Actress Sreeleela: 'ಕಿಸ್' ಬೆಡಗಿ ಶ್ರೀಲಿಲಾ ಇನ್ಮುಂದೆ ನಟಿಯಲ್ಲ, ಡಾಕ್ಟರ್: ಇಲ್ಲಿದೆ ನೆರವಾಗಿ ನಿಂತವರ ವಿವರ
Actress Sreeleela: ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಲೀಲಾ ಅವರು ಇದೀಗ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಹೊಸ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಡಾಕ್ಟರ್ ಆಗಬೇಕೆಂಬ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಚರ್ಚೆ ಜೋರಾಗಿದೆ.
ನಟಿ ಎಂದರೆ ಕೇವಲ ಬೆಳ್ಳಿತೆರೆಯ ಮೇಲಿನ ಮಿಂಚು ಮಾತ್ರ ಅಲ್ಲ ಎಂಬುದಕ್ಕೆ ಕಿಸ್ ಬೆಡಗಿ ಶ್ರೀಲೀಲಾ ಅವರು ಮಾಡಿದ ಈ ಸಾಧನೆಯ ಪ್ರಮುಖ ಸಾಕ್ಷಿಯಾಗಿದೆ. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ತಮ್ಮ ಜೀವನದ ಮತ್ತೊಂದು ದೊಡ್ಡ ಕನಸನ್ನು ಸಾಕಾರಗೊಳಿಸಿರುವ ಶ್ರೀಲೀಲಾ ಇದೀಗ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಹೊಸ ಸಾಧನೆ ಮಾಡಿದ್ದಾರೆ.
ಶ್ರೀಲೀಲಾ ಮುದ್ದಾದ ನಗುವಿಗಿದೆ ಫ್ಯಾನ್‌ಬೇಸ್
ಶ್ರೀಲೀಲಾ ಎಂದಾಕ್ಷಣ ಅವರ ಚುರುಕುತನ, ನೃತ್ಯ ಶೈಲಿ, ಎನರ್ಜಿ ಮತ್ತು ಆಕರ್ಷಕ ಅಭಿನಯವೇ ಮೊದಲಿಗೆ ನೆನಪಿಗೆ ಬರುತ್ತದೆ. ಡಾನ್ಸ್ ವಿಚಾರದಲ್ಲಿ ಶ್ರೀಲೀಲಾ ವಿಶೇಷ ಆಸಕ್ತಿ ಹೊಂದಿದವರಾಗಿದ್ದು, ಹಲವು ಸಿನಿಮಾಗಳ ಹಾಡುಗಳಲ್ಲಿ ಅವರ ನೃತ್ಯ ಶೈಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದುಬಿಟ್ಟಿದೆ. ಬರೀ ಅವರ ನಗುವಿಗೆ ಅದೆಷ್ಟೋ ಮಂದಿ ಅಭಿಮಾನಿಗಳಾಗಿದ್ದಾರೆ. ಅಷ್ಟರ ಮಟ್ಟಿಗೆ ಮೋಡಿ ಮಾಡುವ ಆಕರ್ಷಣೆ ಅವರ ಮುದ್ದಾದ ನಗುವಿನಲ್ಲಿದೆ.
ಕನ್ನಡದ ಕಿಸ್ ಸಿನಿಮಾದ ಮೂಲಕ ಗುರುತಿಸಿಕೊಂಡ ಶ್ರೀಲೀಲಾ, 2021ರಲ್ಲಿ ಪೆಲ್ಲಿ ಸಂದಡ್ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದರು. ಅಲ್ಲಿಂದ ಬಳಿಕ ಹಿಟ್ ಸಿನಿಮಾಗಳು, ಜನಪ್ರಿಯ ಹಾಡುಗಳ ಮೂಲಕ ಬೆಳೆಯುತ್ತಾ ಬಂದರು. ಇತ್ತೀಚೆಗೆ ಬಾಲಿವುಡ್‌ನಲ್ಲೂ ಅವಕಾಶಗಳು ದೊರೆಯುತ್ತಿದ್ದು, ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಶ್ರೀಲಿಲಾ ಕನಸಿಗೆ ರೆಕ್ಕೆ ಬರುವಂತೆ ಮಾಡಿದ್ದೇ ಇವರು
ಇನ್ನೂ ನಟನೆಯ ಜೊತೆಗೆ ಶಿಕ್ಷಣಕ್ಕೂ ಮಹತ್ವ ನೀಡಿದ್ದ ಇವರು, ತಮ್ಮ ಬಾಲ್ಯದ ಕನಸಾದ ಡಾಕ್ಟರ್ ಆಗುವ ಗುರಿಯನ್ನು ಬಿಡದೆ ಮುಂದುವರಿಸಿಕೊಂಡು ಬಂದಿದ್ದರು. ಸಿನಿಮಾ ಕ್ಷೇತ್ರದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಸಹ ಶ್ರೀಲೀಲಾ ತಮ್ಮ ಶಿಕ್ಷಣವನ್ನು ಕಡೆಗಣಿಸಲಿಲ್ಲ. ಅವರು ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವೈದ್ಯೆಯಾಗಿರುವ ತಾಯಿಯ ಪ್ರೇರಣೆಯಿಂದಲೇ ಚಿಕ್ಕ ವಯಸ್ಸಿನಿಂದಲೂ ಡಾಕ್ಟರ್ ಆಗಬೇಕೆಂವ ಆಸೆ ಅವರಲ್ಲಿತ್ತು. ಅವರ ಕನಸಿಗೆ ರೆಕ್ಕೆ ಬರುವಂತೆ ಆಸರೆಯಾಗಿ ಅವರ ಕುಟುಂಬ ಸಹಾಯ ಮಾಡಿದೆ.

ಅಭಿನಂದನೆಗಳ ಸುರಿಮಳೆ: ನಟನೆ, ನೃತ್ಯ ಮತ್ತು ಶಿಕ್ಷಣ ಮೂರು ಕ್ಷೇತ್ರಗಳಲ್ಲೂ ತಮ್ಮದೇ ಆದ ಚಾಪು ಮೂಡಿಸಿರುವ ಶ್ರೀಲೀಲಾ ಇದೀಗ ನಟಿಯಾಗಿ ಮಾತ್ರವಲ್ಲ, ವೈದ್ಯೆಯಾಗಿ ಸಹ ಹೊಸ ಅಧ್ಯಾಯ ಆರಂಭಿಸಲು ಸಿದ್ಧರಾಗಿದ್ದಾರೆ. ಅಭಿಮಾನಿಗಳು ಈಗ ಅವರನ್ನು ಡಾಕ್ಟರ್ ಲೀಲಾ ಎಂದು ಕರೆದು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಸಿನಿ ಕ್ಷೇತ್ರದ ನಟ, ನಟಿಯರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಸಹ ಅಭಿನಂದನೆಗಳನ್ನು ಸಿಳಿಸಿದ್ದಾರೆ.
#Sreeleela in her graduation stage 🎓🎓 pic.twitter.com/GtpzJOVLyh
— Abbishekh Raaja (@abbi0410) February 11, 2026
ಕಂಡ ಕನಸನ್ನ ನನಸು ಮಾಡಿಕೊಂಡ ಶ್ರೀಲಿಲಾ: ಒಟ್ಟಿನಲ್ಲಿ ಹೇಳುವುದಾದ್ರೆ ಸಾಮಾನ್ಯವಾಗಿ ಬಹುತೇಕ ಮಂದಿ ಒಂದು ಕ್ಷೇತ್ರದಲ್ಲಿ ದೊಟ್ಟ ಮಟ್ಟದಲ್ಲಿ ಯಶಸ್ಸು ಕಂಡರೆ ತಾವು ಕಂಡ ಕನಸನ್ನೇ ಮರೆತುಬಿಡುತ್ತಾರೆ. ಇನ್ನೂ ಕೆಲವೇ ಕೆಲವರು ಮಾತ್ರ ಎಂತಹ ದೊಡ್ಡ ಸಾಧನೆ ಮಾಡಿದರೂ ತಾವು ಕಂಡ ಕನಸುಗಳನ್ನು ಈಡೇರಿಸಿಕೊಳ್ಳದೆ ಬಿಡುವುದಿಲ್ಲ. ಈ ಗುಂಪಿಗೆ ಶ್ರೀಲಿಲಾ ಕೂಡ ಸೇರುತ್ತಾರೆ. ಈಗಾಗಲೇ ಅವರು ಸಿನಿಮಾಗಳನ್ನು ಯಶಸ್ಸಿನ ಹಾದಿ ಹಿಡಿದಿದ್ದಾರೆ. ಈ ನಡುವೆಯೇ ತಾನು ಚಿಕ್ಕ ವಯಸ್ಸಿನಲ್ಲಿ ಕಂಡಂತಹ ಎಂಬಿಬಿಎಸ್ ಪದವಿಯನ್ನು ಕೊನೆಗೂ ಪೂರ್ಣಗೊಳಿಸಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಅಂದ್ರೆ ತಪ್ಪಾಗಲಾರದು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications