Chaitra Vasudevan: ಚೈತ್ರಾ ವಾಸುದೇವನ್ ಮದುವೆಯಲ್ಲಿ ಧರಿಸಿದ್ದ ವಜ್ರದ ಬಗ್ಗೆ ಬಿಗ್ ರಿವೀಲ್!
Chaitra Vasudevan: ಕನ್ನಡ ಖ್ಯಾತ ನಿರೂಪಕಿ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಈಚೆಗೆ ಅವರು ಮದುವೆಯಾಗಿದ್ದು ಅವರು ಮದುವೆಯಲ್ಲಿ ಧರಿಸಿದ್ದ ವಜ್ರದ ಒಡವೆಗಳು ಹಾಗೂ ಸೀರೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆಗಳು ನಡೆದಿವೆ. ಅಷ್ಟೇ ವಜ್ರದ ಒಡವೆಗಳು ಹಾಗೂ ಸೀರೆಯ ಬಗ್ಗೆ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಈ ಬಗ್ಗೆ ಇದೀಗ ಚೈತ್ರಾ ವಾಸುದೇವನ್ ಅವರೇ ಮಾತನಾಡಿದ್ದಾರೆ. ಹೌದು ಮದುವೆಯಲ್ಲಿ ಧರಿಸಿದ್ದ ಚಿನ್ನಾಭರಣ ಹಾಗೂ ಸೀರೆಯ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿಗಳನ್ನು ಚೈತ್ರಾ ಅವರು ಹಂಚಿಕೊಂಡಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ಸೆಲೆಬ್ರಿಟಿಗಳ ಬಗ್ಗೆ ಯಾವಾಗಲೂ ಸಹ ಚರ್ಚೆಯಾಗುತ್ತಲ್ಲೇ ಇರುತ್ತದೆ. ಅದರಲ್ಲೂ ಮದುವೆ ಸೇರಿದಂತೆ ಯಾವುದಾದರೂ ಸಮಾರಂಭಗಳಲ್ಲಿ ಅವರು ಧರಿಸುವ ಬಟ್ಟೆ, ಸೀರೆ ಹಾಗೂ ಒಡವೆಗಳಿಗೆ ಸಂಬಂಧಿಸಿದಂತೆ ಹೆಚ್ಚೇ ಚರ್ಚೆಗಳು ನಡೆಯುತ್ತವೆ. ಇದೀಗ ಈಚೆಗೆ ಮದುವೆ ಆಗಿರುವ ಚೈತ್ರಾ ಅವರ ಕಾಸ್ಟ್ಯೂಮ್ಸ್ ಬಗ್ಗೆನೂ ಜನ ಸಿಕ್ಕಾಪಟ್ಟೆ ಕುತೂಹಲವಾಗಿದ್ದಾರೆ. ಜನ ಹಾಗೂ ಅಭಿಮಾನಿಗಳ ಪ್ರಶ್ನೆಗೆ ಚೈತ್ರಾ ಅವರು ಉತ್ತರ ಕೊಟ್ಟಿದ್ದಾರೆ. ಕಸ್ಟ್ಯೂಮ್ಸ್ ಡಿಸೈನ್ಸ್ ಬಗ್ಗೆ ಚೈತ್ರಾ ಅವರು ಹೇಳಿದ್ದೇನು ಅಂತ ನೋಡೋಣ.

ನಿರೂಪಕಿ ಚೈತ್ರಾ ವಾಸುದೇವನ್ ಅವರ ಮದುವೆಗೆ ಕಂಪ್ಲೀಟ್ ಆಗಿ ಡೈಮೆಂಡ್‌ನಿಂದ ಮಾಡಲಾಗಿರುವ ವಜ್ರಾಭರಣಗಳಿಂದ ಮಿಂಚುತ್ತಿದ್ದರು. ಚೈತ್ರಾ ವಾಸುದೇವನ್ ತಮ್ಮ ಮದುವೆಯಲ್ಲಿ ಧರಿಸಿದ್ದ ಒಡವೆಗಳು ಹಾಗೂ ಸೀರೆಗೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಮಾಡಿದ್ದು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮದುವೆಗೆ ಮುಂಚಿತವಾಗಿ ಅವರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಮಾಡಿದ್ದ ವಿಡಿಯೋ ಇದು.
ಚೈತ್ರಾ ವಾಸುದೇವನ್ ಅವರು ಮಾರ್ಚ್ 2ಕ್ಕೆ ಉದ್ಯಮಿ ಜಗದೀಪ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಮದುವೆ ಆಗಿತ್ತು. ಈ ವಿಡಿಯೋದಲ್ಲಿ ಅವರು ಯಾವ ರೀತಿಯ ಜ್ಯುವೆಲ್ಲರಿಸ್ ಬಳಸಿದ್ದೇನೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ನೋಡಿ ಜನ ನಿಜಕ್ಕೂ ಶಾಕ್ ಆಗಿದ್ದಾರೆ. ವೆಡ್ಡಿಂಗ್ ಜ್ಯೂವೆಲ್ಲರಿ ಮೇಕಿಂಗ್ ಎಕ್ಸ್‌ಪೀರಿಯನ್ಸ್ ಬಗ್ಗೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಚೈತ್ರಾ ವಾಸುದೇವನ್ ಅವರು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಏನೆಲ್ಲಾ ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು ಅಂತ ವಿವರಿಸಿದ್ದಾರೆ.
ಚೈತ್ರಾ ಅವರು ಅವರ ಮದುವೆಗೆ ರೋಸ್ ಕಟ್ ಡೈಮೆಂಡ್ ಹಾಗೂ ನಾರ್ಮಲ್ ಡೈಮೆಂಡ್‌ಗಳನ್ನ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನು ನೋಡಿರುವ ಜನ ವಾರೆವ್ಹಾ ಅಂತಿದ್ದಾರೆ. ಚೈತ್ರಾ ಅವರು ಅವರ ಮದುವೆ ಸೀರೆಗಳಿಗೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಮದುವೆಯಲ್ಲಿ ಧರಿಸಿದ್ದ ಒಡವೆಗಳು ಆರ್ಟಿಫಿಶಿಯಲ್ ಆಗಿರಬಹುದು ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಬಗ್ಗೆ ಮಾತನಾಡಿರುವ ಅವರು ಅದೆಲ್ಲವೂ ಪಕ್ಕಾ ಡೈಮೆಂಡ್ ಅಂತ ಚೈತ್ರಾ ರಿವೀಲ್ ಮಾಡಿದ್ದಾರೆ.
2 ಲಕ್ಷ ದುಬಾರಿ ಸೀರೆ ಖರೀದಿ ಮಾಡಿರುವುದಾಗಿಯೂ ಹಾಗೂ ಆ ಸೀರೆಗೆ ಮ್ಯಾಚಿಂಗ್ ಕಸ್ಟಮೈಸ್ಡ್ ರೋಸ್ ಕಟ್ ಡೈಮಂಡ್ಸ್ & ಕೋರಲ್ ಸೆಟ್‌ಗಳನ್ನು ಧರಿಸಿದ್ದಾಗಿ ಅವರು ಹೇಳೀದ್ದಾರೆ. ಡೈಮೆಂಡ್ ಎಂದರೆನೇ ದುಬಾರಿ ಇನ್ನು ಕಸ್ಟಮೈಸ್ಡ್ ರೋಸ್ ಕಟ್ ಡೈಮಂಡ್ಸ್ ಸಿಕ್ಕಾಪಟ್ಟೆ ರೇಟ್ ಇದೆ. ಇಷ್ಟೊಂದು ಡೈಮೆಂಡ್ಸ್‌ಗೆ ಎಷ್ಟು ಲಕ್ಷ... ಲಕ್ಷ ಖರ್ಚಾಗಿರಬಹುದು ಅಂತ ನೆಟ್ಟಿಗರು ಲೆಕ್ಕಹಾಕುತ್ತಿದ್ದಾರೆ. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.












Click it and Unblock the Notifications