ವಯಸ್ಸಿಗೆ ಬಂದೆ ಅಂತ ಆಶ್ರಮದಲ್ಲಿ ಬಿಟ್ರು, ವಾರಕ್ಕೊಬ್ಬ ಬಾಯ್‌ಫ್ರೆಂಡ್ ಅಂದ್ರು: ಸೀರಿಯಲ್ ನಟಿ ಸಿತಾರಾ
ಪಾರು ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಕಿರುತೆರೆ ನಟಿ ಸಿತಾರಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಸಿತಾರಾ ಹೆಚ್ಚಾಗಿ ವಿಲನ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಪಾರು ಧಾರಾವಾಹಿಯಲ್ಲಿ ಸಿತಾರಾ ಅವರು ನಟ ಆದಿತ್ಯ ಚಿಕ್ಕಮ್ಮ ದಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದಕ್ಕೂ ಮುನ್ನ ಕಸ್ತೂರಿ ನಿವಾಸ, ಅಗ್ನಿಸಾಕ್ಷಿ ಧಾರಾವಾಹಿಯಲ್ಲೂ ನೆಗಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಪರದೆ ಮೇಲೆ ವಿಲನ್ ಆಗಿ ಮಿಂಚಿರುವ ಅವರು ತಮ್ಮ ಬದುಕಿನಲ್ಲಿ ನಡೆದಿರುವ ಕೆಟ್ಟ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಸಿನಿಮಾ ಸೀರಿಯಲ್‌ಗಳಲ್ಲಿ ತಮಗೆ ಕರಾಳ ಅನುಭವಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.
'ಚಿಕ್ಕಂದಿನಿಂದಲೇ ಕಷ್ಟಗಳನ್ನು ನೋಡುತ್ತಾ ಬೆಳೆದೆ. ನನ್ನನ್ನ ಆಶ್ರಮದಲ್ಲಿ ಬಿಟ್ಟಿದ್ದರು. ಆಗ ಸ್ವಾಮೀಜಿ ಈ ಹೆಣ್ಣುಮಗು ವಯಸ್ಸಿಗೆ ಬರುವ ಸಮಯ. ಯಾರಾದರೂ ಜೊತೆಗೆ ಇರಬೇಕಲ್ಲ ಎಂದು ನಮ್ಮ ಕಡೆಯವರಿಗೆ ಹೇಳಿದ್ರು, ಆಗ ಅವರು ಬಂದು ನನ್ನ ಮನೆಗೆ ಕರೆದುಕೊಂಡು ಹೋಗಿದ್ರು. ಆಗ ಒಂದು ವಾರಕ್ಕೆಲ್ಲ ನಾನು ವಯಸ್ಸಿಗೆ (ಮೆಚೂರ್) ಬಂದೆ. ತಕ್ಷಣ ನನ್ನ ಆಶ್ರಮದಲ್ಲಿ ಬಿಟ್ಟು ಬಂದ್ರು. ಆಗ ಒಂದು ಐದು ದಿನ ನನಗೆ ತುಂಬಾ ಕಷ್ಟವಾಗಿತ್ತು. ಆಗ ಆಶ್ರಮದವರೇ ನನ್ನ ನೋಡಿಕೊಂಡರು' ಎಂದು ಸಿತಾರಾ ಅವರು ವಿನಯ ಸನಾತನಿ ಶೋ ಯೂಟ್ಯೂಬ್ ಚಾಲನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಈಗ ಎಲ್ಲರೂ ನನ್ನ ಮನೆಗೆ ಕರೆಯುತ್ತಾರೆ. ನಾನು ನನ್ನ ಮನೆಯಲ್ಲಿ ತುಂಬಾ ಜನರನ್ನು ಸಾಕಿದ್ದೆ. ಹೆಣ್ಣು ಗಂಡು ಅನ್ನೋ ವ್ಯತ್ಯಾಸ ಇಲ್ಲದೆ ಕಷ್ಟದಲ್ಲಿದ್ದವರನ್ನು ಸಾಕಿದ್ದೇನೆ. ನನ್ನ ಜೊತೆಯಲ್ಲೇ ಇದ್ದು, ನಮ್ಮ ಮನೇಲೇ ತಿಂದು ಹೊರಗಡೆ ಹೋಗಿ ನನ್ನ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದ್ದಾರೆ. ಇದರಿಂದ ನನಗೆ ತುಂಬಾ ನೋವಾಯ್ತು. ಆಗ ನನ್ನ ಸಂಬಂಧಿಕರು ನನ್ನ ಹೊರಗೆ ಹಾಕಿದ್ದೇ ಒಳ್ಳೇದಾಯ್ತು ಅನಿಸಿತು. ಒಬ್ಬಳೇ ಬೆಳೆದಿದ್ದರಿಂದ ನನಗೆ ಇದೆಲ್ಲ ಚೆನ್ನಾಗಿ ಅರ್ಥ ಆಯ್ತು. ಇನ್ನೊಬ್ಬರಿಗೆ ಹರ್ಟ್ ಆಗುತ್ತೆ ಅಂತ ಗೊತ್ತಿದ್ರೂ ಏನಂದ್ರೆ ಅದು ಮಾತನಾಡುವವರಿದ್ದಾರೆ' ಎಂದು ಸಿತಾರಾ ಬೇಸರ ಹಂಚಿಕೊಂಡಿದ್ದಾರೆ.
ನನಗೆ ವಾರಕ್ಕೊಬ್ಬ ಬಾಯ್‌ಫ್ರೆಂಡ್
'ನನಗೆ ಸಾಮಾನ್ಯವಾಗಿ ಭಾವುಕ ಸಂದರ್ಭಗಳಲ್ಲಿ ಕಣ್ಣೀರು ಬರುತ್ತದೆ. ಹಲವರು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಆದರೆ ಜೊತೆಯಲ್ಲಿದ್ದವರೇ ನನ್ನ ಮೊಸಳೆ ಕಣ್ಣೀರು ಎಂದು ಹಾಸ್ಯ ಮಾಡುತ್ತಾರೆ. ನನಗೆ ವಾರಕ್ಕೊಬ್ಬ ಬಾಯ್‌ಫ್ರೆಂಡ್ ಅಂತೇ, ಹಾಗಂತ ಕಲಾಕ್ಷೇತ್ರದಲ್ಲಿ ಜನ ಮಾತನಾಡಿಕೊಳ್ತಿದ್ದಾರೆ ಅಂತ ನನ್ನ ಸ್ನೇಹಿತೆಯೊಬ್ಬಳು ಹೇಳಿದಳು. ಇದು ನನಗೆ ನಿಜಕ್ಕೂ ಅರ್ಥವಾಗಲಿಲ್ಲ. ಅದು ಹೇಗೆ ಒಬ್ಬ ವ್ಯಕ್ತಿ ಬಗ್ಗೆ ಜನ ಹೀಗೆಲ್ಲ ಮಾತನಾಡ್ತಾರೆ. ಇದು ನನಗೆ ತುಂಬಾ ನೋವಾಗಿರುವ ವಿಷಯ' ಎಂದು ಕಣ್ಣೀರು ಹಾಕಿದ್ದಾರೆ.
'ಸೀರಿಯಲ್ ಹಾಗೂ ಸಿನಿಮಾದಲ್ಲಿ ಹೀಗೆಲ್ಲ ನಡೆಯಲ್ಲ. ಅಲ್ಲಿ ಬೇರೆಯೇ ನಡೆಯುತ್ತೆ. ಅಲ್ಲಿ ಬೇರೆ ರೀತಿ ಹರ್ಟ್ ಮಾಡ್ತಾರೆ. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಮ್ಮನ್ನ ಕುಗ್ಗಿಸುವ ಕೆಲಸ ಮಾಡ್ತಾರೆ. ಪರದೆ ಮುಂದೆ ಮತ್ತೆ ಬರಲೇಬಾರದು ಆ ರೀತಿ ನಮ್ಮನ್ನ ಕುಗ್ಗಿಸ್ತಾರೆ. ಸ್ಕ್ರೀನ್‌ನಲ್ಲಿ ನೀನು ಹೇಗೆ ಬರ್ತೀಯೋ ನೋಡ್ತೀನಿ ಅಂತಾರೆ. ಇದಕ್ಕೆ ಹೆದರಿ ಎಷ್ಟೋ ಜನ ಸುಮ್ಮನೆ ನೋವು ನುಂಗಿಕೊಂಡು ಇದ್ದಾರೆ. ಯಾವ ತರ ಅಂದ್ರೆ ನೀವು ಏನ್ ಹೇಳಿದ್ರೂ ಓಕೆ ಅಂತಾರೆ. ಇದಕ್ಕೆ ಜೊತೆಯಲ್ಲಿರುವವರು ಇವಳು ಎಲ್ಲದಕ್ಕೂ ಓಕೆ ಅಂದಿರ್ತಾಳೆ ಅದಕ್ಕೆ ಎಲ್ಲ ಸೀರಿಯಲ್‌ನಲ್ಲಿ ಇರುತ್ತಾಳೆ, ಇವಳಿಗೆ ಯಾರ ಜೊತೆನೋ ಸಂಬಂಧ ಇದೆ ಎಂದು ಮಾತನಾಡಿಕೊಳ್ತಾರೆ. ಆದರೆ ನಮ್ಮ ಕಷ್ಟ ನಮಗೆ ಮಾತ್ರ ಗೊತ್ತಿರುತ್ತೆ' ಎಂದು ಸೀತಾರಾ ಹೇಳಿದ್ದಾರೆ.
ಫ್ರೆಂಡ್ ಆದ್ರೆ ನಿನ್ ಜೊತೆಗೂ ಮಲಗುತ್ತಾಳೆ ಅಂದ್ರು!
'ನಾನು ಒಬ್ಬರೊಂದಿಗೆ ಫ್ರೆಂಡ್‌ಶಿಪ್ ಎಂದು ನಿರ್ಧಾರ ಮಾಡುವುದಕ್ಕೂ ಮುಂಚೆಯೇ ನನ್ನೊಂದಿಗೆ ಅವರು ಕೆಟ್ಟದಾಗಿ ಅಸಭ್ಯವಾಗಿ ವರ್ತಿಸಿದ್ದರು. ನನ್ನ ಸಹಾಯ ಪಡೆದು ನನ್ನ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಿದ್ರು. ನಾನು ಅವಳೊಂದಿಗೆ ಮಲಗಿದ್ದೆ, ಎಲ್ಲ ರೀತಿ ಅನುಭವ ಆಗೋಗಿದೆ. ನೀನೂ ಹೋಗಿ ಫ್ರೆಂಡ್ ಆಗು. ನಿನ್ ಜೊತೆಗೂ ಮಲಗುತ್ತಾಳೆ ಎಂದು ನನ್ನ ಸ್ನೇಹಿತರೇ ನನ್ನ ಬಗ್ಗೆ ಈ ಮಾತುಗಳನ್ನು ಹೇಳಿದ್ದರು. ಇದನ್ನು ಕೇಳಿ ನನಗೆ ತುಂಬಾ ನೋವಾಗಿತ್ತು' ಎಂದು ಸಿತಾರಾ ಬೇಸರ ಹಂಚಿಕೊಂಡಿದ್ದಾರೆ.
'ಗಂಡು ಮಕ್ಕಳು ಏನು ಮಾಡಿದ್ರೂ ನಡೆಯುತ್ತೆ. ಗಂಡಸರು ಎಷ್ಟು ಜನರನ್ನಾದರೂ ಮದುವೆಯಾದರೂ, ಎಷ್ಟು ಜನರ ಜೊತೆ ಮಲಗಿದರೂ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಯಲ್ಲಿ ಅವರನ್ನು ನೋಡುವುದಿಲ್ಲ, ಅಂತಹ ಹೆಣ್ಣುಮಕ್ಕಳಿಗೆ ಕರೆಯೋ ಹೆಸರುಗಳಿಂದಲೂ ಕರೆಯಲ್ಲ. ಅದೇ ಗಂಡಸರ ವಿಚಾರಕ್ಕೆ ಬಂದರೆ ಸಲೀಸಾಗಿ ನಾನು ಅವಳೊಂದಿಗೆ ಮಲಗಿದ್ದೆ, ಅವಳಿಗೆ ಮುತ್ತು ಕೊಟ್ಟಿದ್ದೆ, ಅವಳು ಸರಿಯಿಲ್ಲ, ಅವಳು ಕೆಟ್ಟವಳು ಅಂತಾರೆ. ಇದೇ ವಿಚಾರಕ್ಕೆ ನನಗೆ ಸ್ನೇಹಿತರ ಮೇಲೆ ಅಸಹ್ಯ ಹುಟ್ಟಿತು' ಎಂದಿದ್ದಾರೆ.












Click it and Unblock the Notifications