'ಖಂಡಿತವಾಗಿ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ': ಸ್ಯಾಂಡಲ್​ವುಡ್​ #MeToo ಬಗ್ಗೆ ತನಿಷಾ ಹೇಳಿದ್ದೇನು?

ಬೆಂಗಳೂರು, ಸೆಪ್ಟೆಂಬರ್‌ 05: ಬೇರೆ ಭಾಷೆಯ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲಿಯೂ ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳಿಗೆ ಬ್ರೇಕ್‌ ಹಾಕಬೇಕು. ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಸಲ್ಲಿಕೆ ಆದ ನಂತರ ಕನ್ನಡ ಚಿತ್ರರಂಗದಲ್ಲೂ ಇಂತಹ ಪ್ರಕರಣ ತನಿಖೆ ಆಗಬೇಕು ಎನ್ನುವ ಅಭಿಪ್ರಾಯ ಜೋರಾಗಿ ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ನಟರು, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸೇರಿದಂತೆ ಅನೇಕರನ್ನೊಳಗೊಂಡ ಫೈರ್​ ಸಂಸ್ಥೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಿತಿ ರಚಿಸುವಂತೆ ಪತ್ರ ಬರೆದಿದೆ. ಲೈಂಗಿಕ ದೌರ್ಜನ್ಯ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಫೈರ್​ ಸಂಸ್ಥೆ ಮನವಿ ಮಾಡಿದೆ.

Actress Tanisha Kuppanda Reaction about MeToo Buzz in Sandalwood

ಈ ಬಗ್ಗೆ ನಟಿ ತನಿಷಾ ಕುಪ್ಪಂಡ ಮಾತನಾಡಿದ್ದು, ಒಂದು ಒಳ್ಳೆಯ ಬೆಳವಣಿಗೆ ಆಗುತ್ತಿದೆ ಎಂದರೆ ಅದಕ್ಕೆ ಬೆಂಬಲ ಕೊಡಬೇಕು ಎಂದು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮ್ಮ ಕುಟುಂಬದ ಹೆಣ್ಣು ಮಕ್ಕಳನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೋ ಹಾಗೇ ಬೇರೆಯವರ ಮನೆ ಹೆಣ್ಣು ಮಕ್ಕಳನ್ನು ಅಷ್ಟೇ ಗೌರವದಿಂದ ನಡೆಸಿಕೊಂಡರೆ ಇಂತಹ ಒಂದು ವಿಷಯನೇ ಕಾಣಿಸಿಕೊಳ್ಳುವುದಿಲ್ಲ. ಏನಾದರೂ ಒಂದು ಸಮಿತಿಯಾಗಿ ಏನಾದರೂ ಒಂದು ರೂಲ್ಸ್‌ ಅಂತಾ ಬಂದರೆ ಜೊತೆ ಶಿಕ್ಷೆ ಆಗುವಂತಿದ್ದರೆ ಖಂಡಿತವಾಗಿ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ. ಏನೇ ಒಳ್ಳೆದಾಗುವುದಿದ್ದರೂ ನಾವು ಅದಕ್ಕೆ ಬೆಂಬಲ ಕೊಡಬೇಕು' ಎಂದು ಹೇಳಿದ್ದಾರೆ.

ಮಾತು ಮುಂದುವರಿಸಿದ ತನಿಷಾ, 'ಸಮಯಕ್ಕೆ ತಕ್ಕ ಹಾಗೇ ನಾವು ಅದನ್ನು ಒಪ್ಪಿಕೊಳ್ಳಲು ಶುರು ಮಾಡುತ್ತೇವೆ. ಒಂದೇ ಬೈಯುತ್ತೇವೆ, ಕೂಗಾಡುತ್ತೇವೆ ಇಲ್ಲ ಬ್ಲಾಕ್‌ ಮಾಡುತ್ತೇವೆ. ಆ ಸಮಯಕ್ಕೆ ಏನು ರಿಯ್ಯಾಕ್ಟ್‌ ಮಾಡಬೇಕು ಅಂತಾ ಅನಿಸುತ್ತದೋ ಅದನ್ನು ಮಾಡುತ್ತೇನೆ. ಎಲ್ಲಾ ವಿಚಾರಗಳು ನಮ್ಮ ಮೇಲೆ ಡಿಪೆಂಡ್‌ ಆಗಿರುತ್ತದೆ. ನಮ್ಮದೇ ಆದ ಒಂದು ಲಿಮಿಟ್‌ ಇದ್ದಾಗ ಯಾರೂ ಏನೂ ಮಾಡಲು ಆಗಲ್ಲ.

ನಾನು ಹೆಣ್ಣು ಮಕ್ಕಳಿಗೆ ಏನು ಹೇಳುವುದೆಂದರೆ ನಾವು ಒಂದು ಗಡಿ ಇಟ್ಟುಕೊಳ್ಳಬೇಕು. ನಾವು ಯಾವಾಗ ಅವಕಾಶ ಕೊಡುತ್ತೇವೆ ಆಗ ಯಾರು ಬೇಕಾದರೂ ಬರುತ್ತಾರೆ. ಎಷ್ಟು ಬೇಕಾದರೂ ಮಾತನಾಡುತ್ತಾರೆ. ಏನು ಬೇಕಾದರೂ ರಿಯ್ಯಾಕ್ಟ್‌ ಮಾಡುತ್ತಾರೆ. ನಮ್ಮ ಮಿತಿಯಲ್ಲಿ ನಾವಿದ್ದಾಗ ಸ್ವಲ್ಪ ನಮಗೆ ಸೇಫ್‌ ಅಂತಾ ಅನಿಸುತ್ತದೆ' ಎಂದು ಹೇಳಿದರು.

Actress Tanisha Kuppanda Reaction about MeToo Buzz in Sandalwood

'ಇದನ್ನು ಹೊರತುಪಡಿಸಿ ಏನಾದರೂ ಆಯಿತು ಅಂದರೆ ನಾವು ತಕ್ಷಣ ಅದಕ್ಕೆ ಪ್ರತಿಕ್ರಿಯಿಸಬೇಕು. ಈ ವಿಚಾರವನ್ನು ನಿಮ್ಮ ತಂದೆ-ತಾಯಿ ಅಕ್ಕ-ತಂಗಿಯರು ಯಾರ ಬಳಿ ಆದರೂ ಹೇಳಿಕೊಳ್ಳಿ' ಎಂದು ತನಿಷಾ ಹೆಣ್ಣು ಮಕ್ಕಳಿಗೆ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+