Actor Allu Arjun: ಸುಳ್ಳು ಹೇಳಿ ತಗ್ಲಾಕೊಂಡ ನಟ ಅಲ್ಲು ಅರ್ಜುನ್!
ತೆಲುಗು ಹಾಗೂ ದಕ್ಷಿಣ ಭಾರತರ ಫೇಮಸ್ ನಟ ಅಲ್ಲು ಅರ್ಜುನ್ ಅವರು ಸುಳ್ಳೊಂದನ್ನು ಹೇಳಿ, ರೆಡ್‌ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ವಿಡಿಯೋದ ಮೇಲೆ ಅವರನ್ನು ಭಾರೀ ಟ್ರೋಲ್ ಮಾಡಲಾಗುತ್ತಿದೆ. ಅಲ್ಲು ಅರ್ಜುನ್ ಟಾಲಿವುಡ್‌ನ ಫೇಮಸ್ ನಟ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಹ ಹೌದು.
ತೆಲುಗು ಸಿನಿಮಾರಂಗದಲ್ಲಿ ಮೊದಲ ರಾಷ್ಟ್ರಪ್ರಶಸ್ತಿ ಪಡೆದ ನಟ ಎನ್ನುವ ಖ್ಯಾತಿಯೂ ಅವರಿಗೆ ಇದೆ. ಆದರೆ, ಜನರ ಮುಂದೆ ಸುಳ್ಳು ಹೇಳಿ ಅವರು ಟ್ರೋಲ್‌ಗೆ ಗುರಿಯಾಗಿದ್ದಾರೆ. ಜನ ಅಲ್ಲು ಅವರ ಹಳೆಯ ವಿಡಿಯೋ ಹಾಗೂ ಹೊಸ ವಿಡಿಯೋಗಳನ್ನು ಹಾಕಿ ಟ್ರೋಲ್ ಮಾಡ್ತಿದ್ದಾರೆ.

ಅಲ್ಲು ಅರ್ಜುನ್ ಏನಾದರು ಮಾತನಾಡಿದರೆ ಅವರ ಮಾತಿನಲ್ಲಿ ಒಂದು ತೂಕ ಇರುತ್ತದೆ. ಅಲ್ಲು ಅರ್ಜುನ್ ಕೇವಲ ತೆಲುಗು ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಕರ್ನಾಟಕದಲ್ಲಿ ಅಲ್ಲು ಅರ್ಜುನ್ ಅಭಿಮಾನಿ ಸಂಘಗಳು ಇವೆ.
ಅವರ ಸಿನಿಮಾಗಳು ಮಲಯಾಳಂ ಹಾಗೂ ತಮಿಳು ಭಾಷೆಗೂ ಡಬ್ ಆಗಿವೆ. ಹೀಗಾಗಿ, ಅವರಿಗೆ ಎಲ್ಲಾ ಕಡೆಗಳಲ್ಲೂ ಫ್ಯಾನ್ಸ್ ಇದ್ದಾರೆ. ಇದೀಗ ಅವರು ರಾಷ್ಟ್ರ ಪ್ರಶಸ್ತಿಯ ಬಗ್ಗೆ ಮಾತನಾಡಿರುವ ಮಾತು ಭಾರೀ ವೈರಲ್ ಹಾಗೂ ಹಾಸ್ಯಾಸ್ಪದಕ್ಕೆ ಕಾರಣವಾಗಿದೆ.
ಪ್ಯಾನ್ ಇಂಡಿಯಾ (ಭಾರತದಾದ್ಯಂತ) ಸಿನಿಮಾ ಹಾಗೂ ಅಲ್ಲು ಅರ್ಜುನ್‌ಗೆ ಗತ್ತು ತಂದುಕೊಟ್ಟಿದ್ದ ಪುಷ್ಪ ಸಿನಿಮಾದ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅವರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರಪ್ರಶಸ್ತಿ ಬಂದ ಮೇಲೆ ಅವರಿಗೆ ಇನ್ನಷ್ಟು ಡಿಮ್ಯಾಂಡ್ ಜಾಸ್ತಿಯಾಗಿದೆ. ಆದರೆ, ಟಿವಿ ಶೋವೊಂದರಲ್ಲಿ ಅವರು ತಮಗೆ ರಾಷ್ಟ್ರಪ್ರಶಸ್ತಿ ಬಂದ ಬಗ್ಗೆ ಅನುಭವ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.
ತೆಲುಗು ಚಿತ್ರರಂಗದಲ್ಲಿ ನಟರೊಬ್ಬರಿಗೆ ಮೊದಲ ಬಾರಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಅದು ಅಲ್ಲು ಅರ್ಜುನ್ ಅವರಿಗೆ. ರಾಷ್ಟ್ರಪ್ರಶಸ್ತಿ ಬಂದಾಗ ಮಾತನಾಡಿದ್ದ ಅಲ್ಲು ಅರ್ಜುನ್ ಅವರು, ರಾಷ್ಟ್ರಪ್ರಶಸ್ತಿ ಬಂದಿರುವುದಕ್ಕೆ ತುಂಬಾ ಖುಷಿಯಾಗ್ತಿದೆ. ಅಷ್ಟು ಮಾತ್ರವಲ್ಲ.
ರಾಷ್ಟ್ರಪ್ರಶಸ್ತಿ ಪಡೆದ ಮೊದಲ ತೆಲುಗು ನಟ ನಾನು ಎನ್ನುವುದು ಗೊತ್ತಿರಲಿಲ್ಲ. ಆ ವಿಷಯ ಕೇಳಿದ ಮೇಲೆ ಇನ್ನಷ್ಟು ಹೆಮ್ಮೆ ಹಾಗೂ ಖುಷಿ ಆಗಿದೆ ಎಂದಿದ್ದರು. ಆದರೆ, ನಾನು ತೆಲುಗು ಭಾಷೆಗೆ ರಾಷ್ಟ್ರ ಪ್ರಶಸ್ತಿ ಬರಲೇಬೇಕು ಎಂದು ಶ್ರಮ ಹಾಕಿದ್ದೇ ಎಂದಿದ್ದಾರೆ. ಈ ರೀತಿ ಮಾತು ಬದಲಿಸಿ ಅಲ್ಲು ಅರ್ಜುನ್ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಅಲ್ಲು ಅರ್ಜುನ್ ಹೇಳಿದ್ದೇನು ?
ತೆಲುಗು ಭಾಷೆಯಲ್ಲಿ (ತೆಲುಗು ಚಿತ್ರರಂಗದಲ್ಲಿ)ಯಾವ ನಟರಿಗೂ ರಾಷ್ಟ್ರಪ್ರಶಸ್ತಿ ಬಂದಿಲ್ಲ ಎನ್ನುವುದು ಕೇಳಿ ನೋವಾಗಿತ್ತು. ಅಲ್ಲದೇ ಈ ವಿಷಯ ತುಂಬಾ ಅಪ್ಸೆಟ್ ಸಹ ಮಾಡಿತ್ತು. ಹೀಗಾಗಿ, ಹೇಗಾದರೂ ಸರಿ ತೆಲುಗು ಭಾಷೆಗೆ ನಟನಾಗಿ ಒಂದು ರಾಷ್ಟ್ರಪ್ರಶಸ್ತಿ ತರಲೇಬೇಕು ಎಂದು ಗಟ್ಟಿಯಾಗಿ ಪ್ರಯತ್ನಿಸಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಜನ ಹಿಂಗೆ ಒಪನ್ ಆಗಿ ಸುಳ್ಳು ಹೇಳ್ತಿದ್ದಾರೆ ನೋಡಿ ಅಂತ ಟ್ರೋಲ್ ಮಾಡ್ತಾ ಇದ್ದಾರೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications