"ಮಗು ಮಾಡಿಕೊಳ್ಳೋದೇ ಸಂಸಾರನಾ?"; ಕೊನೆಗೂ ಡಿವೋರ್ಸ್‌ಗೆ ಕಾರಣವಾದ ನಿಜ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ!

ಇತ್ತೀಚಿನ ದಿನಗಳಲ್ಲಿ ಮದುವೆ ಮತ್ತು ಕುಟುಂಬದ ಬಗ್ಗೆ ಯುವ ಸಮೂಹದಲ್ಲಿ ಆಲೋಚನೆಗಳು ಬದಲಾಗುತ್ತಿವೆ. ಮದುವೆಯಾದ ನಂತರ ಮಕ್ಕಳನ್ನು ಮಾಡಿಕೊಳ್ಳಲೇಬೇಕು ಎಂಬ ಸಾಂಪ್ರದಾಯಿಕ ನಂಬಿಕೆಯಿಂದ ಹಲವರು ಹೊರಬರುತ್ತಿದ್ದಾರೆ. ಇದೇ ವಿಚಾರವನ್ನು ಹಿಂದಿ ಕಿರುತೆರೆ ನಟಿ ಆಕಾಂಕ್ಷಾ ಚಮೋಲಾ ತಮ್ಮ ವೈಯಕ್ತಿಕ ಬದುಕಿನ ಅನುಭವವನ್ನು ಹಂಚಿಕೊಂಡಿದ್ದಾರೆ.

ಮೂವತ್ತರ ಬಳಗೆ ಮದುವೆಯಾಗಬೇಕು - ಮೂವತ್ತೈದರ ಒಳಗೆ ಮಗು ಮಾಡಿಕೊಳ್ಳಬೇಕು. ಜೀವನ ಸುಗಮವಾಗಿರುತ್ತದೆ ಎನ್ನುವುದು ಹಿರಿಯರ ಮಾತು. ಆದರೆ ಈಗ ಈ ರೀತಿ ವಿಚಾರ ಮಾಡುವವರು ತುಂಬಾ ವಿರಳ. ಕಾಲ ಬದಲಾದಂತೆ ಈಗೆಲ್ಲ ಮದುವೆಯೂ ಬೇಡ, ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯ ಎನ್ನುವಂತೆ ಆಗಿದೆ. ಮದುವೆಯಾದರೂ ಹಲವರು ಮಕ್ಕಳು ಬೇಡ ಎನ್ನುವ ಪರಿಕಲ್ಪನೆಯಲ್ಲಿದ್ದಾರೆ. ಅದರಲ್ಲೂ ಕೆಲವು ನಟ - ನಟಿಯರು ಮದುವೆ-ಸಂಸಾರವೇ ಜೀವನದ ಅಂತಿಮ ಗುರಿಯಲ್ಲ ಅಂತಾರೆ. ಅವರಲ್ಲಿ ನಟಿ ಆಕಾಂಕ್ಷಾ ಚಮೋಲಾ ಅವರು ಸಹ ಒಬ್ಬರು.

Akanksha Chamola

ಹಿಂದಿ ಕಿರುತೆರೆಯ ಖ್ಯಾತ ನಟಿ ಆಕಾಂಕ್ಷಾ ಚಮೋಲಾ ಅವರು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಸ್ವರಾಗಿಣಿ-ಜೋಡೇ ರಿಶ್ತೋ ಕಾ ಸುರ್..ಭಾಗ್ಯ ಲಕ್ಷ್ಮೀ.. ಕೈಸೇ ಮುಝೇ ತುಮ್ ಮಿಲ್ ಗಯೇ ಎನ್ನುವ ಪ್ರಮುಖ ಸೀರಿಯಲ್‌ಗಳಲ್ಲಿ ಮಿಂಚಿದ್ದಾರೆ. ಆಕಾಂಕ್ಷಾ ಚಮೋಲಾ ಮತ್ತು ಗೌರವ್ ಖನ್ನಾ ಮೊದಲ ಬಾರಿ 2015ರಲ್ಲಿ ಭೇಟಿಯಾಗಿದ್ದರು. ಸ್ನೇಹವಾಗಿ ಆರಂಭವಾದ ಪರಿಚಯ ಬಳಿಕ ಪ್ರೀತಿಗೆ ತಿರುಗಿ, 2016ರಲ್ಲಿ ಇಬ್ಬರೂ ವಿವಾಹವಾದರು. ಗೌರವ್ ಖನ್ನಾ ಹಿಂದಿ ಕಿರುತೆರೆಯಲ್ಲಿ ಶಾರುಖ್ ಖಾನ್ ಎಂದೇ ಖ್ಯಾತಿ ಗಳಿಸಿದ್ದಾರೆ. ಸಿಐಡಿ.. ಪ್ರೇಮ್ ಯಾ ಪಹೇಲಿ-ಚಂದ್ರಕಾಂತ ಸೇರಿದಂತೆ ಹಲವು ಸೀರಿಯಲ್‌ಗಳ ಮೂಲಕ ಮನೆ ಮಾತಾಗಿದ್ದಾರೆ. ಗೌರವ್ ಖನ್ನಾ ''ಸೆಲೆಬ್ರೆಟಿ ಮಾಸ್ಟರ್ ಶೆಫ್‌''ನ ವಿನ್ನರ್, ಹಿಂದಿಯ 'ಬಿಗ್ ಬಾಸ್ 19ರ ವಿನ್ನರ್ ಸಹ ಹೌದು.

ಆಕಾಂಕ್ಷಾ ಎದುರು ನಾಟಕವಾಡಿದ್ದರಂತೆ ಗೌರವ್

ನಟಿ ಆಕಾಂಕ್ಷಾ ಅವರನ್ನು ಭೇಟಿಯಾಗುವ ಮುಂಚೆಯೇ 15 ಧಾರಾವಾಹಿಗಳಲ್ಲಿ ನಟಿಸಿ ಖ್ಯಾತರಾಗಿದ್ದ ಗೌರವ್ ಖನ್ನಾ ಅವರು ಕಿರುತೆರೆಯಲ್ಲಿ ಚಾನ್ಸ್‌ ಸಿಕ್ಕಿಲ್ಲ ಎಂದು ಸುಳ್ಳು ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಗೌರವ್ ಹಿನ್ನೆಲೆ ಗೊತ್ತಿಲ್ಲದ, ಆಗಷ್ಟೇ ಅವಕಾಶವನ್ನು ಹುಡುಕಿಕೊಂಡು ಆಡಿಷನ್‌ಗಳನ್ನು ಕೊಡುತ್ತಿದ್ದ ಆಕಾಂಕ್ಷಾ ಅವರು ಗೌರವ್ ಮಾತುಗಳನ್ನು ನಿಜಾ ಎಂದುಕೊಂಡಿದ್ದರು. ಇಬ್ಬರ ಸ್ನೇಹ ಪ್ರೀತಿಗೆ ಬದಲಾಯಿತು. ಕೆಲವು ತಿಂಗಳುಗಳ ಕಾಲ ಜೊತೆಯಲ್ಲಿ ಓಡಾಡಿದ ಇಬ್ಬರು 2016ರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಕಳೆದ 10 ವರ್ಷಗಳಿಂದ ಇಬ್ಬರೂ ಖುಷಿ ಖುಷಿಯಾಗಿಯೇ ಇದ್ದರು. ಈಗ ಇಬ್ಬರ ನಡುವೆ ಪ್ರೀತಿ ಕಮರಿ ಹೋಗಿದೆ. ಖುದ್ದು ಆಕಾಂಕ್ಷಾ ಅವರು ಈ ವಿಚಾರವನ್ನು ರಿಯಾಲಿಟಿ ಶೋ ''ಲಾಕಪ್ 2'' ನಲ್ಲಿ ಹೇಳಿಕೊಂಡಿದ್ದಾರೆ.

ಮಗು ವಿಚಾರಕ್ಕೆ ದೂರವಾದ್ವಿ

ಮಕ್ಕಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಎದುರಾಗಿತ್ತು. ನಮ್ಮ ಡಿವೋರ್ಸ್‌ಗೆ ಇದೇ ಕಾರಣವಾಯಿತು. ನನಗೆ ಮೊದಲಿಂದಲೂ ತಾಯಿಯಾಗುವ ಹಂಬಲವೇ ಇರಲಿಲ್ಲ, ಈಗಲೂ ಇಲ್ಲ. ಕಾಲ ಕ್ರಮೇಣ ಮಗು ಮಾಡಿಕೊಳ್ಳಬೇಕು ಎನ್ನುವ ಆಸೆ ನನ್ನಲ್ಲಿ ಬರಬಹುದು ಅಂತ ಅಂದುಕೊಂಡಿದ್ದೆ, ಆದರೆ ಅದಾಗಲೇ ಇಲ್ಲ ಅಂತ ನಟಿ ಹೇಳಿದ್ದಾರೆ. ನನಗ್ಯಾವತ್ತು ಮಗು ಮಾಡಿಕೊಳ್ಳಬೇಕು ಎನ್ನುವ ಆಸೆಯೇ ಇರಲಿಲ್ಲ, ನಾನು ತುಂಬಾ ಹಿಂದೆಯೇ ಈ ವಿಷಯವನ್ನು ಗೌರವ್‌ಗೆ ಹೇಳಿದ್ದೆ ಕೂಡ. ಕೊನೆಗೂ ಮಗು ಮಾಡಿಕೊಳ್ಳಬೇಕು ಅಂತ ಅನಿಸುತ್ತಲ್ಲೇ ಇಲ್ಲ ಎನ್ನುವುದನ್ನು ಗೌರವ್‌ ಬಳಿ ಹೇಳಿಕೊಂಡೆ. ನನ್ನ ಪ್ರಕಾರ ಮದುವೆ ಅಂದರೆ ಕೇವಲ ವಂಶ ವೃಕ್ಷ ಮುಂದುವರಿಸುವುದಕ್ಕೆ ಇರುವ ಸಂಬಂಧವಲ್ಲ.

ಗೌರವ್‌ಗೆ ತಂದೆಯಾಗುವ ಕನಸಿತ್ತು. ಆದರೆ ತಾನು ಆ ನಿರ್ಧಾರಕ್ಕೆ ಸಿದ್ಧರಿರಲಿಲ್ಲ. ಹೀಗಾಗಿ ಇಬ್ಬರೂ ಪರಸ್ಪರ ಗೌರವದಿಂದ ಬೇರ್ಪಡುವ ನಿರ್ಧಾರ ಕೈಗೊಂಡೆವು ಎಂದು ಆಕಾಂಕ್ಷಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+