Get Updates
Get notified of breaking news, exclusive insights, and must-see stories!

Cannes Film Festival: ಇತಿಹಾಸ ಸೃಷ್ಟಿಸಿದ ಅನುಸೂಯಾ: ಕನ್ನಡಗಿನ ಮುಕುಟಕ್ಕೂ ಗರಿ

77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತಿಯರು ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರತಿಷ್ಠಿತಿ ಚಿತ್ರೋತ್ಸವದಲ್ಲಿ ಭಾರತೀಯ ನಟಿ ಅನುಸೂಯಾ ಸೆನ್‌ಗುಪ್ತಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೇಮ್‌ಲೆಸ್‌ ಚಿತ್ರದಲ್ಲಿನ ನಟನೆಗಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ. ಇದೇ ಚಿತ್ರೋತ್ಸವದಲ್ಲಿ ಕನ್ನಡಿಗ ನಿರ್ದೇಶಕ ಚಂದ್ರಕಾಂತ್ ನಾಯಕ ಅವರ ಕಿರು ಚಿತ್ರಕ್ಕೂ ಪ್ರಶಸ್ತಿ ಸಂದಿದೆ.

ಬಲ್ಗೇರಿಯಾದ ಚಲನಚಿತ್ರ ನಿರ್ಮಾಪಕ ಕಾನ್‌ಸ್ಟಾಂಟಿನ್ ಬೊಜಾನೋವ್ ನಿರ್ದೇಶಿಸಿದ 'ಶೇಮ್‌ಲೆಸ್' ಚಿತ್ರದಲ್ಲಿ ಅನಸೂಯಾ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದರು. ಅವರಲ್ಲಿನ ನೈಜ ಅಭಿನಯ ಎಲ್ಲರನ್ನೂ ಮಂತ್ರ ಮುಗ್ಧ ಗೊಳಿಸಿತ್ತು. ಈ ಚಿತ್ರದಲ್ಲಿ ಅನಸೂಯಾ ಪೊಲೀಸ್ ಅಧಿಕಾರಿಯನ್ನು ಇರಿದ ನಂತರ ದೆಹಲಿ ವೇಶ್ಯಾಗೃಹದಿಂದ ತಪ್ಪಿಸಿಕೊಂಡರು.

Anasuya Sengupta First Indian Actress to Win Best Actress at Cannes

ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಕೋಲ್ಕತ್ತಾದ ಅನಸೂಯಾ ಸೇನ್‌ಗುಪ್ತಾ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಶಸ್ತಿಯನ್ನು ಪಡೆದ ಬಳಿಕ ಈ ಪ್ರಶಸ್ತಿಯನ್ನು ಅವರು ಸಲಿಂಗಕಾಮಿ ಸಮುದಾಯ ಮತ್ತು ಪ್ರಪಂಚದಾದ್ಯಂತ ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಶೌರ್ಯಕ್ಕೆ ಅರ್ಪಿಸಿದ್ದಾರೆ. ಎಲ್ಲರಿಗೂ ಸಮಾನತೆಗಾಗಿ ಹೋರಾಡಲು ನೀವು ಸಲಿಂಗಕಾಮಿಯಾಗಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಕನ್ನಡಿಗನಿಗೂ ಗರಿ

ಅನುಸೂಯಾ ಅವರ ಶೇಮ್‌ಲೆಸ್‌ ಚಿತ್ರವನ್ನು ಹೊರತು ಪಡಿಸಿ, ಸನ್‌ಫ್ಲವರ್‌ ವೇರ್‌ ದಿ ಫಸ್ಟ್‌ ವನ್ಸ್ ಟು ನೋ (Sunflowers Were the First Ones to Know) ಕನ್ನಡ ಶಾರ್ಟ್‌ ಫಿಲ್ಸ್‌ ಹಾಗೂ ಬನ್ನಿಹುಡ್' ಕೂಡ 'ಲಾ ಸಿನೆಫ್ ಸೆಲೆಕ್ಷನ್' ನಲ್ಲಿ ಮೊದಲ ಮತ್ತು ಮೂರನೇ ಸ್ಥಾನವನ್ನು ಗೆದ್ದಿರುವುದು ಹೆಮ್ಮೆಯ ವಿಷಯ. ಕನ್ನಡ ಕಿರು ಚಿತ್ರವನ್ನು ಚಿದಾನಂದ್ ಎಸ್ ನಾಯಕ ನಿರ್ದೇಶಿಸಿದ್ದಾರೆ.

Anasuya Sengupta First Indian Actress to Win Best Actress at Cannes

ಸಂಭ್ರಮ

ಉತ್ತಮ ನಟಿ ಪ್ರಶಸ್ತಿ ಪಡೆದ ಅನುಸೂಯಾ ಅವರಿಗೆ ತಿಲೋತ್ತಮ ಶೋಮ್ ಸಾಮಾಜಿಕ ತಾಣದಲ್ಲಿ ಅಭಿನಂದಿಸಿದ್ದಾರೆ. ಅನುಸಯಾ ಅವರ ಗೆಲುವನ್ನು ಸಂಭ್ರಮಿಸಿರುವ ನಟಿ ತಿಲ್ಲೋಟಮಾ ಶೋಮ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ, 'ಬ್ಯೂಟಿಫುಲ್! ಇತಿಹಾಸ ನಿರ್ಮಾಣವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಯಾರು ಅನಸೂಯಾ?

ಕೋಲ್ಕತ್ತಾ ಮೂಲದ ಅನಸೂಯಾ, ಸದ್ಯ ಗೋವಾದಲ್ಲಿ ನೆಲೆಸಿದ್ದಾರೆ. ಇವರು ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿದ್ದಾರೆ. ವಾಣಿಜ್ಯ ನಗರಿಯಲ್ಲಿ ಪ್ರೊಡಕ್ಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. 'ಮಸಬಾ ಮಸಬಾ' ನೆಟ್‌ಫ್ಲಿಕ್ಸ್‌ನಲ್ಲಿ ಬರುವ ಖ್ಯಾತ ಶೋದ ಸೆಟ್‌ನ್ನು ಸಹ ಇವರೇ ವಿನ್ಯಾಸಗೊಳಿಸಿದ್ದಾರೆ. 'ಶೇಮ್‌ಲೆಸ್' ಚಿತ್ರ ಕೇನ್ಸ್‌ ಫೆಸ್ಟಿವಲ್‌ನಲ್ಲಿ ನಾಮ ನಿರ್ದೇಶನವಾದಗ ನಾನು ಖುಷಿ ಪಟ್ಟಿದ್ದಾಗಿ ಈ ಹಿಂದೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಬಾರಿ ಕೇನ್ಸ್‌ ಚಿತ್ರೋತ್ಸವ ಭಾರತೀಯರ ಪಾಲಿಗೆ ವಿಶೇವಾಗಿದೆ. ಈ ಚಿತ್ರೋತ್ಸವದಲ್ಲಿ ಶ್ಯಾಮ್ ಬೆನಗಲ್ ಅವರ 'ಮಂಥನ್' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಇನ್ನು ಮೀರತ್‌ನ ಮಾನ್ಸಿ ಮಹೇಶ್ವರಿ ಮತ್ತು ಎಫ್‌ಟಿಐಐ ವಿದ್ಯಾರ್ಥಿಗಳ ಚಿತ್ರಗಳು ಸಹ ಇದಕ್ಕೂ ಮೊದಲು ಕೇನ್ಸ್ ಪ್ರಶಸ್ತಿ ಪಡೆದಿವೆ.

'ಶೇಮ್ಲೆಸ್' ಚಿತ್ರದ ಕಥೆ ಏನು?

ಪೊಲೀಸ್ ಅಧಿಕಾರಿಯೊಬ್ಬರು ಹತ್ಯೆಯಾದ ನಂತರ ದೆಹಲಿಯ ವೇಶ್ಯಾಗೃಹದಿಂದ ತಪ್ಪಿಸಿಕೊಳ್ಳುವ ರೇಣುಕಾ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಕಾನ್ಸ್ಟಾಂಟಿನ್ ಬೊಜಾನೋವ್ ಅವರು 'ಶೇಮ್ಲೆಸ್' ಚಿತ್ರದ ಬರಹಗಾರ ಮತ್ತು ನಿರ್ದೇಶಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+