ಕಿರೀಟಿ ಸಿನಿಮಾದಲ್ಲಿ ಹಿರಿಯ ನಟ & ನಟಿಯರ ಅಬ್ಬರ, ಜೂನಿಯರ್ ಟ್ರೇಲರ್‌ಗೆ ಭಾರಿ ಮೆಚ್ಚುಗೆ
ಕನ್ನಡ ಸಿನಿಮಾ ಲೋಕದಲ್ಲಿ ಮಾತ್ರವಲ್ಲ, ಕನ್ನಡದ ಸೀರಿಯಲ್ ಲೋಕದಲ್ಲಿ ಕೂಡ ನಟಿ ಸುಧಾರಾಣಿ ಅವರು ಭಾರಿ ದೊಡ್ಡ ಹೆಸರು ಮಾಡಿ ಇಡೀ ಇಂಡಿಯಾ ಗಮನ ಸೆಳೆದಿದ್ದಾರೆ. ಇದೇ ಕಾರಣಕ್ಕೆ ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಕೈತುಂಬಾ ಸಿನಿಮಾ ಆಫರ್ಸ್ ಪಡೆದಿದ್ದಾರೆ ಕನ್ನಡದ ಹೆಮ್ಮೆಯ ನಟಿ ಸುಧಾರಾಣಿ ಅವರು. ನಟಿ ಸುಧಾರಾಣಿ ಅವರು ದೊಡ್ಡ ದೊಡ್ಡ ನಟರ ಜೊತೆಗೆ ಸಿನಿಮಾ ಮಾಡಿ ಸ್ಕ್ರೀನ್ ಶೇರ್ ಮಾಡಿಕೊಂಡು ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದರು.
ಯೆಸ್ ನಟಿ ಸುಧಾರಾಣಿ ಹೆಸರು ಕೇಳಿದರೆ ಸಾಕು ಕನ್ನಡದ ಸಿನಿಮಾ ಪ್ರೇಮಿಗಳು ಖುಷಿಯಾಗಿ ಕುಣಿದಾಡ್ತಾರೆ. ಯಾಕೆ ಅಂದ್ರೆ ವರನಟ ಡಾ. ರಾಜ್‍ಕುಮಾರ್ ಅವರು, ಸುಧಾರಾಣಿ ಅವರ ಪ್ರತಿಭೆಯನ್ನ ಗುರುತಿಸಿ ಆನಂದ್ ಚಿತ್ರದ ನಾಯಕಿ ಅಂದ್ರೆ ಹೀರೋಯಿನ್ ಆಗಿ ಆಯ್ಕೆ ಮಾಡಿದರು. ನಂತರ ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶ ಹುಡುಕಿಕೊಂಡು ಬಂದವು. ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಹೀಗೆ ಕನ್ನಡ ಸೇರಿ ಹಲವು ಭಾಷೆಗಳಲ್ಲೂ ನಟಿ ಸುಧಾರಾಣಿ ಮಿಂಚಿದ್ರು. ಈಗಲೂ ಅವರಿಗೆ ಸಾಕಷ್ಟು ಅವಕಾಶಗಳು ಇವೆ.

ಕಿರೀಟಿ ಸಿನಿಮಾ ಟ್ರೇಲರ್‌ಗೆ ಮೆಚ್ಚುಗೆ
ಅಂದಹಾಗೆ ಸುಮಾರು 40 ವರ್ಷಗಳಿಂದಲೂ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ಸುಧಾರಾಣಿ ಅವರು ನೂರಾರು ಸಿನಿಮಾ ಮಾಡಿದ್ದಾರೆ. 51ನೇ ವಯಸ್ಸಿಗೆ ಕಾಲಿಟ್ಟ ಅವರನ್ನ ಈಗಲೂ ಅಭಿಮಾನಿಗಳು ಆರಾಧಿಸುತ್ತಾರೆ, ಅವರ ನಟನೆ ಮೆಚ್ಚಿ ಚಪ್ಪಾಳೆ ಹೊಡೆಯುತ್ತಾರೆ. ನಟಿ ಸುಧಾರಾಣಿ ಅವರು ಮನ ಮೆಚ್ಚಿದ ಹುಡುಗಿ ರೀತಿ ಎಂದೂ ಮರೆಯಲು ಆಗದ ಸಿನಿಮಾಗಳನ್ನು ನೀಡಿದ್ದವರು. ಒಂದು ಕಾಲದಲ್ಲಿ ಸುಧಾರಾಣಿ ಅವರ ಸಿನಿಮಾ ಅಂದ್ರೆ ಅಭಿಮಾನಿಗಳು ವರ್ಷಗಟ್ಟಲೇ ಕಾಯುತ್ತಿದ್ದ ದಿನಗಳು ಇದ್ದವು....
ರವಿಚಂದ್ರನ್ ಜೋಡಿಯಾಗಿ ನಟಿ ಸುಧಾರಾಣಿ!
ಅಂದಹಾಗೆ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಅಭಿನಯದ ಸಿನಿಮಾ 'ಜೂನಿಯರ್' ಇನ್ನೇನು ಜುಲೈ 18ಕ್ಕೆ ರಿಲೀಸ್ ಆಗಲಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದ 'ಜೂನಿಯರ್' ಸಿನಿಮಾದಲ್ಲಿ ಸುಧಾರಾಣಿ & ರವಿಚಂದ್ರನ್ ಅವರು ಜೋಡಿಯಾಗಿ ನಟಿಸಿದ್ದು, ಇದೇ ಸಿನಿಮಾದಲ್ಲಿ ನಟಿ ಸುಧಾರಾಣಿ ಅವರ ಪಾತ್ರವು ಕೂಡ ಸಾಕಷ್ಟು ಗಮನ ಸೆಳೆದಿದೆ. ಹಾಗೇ ತಮ್ಮ 51ನೇ ವರ್ಷ ವಯಸ್ಸಿನಲ್ಲೂ ನಟಿ ಸುಧಾರಾಣಿ ಅವರು ಇಷ್ಟು ಚಂದದ ನಟನೆ ಮಾಡಿದ್ದಾರೆ ಅಂತಾ ಅಭಿಮಾನಿಗಳು ಹೊಗಳುತ್ತಿದ್ದಾರೆ. ಹೀಗಾಗಿ ಡಿಜಿಟಲ್ ವೇದಿಕೆಯಲ್ಲಿ ಟ್ರೇಲರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.












Click it and Unblock the Notifications