'ಇವಳ ಬಿಟ್ರೆ ಗತಿ ಇಲ್ವಾ' ಎಂದವರಿಗೆ ಖಡಕ್ ಆಗಿ ಉತ್ತರ ಕೊಟ್ಟ ಆಂಕರ್ ಅನುಶ್ರೀ
ಕರಾವಳಿ ಚೆಲುವೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಮಾತಿನಲ್ಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಕನ್ನಡ ಕಿರುತೆರೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾ ಜನರಿಗೆ ಮನರಂಜನೆ ನೀಡುವ ಅನುಶ್ರೀ ಅವರ ನಿರೂಪಣೆಯನ್ನು ಕಿತ್ತುಕೊಳ್ಳಲು ಕೆಲವರು ಹುನ್ನಾರ ಮಾಡಿದ್ದಾರೆ. ಸ್ಪಷ್ಟವಾಗಿ ಕನ್ನಡವನ್ನ ಮಾತನಾಡುತ್ತಾ ಎಲ್ಲಾರನ್ನು ಮಾತಿನಲ್ಲೇ ಸೆಳೆಯುವ ಅನುಶ್ರೀ ಅವರ ನಿರೂಪಣೆಗೂ ತೀವ್ರ ವಿರೋಧ ಕೇಳಿ ಬರುತ್ತಿದೆ. ಸಾಕಷ್ಟು ಬಾರೀ ವಿರೋಧ ಕೇಳಿ ಬಂದಿದ್ದು, ಆಂಕರಿಂಗ್ ಅನ್ನು ವಿರೋಧಿಸಿದವರಿಗೆ ಕರಾವಳಿ ಚೆಲುವೆ ಆಂಕರ್ ಅನುಶ್ರೀ ತಕ್ಕ ತಿರುಗೇಟು ನೀಡಿದ್ದಾರೆ.
ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್ ನಲ್ಲಿ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಸ್ಪರ್ಧಿಗಳಾದ ಜಗ್ಗಪ್ಪ, ಸೂರಜ್, ನಯನಾ ಹಾಗೂ ಅನುಶ್ರೀ ಅವರು ಕುಳಿತು ಮಾತನಾಡುವಾಗ, ಆಂಕರಿಂಗ್ ಮಾಡುವುದನ್ನು ವಿರೋಧಿಸಿದವರಿಗೆ ನಟಿ ಮತ್ತು ಆಂಕರ್ ಅನುಶ್ರೀ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ಜಗ್ಗಪ್ಪ, ಸೂರಜ್, ನಯನಾ ಅವರ ಜೊತೆಗೆ ಅನುಶ್ರೀ ಅವರು ಆಂಕರಿಂಗ್ ಮಾಡುವುದಕ್ಕೆ ವಿರೋಧ ಮಾಡಿದವರ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ಆಂಕರ್ ಅನುಶ್ರೀ ಅವರು ಮಾತನಾಡಿ, 'ನಾನು ಎಲ್ಲಿಯೇ ನಿರೂಪಣೆಗೆ ಹೋದರೂ ಇವಳು ಬಿಟ್ಟರೆ ಬೇರೆ ಯಾರು ಇಲ್ಲವೇ ನಿಮಗೆ. ಇವಳನ್ನು ಬಿಟ್ಟರೆ ಬೇರೆ ಆಂಕರ್ ಸಿಗುವುದಿಲ್ಲವೇ ಎಂದು ಕೇಳುತ್ತಾರೆ. ಅಂಥವರಿಗೆ ನಾನು ಹೇಳೋದಿಷ್ಟೇ.. ನಾನು ಕೆಲಸ ಮಾಡ್ತೀನಿ ಗುರು. ಅವರವರ ಕೆಲಸವನ್ನು ಪಡೆಯುವುದು ಅವರ ಟ್ಯಾಲೆಂಟಿನ ಮೇಲೆ. ಅದನ್ನು ಮೊದಲು ನೀವು ತಿಳಿದುಕೊಳ್ಳಿ. ಈಗ ನಯನಾ ಇದಾಳೆ, ನಯನ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಎಂದರೆ ಅದು ನಯನಾ ಟ್ಯಾಲೆಂಟ್. ಇದೀಗ ನಾನು ನಯನಾ ಅಥವಾ ಬೆರೆಯವರ ಬಗ್ಗೆ ಮಾತನಾಡುತ್ತಿಲ್ಲ. ನನ್ನ ಬಗ್ಗೆ ಬಂದ ಕಾಮೆಂಟ್‌ಗಳ ಬಗ್ಗೆ ನಾನು ಇದೀಗ ಸ್ಪಷ್ಟನೆಯನ್ನು ಕೊಡುತ್ತಿದ್ದೇನೆ ಎಂದು ಅನುಶ್ರೀ ಅವರು ತಿರುಗೇಟು ನೀಡಿದ್ದಾರೆ.
ನಿಮಗೆ ಇವಳನ್ನು ಬಿಟ್ರೇ ಬೇರೆ ಆಂಕರ್ ಇಲ್ವಾ ಎಂದು ಕೇಳುವವರು ಇಲ್ಲಿ ಕೇಳಿ. ನನಗೆ ಟಾಕ್ ಬ್ಯಾಕ್ ಕೊಡಬೇಡಿ.. ನನಗೆ ಸ್ಕ್ರಿಪ್ಟ್ ಕೊಡಬೇಡಿ ಆದರೂ ನಾನು ಆಂಕರಿಂಗ್ ಮಾಡುತ್ತೇನೆ. ಹತ್ತು ಗಂಟೆ ಒಂದೇ ವೇದಿಕೆಯಲ್ಲಿ ವೇದಿಕೆ ಮೇಲೆ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ. ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ, ಯಾರ ಮುಂದೆಯೂ ಮಾತನಾಡಿಲ್ಲ. ಇಲ್ಲಿ ನಾವೆಲ್ಲರೂ ಒಂದು ಫ್ಯಾಮಿಲಿ ತರಹ ಇರುವುದರಿಂದ ನಾನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆ ಎಂದು ಆಂಕರಿಂಗ್ ಮಾಡುವುದನ್ನ ವಿರೋಧಿಸಿದರಿಗೆ ನಟಿ ಆಂಕರ್ ಅನುಶ್ರೀ ಅವರು ತಿರುಗೇಟು ನೀಡಿದ್ದಾರೆ.
ನನಗೆ ಟಾಕ್ ಬ್ಯಾಕ್ ಬೇಡ, ಸ್ಕ್ರಿಪ್ಟ್ ಬೇಡ, ಯಾರು ಬರ್ತಾರೆ, ಏನು ಎಂದು ಒಂಚೂರೂ ಮಾಹಿತಿ ಕೊಡಬೇಕು. ಆದರೂ ಆಂತಹ ಕಾರ್ಯಕ್ರಮವನ್ನು 10 ಗಂಟೆಗಳ ಕಾಲ ನಿರರ್ಗಳವಾಗಿ ನಡೆಸಿಕೊಡ್ತೀನಿ. ಇದು ಗೊತ್ತಿರುವುದರಿಂದ ನಮ್ಮ ಚಾನೆಲ್‌ನವರು, ಕೆಲವೊಂದು ವ್ಯಕ್ತಿ ಅಥವಾ ಸಂಸ್ಥೆಗಳು ಏ.. ಅವಳು ಮಾಡ್ತಾಳೆ ಬಿಡೋ ಎಂದು ಹೇಳಿ ನನ್ನನ್ನು ಕರೆದು ವೇದಿಕೆ ಮೇಲೆ ನಿರೂಪಣೆಗೆ ಬಿಡುತ್ತಾರೆ.
ಏನಿಲ್ಲ ಎಂದರೂ ಮಾಡುತ್ತಾಳೆ, ಕಾರ್ಯಕ್ರಮಕ್ಕೆ ಹಾಕೊಳ್ಳಿ ಪರವಾಗಿಲ್ಲ ಎಂದು ಹೇಳುತ್ತಾರೆ. ಇದು ಹೆಂಗೆ ಗೊತ್ತಾ ಮನೆಯಲ್ಲಿ ಕುಳಿತುಕೊಂಡು ಕಾರ್ಯಕ್ರಮವನ್ನು ನೋಡುವಂತಹ ಜನಕ್ಕೆ ಗೊತ್ತಿದೆ. ಅವರು ತುಂಬಾ ಕಾರ್ಯಕ್ರಮವನ್ನು ತುಂಬಾ ಎಂಜಾಯ್ ಮಾಡುತ್ತಿರುತ್ತಾರೆ. ಇನ್ನೂ ಕೆಲವರು ಈ ಮೊಬೈಲ್‌ನಲ್ಲಿ ಮೆಸೇಜ್ ಮಾಡುವಂತಹವರಿಗೆ ಗೊತ್ತಿರೊಲ್ಲ. ಏಕೆಂದರೆ ಅವರಿಗೆ ಮಾಡೋದಕ್ಕೆ ಕೆಲಸ ಇರೋದಿಲ್ವಲ್ಲ, ಅದಕ್ಕೆ ಹೀಗೆ ಕಾಮೆಂಟ್‌ಗಳನ್ನು ಮಾಡುತ್ತಾರೆ ಎಂದು ಅನುಶ್ರೀ ಅವರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications