Darshan Thoogudeepa: ಮತ್ತೆ ದಾಸ ಜೈಲಿಗೆ; ಸುಳ್ಳಾಯ್ತು ಆರ್ಯವರ್ಧನ್‌ ಗುರೂಜಿ ಭವಿಷ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣದ ತೀರ್ಪು ಬಿಟ್ಟುಬಿಡದೆ ಆರೋಪಿಗಳನ್ನ ಕಾಡುತ್ತಲೇ ಇದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ರದ್ದತಿಗೆ ಸಂಬಂಧಿಸಿದ ಅರ್ಜಿಯ ತೀರ್ಪಿನ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ. ದರ್ಶನ್, ಪವಿತ್ರಾ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದಾಗುತ್ತಾ ಅಥವಾ ಮುಂದುವರಿಯುತ್ತಾ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ದರ್ಶನ್‌ ಜಾಮೀನು ವಿಚಾರವಾಗಿ ಆರ್ಯವರ್ಧನ್‌ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಸಹಜವಾಗಿವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಹೇಳಿದ ಎಲ್ಲಾ ವಿಚಾರವೂ ಸರಿ ಆಗುತ್ತಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಸಂಖ್ಯಾ ಶಾಸ್ತ್ರದಿಂದ ಹೆಸರು, ಕೀರ್ತಿ ಮತ್ತು ಹಣವನ್ನು ಗಳಿಸಿದವರು ಸಾಕಷ್ಟು ಜನ ಇದ್ದು ಆ ಪೈಕಿ ಆರ್ಯವರ್ಧನ್ ಕೂಡ ಒಬ್ಬರು.

Aryavardhan Guruji s prediction on Darshan bail case

ನಂಬರ್ ಅಂದರೆ ನಾನು, ನಾನು ಅಂದರೆ ನಂಬರ್ ಎಂದು ಹೇಳುತ್ತಲೇ ಕರುನಾಡಿನೆಲ್ಲೆಡೆ ಜನಪ್ರಿಯವಾದ ಆರ್ಯವರ್ಧನ್ ತಮ್ಮ ನಂಬರ್ ಬಲದಿಂದ ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದಿದ್ದಾರೆ. ಬಿಗ್‌ ಬಾಸ್‌ ಬಳಿಕ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಇನ್ನೂ ಕುಣಿದರು. ಇನ್ನು ಆರ್ಯವರ್ಧನ್ ಗುರೂಜಿ ಅವರು ಹಲವು ವಿವಾದಗಳಿಗೂ ಸಿಲುಕಿಕೊಂಡಿದ್ದು, ಇದೀಗ ದರ್ಶನ್‌ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್ ಜಾಮೀನು ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಬೇಲ್ ರದ್ದಾಗುತ್ತಾ ? ಅಥವಾ ಬೇಲ್ ಸಿಗುತ್ತಾ ? ಎನ್ನುವ ಪ್ರಶ್ನೆ ಈಗ ಹಲವರಲ್ಲಿದೆ. ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿರುವ ಹಿನ್ನೆಲೆ ನಟ ದರ್ಶನ್‌ಗೆ ಸಿಕ್ಕಿರುವ ಜಾಮೀನು ರದ್ದಾಗುವ ಆತಂಕ ಎದುರಾಗಿದೆ. ಈ ವಿಚಾರವಾಗಿ ಆರ್ಯವರ್ಧನ್ ಗುರೂಜಿ "ನ್ಯಾಷನಲ್ ಟಿವಿ'' ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಜನ್ಮದಿನಾಂಕ 7 [ 1+6 ] ಆಗಿರುವುದಕ್ಕೆ ಅವರಿಗೆ ಸಮಸ್ಯೆಗಳಾಗುತ್ತಿವೆ. ಈಗ ಅವರು ಬುದ್ದಿವಂತರಾಗಿದ್ದಾರೆ ಎಂದು ಹೇಳಿದ್ದಾರೆ.

ಅವರದು.. ನಂದು ಮತ್ತು ದಿನಕರ್, ನಮ್ಮ ಮೂವರದ್ದು ಕೂಡ ವೃಷಭ ಲಗ್ನ, ವಿನೀಶ್ ವೃಶ್ಚಿಕ ರಾಶಿ.. ವಿಜಯಲಕ್ಷ್ಮಿ ಅವರದ್ದು ಭರಣಿ ನಕ್ಷತ್ರ ಮೇಷ ರಾಶಿ ಎಂದು ಹೇಳಿರುವ ಆಯವರ್ಧನ್ ಗುರೂಜಿ,ಯಾವತ್ತು ವೃಷಭ ಲಗ್ನದವರಿಗೆ ಮೂರನೇ ಮನೆಯಲ್ಲಿ ಶನಿ ಇರಬಾರದು. ಮೂರನೇ ಮನೆಯಲ್ಲಿ ಕಾಮ..ಜಗಳ..ಧೈರ್ಯ ಹೇಳುತ್ತೆ ಇವರಿಗೆ ಶತ್ರುಗಳು ಜಾಸ್ತಿ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.

ಜ್ಯೋತಿಷ್ಯದಲ್ಲಿ ಮೂರನೇ ಮನೆ ಆರನೇ ಮನೆಯಲ್ಲಿ ಪಾಪ ಗ್ರಹಗಳಿರಬಾರದು ಅಲ್ಲೆಲ್ಲ ಶುಭ ಗ್ರಹಗಳಿರಬೇಕು. ಆರನೇ ಮನೆ ಖಾಲಿ ಇದ್ದರೂ ಪರವಾಗಿಲ್ಲ ಆದರೆ ಮೂರನೇ ಮನೆಯಲ್ಲಿ ಪಾಪ ಗ್ರಹಗಳಿದ್ದರೆ ಕೋಪ.. ಜಗಳ..ಜೈಲು ಇದೆಲ್ಲ ಅನುಭವಿಸಲೇಬೇಕು ಅದು ಅವರ ಕರ್ಮ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನೂರಕ್ಕೆ ನೂರು ದರ್ಶನ್ ಅವರಿಗೆ ಜಾಮೀನು ಸಿಗುತ್ತೆ ಎಂದು ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದಾರೆ. ಮುಂದೆ ದರ್ಶನ್ ಸುಮ್ಮನೆ ಇದ್ದರು ಕೂಡ ಸಮಸ್ಯೆಗಳು ಅವರನ್ನೇ ಹುಡುಕಿಕೊಂಡು ಬರುತ್ತಾವೆ ಎಂದು ಕೂಡ ಹೇಳಿದ್ದಾರೆ.

ಆರ್ಯವರ್ಧನ್‌ ಗುರೂಜಿ ಅವರು ನಟ ದರ್ಶನ್‌ ಗೆ ಜಾಮೀನು ಸಿಗುತ್ತೆ ಎಂದು ಹೇಳಿದ್ದರು. ಆದರೆ, ಈ ಭವಿಷ್ಯ ಸುಳ್ಳಾಗಿದೆ. ನಟ ದರ್ಶನ್​ಗೆ ಬಿಗ್ ಶಾಕ್ ಎದುರಾಗಿದ್ದು,ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+