Amruthadhare Serial: ಮುಕ್ತಾಯವಾಗಲಿದೆಯೇ ಕನ್ನಡದ ಪ್ರಮುಖ ಸೀರಿಯಲ್ ಅಮೃತಧಾರೆ, ಹೊಸ ಟ್ವಿಸ್ಟ್‌ಗಳೇ ಕಾರಣ

Amruthadhare Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್ ಮುಕ್ತಾಯವಾಗಲಿದೆಯೇ. ಹೌದು ಹೀಗೊಂದು ಪ್ರಶ್ನೆ ಪ್ರೇಕ್ಷಕರಲ್ಲಿ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಅಮೃತಧಾರೆ ಸೀರಿಯಲ್‌ನ ಎಪಿಸೋಡ್‌ಗಳಲ್ಲಿ ವಿಲನ್‌ಗಳು ಸೋಲು - ನೋವು ಅನುಭವಿಸುತ್ತಿರುವುದು. ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ ಇತ್ತೀಚಿನ ದಿನಗಳಲ್ಲಿ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕೆಡಿ ಜೈದೇವ್ ತಾಯಿ ಶಕುಂತಲಾಳನ್ನು ಮನೆಯಿಂದ ಹೊರ ಹಾಕಿದ್ದಾನೆ. ಇದರ ಬೆನ್ನಲ್ಲೇ ಶಕುಂತಲಾಳ ಬೀದಿಗೆ ಬಿದ್ದಿದ್ದಾಳೆ. ಇನ್ನು ಜೈದೇವ್‌ಗೆ ಬ್ಯುಸಿನೆಸ್‌ನಲ್ಲಿ ದೊಡ್ಡ ನಷ್ಟವಾಗಿದೆ. ಬೆಟ್ಟಿಂಗ್ ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದ ಜೈದೇವ್ ಕೈಸುಟ್ಟುಕೊಂಡಿದ್ದಾನೆ. ಕೋಟ್ಯಾಂತರ ರೂಪಾಯಿ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದ ಜೈದೇವ್‌ಗೆ ಸಂಕಷ್ಟ ಎದುರಾಗಿದೆ.

ಬೆಟ್ಟಿಂಗ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಬಹುದು ಎನ್ನುವ ಲೆಕ್ಕಾಚಾರ ಜೈದೇವ್‌ದು ಆಗಿತ್ತು. ಇದಕ್ಕಾಗಿ ಬಡ್ಡಿಗೆ ಹಣ ಪಡೆದು ಬೆಟ್ಟಿಂಗ್ ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದ ಆದರೆ ಈಗ ಆ ಹಣವೆಲ್ಲವೂ ಹೋಗಿದೆ.

Amruthadhare Serial

ಇತ್ತ ಬಡ್ಡಿಗೆ ನೀಡಿದವರು ಜೈದೇವ್‌ಗೆ ವಾರ್ನಿಂಗ್ ಕೊಡುವುದು ಮುಂದುವರಿದಿದೆ. ಈ ರೀತಿ ಇರುವಾಗಲೇ ಜೈದೇವ್ ತಾಯಿ ಶಕುಂತಲಾಳನ್ನು ಮನೆಯಿಂದ ಹೊರದಬ್ಬಿದ್ದಾನೆ. ಶಕುಂತಲ ಸಹ ಲೇಡಿಸ್ ಕ್ಲಬ್‌ನಲ್ಲಿ ಇಸ್ಪೀಟು ಆಟವಾಡುವಾಗ ಸೋತಿದ್ದು ಬರೋಬ್ಬರಿ 3 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದಾಳೆ.

ಶಕುಂತಲಾ ಇದೀಗ ಕಾಂಚನ ಬೆಲೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಕ್ಲಬ್‌ನಲ್ಲಿ ಇಸ್ಪೀಟು ಆಟವಾಡುವಾಗ ಶಕುಂತಲಾ ಬರೋಬ್ಬರಿ 3 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರು. ಆಗ ಕಾಂಚನ ನೆರವಿಗೆ ಬಂದಿದ್ದು, 3 ಕೋಟಿ ರೂ. ಸಾಲ ಕೊಟ್ಟಿದ್ದಾಳೆ. ಸಾಲ ಕೊಡುವಾಗಲೇ ಕಾಂಚನ ನಾನು ಇದನ್ನು ನನ್ನ ಪತಿಗೆ ತಿಳಿಯದೆ ಕೊಡುತ್ತಿದ್ದೇನೆ. ಬೇಗ ಕೊಡಬೇಕು ಅಂತ ಮೊದಲೇ ಹೇಳಿದ್ದರು. ಆದರೆ ಶಕುಂತಲಾ ಜೈದೇವ್ ಬಳಿ ಚೆಕ್‌ಗೆ ಸಹಿ ಮಾಡಿಕೊಡುವಂತೆ ಕೇಳಿದಾಗ ಒಪ್ಪಿಕೊಂಡಿಲ್ಲ.

ಅಲ್ಲದೆ ನನ್ನ ಮನೆಯಲ್ಲಿ ನನ್ನ ಮುಂದೆಯೇ ಶತ್ರುಗಳನ್ನು ಸಮರ್ಥಿಸಿಕೊಳ್ಳುತ್ತಿಯಾ, ಈ ಮನೆಯಲ್ಲಿ ಶತ್ರುಗಳನ್ನು ಸಮರ್ಥಿಸಿಕೊಳ್ಳುವ ಯಾರಿಗೂ ಅವಕಾಶ ಇಲ್ಲ ಎಂದು ಜೈದೇವ್ ಹೇಳಿದ್ದಾನೆ. ಮನೆಯಿಂದ ಶಕುಂತಲಾಳನ್ನು ಹೊರದಬ್ಬಿದ್ದಾನೆ. ಅದೇ ಸಮಯಕ್ಕೆ ಬಂದಿರುವ ಕಾಂಚನ, ಶಕುಂತಲಾಳ ಬಳಿ ಹಣ ಕೇಳಿದ್ದಾಳೆ. ಅದಕ್ಕೆ ಶಕುಂತಲ ಟೈಮ್ ಕೇಳಿದ್ದು, ಕಾಂಚನ ಗರಂ ಆಗಿರುವಂತೆ ತೋರಿಸಲಾಗಿದೆ. ನಾನು ಹೇಳಿದ್ದೆ ತಾನೆ ನನ್ನ ದುಡ್ಡು ನನಗೆ ಕೊಟ್ಟು ಬಿಡು ಅಂತ ಕಾಂಚನ ಹೇಳಿದ್ದಾಳೆ.

ಈ ಮಾತುಕತೆ ನಡೆಯುವಾಗಲೇ ಕಾಂಚನ - ಶಾಕುಂತಲಾಳಿಗೆ ಕಪಾಳಮೋಕ್ಷ ಮಾಡಿರುವುದನ್ನು ತೋರಿಸಲಾಗಿದೆ. ನನ್ನ ಬಳಿ ಇಷ್ಟು ಹಣವಿಲ್ಲ ಅಂತ ಶಾಕುಂತಲಾ ಹೇಳಿದ್ದಾಳೆ. ಇದಕ್ಕೆ ಕಾಂಚನ ಯಾಕೆ ಕ್ಲಬ್‌ನಲ್ಲಿ ಆಟವಾಡುವಾಗ, ನನ್ನ ಬಳಿ ಹಣ ತೆಗೆದುಕೊಂಡಾಗ ನಿನ್ನ ಬಳಿ ಹಣ ಇಲ್ಲ ಅಂತ ಗೊತ್ತಿರಲಿಲ್ಲವಾ ಅಂತ ಕಾಂಚನ ಪ್ರಶ್ನೆ ಮಾಡಿದ್ದಾಳೆ. ಅಲ್ಲದೆ ಕ್ಲಬ್‌ನಲ್ಲಿ ನಿನ್ನ ಕಾರ್ಡ್ ಡಿಕ್ಲೈನ್ ಆದಾಗಲೇ ನಾನು ಯೋಚನೆ ಮಾಡಬೇಕಾಗಿತ್ತು ಅಂತಲೂ ಹೇಳಿರುವುದು ಇದೆ. ಅಲ್ಲದೆ ಕೊನೆಯಲ್ಲಿ ಶಾಂಕುತಲಾಳನ್ನು ಕಾಂಚನ ಕಾರ್‌ನಲ್ಲಿ ಕರೆದುಕೊಂಡು ಹೋಗುತ್ತಿರುವಂತೆ ತೋರಿಸಲಾಗಿದೆ.

Amruthadhare Serial: ಮುಕ್ತಾಯವಾಗಲಿದೆಯೇ ಅಮೃತಧಾರೆ

ಇನ್ನು ಅಮೃತಧಾರೆ ಸೀರಿಯಲ್‌ನ ಇತ್ತೀಚಿನ ಎಪಿಸೋಡ್‌ಗಳನ್ನು ಗಮನಿಸಿದರೆ, ಅಮೃತಧಾರೆ ಸೀರಿಯಲ್ ಮುಕ್ತಾಯವಾಗಲಿದೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಗೌತಮ್ ಹೊಸ ಕಂಪನಿ ಶುರು ಮಾಡಿ ಯಶಸ್ಸು ಗಳಿಸುತ್ತಿರುವುದು, ಮಲ್ಲಿ ಮದುವೆ - ಸುಧಾ ಕುಟುಂಬಕ್ಕೆ ತೋಟದ ಮನೆ, ಭೂಮಿಕಾಗೆ ಶಾಲೆಯ ಜವಾಬ್ದಾರಿ ಇದೆಲ್ಲದರ ಜೊತೆ ಜೈದೇವ್ ಅಂತ್ಯದ ಮುನ್ಸೂಚನೆ, ಶಾಂಕುತಲಾಳ ಆಟಗಳಿಗೆ ಬ್ರೇಕ್ ಬಿದ್ದಿದೆ. ಇದೆಲ್ಲವನ್ನೂ ನೋಡಿದರೆ ಅಮೃತಧಾರೆ ಸೀರಿಯಲ್ ಮುಕ್ತಾಯವಾಗಲಿದೆಯೇ ಎನ್ನುವ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+