Urvashi: ಕೇಂದ್ರದ ಮೇಲೆ ನಟಿ ಊರ್ವಶಿ ಗರಂ: ರಾಜಕೀಯ ಪ್ರವೇಶಕ್ಕೆ ಪೂರ್ವ ಸಿದ್ಧತೆಯೇ, ಏನಿದು ಚರ್ಚೆ?!
Urvashi: 71ನೇ ರಾಷ್ಟ್ರೀಯ ಪ್ರಶಸ್ತಿಯ ಬಗ್ಗೆ ವಾದ - ವಿವಾದಗಳು ನಿಲ್ಲುತ್ತಿಲ್ಲ. ಈ ಬಾರಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಪ್ರಶಸ್ತಿಯನ್ನು ರಾಜಕೀಯಗೊಳಿಸಿದೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಇದಕ್ಕೆ ಮುಖ್ಯ ಕಾರಣವಾಗಿರುವುದು ಕೇರಳ ಸ್ಟೋರಿ ಎನ್ನುವ ಅಜೆಂಡಾ ಹೊಂದಿರುವ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಹಾಗೂ ಆಡು ಜೀವಿತಂ ಎನ್ನುವಂತಹ ಕಠಿಣ ಪರಿಶ್ರಮ ಹಾಗೂ ನೈಜ ಜೀವನ ಆಧಾರಿತ ಸಿನಿಮಾಗೆ ಯಾವುದೇ ಪ್ರಶಸ್ತಿ ಲಭ್ಯವಾಗದೆ ಇರುವುದು ಎಂದು ಹೇಳಲಾಗಿದೆ. ಬಹುಭಾಷೆಯಲ್ಲಿ ನಟಿಸಿರುವ ಹಾಗೂ ಹಿರಿಯ ನಟಿ ಊವರ್ಶಿ ಅವರು ಸಾಮಾನ್ಯವಾಗಿ ಯಾವುದೇ ವಿವಾದಲ್ಲಿ ಸಿಲುಕುವುದಿಲ್ಲ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಊರ್ವಶಿ ಅವರು ಬಹುಬೇಡಿಕೆಯ ನಟಿ. ಅನುಭವಿ ನಟಿ ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ನಟಿ ಊರ್ವಶಿ ಅವರು ಮಾಡಿರುವ ಪ್ರಶ್ನೆಗಳಲ್ಲಿ ಪ್ರಮುಖವಾದ ವಿಷಯ ಎಂದರೆ ಈ ಬಾರಿಯ (71ನೇ ರಾಷ್ಟ್ರೀಯ) ಪ್ರಶಸ್ತಿಯಲ್ಲಿ ರಾಜಕೀಯ ಸೇರ್ಪಡೆ ಆಗಿದೆ ಎನ್ನುವುದು. ಸಿನಿಮಾ ಹಾಗೂ ಪ್ರಶಸ್ತಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಈ ಬಾರಿ ನೀಡಿರುವ ರಾಷ್ಟ್ರೀಯ ಪ್ರಶಸ್ತಿಯ ಮಾನದಂಡಗಳೇ ಅರ್ಥವಾಗುತ್ತಿಲ್ಲ ಎಂದು ನಟಿ ಊರ್ವಶಿ ಅವರು ಹೇಳಿದ್ದಾರೆ. ಇದರಲ್ಲಿ ರಾಜಕೀಯ ಬೆರೆತಿದೆ ಎಂದು ಅವರು ಪ್ರಶ್ನೆ ಮಾಡಿದ್ದು, ಅವರು ರಾಜಕೀಯ ವಿಚಾರ ಮಾತನಾಡಿರುವ ಬೆನ್ನಲ್ಲೇ ಅವರು ರಾಜಕೀಯಕ್ಕೆ ಬರಲಿದ್ದಾರೆಯೇ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ.

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಬಾಲಿವುಡ್ ಕೇಂದ್ರಿತ ಪ್ರಶಸ್ತಿ ನೀಡಲಾಗಿದೆ, ಉಳಿದ ರಾಜ್ಯಗಳ ಭಾಷೆಗಳ ಸಿನಿಮಾವನ್ನು ಕಡೆಗಣಿಸಿರುವ ಹಾಗೂ ರಾಜಕೀಯ ಪ್ರೇರಿತವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. 71ನೇ ರಾಷ್ಟ್ರೀಯ ಪ್ರಶಸ್ತಿಯ ಭಾಗವಾಗಿ ಮಲಯಾಳಂನ ಉಲ್ಲೋಳುಕ್ಕು ಚಿತ್ರದಲ್ಲಿ ಮುಖ್ಯಭೂಮಿಕೆಯ ಪಾತ್ರವನ್ನು ಮಾಡಿದ್ದರೂ ಊರ್ವಶಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನೀಡಲಾಗಿದೆ. ಇದರ ಬೆನ್ನಲ್ಲೇ ಯಾವ ಮಾನದಂಡಗಳ ಆಧಾರದ ಮೇಲೆ ಪ್ರಶಸ್ತಿ ನೀಡಲಾಗಿದೆ ಎಂದು ಊರ್ವಶಿ ಅವರು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಈ ಬಾರಿ ಪ್ರಶಸ್ತಿ ನೀಡುವುದರಲ್ಲಿ ಭಾರೀ ರಾಜಕೀಯ ನಡೆದಿದೆ ಎಂದೂ ಅವರು ಹೇಳಿದ್ದಾರೆ. 71ನೇ ರಾಷ್ಟ್ರೀಯ ಪ್ರಶಸ್ತಿಗಳಿಗೆ ಬ್ಲೆಸ್ಸಿ ನಿರ್ದೇಶನ ಮಾಡಿರುವ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಆಡು ಜೀವಿತಂ - ದಿ ಗೋಟ್ ಲೈಫ್ ಚಿತ್ರವನ್ನು ಪರಿಗಣಿಸದಿರುವ ಬಗ್ಗೆ ಕೇರಳದಾದ್ಯಂತ ಅಸಮಾಧಾನ ವ್ಯಕ್ತವಾಗಿದ್ದು ಈ ವಿಚಾರವನ್ನು ಊರ್ವಶಿ ಅವರು ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಏನಿದು ರಾಷ್ಟ್ರೀಯ ಪ್ರಶಸ್ತಿ & ರಾಜಕೀಯ
ಮಲಯಾಳಂನ ನಟ ಪೃಥ್ವಿರಾಜ್ ಸುಕುಮಾರನ್ ಅವರು ಈಚೆಗೆ ಕೇಂದ್ರ ಸರ್ಕಾರವನ್ನು ಎದುರು ಹಾಕಿಕೊಂಡಿದ್ದರು. ಎಲ್2-ಎಂಪುರಾನ್ ಮಲಯಾಳಂ ಸಿನಿಮಾದಲ್ಲಿ ಗುಜರಾತ್‌ನ ರಾಜಕೀಯ ಹಾಗೂ ಗಲಭೆ ವಿಚಾರಗಳನ್ನು ತೋರಿಸಲಾಗಿತ್ತು. ಕೇಂದ್ರ ಸರ್ಕಾರದ ಆಕ್ಷೇಪದ ನಂತರ ಆ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ, ಈ ಸಿನಿಮಾದ ವಿವಾದ ಕಾರಣಕ್ಕೆ ಅತ್ಯುತ್ತಮ ಚಿತ್ರ ಎಂದು ಜನ ಮನ್ನಣೆ ಗಳಿಸಿರುವ ಆಡು ಜೀವಿತಂ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಆಡುಜೀವಿತಂ ಸಿನಿಮಾವನ್ನು ಹೇಗಾದರೂ ನಿರ್ಲಕ್ಷಿಸಲು ಸಾಧ್ಯ. ಆ ಚಿತ್ರವು ನಜೀಬ್ ಎನ್ನುವವರ ಬದುಕು ಹಾಗೂ ಮನಕಲುಕುವ ಚಿತ್ರಕಥೆಗೆ ಜೀವ ತುಂಬುವ ನಿಟ್ಟಿನಲ್ಲಿ ದೈಹಿಕ ಬದಲಾವಣೆ ಮಾಡಿಕೊಂಡು, ತಮ್ಮ ಸಮಯ ಹಾಗೂ ಶ್ರಮವನ್ನು ಮೀಸಲಿಟ್ಟಿದ್ದ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಅನ್ಯಾಯವಾಗಿದೆ. ಅದ್ವಿತೀಯ ನಟನೆಯನ್ನು ಅವರು ಈ ಸಿನಿಮಾದಲ್ಲಿ ಮಾಡಿದ್ದರು. ಇಷ್ಟೆಲ್ಲಾ ಪರಿಶ್ರಮದ ಹೊರತಾಗಿಯೂ ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ಇದಕ್ಕೆಲ್ಲವೂ ಎಂಪುರಾನ್ ವಿವಾದವೇ ಕಾರಣ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಪ್ರಶಸ್ತಿಗಳನ್ನು ರಾಜಕೀಯ ಮಾಡಬಾರದು ಅಂತಾ ನಟಿ ಊರ್ವಶಿ ಅವರು ಹೇಳಿದ್ದಾರೆ.
ರಾಜಕೀಯಕ್ಕೆ ಬರಲಿದ್ದಾರೆಯೇ ಊರ್ವಶಿ: ಇನ್ನು ಇದೇ ಮೊದಲ ಬಾರಿ ಈ ರೀತಿ ರಾಜಕೀಯ ವಿಚಾರವನ್ನು ನಟಿ ಊರ್ವಶಿ ಅವರು ಮಾತನಾಡಿದ್ದು ಅವರು ರಾಜಕೀಯಕ್ಕೆ ಬರಲಿದ್ದಾರೆಯೇ ಎನ್ನುವ ಗುಸುಗುಸು ಶುರುವಾಗಿದೆ. ಮುಂದಿನ ವರ್ಷ ಕೇರಳ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಕಾರಣಗಳಿಗೆ ಈ ಚರ್ಚೆ ಮಹತ್ವ ಪಡೆದುಕೊಂಡಿದೆ. ಆದರೆ, ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ನಟಿ ಊರ್ವಶಿ ಅವರು ಯಾವುದೇ ಹೇಳಿಕೆ ನೀಡಿಲ್ಲ.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು











Click it and Unblock the Notifications