Anchor Anushree: ಮದುವೆ ಬಗ್ಗೆ ಟೀಕಿಸಿದರಿಗೆ ಅನುಶ್ರೀ ಖಡಕ್ ತಿರುಗೇಟು
Anushree Wedding: ನಟನೆಗಿಂತಲೂ ಹೆಚ್ಚಾಗಿ ಆಂಕರಿಂಗ್ ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡ ಅನುಶ್ರೀ ಅವರ ಮದುವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇವತ್ತಿಗೆ ಒಂದು ತಿಂಗಳಿಗೆ ಅನುಶ್ರೀ ಅವರ ಮದುವೆ ನಿಶ್ಚಯವಾಗಿದೆ ಎನ್ನುವ ಮಾಹಿತಿ ಇದೆ. ಈ ಮಧ್ಯೆ ಅವರು ತಮ್ಮ ಮದುವೆ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ನಾಲಿಗೆ ಹರಿಬಿಟ್ಟವರಿಗೆ ತಿರುಗೇಟು ನೀಡಿದ್ದಾರೆ. ಅವರು ಮಾರ್ಮಿಕವಾಗಿ ಮಾಡಿ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಎಲ್ಲರ ಕೈಲಿ ಮೊಬೈಲ್ ಇಂಟರ್‌ನೆಟ್ ಸಿಕ್ಕ ಮೇಲೆ ಏನು ಬೇಕಾದರೂ ಮಾತನಾಡಬಹುದು. ಕಾಮೆಂಟ್ ಹಾಕಬಹುದು ಎಂದುಕೊಂಡವರೇ ಹೆಚ್ಚಿದ್ದಾರೆ. ಅದೇ ರೀತಿ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಅವರ ವಯಸ್ಸು ಇಟ್ಟುಕೊಂಡು ನಾನಾ ರೀತಿಯಲ್ಲಿ ಮಾತನಾಡಿದ್ದಾರೆ. ಕಿಂಚಿತ್ತು ಗೌರವ ಇಲ್ಲದೇ, ಸಾಮಾಜಿಕ ಜವಾಬ್ದಾರಿ ಮರೆತು ಅಶ್ಲೀಲ ಪದಗಳಿಂದಲೂ ನಿಂದಿಸಿದ್ದಾರೆ.

ಆಗಸ್ಟ್ 28ರಂದು ಆಂಕರ್ ಅನುಶ್ರೀ ಅವರು ಉದ್ಯಮಿ ರೋಷನ್ ಅವರ ಜೊತೆಗೆ ಹಸೆಮಣೆ ಏರಲಿದ್ದಾರೆ. ಈಗಾಗಲೇ ಎರಡು ಕುಟುಂಬಗಳಲ್ಲಿ ಅಗತ್ಯ ತಯಾರಿ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಅನುಶ್ರೀ ಆಗಲಿ, ಅವರ ಕುಟುಂಬದವರಾಗಲಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಈ ವಿಚಾರ ಗೊತ್ತಾಗುತ್ತಿದ್ದಂತೆ 37 ವರ್ಷದ (ಗೂಗಲ್ ಪ್ರಕಾರ) ಅನುಶ್ರೀ ಮದುವೆ ವಿಚಾರ ಇಟ್ಟುಕೊಂಡು ಕೆಟ್ಟದಾಗಿ ಕಾಮೆಂಟ್ ಹಾಕುವವರು, ಟ್ರೋಲ್ ಮಾಡುವ ವರ್ಗ ಸಕ್ರಿಯವಾಗಿದೆ. ಅವರಿಗೆಲ್ಲ ಅನುಶ್ರೀ ಅವರು ತಿರುಗೇಟು ನೀಡಿದ್ದಾರೆ. 'ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಲು ಸಾಧ್ಯವಿಲ್ಲ...' ಎಂದಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವ ಸೆಲೆಬ್ರೆಟಿಗಳ ವೈಯಕ್ತಿಕ ಜೀವನ ಕುರಿತು ಹಲವರು ಹೆಚ್ಚಿನ ಆಸಕ್ತಿ ಬೆಳಸಿಕೊಂಡಿರುತ್ತಾರೆ. ಕೆಲವರಂತೂ ಅತೀರೇಕ ವರ್ತನೆ ಪ್ರದರ್ಶಿಸಿಬಿಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡಿ ಬಿಡುತ್ತಾರೆ. ಇಂಥದ್ದೆ ಸ್ಥಿತಿಯನ್ನು ಆಂಕರ್ ಅನುಶ್ರೀ ಅವರು ಎದುರಿಸಿದ್ದಾರೆ.
ಅನುಶ್ರೀ ಪೋಸ್ಟ್‌ನಲ್ಲೇನಿದೆ?
ಅನುಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಡಾ.ರಾಜ್ ಕುಮಾರ್ ಅವರ ಸಂಭಾಷಣೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ''ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ನಾವ್ ಹೇಗಿದ್ದರೂ ಮಾತನಾಡುತ್ತಾರೆ. ಒಳ್ಳೆಯವರಾಗಿದ್ರೂ ಆಡಿಕೊಳ್ಳುತ್ತಾರೆ. ಕೆಟ್ಟವರಾಗಿದ್ರೂ ಆಡಿಕೊಳ್ಳುತ್ತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಂಗೆ. ಇದಕ್ಕೆ ಔಷಧಿಯೇ ಇಲ್ಲ'' ವಿಡಿಯೋ ಹಂಚಿಕೊಂಡು ತಿರುಗೇಟು ನೀಡಿದ್ದಾರೆ.
ಅನುಶ್ರೀ ಅಧಿಕೃತ ಮಾಹಿತಿ ನೀಡಲಿ: ಫ್ಯಾನ್ಸ್
ಅವರ ಈ ವಿಡಿಯೋಅನ್ನು ಚಿತ್ರರಂಗದ ಕೆಲವು ಸೆಲೆಬ್ರೆಟಿಗಳು ಅವರ ಆಪ್ತರು ಲೈಕ್ ಮಾಡಿದ್ದಾರೆ. ಈ ಮೂಲಕ ಮಾರ್ಮಿಕವಾಗಿ ತಮ್ಮ ವಿರುದ್ಧ ಇಲ್ಲಸಲ್ಲದ ಅಸಯ್ಯಕರ ಮಾತನಾಡುವವರಿಗೆ ಅವರು ಪರೋಕ್ಷವಾಗಿ ತಿಳಿ ಹೇಳಿದ್ದಾರೆ. ಇನ್ನು ಮತ್ತೊಂದು ಕಡೆ ತಮ್ಮ ನಿರೂಪಣೆ, ಪಟಾಕಿ ಮಾತಿನಲ್ಲೇ ಸಂಪಾದಿಸಿ ಅವರ ಅಭಿಮಾನಿ ಬಳಗ ಅನುಶ್ರೀ ಮದುವೆ ಶುಭ ಹಾರೈಸಿದ್ದಾರೆ. ಮದುವೆ ಎದುರು ನೋಡಲು ಕಾಯುತ್ತಿದ್ದಾರೆ. ಜೊತೆಗೆ ಮದುವೆ ಬಗ್ಗೆ ಅನುಶ್ರೀ ಅವರು ಅಧಿಕೃತ ಮಾಹಿತಿ ನೀಡುವಂತೆ ಕೆಲವರು ಒತ್ತಾಯಿಸಿದ್ದೂ ಇದೆ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications