Chaitra Vasudevan: ಎರಡನೇ ಮದುವೆ ಯಾಕೆ?: ಮೌನ ಮುರಿದ ಚೈತ್ರಾ ವಾಸುದೇವನ್‌

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಚೈತ್ರಾ ವಾಸುದೇವನ್ ಅವರು ತಮ್ಮ ಜೀವನದ ಹೊಸ ಪಯಣಕ್ಕೆ ಸಜ್ಜಾಗಿದ್ದಾರೆ. ಚೈತ್ರಾ ವಾಸುದೇವನ್ ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದು, ಈಗಾಗಲೇ ತಮ್ಮ ಭಾವಿ ಪತಿಯ ಫೋಟೋದ ಜೊತೆಗೆ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಉದ್ಯಮಿಯಾಗಿರುವ ಜಗದೀಪ್.ಎಲ್ ಅವರ ಜೊತೆ ಚೈತ್ರಾ ವಾಸುದೇವನ್‌ ಮಾರ್ಚ್‌ನಲ್ಲಿ ಹಸೆಮಣೆ ಏರಲಿದ್ದಾರೆ. ಇದೀಗ ಮೊದಲ ಬಾರಿಗೆ ಭಾವಿ ಪತಿ ಹಾಗೂ ಎರಡನೇ ಮದುವೆ ಬಗ್ಗೆ ಚೈತ್ರಾ ವಾಸುದೇವನ್‌ ಮಾತನಾಡಿದ್ದಾರೆ.

ನ್ಯಾಷನಲ್ ಟಿವಿ ಜೊತೆ ಮಾತನಾಡಿದ ಅವರು, 'ಜಗದೀಪ್. ಎಲ್ ಅವರ ಬೆಸ್ಟ್‌ಫ್ರೆಂಡ್‌ ಮಗುವಿನ ಹುಟ್ಟುಹಬ್ಬದಿಂದ ನಮ್ಮಿಬ್ಬರ ಪರಿಚಯವಾಯ್ತು. ಒಂದೇ ಜಿಮ್‌, ಒಂದೇ ಕಾಲೇಜು ಅಂತಾ ಮಾತುಕತೆ ಶುರುವಾಯ್ತು. ನನ್ನ ಕೆಲಸಗಳ ಬಗ್ಗೆ ಎಲ್ಲಾ ಕೇಳಿ ತಿಳಿದುಕೊಂಡರು. ನನ್ನ ಪ್ರಕಾರ ಅವರಿಗೆ ನಾನು ಇಷ್ಟ ಆಗಿದ್ದೆ. ಒಂದು ದಿನ ನೇರವಾಗಿ ಕೇಳಿದರು. ನಾನು ಸಮಯ ತೆಗೆದುಕೊಂಡೆ ಬಳಿಕ ನಮ್ಮ ಅಪ್ಪನ ಬಳಿ ನೇರವಾಗಿ ಹೋಗಿ ಕೇಳಿದರು. ಅಪ್ಪ-ಅಮ್ಮ ಇಬ್ಬರೂ ಇಷ್ಟಪಟ್ಟರು. ಯಾಕೆಂದರೆ ಅವರು ನನ್ನಂತೆ'.

Anchor Chaitra Vasudevan Talks About Her Second Marriage

'ಅವರು ಚಿಕ್ಕ ವಯಸ್ಸಿನಲ್ಲಿ ತಂದೆ ಕಳೆದುಕೊಂಡರು. ಬಹಳ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದಿದ್ದಾರೆ. ನನ್ನಂತೆ ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರ ಕ್ಷೇತ್ರದಲ್ಲಿ ಅವರು ಹೆಸರು ಮಾಡುತ್ತಿದ್ದಾರೆ. ಇನ್ನೂ ಬೆಳೆಯುತ್ತಿದ್ದಾರೆ ಅವರು. ಒಂದೇ ರೀತಿ ಯೋಚನೆ ಇರುವವರು ಸಿಗುವುದು ತುಂಬಾ ಕಷ್ಟ. ಇಂತಹ ಸಮಯದಲ್ಲಿ ಜೀವನದಲ್ಲಿ ಒಂದು ಪಾಸಿಟಿವ್‌ ವಿಚಾರ ಬೇಕಿತ್ತು. ಒಂದು ಬೆಂಬಲ ಬೇಕಿತ್ತು. ಅಪ್ಪ ಅಮ್ಮನ ಖುಷಿ ನೋಡಿ ಒಪ್ಪಿಕೊಂಡೆ. ಒಪ್ಪಿಕೊಳ್ಳುತ್ತಿದ್ದಂತೆ ಎಲ್ಲರಿಗೂ ಹೇಳಿದೆ' ಎಂದರು.

Anchor Chaitra Vasudevan Talks About Her Second Marriage

ಎರಡನೇ ಮದುವೆ ಯಾಕೆ? ಡಿವೋರ್ಸ್ ಬಳಿಕ ಎರಡನೇ ಮದುವೆ ಬೇಕಾ? ಎಂದು ಕಮೆಂಟ್‌ ಮಾಡುವವರ ಬಗ್ಗೆ ಮಾತನಾಡಿದ ಚೈತ್ರಾ ವಾಸುದೇವನ್‌, ' ನಾನು ಈ ವಿಚಾರ ಹೇಳುತ್ತಿದ್ದಂತೆ ಬಹುತೇಕರು ಒಳ್ಳೆಯದನ್ನೇ ಹಾರೈಸಿದ್ದಾರೆ. ಎರಡನೇ ಮದುವೆ ಬೇಕಾ ಅಂದವರಿಗೆ ನಾನೇನು ರಿಯ್ಯಾಕ್ಟ್‌ ಮಾಡಿಲ್ಲ. ಅದು ಸತ್ಯ ಕೂಡ. ಬದಲಾಯಿಸಲು ಆಗುವುದಿಲ್ಲ. ಜೀವನದಲ್ಲಿ ಆಘಾತಗಳು ಆಗುತ್ತಲೇ ಇರುತ್ತದೆ. ಅದನ್ನು ಮರೆತು ಒಳ್ಳೆಯ ವ್ಯಕ್ತಿಯಾಗಲು ಪ್ರಯತ್ನಿಸಬೇಕು. ಡೆತ್‌, ಡಿವೋರ್ಸ್ ಮತ್ತು ಡಿಸೀಸ್‌ ಈ ಮೂರು ಜೀವನದ ಡೇಂಜರರ್ಸ್ ವಿಚಾರಗಳು. ನಾವು ಆಗಲೇ ತುಂಬಾ ಅನುಭವಿಸಿರುತ್ತೇವೆ. ನಮಗೆ ನೋವು ಮಾಡುವ ರೀತಿ ಕಮೆಂಟ್ಸ್‌ ಬಂದಾಗ ಏನೂ ಪ್ರತಿಕ್ರಿಯೆ ಕೊಡಲು ಆಗುವುದಿಲ್ಲ. ನನ್ನನ್ನು ಗೌರವಿಸುವವರನ್ನು ನಾನು ಗೌರವಿಸುತ್ತೇನೆ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+