Amruthadhare serial: ಭೂಮಿಕಾಗೆ ಅವಳಿ ಮಕ್ಕಳು; ಹೆಣ್ಣು ಮಗು ಕಿಡ್ನಾಪ್..‌ ಇನ್ನೊಂದು ಮಗು

ಗೌತಮ್ ಎಂಬ ಉದ್ಯಮಿ ತನ್ನಿಗಿಂತ ಹತ್ತು ವರ್ಷ ಚಿಕ್ಕವಯಸ್ಸಿನ ಭೂಮಿಕಾ ಎಂಬ ಮಧ್ಯಮ ವರ್ಗದ ವಿದ್ಯಾವಂತೆಯೊಂದಿಗೆ ವಿವಾಹವಾಗುತ್ತಾನೆ. ಈ ಮದುವೆ ಪ್ರಾರಂಭದಲ್ಲಿ ಸುಲಭವಾಗಿರದೆ, ಇಬ್ಬರೂ ತಮ್ಮದೇ ಆದ ಕಾರಣಗಳಿಂದ ಈ ಸಂಬಂಧವನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಸಮಯ ಕಳೆದಂತೆ ಅವರ ನಡುವೆ ನಿಜವಾದ ಸ್ನೇಹ, ಗೌರವ ಮತ್ತು ಪ್ರೀತಿ ಬೆಳೆಯುತ್ತದೆ. ಗೌತಮ್ ಮತ್ತು ಭೂಮಿಕಾ ಹಲವು ಸವಾಲುಗಳನ್ನು ಎದುರಿಸುತ್ತಾರೆ.

ಗೌತಮ್ ಮತ್ತು ಭೂಮಿಕಾ ಕುಟುಂಬದ ಸದಸ್ಯರ ಕುತಂತ್ರಗಳು, ಆಸ್ತಿ ವಿಚಾರದಲ್ಲಿ ಉಂಟಾಗುವ ಸಂಘರ್ಷಗಳು, ಭೂಮಿಕಾಗೆ ಗರ್ಭಧಾರಣೆಕ್ಕೆ ಸಂಚು ಹಾಕಿದ್ರು. ಇದೀಗ ಎಲ್ಲಾ ಕಷ್ಟಗಳನ್ನ ಎದುರಿಸಿ ಭೂಮಿಕಾಗೆ ಹೆಣ್ಣು ಮಗು ಜನನವಾಗುತ್ತದೆ. ಮಗಳು ಹುಟ್ಟಿದ ಖುಷಿಯಲ್ಲಿ ಗೌತಮ್‌ ಖುಷಿಯಾಗಿದ್ರು. ಆದರೆ, 'ಅಮೃತಧಾರೆ' ಧಾರಾವಾಹಿಯಲ್ಲಿ ಒಂದು ದೊಡ್ಡ ತಿರುವು ಬಂದಿದೆ. ಈ ತಿರುವನ್ನು ಯಾರೂ ಊಹಿಸಿರಲಿಕ್ಕಿಲ್ಲ. ಭೂಮಿಕಾಗೆ ಅವಳಿ ಮಕ್ಕಳ ಜನನವಾಗಿದೆ.

Amruthadhare Serial twins Babies to bhoomika in amruthadhare

ಇತ್ತೀಚಿನ ಘಟನೆಯಲ್ಲಿ ಭೂಮಿಕಾಗೆ ಅವಳಿ ಮಕ್ಕಳು ಜನಿಸುತ್ತಾರೆ. ಆದರೆ, ಆಸ್ತಿಗಾಗಿ ಜಯದೇವ ಮತ್ತು ಶಕುಂತಲಾ ಹೆಣ್ಣು ಮಗುವನ್ನು ಅಪಹರಿಸಿದ್ದಾರೆ. ಡಾಕ್ಟರ್‌ ಕರ್ಣ ಹಾಗೂ ಪಾರು ಮಗುವನ್ನು ರಕ್ಷಿಸುತ್ತಾರೆ, ಆದರೆ ಹೆಣ್ಣು ಮಗು ಕಿಡ್ನ್ಯಾಪ್ ಮಾಡಿದ್ದಾರೆ. ಹುಟ್ಟಿದ ಕೆಲ ಕ್ಷಣದಲ್ಲಿ ಮಗು ಕಾಣೆಯಾಗಿರುವುದನ್ನ ಕಂಡ ಗೌತಮ್‌ ಹಾಗೂ ಸ್ನೇಹಿತ ಆನಂದ್‌ ಮಳೆಯಲ್ಲೇ ಮಗುವನ್ನು ಹುಡುಕಾಡುತ್ತಿದ್ದಾರೆ. ಆದರೆ, ಭೂಮಿಕಾ ಹೊಟ್ಟೆಯೊಳಗೆ ಇನ್ನೊಂದು ಮಗು ಇರುವುದು ತಿಳಿದು ಗೌತಮ್‌ ಆಸ್ಪತ್ರೆಗೆ ಬರುತ್ತಾರೆ. ಒಂದು ಕಡೆ ಹೆಣ್ಣು ಮಗು ಕಾಣೆಯಾಗಿದೆ. ಇತ್ತ ವೈದ್ಯರು ಭೂಮಿಕಾಗೆ ಇನ್ನೊಂದು ಮಗು ಇರುವುದನ್ನು ತಿಳಿಸುತ್ತಾರೆ, ಇದರಿಂದ ಕಥೆಗೆ ಹೊಸ ತಿರುವು ಪಡೆದುಕೊಂಡಿದೆ.

ಇತ್ತ ಭೂಮಿಕಾಗೆ ಮತ್ತೊಂದು ಮಗುವಿನ ಹೆರಿಗೆ ನೋವು ಶುರುವಾಗಿದೆ. ಭೂಮಿಕಾಗೆ ಮತ್ತೊಂದು ಮಗು ಹುಟ್ಟಬಾರದು ಎಂದು ಜಯದೇವ್ ಹಾಗೂ ಶಕುಂತಲಾ ಪವರ್‌ ತೆಗೆದಿದ್ದಾರೆ. ಭೂಮಿಕಾ ಹಾಗೂ ಗೌತಮ್ ದಂಪತಿ ಹೆಣ್ಣು ಮಗುವನ್ನ ಈಗಾಗಲೇ ಹೆಣ್ಣು ಮಗು ಹುಟ್ಟಿದರೆ ಮಗುವಿಗೆ ಆಸ್ತಿ ಹೋಗುತ್ತದೆ ಎಂದು ಮಗುವನ್ನ ಕಿಡ್ನ್ಯಾಪ್ ಮಾಡಿದ್ದಾರೆ. ಒಂದು ಕಡೆ ಮಗು ಕಳೆದು ಹೋಯಿತು ಎಂದು ಟೆನ್ಶನ್​ನಲ್ಲಿ ಇದ್ದ ಗೌತಮ್​ಗೆ ಮತ್ತೊಂದು ಖುಷಿ ವಿಚಾರ ಅಂದ್ರೆ ಗಂಡು ಮಗು ಜನಸಿರುವುದು. ಒಂದು ಕಡೆ ಅಳಬೇಕೋ ಅಥವಾ ಖುಷಿಪಡಬೇಕೋ ಎಂಬುದು ಗೌತಮ್‌ಗೆ ಗೊತ್ತೇ ಆಗಿಲ್ಲ. ಭೂಮಿಕಾಗಿ ಅವಳಿ ಮಕ್ಕಳಿದ್ದಾರೆ ಎಂಬ ವಿಚಾರವನ್ನು ತಿಳಿದು ಜೆಡಿ ಹಾಗೂ ಶಂಕುತಲಾಗೆ ಏನು ಮಾಡಬೇಕು ಎಂಬುದೇ ತಿಳಿದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+