Allu Arjun: ಅಲ್ಲು ಅರ್ಜುನ್ ಭೇಟಿಗೆ ಓಡೋಡಿ ಬಂದ ಚಿರಂಜೀವಿ ಮಾಡಿದ್ದು....
ಅಲ್ಲು ಅರ್ಜುನ್ ಅರೆಸ್ಟ್ ಆಗಿದ್ದು, ಪೊಲೀಸರ ಅತಿಥಿ ಆಗಿ ಕಂಬಿ ಎಣಿಸುತ್ತಿದ್ದಾರೆ. ಇದೀಗ ಅಲ್ಲು ಅರ್ಜುನ್ ಅಭಿಮಾನಿಗಳು ಈ ಸುದ್ದಿ ಕೇಳಿ ಆಂಧ್ರ ಪ್ರದೇಶ & ತೆಲಂಗಾಣ ರಾಜ್ಯದಲ್ಲಿ ರೊಚ್ಚಿಗೆದ್ದು ಉಗ್ರ ಹೋರಾಟ ನಡೆಸುವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಆಂಧ್ರ ಪ್ರದೇಶ & ತೆಲಂಗಾಣ ರಾಜ್ಯಗಳಲ್ಲಿ ಇದೀಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಸಮಯದಲ್ಲೇ ಸಿನಿಮಾ ಮಂದಿರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.
ಪರಿಸ್ಥಿತಿ ಹೀಗಿದ್ದಾಗಲೇ, ಮೆಗಾಸ್ಟಾರ್ ಚಿರಂಜೀವಿ ಕುಟುಂಬ & ಅಲ್ಲು ಅರ್ಜುನ್ ಕುಟುಂಬದ ನಡುವೆ ನಡೆಯುತ್ತಿದ್ದ ಫೈಟಿಂಗ್ ಈ ರೀತಿ ಅಲ್ಲು ಅರ್ಜುನ್ ಅರೆಸ್ಟ್ ಆಗಲು ಕಾರಣ ಎಂಬ ಆರೋಪ ಕೂಡ ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ಆರೋಪಗಳು ಕೇಳಿ ಬಂದಿರುವ ಈ ಸಮಯದಲ್ಲೇ, ಅಲ್ಲು ಅರ್ಜುನ್ ಭೇಟಿಗೆ ಓಡೋಡಿ ಬಂದ ಚಿರಂಜೀವಿ ಮಾಡಿದ್ದು....

ಅಲ್ಲು ಅರ್ಜುನ್ & ಚಿರಂಜೀವಿ ಕುಟುಂಬ...
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿಮಾನಿ ಬಳಗವು ಇದ್ದು, ಇಡೀ ಜಗತ್ತಿಗೇ ಈ ವಿಚಾರ ಗೊತ್ತು. ಅದರಲ್ಲೂ ತೆಲುಗು ಸಿನಿಮಾ ಇಂಡಸ್ಟ್ರಿಯ ಮೆಗಾಸ್ಟಾರ್ ಚಿರಂಜೀವಿ ಅವರು & ಅಲ್ಲು ಅರ್ಜುನ್ ಅವರ ಕುಟುಂಬಗಳ ನಡುವೆ ಸಂಬಂಧ ಇದೆ. ಮೆಗಾಸ್ಟಾರ್ ಚಿರಂಜೀವಿ ಅವರು ಅಲ್ಲು ಅರ್ಜುನ್ ಅವರಿಗೆ ಸೋದರ ಮಾವ ಆಗಬೇಕು. ಹೀಗಿದ್ದಾಗ, ಅಲ್ಲು ಅರ್ಜುನ್ ಅರೆಸ್ಟ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಮೆಗಾಸ್ಟಾರ್ ಚಿರಂಜೀವಿ ಮಾಡಿದ್ದು ಏನು ಗೊತ್ತೆ?
ಅಲ್ಲು ಭೇಟಿಗೆ ಓಡೋಡಿ ಬಂದ ಚಿರಂಜೀವಿ!
ತೆಲುಗು ಸಿನಿಮಾ ರಂಗ ಇಂದು ಅಲ್ಲಾಡಿ ಹೋಗಿದೆ, ಆಂಧ್ರ & ತೆಲಂಗಾಣ ನಡುಗಿ ಹೋಗಿದೆ. 'ಪುಷ್ಪ-2' ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ಸಂಬಂಧ ಇದೀಗ ಭಾರಿ ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕಡಪಲ್ಲಿ ಪೊಲೀಸರು ಇದೀಗ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮೆಗಾಸ್ಟಾರ್ ಚಿರಂಜೀವಿ ಅವರು ಅಲ್ಲು ಅರ್ಜುನ್ ಅವರ ಭೇಟಿಗೆ ಓಡೋಡಿ ಬಂದಿದ್ದಾರೆ. ಅಲ್ಲದೆ ಅಲ್ಲು ಅವರ ಯೋಗಕ್ಷೇಮ ಕೂಡ ವಿಚಾರಿಸಿದ್ದಾರೆ.
ಒಟ್ನಲ್ಲಿ 'ಪುಷ್ಪ-2' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಅಲ್ಲು ಅರ್ಜುನ್ ಅವರ ಬಾಳಲ್ಲಿ ಇದೀಗ ಬಿರುಗಾಳಿ ಎದ್ದಿದೆ. ಅದರಲ್ಲೂ ಅಲ್ಲು ಅರ್ಜುನ್ ಸಿನಿಮಾ ಬಿಡುಗಡೆಯ ಸಮಯದಲ್ಲಿ ಪ್ರೇಕ್ಷಕರೊಬ್ಬರ ಸಾವು ಸಂಚಲನವನ್ನೇ ಸೃಷ್ಟಿ ಮಾಡಿದ್ದು, ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಅಲ್ಲದೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಭಯ & ಆತಂಕ ಕೂಡ ಶುರುವಾಗಿದೆ.












Click it and Unblock the Notifications