿಸದಂತೆ ಎಚ್ಚರಿಕೆ ನೀಡಿದ್ದಾರೆ'' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+