Anchor Anushree: ಮದುವೆಯಾಗುವ ಹುಡುಗನಿಗೆ ಐ ಲವ್ ಯೂ ಎಂದ ಅನುಶ್ರೀ! ಯಾಕಿಷ್ಟು ನಾಚಿಕೆ?
ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಶೋ ನಡೆಯುತ್ತಿದೆ. ಇದಾಗಲೇ ಕರ್ನಾಟಕದ ಮೂಲೆಮೂಲೆಗಳಿಂದ ಹಲವು ಯುವತಿಯರು ಪ್ರತಿಭೆ ಪ್ರದರ್ಶನ ಮಾಡುತ್ತಿದ್ದಾರೆ. ಸಹಸ್ರಾರು ಮಂದಿಯ ನಟನೆಯನ್ನು ನೋಡಿದ ಬಳಿಕ ಕೆಲವರನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿದ್ದು, ತಮ್ಮ ಅದ್ಭುತ ಪ್ರತಿಭೆಯಿಂದ ಎಲ್ಲಾರ ಗಮನ ಸೆಳೆಯುತ್ತಿದ್ದಾರೆ. ಇತ್ತ ಮಹಾನಟಿ ರಿಯಾಲಿಟಿ ಶೋ ನಲ್ಲಿ ವರ್ಷಾ ಅವರು ಬೆಳಕಿನ ಕವಿತೆ ಹಾಡಿಗೆ ಹೆಜ್ಜೆ ಹಾಕಿದ್ದು, ಈ ಹಾಡಿನ ಬಗ್ಗೆ ತರುಣ್ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಬೆಳಕಿನ ಕವಿತೆ ಹಾಡಿಗೆ ವರ್ಷಾ ನೃತ್ಯ ಮಾಡಿದ ಬಳಿಕ ಪ್ರೀತಿಯ ವಿಚಾರವಾಗಿ ತೀರ್ಪುಗಾರರಾಗಿರುವ ನಟ ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ನಾಯ್ಡು ಮಾತನಾಡಿದ್ದಾರೆ. ಈ ವೇಳೆ ಅನುಶ್ರೀ ಅವರಿಗೆ ನಿಮ್ಮ ಪ್ರೀತಿಯನ್ನ ನಿಮ್ಮ ಹುಡುಗನಿಗೆ ವ್ಯಕ್ತಪಡಿಸಬೇಕು ಎಂದು ನಿಶ್ವಿಕಾ ನಾಯ್ಡು ಅವರು ಹೇಳಿದ್ದಾರೆ. ಈ ವೇಳೆ ಮಹಾನಟಿ ರಿಯಾಲಿಟಿ ಶೋ ವೇದಿಕೆಯ ಮೇಲೆ ಭಾವಿ ಪತಿಗೆ ಅನುಶ್ರೀ ಅವರು ಪ್ರಪೋಸ್ ಮಾಡಿದ್ದಾರೆ. ನನ್ನ ಜೀವನದಲ್ಲಿ ಪೂರ್ಣ ಚಂದ್ರನಾಗಿ ನೀ ಬೇಗ ಬಾ ಐ ಲವ್ ಯೂ ಎಂದು ಅನುಶ್ರೀ ಹೇಳಿದ್ದು, ಪ್ರಪೋಸ್ ಮಾಡಿದ ಬಳಿಕ ಆಂಕರ್ ಅನುಶ್ರೀ ಅವರು ನಾಚಿ ನೀರಾಗಿದ್ದಾರೆ. ಈ ವೇಳೆ ನಿಶ್ವಿಕಾ ಅವರು ಯಾಕಿಷ್ಟು ನಾಚಿಕೆ ಎಂದು ಕೇಳಿದ್ದಾರೆ.

ಮಹಾನಟಿ ಶೋನಲ್ಲಿ ಕೇಳಿ ಬಂತು ಅನುಶ್ರೀ ಮದುವೆ ಮಾತು
ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಲವ್ ಮತ್ತು ರೊಮ್ಯಾನ್ಸ್ ರೌಂಡ್ ನಲ್ಲಿ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಮದುವೆಯ ಕುರಿತಾದ ಚರ್ಚೆ ಆಗಿದೆ. ಕನ್ನಡದಲ್ಲಿ ಬಹು ಬೇಡಿಕೆಯ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಅವರು ಇದೇ ಆಗಸ್ಟ್ 28ಕ್ಕೆ ಕೊಡಗಿನ ಮೂಲದ ಉದ್ಯಮಿ ರೋಷನ್ ಜೊತೆಗೆ ವಿವಾಹ ಆಗಲಿದ್ದಾರೆ ಅನ್ನೋ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಅನುಶ್ರೀ ಅಧಿಕೃತವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ.
ಇದೀಗ ಜೀ ಕನ್ನಡ ವಾಹಿನಿಯ ಮಹಾನಟಿ ಶೋನಲ್ಲಿ ಅನುಶ್ರೀ ಮದುವೆ ಬಗ್ಗೆ ಮಾತು ಬಂದಿದೆ. ಮಹಾನಟಿಯರು ಸ್ಟೇಜ್ ಮೇಲೆ ಮಹಾನಟಿಯರ ಮನಮೋಹಕ ಪ್ರದರ್ಶನಗಳ ಜೊತೆಗೆ ಪ್ರೀತಿ ಮತ್ತು ಶೃಂಗಾರದ ಸ್ಪರ್ಶವಿರುವ ರೌಂಡ್ ಪ್ರೇಕ್ಷಕರಿಗೆ ಮಸ್ತ್ ಎಂಟರ್‌ಟೈನ್‌ಮೆಂಟ್ ನೀಡಲಿದೆ. ಈ ಕುರಿತ ಪ್ರೋಮೋ ಇದೀಗ ಜೀ ವಾಹಿನಿಯು ಹಂಚಿಕೊಂಡಿದ್ದು, ಇದರಲ್ಲಿ ಅನುಶ್ರೀ ಅವರ ಮದುವೆ ಬಗ್ಗೆಯ ಮಾತಿನ ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ.
ಮಹಾನಟಿಯರ ಅದ್ಭುತ ಪರ್ಫಾಮೆನ್ಸ್‌ಗೆ ಜಡ್ಜಸ್ ಮನಸೋತಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ನಿಶ್ವಿಕಾ ನಾಯ್ಡು ಹಾಗೂ ರಮೇಶ್ ಅರವಿಂದ್ ಕೂಡ ಸ್ಟೇಜ್ ಮೇಲೆ ಬಂದು ಸ್ಟೆಪ್ ಹಾಕಿದ್ದಾರೆ. ಇದೇ ವೇಳೆ, ಟಾಸ್ಕ್ ಒಂದರಲ್ಲಿ ಇಷ್ಟರಲ್ಲೇ ಅನುಶ್ರೀ ಮದುವೆಯಂತೆ ಹೌದಾ ಎಂದು ತರುಣ್ ಸುಧೀರ್ ಕೇಳುತ್ತಿದ್ದಂತೆ, ಅನುಶ್ರೀ ಬೆಕ್ಕಸ ಬೆರಗಾಗಿದ್ದಾರೆ. ಅಲ್ಲದೇ ನಿಶ್ವಿಕಾ ನಾಯ್ಡು ಹು ಅಂತೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.












Click it and Unblock the Notifications