ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ವಿಲನ್: ಜೈದೇವ್ ನಾಪತ್ತೆ, ಮಧುರಾ ಬಗ್ಗೆ ಸುಳಿವಿಲ್ಲ; ಭೂಮಿಕಾ–ಜೀವಾಗೆ ಸಂಕಷ್ಟ!
Amruthadhare Serial: ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಕೇಡಿ ಜೈದೇವ್‌ನ ಕೊಲೆಯ ನಂತರ ಜೈದೇವ್ ಕಾಣೆ ಆಗಿರುವ ಬಗ್ಗೆ ಶಕುಂತಲಾ ದೇವಿಗೆ ಅನುಮಾನ ಶುರುವಾಗಿದೆ. ದಿನ ಸಂಜೆ ಜೈದೇವ್ ಇರುವ ಮನೆಯ ಬಳಿ ಬಂದು ಶಕುಂತಲಾ ಕಾಯುತ್ತಿದ್ದು, ಜೈದೇವ್ ಯಾಕೆ ಇನ್ನೂ ಮನೆಗೆ ಬಂದಿಲ್ಲ ಅಂತ ಸೆಕ್ಯೂರಿಟಿ ಬಳಿ ವಿಚಾರಿಸಿದ್ದಾಳೆ.
ಇದೇ ಸಮಯದಲ್ಲಿ ಜೈದೇವ್ ಕಾಣೆಯಾಗಿದ್ದಾರೆ ಎಂದು ಕಂಪ್ಲೇಂಟ್ ಬಂದಿದೆ ಎಂದು ಪೊಲೀಸ್ ಠಾಣೆಯಿಂದ ದೂರು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಜೀವಾ ಹಾಗೂ ಭೂಮಿಕಾಗೆ ಸಂಕಷ್ಟವನ್ನು ತಂದೊಡ್ಡಿದೆ. ಜೈದೇವ್ ಕೊನೆಯ ಫೋನ್ ಕಾಲ್ / ದೂರವಾಣಿ ಸಂಭಾಷಣೆ ಜೀವಾ ಅವರೊಂದಿಗೆ ಆಗಿದೆ ಎನ್ನುವ ವಿಚಾರವನ್ನು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಈ ವಿಚಾರವಾಗಿ ಪೊಲೀಸರು ಜೀವಾಗೆ ಕರೆ ಮಾಡಿದ್ದು, ಭೂಮಿಕಾ ಹಾಗೂ ಜೀವಾಗೆ ಸಂಕಷ್ಟ ಎದುರಾಗಿದೆ.

"ಮಧುರನಾ ಹುಡುಕಿ ಹೊರಟಿರೋ ಮಲ್ಲಿಗೇ ಭೂಮಿ ತಡೆಯಾಗ್ತಾಳಾ?' ಎನ್ನುವ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನ ಇತ್ತೀಚಿನ ಎಪಿಸೋಡ್‌ಗಳು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿವೆ. ಜೈದೇವ್ ಕೊಲೆಯಾದ ನಂತರ ಪೊಲೀಸ್ ಕಾನ್ಸಟೇಬಲ್ ಮಧುರಾ ಸಹ ಕಾಣಿಸುತ್ತಿಲ್ಲ. ಮಲ್ಲಿ ಇದೀಗ ಮಧುರಾನ ಹುಡುಕುವುದರಲ್ಲಿ ಬ್ಯುಸಿಯಾಗಿದ್ದಾಳೆ. ಮಧುರಾ ಬಗ್ಗೆ ವಿಚಾರಿಸಿದ್ರಾ.. ಅಂತ ಇನ್ವೆಸ್ಟಿಗೇಷನ್ ಶುರು ಮಾಡಿದ್ದಾಳೆ.
Amruthadhare Serial: ಮಧುರಾ ಹುಡುಕಾಟದಲ್ಲಿ ಮಲ್ಲಿ
ಈ ಸಮಯದಲ್ಲಿ ಎಂಟ್ರಿ ಕೊಟ್ಟ ಭೂಮಿಕಾ ಏನಾಯ್ತು ಅಂತ ಕೇಳಿದ್ದಾಳೆ. ಇದಕ್ಕೆ ಮಲ್ಲಿ ಅಕ್ಕೋರೆ ಮಧುರಾ ಏನಾದ್ರು ಫೋನ್ ಮಾಡಿದ್ಳಾ. ಅವಳು ಕಾಲ್ ಕನೆಕ್ಟ್ ಆಗ್ತಿಲ್ಲ. ಅವಳ ಕಡೆಯಿಂದಲೂ ಫೋನ್ ಇಲ್ಲ. ಮನೆ ಹತ್ತಿರ ವಿಚಾರಿಸಿದ್ವಿ, ಆಕೆ ಮನೆಯಲ್ಲೂ ಇಲ್ವಂತೆ ಅಂತ ಮಲ್ಲಿ ಹೇಳಿದ್ದಾಳೆ. ನನಗ್ಯಾಕೋ ಭಯವಾಗ್ತಿದೆ ಅಕ್ಕೋರೆ ಒಂದು ಫೋನ್ ಇಲ್ಲ. ಮನೆಯಲ್ಲೂ ಇಲ್ಲ ಎಂದರೆ ಹೇಗೆ. ಜೈದೇವ್ ಬಳಿ ಏನಾದ್ರು ಸಿಕ್ಕಾಕಿಕೊಂಡಿರಬಹುದಾ ಅಂತ ಮಲ್ಲಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಅದು ಹೇಗೆ ಸಾಧ್ಯ ಮಲ್ಲಿ ಜೈದೇವ್ ಅವರ ಮನೆಯಿಂದ ಬಂದ ಮೇಲೆ ಆಕೆ ಜೀವಾಗೆ ಸಿಕ್ಕಿದ್ದಳು, ನನ್ನ ಜೊತೆನೂ ಮಾಡಾಡಿದ್ದಳು ಅಲ್ವಾ ಅಂತ ಭೂಮಿಕಾ ಪ್ರಶ್ನೆ ಮಾಡಿದ್ದಾಳೆ.
ಮುಂದುವರಿದು ನೀನು ಯಾಕೆ ಹಿಂಗೆಲ್ಲ ಯೋಚನೆ ಮಾಡ್ತಿದ್ದೀಯ ಮಲ್ಲಿ.. ಇಷ್ಟು ದಿನ ಒತ್ತಡದಲ್ಲಿದ್ದಳು ಅಲ್ವಾ ಊರಿಗೆ ಹೋಗಿರಬೇಕು ಅಂತ ಭೂಮಿಕಾ ಹೇಳಿದ್ದಾಳೆ. ಅಲ್ಲದೆ ಊರಿಗೆ ಹೋಗಿರ ಬೇಕು ಅಲ್ಲಿ ನೆಟ್ ವರ್ಕ್ ಸಮಸ್ಯೆ ಆಗಿರಬೇಕು ಅಂತ ಭೂಮಿಕಾ ಹೇಳಿದ್ದಾಳೆ. ಮಧು ಸೇಫ್ ಆಗಿದ್ದರೆ ಸಾಕು ಅಂತ ಮಲ್ಲಿ ಹೇಳಿದ್ದಾಳೆ.
Amruthadhare Serial: ಶಕುಂತಲಾ ಇನ್ವೆಸ್ಟಿಗೇಷನ್!
ಇನ್ನು ಮತ್ತೊಂದು ಕಡೆ ಜೈದೇವ್ ಎಲ್ಲಿ ಅಂತ ಶಕುಂತಲಾ ದೇವಿ ಸಹ ಹುಡುಕುವುಕ್ಕೆ ಶುರು ಮಾಡಿದ್ದಾಳೆ. ಜೈದೇವ್ ಮನೆಯ ಸೆಕ್ಯೂರಿಟಿಗೆ ಫೋನ್ ಮಾಡಿರುವ ಶುಕುಂತಲಾ, ಜೈದೇವ್ ಬಂದ್ನಾ, ಫೋನ್ ಏನಾದ್ರು ಮಾಡಿದ್ನಾ ಅಂತ ಕೇಳಿದ್ದಾಳೆ. ಅವನು ಬಂದರೆ ಕೂಡಲೇ ಫೋನ್ ಮಾಡುವುದಕ್ಕೆ ಹೇಳು ಅಂತ ಸೆಕ್ಯೂರಿಟಿಗೆ ಹೇಳಿದ್ದಾಳೆ. ಅಲ್ಲದೆ ಇದೇ ಸಂದರ್ಭದಲ್ಲಿ ಹಲವರಿಗೆ ಫೋನ್ ಮಾಡಿ ಜೈದೇವ್ ಏನಾದ್ರು ಅಲ್ಲಿಗೆ ಬಂದಿದ್ನಾ ಅಂತ ವಿಚಾರಿಸಿದ್ದಾಳೆ.
ಯಾರೂ ಜೈದೇವ್‌ನ ನೋಡಿಲ್ಲ ಅನ್ನುತ್ತಿದ್ದಾರೆ ಅವನಿಗೆ ಏನಾದ್ರು ಪ್ರಾಬ್ಲಮ್ ಆಯ್ತಾ. ಪೊಲೀಸ್ ಕಂಪ್ಲೇಂಟ್ ಕೊಡಲಾ, ಕೊಟ್ಟರೆ ನಾನು ಅವನ ಪರವಿದ್ದೇನೆ ಅಂತ ಗೊತ್ತಾಗಿ ಹೋಗುತ್ತೆ ಅಂತ ಶಕುಂತಲಾ ಯೋಚನೆ ಮಾಡಿದ್ದಾಳೆ. ಜೈದೇವ್ ಕೇಸ್‌ನಿಂದ ಭೂಮಿಕಾ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಮಲ್ಲಿ ಈ ಕೇಸ್ ನಲ್ಲಿ ಹೇಗೆ ನಡೆದುಕೊಳ್ಳುತ್ತಾಳೆ ಎನ್ನುವುದು ಈಗ ದೊಡ್ಡ ಕುತೂಹಲವಾಗಿದೆ.


Click it and Unblock the Notifications
