Aparna: ಮಕ್ಕಳೇ ಇಲ್ಲದೆ ನರಳುತ್ತಿದ್ದ ಅಪರ್ಣಾಗೆ ನೆರವಾಗಿದ್ದು ಯಾರು?

ಕನ್ನಡ & ಕರ್ನಾಟಕಕ್ಕೆ ಇಂದು ತುಂಬಲಾರದ ನಷ್ಟ, ಯಾಕಂದ್ರೆ ಅಪರ್ಣಾ ಅವರು ಇಂದು ಕೋಟ್ಯಂತರ ಅಭಿಮಾನಿಗಳನ್ನ ಅಗಲಿ ಹೋಗಿದ್ದಾರೆ. ಅದರಲ್ಲೂ ತಮ್ಮ ಸ್ಪಷ್ಠ & ಸುಂದರ ಭಾಷೆ ಮೂಲಕವೇ ಕನ್ನಡಿಗರ ಮನಸ್ಸು ಗೆದ್ದಿದ್ದ ಇವರು ಇಂದು ಎಲ್ಲರನ್ನೂ ಬಿಟ್ಟು, ಬಾರದ ಊರಿಗೆ ಹೋಗಿದ್ದಾರೆ. ಹಾಗಾದ್ರೆ ತಮ್ಮ ಮನಸ್ಸಿನಲ್ಲಿ ಇದ್ದ ನೋವನ್ನು & ಮಕ್ಕಳೇ ಇಲ್ಲದ ಕೊರಗನ್ನು ಆಂಕರ್ ಅಪರ್ಣಾ ಹೇಗೆ ನಿಭಾಯಿಸುತ್ತಿದ್ದರು ಗೊತ್ತೆ? ಬನ್ನಿ ತಿಳಿಯೋಣ.

ಕನ್ನಡ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದವರನ್ನು ನೋಡಿದ್ದೀವಿ, ಕೇಳಿದ್ದೀವಿ. ಇಷ್ಟೇ ಅಲ್ಲ ಸೀರಿಯಲ್ ಅಂದ್ರೆ ಧಾರಾವಾಹಿಗಳ ಮೂಲಕ ಕೂಡ ದೊಡ್ಡ ಹೆಸರು ಗಳಿಸಿದ ನಟ & ನಟಿ ನಮ್ಮ ಕಣ್ಣ ಮುಂದೆ ಇದ್ದಾರೆ. ಆದರೆ ನಿರೂಪಣೆ ಅಂದ್ರೆ ಆಂಕರಿಂಗ್ ಮೂಲಕವೂ ಹೀಗೆ ದೊಡ್ಡ ಹೆಸರು ಸಂಪಾದಿಸಬಹುದು, ಎಲ್ಲರ ಮನಸ್ಸನ್ನು ಗೆಲ್ಲಬಹುದು ಎಂಬುದನ್ನ ಮಾತ್ರ ಕನ್ನಡಿಗರು ಕಲಿತಿದ್ದು ನಿರೂಪಕಿ ಅಪರ್ಣಾ ಅವರಿಂದ. ಯಾಕಂದ್ರೆ ಅಪರ್ಣಾ ಅವರಿಗೆ ಆ ಶಕ್ತಿ ಇತ್ತು. ಇದೇ ಕಾರಣಕ್ಕೆ ಕೋಟಿ ಕೋಟಿ ಅಭಿಮಾನಿಗಳು ಅಪರ್ಣಾ ಅವರ ಶುದ್ಧ & ಸ್ಪಷ್ಟ ಕನ್ನಡಕ್ಕೆ, ಹಾಗೇ ಅವರ ಧ್ವನಿಗೆ ಫಿದಾ ಆಗಿದ್ದರು. ಆದರೆ ಅಪರ್ಣಾ ಅವರಿಗೆ ಮಕ್ಕಳೇ ಇಲ್ಲ ಎಂಬ ನೋವು ಸದಾ ಕಾಡುತ್ತಿತ್ತು...

Anchor Aparna Loved Anchoring And His Husband Much More Than Anything In This World

ಅಪರ್ಣಾ ಅವರಿಗೆ ಮಕ್ಕಳೇ ಇರಲಿಲ್ಲ..

ಹೌದು, ಅಪರ್ಣಾ ಅವರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದರು ಕೂಡ ಅವರಿಗೆ ಮಕ್ಕಳೇ ಇಲ್ಲದ ನೋವು ಕಾಡುತ್ತಿತ್ತು. ಎಷ್ಟೆಲ್ಲಾ ಸಾಧನೆ ಮಾಡಿದ ನಟಿಗೆ ಇದೊಂದು ಮಾತ್ರ ದೊಡ್ಡ ಕೊರಗು ನೀಡಿತ್ತು. ಆದರೂ ಇದನ್ನ ಅವರು ನುಂಗಿಕೊಂಡು & ಸಹಿಸಿಕೊಂಡು ಹೋಗಿದ್ದರು. ಅಲ್ಲದೆ ಅಪರ್ಣಾ ಅವರಿಗೆ ಮಕ್ಕಳು ಇಲ್ಲದ ನೋವನ್ನು ಮರೆಯುವಂತೆ ಮಾಡುತ್ತಿದ್ದ ವಿಚಾರ ನಿರೂಪಣೆ ಮಾತ್ರ. ಇದೇ ಕಾರಣಕ್ಕೆ, ಅಪರ್ಣಾ ನಿರೂಪಣೆಯಲ್ಲಿ ಸಾಕಷ್ಟು ಶ್ರದ್ಧೆಯನ್ನೂ ವಹಿಸಿದ್ದರು. ಆದರೆ ಇದೀಗ ಅಪರ್ಣಾ ಬಾರದ ಲೋಕಕ್ಕೆ ತೆರಳಿದ್ದಾರೆ, ಅಭಿಮಾನಿಗಳು ಈ ಸುದ್ದಿ ಕೇಳಿ ಕಣ್ಣೀರು ಹಾಕುತ್ತಿದ್ದಾರೆ.

ಅಪರ್ಣಾ ಪತಿ ಭಾವುಕ ನುಡಿ..

ಅಂದಹಾಗೆ ಆಂಕರ್ ಅಪರ್ಣಾ ಅವರು ನಿನ್ನೆ ಬಾರದ ಲೋಕಕ್ಕೆ ತೆರಳಿದ ನಂತರ, ಅವರ ಪತಿ ಭಾವುಕರಾಗಿ ಮಾತನಾಡಿದ್ದರು. ಅಲ್ಲದೆ ಕಳೆದ 2 ವರ್ಷಗಳಿಂದ ಅಪರ್ಣಾ ಹೇಗೆಲ್ಲಾ ನೋವು ಅನುಭವಿಸಿದ್ದರು ಎಂಬ ವಿಚಾರವನ್ನು ಬಿಡಿಸಿ ಹೇಳಿದ್ದರು. ಹೀಗಿದ್ದಾಗ ಅಪರ್ಣಾ ಅವರ ಅಗಲಿಕೆ ಅವರ ಕುಟುಂಬಕ್ಕೆ ಸಾಕಷ್ಟು ನೋವು ತಂದಿದೆ. ಹಾಗೇ ಕೋಟಿ, ಕೋಟಿ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ.

ಅಪರ್ಣಾ ಅವರ ಸಾವಿಗೆ ಇದೇ ಕಾರಣ?

ಬ್ರಹ್ಮಾಂಡ ಗುರೂಜಿ ಇಂದು ಆಂಕರ್ ಅಪರ್ಣಾ ಅವರ ಅಂತಿಮ ದರ್ಶನ ಪಡೆದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಕಂಬನಿ ಮಿಡಿದ ಬ್ರಹ್ಮಾಂಡ ಗುರೂಜಿ, ನಟಿ & ನಿರೂಪಕಿಯಾದ ಅಪರ್ಣಾ ಅವರ ಸಾವಿಗೆ ಅಸಲಿ & ಸ್ಫೋಟಕ ಕಾರಣ ಬಿಚ್ಚಿಟ್ಟಿದ್ದಾರೆ. ಇದೀಗ ಬ್ರಹ್ಮಾಂಡ ಗುರೂಜಿ ಅವರು ಹೇಳುವಂತೆ ಆಂಕರ್ ಅಪರ್ಣಾ ಅವರು ಮೃತಪಟ್ಟಿದ್ದು ಶನಿ ಕಾಟದಿಂದ ಅಂತೆ. ಅಷ್ಟಕ್ಕೂ ಯಾರದ್ದೇ ಜೀವನದಲ್ಲಿ ಶನಿ ಕಾಟ ಹೆಚ್ಚಾದರೆ ಕಾಯಿಲೆಗಳು ವಕ್ಕರಿಸಿ, ಸಮಸ್ಯೆಗೆ ಕಾರಣ ಆಗುತ್ತದೆ. ಇದೇ ಕಾರಣಕ್ಕೆ ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ್ದ ಅಪರ್ಣಾ ಅವರು ಇದೀಗ ಮೃಪತಟ್ಟಿದ್ದಾರೆ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ ಅವರು.

ಬನಶಂಕರಿ ಪ್ರದೇಶದಲ್ಲಿ ಮನೆ ಇದೆ

ಸಾಕಷ್ಟು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದ ನಿವಾಸದಲ್ಲಿ ಮೃತಪಟ್ಟಿದ್ದರು ಬೆಂಗಳೂರು ದೂರದರ್ಶನದ ಸೀನಿಯರ್ ಗ್ರೇಡ್ ನಿರೂಪಕಿ ಆಗಿದ್ದ ಅಪರ್ಣಾ ಅವರು ಆಕಾಶವಾಣಿ ನಿರೂಪಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿ ನಿರೂಪಕಿಯಾಗಿ 3 ದಶಕ ಪೂರೈಸಿದ್ದರು. ಹೀಗಿದ್ದಾಗ ಎಲ್ಲರನ್ನೂ ಅಗಲಿ ಹೋಗಿದ್ದಾರೆ ನಟಿ & ಅಪ್ಪಟ ಕನ್ನಡದ ನಿರೂಪಕಿ ಅಪರ್ಣಾ ಅವರು. ಈ ನೋವಿನ ಬೆನ್ನಲ್ಲೇ ಅಪರ್ಣಾ ಅವರ ಜೀವನದ ಕಹಿ ಘಟನೆಗಳು ಅಭಿಮಾನಿಗಳನ್ನ ಮತ್ತಷ್ಟು ನೋಯಿಸುತ್ತಿವೆ ಕೂಡ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+