Darshan Thoogudeepa: ದರ್ಶನ್‌ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತೊಂದು ಸ್ಫೋಟಕ ಭವಿಷ್ಯ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ತೂಗುದೀಪ ಅವರು ಈಗಷ್ಟೇ ಜಾಮೀನು ಪಡೆದು ರಿಲೀಫ್‌ ಆಗಿದ್ದಾರೆ. ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂಕೋರ್ಟ್‌ ಜಾಮೀನು ರದ್ದು ಮಾಡಲು ನಿರಾಕರಿಸಿದೆ. ಇದರ ನಡುವೆ ದರ್ಶನ್‌ ಅವರ ವಿಚಾರವಾಗಿ ಖ್ಯಾತ ಜ್ಯೋತಿಷಿಯೊಬ್ಬರು ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ದರ್ಶನ್‌ ಅವರಿಗೆ ಇದೊಂದು ಅವರ ಸಿನಿಮಾ ಕೆರಿಯರ್‌ಗೆ ಕಪ್ಪುಚುಕ್ಕೆ ಎಂದೇ ಹೇಳಲಾಗುತ್ತಿದೆ. ಈ ಕೇಸ್‌ನಿಂದಾಗಿಯೇ ಅವರ ಸಿನಿಮಾಗಳೆಲ್ಲವೂ ಅರ್ಧಕ್ಕೆ ನಿಂತು ಹೋಗಿವೆ. ಕಳೆದ ವರ್ಷವೇ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ, ನಟ ದರ್ಶನ್‌ ಅವರು ಜೈಲು ಸೇರಿದ್ದರಿಂದ ಅವರ ಸಿನಿಮಾ ಶೂಟಿಂಗ್‌ ಸಕಾಲದಲ್ಲಿ ನಡೆಯಲಿಲ್ಲ, ಸಿನಿಮಾ ಬಿಡುಗಡೆಯೂ ಆಗಲಿಲ್ಲ.

Astrologer Prashanth Kini Surprising Prediction About Actor Darshan Thoogudeepa

ಅಲ್ಲದೆ ದರ್ಶನ್‌ ಅವರ ಸಾಲು ಸಾಲು ಸಿನಿಮಾಗಳು ಕೂಡ ಸೆಟ್ಟೇರುವುದು ವಿಳಂಬವಾಗಿದೆ. ಈಗ ದರ್ಶನ್‌ ಅವರು ಜೈಲಿನಿಂದ ಹೊರಬಂದಿರುವುದರಿಂದ ಅವರು ಸಿನಿಮಾಗಳತ್ತ ಮತ್ತೆ ಮುಖ ಮಾಡುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸಿದ ಕೂಡಲೇ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಅರ್ಧಕ್ಕೆ ನಿಂತಿರುವ ಡೆವಿಲ್‌ ಸಿನಿಮಾ ಶೀಘ್ರವೇ ರಿಲೀಸ್‌ ಆಗಲಿದೆ ಎಂದು ಹೇಳಲಾಗುತ್ತಿದೆ.

ಖ್ಯಾತ ಜ್ಯೋತಿಷಿ ಪ್ರಶಾಂತ್‌ ಕಿನಿ (Prashanth Kini) ಅವರು ಕೂಡ ದರ್ಶನ್‌ ಅವರ ಮುಂದಿನ ಜೀವನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅನೇಕ ಕನ್ನಡಿಗರು ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂಬರುವ ಚಿತ್ರ ಡೆವಿಲ್ ಬಗ್ಗೆ ಕೇಳುತ್ತಾರೆ. ಈ ಡೆವಿಲ್‌ ಸಿನಿಮಾ 2025ರ ಕನ್ನಡ ಬ್ಲಾಕ್‌ಬಸ್ಟರ್‌ ಸಿನಿಮಾ ಆಗಲಿದೆ. ಈ ವಿಚಾರದಲ್ಲಿ ನಾನು ಹೇಳಿದ್ದೆಲ್ಲ ನಿಜವಾಗಿದೆ ಎಂದಿದ್ದಾರೆ.

Astrologer Prashanth Kini Surprising Prediction About Actor Darshan Thoogudeepa

ಈಗ ದರ್ಶನ್‌ಗೆ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿದೆ. ದರ್ಶನ್‌ ಅವರ ಜಾಮೀನು ವಿಚಾರವಾಗಿ ಕರ್ನಾಟಕ ರಾಜ್ಯ ಸರ್ಕಾರದ ಅರ್ಜಿ ನಿರಾಕರಿಸಿರುವ ಸುಪ್ರೀಂಕೋರ್ಟ್ ಕೂಡ ಅವರು ತಪ್ಪಿತಸ್ಥರಲ್ಲ ಎಂದು ಸಾಬೀತುಪಡಿಸಿದೆ. ದರ್ಶನ್‌ ಅವರ ವರ್ಚಸ್ಸಿಗೆ ಕಳಂಕ ತರುವ ಯತ್ನ ನಡೆಯುತ್ತಿದೆ. ದರ್ಶನ್‌ ಅವರ ಚಿತ್ರಗಳು ಚಿತ್ರರಂಗದ ಸಾವಿರಾರು ಕಾರ್ಮಿಕರ ಹಸಿವು ನೀಗಿಸುತ್ತದೆ. ದರ್ಶನ್‌ ಅವರನ್ನು ಕೊಲೆಗಡುಕ ಎನ್ನುತ್ತಿದ್ದವರೆಲ್ಲ ಈಗ ಸುಮ್ಮನಿದ್ದಾರೆ. ದರ್ಶನ್‌ ಅವರು ಶುಭ್ರವಾಗಿ ಹೊರಬರುತ್ತಾರೆ ಎಂದು ನಾನು ಈಗಾಗಲೇ ಭವಿಷ್ಯ ನುಡಿದಿದ್ದೇನೆ. ನಾನು ಯಾವಾಗಲೂ ಸರಿ ಎಂದು ಜ್ಯೋತಿಷಿ ಪ್ರಶಾಂತ್‌ ಕಿನಿ ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ದರ್ಶನ್‌ ಅವರು ಜೈಲು ಸೇರಿದ್ದಾಗಲೂ ಪ್ರಶಾಂತ್‌ ಕಿನಿ ಅವರು ಭವಿಷ್ಯ ನುಡಿದಿದ್ದರು. ನಟ ದರ್ಶನ್‌ ಅವರು ಜೈಲಿನಿಂದ ರಿಲೀಸ್‌ ಆಗಲಿದ್ದಾರೆ. ಬಳಿಕ ಅವರು ಸಿನಿಮಾ ಮಾಡಲಿದ್ದಾರೆ. 2027ರ ನಂತರ ದರ್ಶನ್‌ ಅವರು ರಾಜಕೀಯಕ್ಕೆ ಪ್ರವೇಶಿಸಲಿದ್ದು, ನಂತರ ಅವರಿಗೆ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಜಯ ಸಿಗಲಿದೆ ಎಂದಿದ್ದರು. ಅದರಂತೆ ದರ್ಶನ್‌ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಡೆವಿಲ್‌ ಸಿನಿಮಾ ಶೂಟಿಂಗ್‌ ಕೂಡ ಶೀಘ್ರದಲ್ಲೇ ಮತ್ತೆ ಸೆಟ್ಟೇರಲಿದೆ. ಸದ್ಯ ಕಿನಿ ಅವರ ಭವಿಷ್ಯವಾಣಿಯನ್ನು ಹಲವರು ನಿಜ ಎಂದೇ ನಂಬಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+