ನನ್ನ ತಲೆ ಕೂಡ ಹೋಗ್ತಿತ್ತು... ಆಂಕರ್ ಅನುಶ್ರೀ ಡಿ-ಬಾಸ್ ದರ್ಶನ್ ಬಗ್ಗೆ ಏನು ಹೇಳಿದ್ರು? Darshan Thoogudeepa
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್... ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್... ಕನ್ನಡ ಸಿನಿಮಾ ರಂಗ ಆಳಿದ ಸ್ಟಾರ್... ಕೋಟಿ, ಕೋಟಿ ಅಭಿಮಾನಿಗಳ ಪಾಲಿನ ಮುದ್ದಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ... ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಪ್ರೀತಿಯಿಂದ ಜಯಘೋಷ ಹಾಕುತ್ತಾರೆ. ಅಲ್ಲದೆ ಅನ್ಯಾಯಕ್ಕೆ ಒಳಗಾದ ಯಾವುದೇ ಹೆಣ್ಣು ಮಗುವಿಗು ನ್ಯಾಯ ಕೊಡಿಸುವ ಏಕೈಕ ವ್ಯಕ್ತಿ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅನ್ನೋದು ಫ್ಯಾನ್ಸ್ ಹೇಳುವ ಮಾತು. ಹೀಗಿದ್ದಾಗಲೇ, ನನ್ನ ತಲೆ ಕೂಡ ಹೋಗ್ತಿತ್ತು... ಆಂಕರ್ ಅನುಶ್ರೀ ಡಿ-ಬಾಸ್ ದರ್ಶನ್ ಬಗ್ಗೆ ಏನು ಹೇಳಿದ್ರು?
ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿದ್ದರು ಆಂಕರ್ ಅನುಶ್ರೀ ಅವರು. ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಪೈಕಿ ನಂಬರ್-1 ಶೋ ನಡೆಸಿಕೊಡುವುದು ಆಂಕರ್ ಅನುಶ್ರೀ ಅವರು. ಜೀ ಕನ್ನಡ ಚಾನೆಲ್‌ಗೆ ಆಂಕರ್ ಅನುಶ್ರೀ ಅವರು ದತ್ತು ಪುತ್ರಿ ಆಗಿ ಹೋಗಿದ್ದಾರೆ ಅಂತಾ ಜನರು ಕೂಡ ಪ್ರೀತಿಯಿಂದ ಮಾತನಾಡುತ್ತಾರೆ. ಯಾಕಂದ್ರೆ ಜೀ ಕನ್ನಡ ಚಾನೆಲ್ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅನುಶ್ರೀ ಅವರ ನಿರೂಪಣೆ ಬೇಕೆ ಬೇಕು. ಅದೇ ರೀತಿ ಸರ್ಕಾರಿ ಕಾರ್ಯಕ್ರಮ & ಖಾಸಗಿ ಕಾರ್ಯಕ್ರಮ ಕೂಡ ಆಂಕರ್ ಅನುಶ್ರೀ ಅವರಿಂದಲೇ ನಿರೂಪಣೆ ಮಾಡಿಸಲಾಗುತ್ತದೆ.

ಡಿ-ಬಾಸ್ ಬಗ್ಗೆ ಆಂಕರ್ ಅನುಶ್ರೀ....
ಆಂಕರ್ ಅನುಶ್ರೀ ಅವರು ಬೇಗ ಮದುವೆ ಆಗಬೇಕು ಅನ್ನೋದು ಕೋಟಿ ಕೋಟಿ ಕನ್ನಡಿಗರ ಆಸೆ ಆಗಿತ್ತು. ಯಾಕಂದ್ರೆ ಅನುಶ್ರೀ ಅವರಿಗೆ ಮದುವೆ ವಯಸ್ಸು ಆಗಿದ್ದು, ಆದಷ್ಟು ಬೇಗ ಅವರು ಸಂಸಾರಿಕ ಜೀವನಕ್ಕೆ ಎಂಟ್ರಿ ಆಗಲಿ ಅಂತಾ ಹಾರೈಸಿದ್ದರು ಅಭಿಮಾನಿಗಳು. ಅದರಲ್ಲೂ ದೊಡ್ಡ ಯಶಸ್ಸು ಕಂಡ ಆಂಕರ್ ಅನುಶ್ರೀ ಅವರು ಮದುವೆ ಆಗಿ ಇನ್ನಷ್ಟು ಖುಷಿ ಖುಷಿಯಾಗಿ ಇರಲಿ ಅನ್ನೋದೇ ಎಲ್ಲರ ಬಯಕೆ ಆಗಿತ್ತು. ಇದೇ ಸಮಯದಲ್ಲಿ ಒಂದು ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ಬಗ್ಗೆ ಆಂಕರ್ ಅನುಶ್ರೀ ಏನು ಹೇಳಿದ್ದಾರೆ ಗೊತ್ತಾ? ಮುಂದೆ ಓದಿ.
ಡಿ-ಬಾಸ್... ಡಿ-ಬಾಸ್... ಡಿ-ಬಾಸ್...
ಅಂದಹಾಗೆ ಕೆಲವು ವರ್ಷಗಳ ಹಿಂದೆ ಸರ್ಕಾರಿ ಕಾರ್ಯಕ್ರಮ ಒಂದರ ಆಂಕರ್ ಆಗಿ ಎಂಟ್ರಿ ಕೊಟ್ಟು ನಿರೂಪಣೆ ಮಾಡುತ್ತಿದ್ದ ಅನುಶ್ರೀ ಅವರಿಗೆ ಭರ್ಜರಿ ಬೆಂಬಲ ಸಿಕಿತ್ತು. ಆದರೆ ಆ ಕಾರ್ಯ್ರಮದಲ್ಲಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ಅತಿಥಿ ಆಗಿ ಬಂದಿದ್ದರು. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕಾರ್ಯಕ್ರಮಕ್ಕೆ ಬರುವುದು ತಡವಾಗಿದ್ದು, ಇದೇ ಸಮಯದಲ್ಲಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಲಕ್ಷಾಂತರ ಅಭಿಮಾನಿಗಳು ಡಿ-ಬಾಸ್ ದರ್ಶನ್ ತೂಗುದೀಪ್ ಬೇಗ ಬರಲಿ ಅಂತಾ ಒತ್ತಾಯ ಮಾಡಿದ್ದರು. ಕೊನೆಗೆ ಡಿ-ಬಾಸ್ ದರ್ಶನ್ ತೂಗುದೀಪ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಾಗ, ಖುದ್ದಾಗಿ ಆಂಕರ್ ಅನುಶ್ರೀ ಅವರು ಕಾಲಿಗೆ ಬೀಳಲು ಹೋಗುತ್ತಾರೆ. ಅಲ್ಲದೆ ಇನ್ನೇನು ನೀವು ಇನ್ನೊಂದು ಸ್ವಲ್ಪ ಹೊತ್ತು ಬರದೇ ಇದ್ದಿದ್ದರೆ ನಮ್ಮ ತಲೆ ಕೂಡ ಹೋಗಿ ಬಿಡ್ತಾ ಇತ್ತು.... ಅಂತಾ ಹೇಳಿರುವ ಹಳೆಯ ವಿಡಿಯೋ ವೈರಲ್ ಆಗುತ್ತಿದೆ!
ಸಾಲು ಸಾಲು ಬರೀ ನೋವಿನ ಸುದ್ದಿಗಳೇ...
ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸ ಇರುವುದು ಮಾತ್ರವಲ್ಲ, ಹತ್ತಾರು ಸಾವಿರ ವರ್ಷಗಳಿಂದ ಕನ್ನಡ ಭಾಷೆಯನ್ನ ನಮ್ಮ ಕನ್ನಡಿಗರು ಬಳಸುತ್ತಾ ಬಂದಿದ್ದಾರೆ ಅನ್ನೋದು ಭಾಷಾ ತಜ್ಞರ ವಾದ. ಅದರಲ್ಲೂ ಈ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮತ್ತಷ್ಟು ಬೆಳೆಯಲು ಸಿನಿಮಾ ರಂಗ ಕೂಡ ಬೇಕು, ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಮೂಲಕ ಕನ್ನಡ ಭಾಷೆಯನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ಕನಸು ಕೂಡ ಚಿಗುರೊಡೆದಿತ್ತು. ಆದರೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ತುಂಬಾ ಬರೀ ಸಾವು, ಕೊಲೆ, ಡಿವೋರ್ಸ್... ಹೀಗೆ ಸಾಲು ಸಾಲು ಬರೀ ನೋವಿನ ಸುದ್ದಿಗಳೇ ಬರ್ತಾ ಇವೆ. ಹೀಗಿದ್ದಾಗ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆಯಲ್ಲಿ ಇದೀಗ ಜೈಲಿಗೆ ಹೋಗಿರುವುದು ಅಭಿಮಾನಿಗಳನ್ನ ಕಂಗಾಲಾಗುವಂತೆ ಮಾಡಿದೆ...












Click it and Unblock the Notifications