ನಟ ಪುನೀತ್ ರಾಜ್‌ಕುಮಾರ್ ಹುಡುಗರು ಚಿತ್ರದಲ್ಲಿ 'ಪಂಕಜ' ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಹೃದಯಾಘಾತದಿಂದ ನಿಧನ

Shefali Jariwala passed away: ಕನ್ನಡ ಸ್ಟಾರ್ ನಟ ಡಾ.ಪುನೀತ್ ರಾಜ್‌ಕುಮಾರ್ ಜೊತೆ ಹುಡುಗರು ಸಿನಿಮಾದಲ್ಲಿ ಸಾಂಗ್‌ವೊಂದಕ್ಕೆ ನೈತ್ಯ ಮಾಡಿದ್ದ ನಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಾಗಾದ್ರೆ ಅವರು ಯಾರು ಹಾಗೂ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಡಾ.ಪುನೀತ್ ರಾಜ್‌ಕುಮಾರ್‌ ಅವರ ನಟನೆಯ ಹುಡುಗರು ಸಿನಿಮಾದಲ್ಲಿ 'ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೌಕರಿ, ತೊಂದ್ರೆ ಇಲ್ಲ ಪಂಕಜ' ಎನ್ನುವ ಹಾಡಿನಲ್ಲಿ ನೃತ್ಯ ಮಾಡಿದ್ದ ನಟಿ ಶೆಫಾಲಿ ಜರಿವಾಲಾ (42) ಹೃದಯಾಘಾತದಿಂದ ನಿಧನರಾಗಿದ್ದಾರೆ.

Actress Shefali Jariwala passed away due to Heart Attack

ಹಿಂದಿ ಬಿಗ್​ ಬಾಸ್​ 13ರ ಸ್ಪರ್ಧಿ ಕಿರುತೆರೆ ನಟಿ ಶೆಫಾಲಿ ಜರಿವಾಲಾ (42) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಟಿಯ ಆಪ್ತ ಸಂಬಂಧಿಕರ ಪ್ರಕಾರ, ಶುಕ್ರವಾರ ತಡರಾತ್ರಿ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶೆಫಾಲಿ ಅವರಿಗೆ ಹೃದಯಾಘಾತ ಆದ ಬಳಿಕ ಅವರ ಪತಿ ಪರಾಗ್ ತ್ಯಾಗಿ ಅವರು ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ವರದಿ ಆಗಿದೆ.

ಇನ್ನು ಶೆಫಾಲಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. 2000ರ ದಶಕದಲ್ಲಿ ತಮ್ಮ ರೀಮಿಕ್ಸ್ ವಿಡಿಯೋ 'ಕಾಂತ ಲಗಾ' ಮೂಲಕ ಶೆಫಾಲಿ ಜರಿವಾಲಾ ತುಂಬಾ ಪ್ರಸಿದ್ಧಿ ಪಡೆದವರಾಗಿದ್ದರು ಶೇಪಾಲಿ.

ಬಳಿಕ ಸ್ಟಾರ್ ನಟ ಸಲ್ಮಾನ್ ಖಾನ್ ಸೇರಿ ಹಲವು ನಟರ ಜೊತೆ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ಹಿಂದಿ ಬಿಗ್​ ಬಾಸ್​ 13ರಲ್ಲಿ ಸ್ಪರ್ಧಿ ಆಗಿದ್ಧರು. ಬಿಗ್ ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲೂ ಶೆಫಾಲಿ ಜರಿವಾಲಾ ಪಾಲ್ಗೊಂಡಿದ್ದಾರೆ.

ನಿನ್ನೆ ರಾತ್ರಿ ಹೃದಯಾಘಾತದಿಂದ ಕುಸಿದು ಬಿದ್ದ ಹಿನ್ನೆಲೆ ಅವರನ್ನು ತಕ್ಷಣ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷೆಯ ಬಳಿಕ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಇನ್ನು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಶೆಫಾಲಿ ಅವರ ಪತಿ ಮತ್ತು ನಟ ಪರಾಗ್ ತ್ಯಾಗಿ ಸೇರಿದಂತೆ ಮೂವರು ನಟಿನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆ ತಲುಪುವ ಮೊದಲೇ ಶೆಫಾಲಿ ಮೃತಪಟ್ಟಿದ್ದಾರೆ ಎಂದು ಮೂಲಳಿಂದ ತಿಳಿದುಬಂದಿದೆ. ನಟಿ ಶೆಫಾಲಿ ಜರಿವಾಲ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಕೆಲ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+