Yash Taxic: ಯಶ್ 'ಟಾಕ್ಸಿಕ್' ಇನ್ನೊಂದು 'ಕೆಜಿಆಫ್' ಆಗುವುದಿಲ್ಲ: ಸಿನಿಮಾ ರಿಲೀಸ್‌ಗೂ ಮುನ್ನ ಖ್ಯಾತ ಜ್ಯೋತಿಷಿ ಅಚ್ಚರಿ ಭವಿಷ್ಯ
Yash Taxic: ಬಹುನಿರೀಕ್ಷಿತ ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್ ಇಂದು (ಫೆಬ್ರವರಿ 20) ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ಮಾರ್ಚ್ 19ಕ್ಕೆ ತೆರೆ ಕಾಣಲಿದ್ದು, ಇದಕ್ಕೂ ಮುನ್ನ ಜ್ಯೋತಿಷಿ ಪ್ರಶಾಂತ್ ಕಿನಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್: ಫೇರಿಟೇಲ್ ಫಾರ್ ಗ್ರೋನ್ ಅಪ್ಸ್ ಈಗಾಗಲೇ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಿರುವ ಈ ಚಿತ್ರ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಆಗಿದ್ದವು. ಅದರಲ್ಲಿ ತೋರಿಸಲಾಗಿದ್ದ ಹಸಿಬಿಸಿ ದೃಶ್ಯಗಳೇ ಇದಕ್ಕೆಲ್ಲ ಕಾರಣವಾಗಿದ್ದವು. ಆದರೆ, ಇದೀಗ ರಿಲೀಸ್ ಆಗಿರುವ ಟೀಸರ್‌ನಲ್ಲಿ ಯಶ್ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಯಶ್ ಹುಟ್ಟುಹಬ್ಬದ ವೇಳೆ ರಿಲೀಸ್ ಆಗಿದ್ದ ಟೀಸರ್‌ನಲ್ಲಿ ಹಸಿಬಿಸಿ ದೃಶ್ಯಗಳು ಕಂಡುವಂದಿದ್ದು, ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಪರವಹಿಸಿ ಮಾತನಾಡಿದ್ದರು. ಇದೇ ಕಾರಣದಿಂದ ಟೀಸರ್ ಹೀಗಿದ್ದರೆ, ಇನ್ನೂ ಸಿನಿಮಾ ಹೇಗಿರಬಹುದು ಎನ್ನುವ ಪ್ರಶ್ನೆ ಹಲವು ನೆಟ್ಟಿಗರದ್ದಾಗಿತ್ತು. ಆದರೆ, ಇದೀಗ ಮತ್ತೊಂದು ಟೀಸರ್ ರಿಲೀಸ್ ಆಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ.
ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡ ಯಶ್
ಈಗ ಬಂದಿರುವ ಟೀಸರ್‌ನಲ್ಲಿ "ಎಲ್ರೂನೂ ಎದುರು ಹಾಕೊಂಡು ಬದುಕೋಕೆ ಆಗಲ್ಲ. ಈ ಸಲ ಯುದ್ಧವೇ ಬೇರೆ," ಎನ್ನುವ ಮಾಸ್ ಡೈಲಾಗ್ ಹೊಡೆದಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. 1 ನಿಮಿಷ 55 ಸೆಕೆಂಡ್ ಇರುವ ಟಾಕ್ಸಿಕ್ ಟೀಸರ್ ಇದಾಗಿದ್ದು, ಈವರೆಗೂ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಇದರಲ್ಲಿ ಯಶ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿರುವುದೇ ಇದೀಗ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ. ಈ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗಲಿದ್ದು, ಇದಕ್ಕೂ ಮುನ್ನ ಜ್ಯೋತಿಷಿ ನುಡಿದ ಅಚ್ಚರಿ ಭವಿಷ್ಯ ಗಮನ ಸೆಳೆದಿದ್ದಾರೆ.
ಜ್ಯೋತಿಷಿ ಪ್ರಶಾಂತ್ ಕಿನಿ ಅಚ್ಚರಿ ಭವಿಷ್ಯ
ಮತ್ತೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿಷಿ ಪ್ರಶಾಂತ್ ಕಿನಿ ಅವರು ಅಚ್ಚರಿ ಭವಿಷ್ಯ ನುಡಿದಿದ್ದು, "ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಇನ್ನೊಂದು 'ಕೆಜಿಆಫ್' ಆಗುವುದಿಲ್ಲ," ಎಂದು ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ ಹೀಗೆ ಹೇಳಿದ್ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ವಿವರಿಸಿದ್ದಾರೆ ಗಮನಿಸಿ.
ಕೆಜಿಎಫ್ ಮುಂದಿಟ್ಟುಕೊಂಟು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು. ಇದರ ಆಧಾರದ ಮೇಲೆ ಭವಿಷ್ಯ ನುಡಿದ ಪ್ರಶಾಂತ್ ಕಿನಿ ಅವರು, 'ಟಾಕ್ಸಿಕ್' ಇನ್ನೊಂದು 'ಕೆಜಿಆಫ್' ಆಗುವುದಿಲ್ಲ. ವಿತರಕರು, ಯಶ್ ಅವರ ಕ್ರೆಡಿಬಲಿಟಿ, ಬಿಗ್ ಬಜೆಟ್, ವಿಲಕ್ಷಣ, ವಯಸ್ಕರ ಕಂಟೆಂಟ್, ಭವ್ಯತೆ, ಸ್ಟಾರ್ಡಮ್ ಸಕ್ಸಸ್ ಅನ್ನು ಗ್ಯಾರಂಟಿ ಮಾಡೋದಿಲ್ಲ ಎಂದು ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ. ಇದೀಗ ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Rocking Star Yash's upcoming movie Toxic won't become another KGF...!!
— Prashanth Kini (@AstroPrashanth9) February 17, 2026
Distributor 🔻
Yash's credibility 🔻
Big budget + Exotic + Adult contact + Grandeur + Stardom won't guarantee success..💯 https://t.co/GhT6rrOup1
ಯಶ್ ನಟನೆಯ ಟಾಕ್ಸಿಕ್ ಚಿತ್ರದಲ್ಲಿ ದೊಡ್ಡ ದೊಡ್ಡ ತಾರೆಯರ ಬಳಗವೇ ಇದೆ. ಈ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಥೋವಿನೋ ಥಾಮಸ್, ಅಕ್ಷಯ್ ಓಬ್ರಾಯ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಫುಲ್ ವೈಲೆಂಟ್ ಲುಕ್‌ನಲ್ಲಿ ಯಶ್
'ಟಾಕ್ಸಿಕ್' ಟ್ರೇಲರ್ ಬಗ್ಗೆ ಚರ್ಚೆ ನಡೆಯುವಾಗಲೇ ಸಿನಿಮಾದ ಮತ್ತೊಂದು ಟೀಸರ್ ಇಂದು ಬಿಡುಗಡೆಯಾಗಿದೆ. ಇದರಲ್ಲಿ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಹೇಗಿರದಬಹುದು ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ಇನ್ನೂ ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್‌ಗಿಂತಲೂ ಈ ಟೀಸರ್ ತುಂಬಾನೇ ಭಿನ್ನವಾಗಿದೆ. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವುದು ಖಚಿತ ಆಗಿದೆ. ಈ ಟೀಸರ್‌ನಲ್ಲಿ ಯಶ್ ಯಂಗ್ ಲುಕ್‌ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದರಲ್ಲಿ ಯಶ್ ಫುಲ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದು, ರಕ್ತದ ಹರಿದ ದೃಶ್ಯಗಳು ಕಂಡುಬಂದಿವೆ.
ಹೊಸ ಟೀಸರ್‌ನಲ್ಲಿ ಏನಿದೆ?
'ಈ ಸಲ ಯುದ್ಧನೇ ಬೇರೆ', ಅವರುಗಳ ಕುತಂತ್ರನೇ ಬೇರೆ, ಎಲ್ರೂನ್ ಎದುರು ಹಾಕಿಕೊಂಡು ಬದುಕುವುದಕ್ಕೆ ಆಗುವುದಿಲ್ಲ. 'ಹಠ ಬಿಡೋ ಮಾತೇ ಇಲ್ಲ' ಎಂಬುದನ್ನು ಯಶ್ ಡೈಲಾಗ್‌ನಲ್ಲಿ ಹೇಳಿದ್ದು, ಭಾರೀ ಕುತೂಹಲ ಹುಟ್ಟುಹಾಕಿದೆ. ಟೀಸರ್ ಈ ಲೆವೆಲ್‌ಗೆ ಇದ್ದರೆ, ಇನ್ನೂ ಸಿನಿಮಾ ಯಾವ್ ಲೆವೆಲ್‌ಗೆ ಇರಬೇಡಾ ಎನ್ನುವ ಪ್ರಶ್ನೆಗಳು ಎದ್ದಿವೆ. ಮತ್ತೊಂದೆಡೆ, ಈ ಸಿನಿಮಾ ಧುರಂದರ್ 2 ಚಿತ್ರಕ್ಕೆ ಟಕ್ಕರ್ ಕೊಡುವುದಂತೂ ಗ್ಯಾರಂಟಿ ಅಂತಲೂ ಅಭಿಮಾನಿಗಳು ಹೇಳುತ್ತಿದ್ದಾರೆ.
-
ಪ್ರೇಮ್ ಬರೆದ ಹಾಡು ಅಕ್ಷರ ರೂಪದ ಬೆತ್ತಲೆ ಸಿನೆಮಾ ತೋರಿಸಿದಂತಿದೆ: ಅರುಣ್ ಜೋಳದಕೂಡ್ಲಿಗಿ ಬರಹ -
ಸಿನಿಮಾಗಳಲ್ಲಿ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕಿ: ಪ್ರೇಮ್ ವಿವಾದದ ಬೆನ್ನಲ್ಲೇ ಫಿಲ್ಮ್ ಚೇಂಬರ್ಗೆ ಮಹಿಳಾ ಆಯೋಗ ಪತ್ರ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ











Click it and Unblock the Notifications