ನಗುವಿನ ಪರಮಾತ್ಮನನ್ನು ಕಸಿದುಕೊಂಡ ಭಗವಂತನಿಗೇ ಶಾಪ ಹಾಕಿದ ಆಂಕರ್ ಅನುಶ್ರೀ
ನಟ ಪುನೀತ್ ರಾಜ್ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಅಪ್ಪು ಅವರು ಬದುಕಿದ್ದರೆ ಕುಟುಂಬದ ಜೊತೆ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ಹೃದಯಾಘಾತದಿಂದ ಮೃತಪಟ್ಟರು. ಅಪಾರ ಅಭಿಮಾನಿಗಳು ಅಪ್ಪು ಅವರ ಹೆಸರಿನಲ್ಲಿ ಇಂದು ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಿದ್ದಾರೆ. ಇನ್ನೂ, ರಾಜಕೀಯ ಗಣ್ಯರು ಸೇರಿದಂತೆ ಚಿತ್ರರಂಗದ ನಟ ನಟಿಯರು ಪುನೀತ್ ರಾಜ್ ಕುಮಾರ್ ಅವರನ್ನ ನೆನಪು ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ.
ಇನ್ನೂ, ಕನ್ನಡದ ಖ್ಯಾತ ನಿರೂಪಕಿ ಆಂಕರ್ ಅನುಶ್ರೀ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಹಲವು ಕಾರ್ಯಕ್ರಮದಲ್ಲಿ ಅಪ್ಪು ಅವರನ್ನ ನೆನಪು ಮಾಡುಕೊಂಡಿರುವ ಅನುಶ್ರೀ ಅವರು ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ರಾಜ್‌ಕುಮಾರ್ 50ನೇ ಬರ್ತ್ ಡೇ ಪ್ರಯುಕ್ತ ಪುನೀತ್ ರಾಜ್ ಕುಮಾರ ಅವರ ಜೊತೆಗಿನ ಫೋಟೋವನ್ನ ಶೇರ್ ಮಾಡಿಕೊಂಡು ಕವಿತೆಯ ಸಾಲುಗಳನ್ನ ಬರೆದುಕೊಂಡಿದ್ದಾರೆ.

ಕರ್ನಾಟಕ ರತ್ನ ನಟ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಎಂದು ಸ್ವತಃ ಪುನೀತ್ ಬದುಕಿದ್ದಾಗಲೇ ಪುನೀತ್ ಅವರ ಬಳಿಯೇ ಆಂಕರ್ ಅನುಶ್ರೀ ಅವರು ಹೇಳಿಕೊಂಡಿದ್ದರು. ಅವರ ಸೋಷಿಯಲ್ ಮೀಡಿಯಾ ಪುಟದಲ್ಲಿಯೂ ಪುನೀತ್ ಅವರ ಜತೆಗಿನ ನೆನಪುಗಳನ್ನು ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ. ಇನ್ನೂ ಆಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್‌ನ ಲೋಗೋದಲ್ಲೂ ಪುನೀತ್ ಇದ್ದಾರೆ. ಇದೀಗ ಇದೇ ಪುನೀತ್ ರಾಜ್‌ಕುಮಾರ್ ಅವರ 50ನೇ ಬರ್ತ್‌ಡೇ ಪ್ರಯುಕ್ತ ವಿಶೇಷ ಕವನವೊಂದನ್ನು ಪೋಸ್ಟ್ ಮಾಡಿದ್ದಾರೆ. ಪರಮಾತ್ಮನನ್ನು ಕಸಿದುಕೊಂಡ ಭಗವಂತನಿಗೇ ಶಾಪವನ್ನ ಅನುಶ್ರೀ ಹಾಕಿದ್ದಾರೆ.
ಅನುಶ್ರೀ ಬರೆದ ಕವಿತೆಯ ಸಾಲುಗಳು..
ನಿಮ್ಮನ್ನು ನೋಡಿ ನಾಚಿ ಕೆಂಪಾಗುತ್ತಿದ್ದ ಕೆನ್ನೆ ...
ಇಂದು ಕಣ್ಣೇರಿಗೆ ದಾರಿಯಾಗಿದೆ !!!
ನಿಮ್ಮನ್ನು ನೋಡಿ ತಾಳ ತಪ್ಪುತ್ತಿದ್ದ ಹೃದಯ
ಇಂದು ಮಂಕಾಗಿ ಕೂತಿದೆ !!!
ನಿಮ್ಮನ್ನು ಹಾಡಿ ಹೊಗಳುತ್ತಿದ್ದ ಕಂಠ
ಇಂದು ಕಂಪಿಸುತ್ತಿದೆ !!!
ನಿಮ್ಮನ್ನು ಅಪ್ಪಿಕೊಳ್ಳುತ್ತಿದ್ದ ಕೈಗಳು
ಇಂದು ನಿಮ್ಮನ್ನು ಅಪ್ಪಿಕೊಳ್ಳೋಕೆ ಹಾತೊರೆಯುತ್ತಿದೆ !!!!
ನಿಮ್ಮನ್ನು ಪರಮಾತ್ಮ ಎಂದು ಕೂಗಿದ ನಾಲಿಗೆ
ಇಂದು ಆ ಭಗವಂತನಿಗೆ ಶಾಪ ಹಾಕುತ್ತಿದೆ !!!
ನಿಮ್ಮನ್ನು ಎಂದೆಂದಿಗೂ ಸಂಭ್ರಮಿಸೋ ಕೋಟ್ಯಂತರ ಹೃದಯಗಳಿಗೆ
ಇಂದು ನಿಮ್ಮನ್ನು ಮತ್ತೆ ಹುಟ್ಟಿ ಬನ್ನಿ ಎಂದು ಬೇಡಿದೆ !!!
HAPPIEST BIRTHDAY TO MY ONE AND ONLY FAVOURITE APPU SIR
Miss u sir
Love u forever and ever
Appu fan Forever 🥹
ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ರಾಜ್‌ಕುಮಾರ್ 50ನೇ ಬರ್ತ್‌ಡೇ ಪ್ರಯುಕ್ತ ಅವರ ಅಭಿಮಾನಿಗಳು ಬಗೆಬಗೆ ಫೋಟೋ, ವಿಡಿಯೋ ಶೇರ್ ಮಾಡಿ, ನೆಚ್ಚಿನ ನಟನ ಸ್ಮರಣೆ ಮಾಡುತ್ತಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ. ಇನ್ನೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಅಪ್ಪುವಿನ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು ಎಂದು ತಿಳಿಸಿದ್ದಾರೆ. ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ನೂರಾರು ದುರ್ಬಲ ಜೀವಗಳಿಗೆ ಬದುಕಿನ ಹಾದಿ ತೋರಿದ್ದರು. ಬಡವ, ಬಲ್ಲಿದನೆನ್ನದೆ ಸರ್ವರನ್ನೂ ಪ್ರೀತಿಸುತ್ತಿದ್ದ, ಸದಾ ಹಸನ್ಮುಖಿಯಾಗಿದ್ದ ಅಪ್ಪುವಿನ ಜೀವನ ಯುವಜನರಿಗೆ ಸಂದೇಶದಂತಿದೆ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications