'ಅವರು ನನ್ನ ಜೊತೆ ಇಲ್ಲ': ಬಾಯ್‌ಫ್ರೆಂಡ್ ಬಗ್ಗೆ ನಟಿ ಸಪ್ತಮಿ ಗೌಡ ಹೇಳಿದ್ದೇನು..?
ಕನ್ನಡ ಚಿತ್ರರಂಗದ ನಟ ಯುವ ರಾಜ್‌ಕುಮಾರ್ ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಸದ್ಯ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ವಿಚ್ಛೇದನ ಪ್ರಕರಣದಲ್ಲಿ ನಟಿ ಸಪ್ತಮಿ ಗೌಡ ಹೆಸರು ತಳುಕು ಹಾಕಿಕೊಂಡಿದ್ದು, ಕಾಂತಾರ ನಟಿಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಯುವ ರಾಜ್‌ಕುಮಾರ್ ನಟಿ ಸಪ್ತಮಿ ಗೌಡ ಜೊತೆ ಸಂಬಂಧ ಹೊಂದಿದ್ದಾರೆ ಎನ್ನುವುದಾಗಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದಾರೆ. ಈ ಸುದ್ದಿ ಬಹಿರಂಗವಾದ ಬೆನ್ನಲ್ಲೇ ಸಪ್ತಮಿ ಗೌಡ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಸೀಜನ್ 3ರ ಗ್ರಾಂಡ್ ಫಿನಾಲೆ ಇತ್ತೀಚಿಗಷ್ಟೇ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ನಟಿ ಸಪ್ತಮಿ ಗೌಡ ಭಾಗಿಯಾಗಿದ್ದು, ಈ ವೇಳೆ ಸಪ್ತಮಿ ಗೌಡ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್ ಸೀಜನ್ 3ರ ನಿರೂಪಕಿ, ಸಪ್ತಮಿ ಗೌಡ ಅವರಿಗೆ ಬಾಯ್‌ಫ್ರೆಂಡ್ ಇದ್ದಾರಾ..? ಹೊಸ ಅಪ್ಲೀಕೇಶನ್‌ಗೆ ಅವಕಾಶ ಇದೆಯಾ..? ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಸಪ್ತಮಿ ಗೌಡ, ಬಾಯ್‌ಫ್ರೆಂಡ್ ಇದ್ದರು, ಈಗ ಇಲ್ಲ ಎಂದಿದ್ದಾರೆ. ಇದ್ರೂ ಈಗಿಲ್ಲ ಅಂದರೆ ಏನರ್ಥ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಪ್ತಮಿ ಗೌಡ, ಅವರು ಇದ್ದಾರೆ, ನನ್ನ ಜೊತೆ ಇಲ್ಲ ಅಷ್ಟೇ ಎಂದು ಹೇಳಿ ನಕ್ಕಿದ್ದಾರೆ.
ಹೊಸ ಅಪ್ಲೀಕೇಶನ್‌ಗೆ ಅವಕಾಶ ಇದೆಯಾ..? ಎನ್ನುವುದಕ್ಕೆ ಉತ್ತರಿಸಿದ ಅವರು, ಸದ್ಯಕ್ಕೆ ಇಲ್ಲ ಎಂದಿದ್ದಾರೆ. ಯಾಕೆಂದರೆ ನನಗೆ ಈಗ ಕೆಲಸ ಸಿಕ್ಕಾಪಟ್ಟೆ ಮುಖ್ಯವಾಗಿದೆ. ಅದರ ಮೇಲೆ ಫೋಕಸ್ ಮಾಡುತ್ತಿದ್ದೇನೆ. ಬೇರೆಯದಕ್ಕೆ ಸಮಯ ಇಲ್ಲ. ಹೀಗಾಗಿ ಅಪ್ಲೀಕೇಶನನ್ನೂ ಯಾರಿಂದನೂ ತೆಗೆದುಕೊಳ್ಳುತ್ತಿಲ್ಲ. ಟೈಮ್ ಇಲ್ಲ ಹೀಗಾಗಿ ಅದಕ್ಕೆ ಬ್ರೇಕ್ ಕೊಡಲಾಗಿದೆ ಎಂದು ಸಪ್ತಮಿ ಗೌಡ ತಿಳಿಸಿದ್ದಾರೆ.

ಬಾಯ್‌ಫ್ರೆಂಡ್ ಇಲ್ಲ, ಆದ್ರೆ ಸದ್ಯ ಹೊಸ ಅಪ್ಲೀಕೇಶನ್‌ಗೆ ಅವಕಾಶವೂ ಇಲ್ಲ ಎನ್ನುವ ಸಪ್ತಮಿ ಗೌಡ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಪ್ತಮಿ ಗೌಡ ವಿರುದ್ಧ ಶ್ರೀದೇವಿ ಭೈರಪ್ಪ ಆರೋಪವೇನು..?
ನಟ ಯುವ ರಾಜ್‌ಕುಮಾರ್ ಕಳುಹಿಸಿರುವ ವಿಚ್ಛೇದನ ನೋಟಿಸ್‌ಗೆ ರಿಪ್ಲೈ ನೋಟಿಸ್ ನೀಡಿರುವ ಶ್ರೀದೇವಿ ಭೈರಪ್ಪ, 'ಸಪ್ತಮಿ ಗೌಡ ಜೊತೆಗೆ ಯುವ ರಾಜ್‌ಕುಮಾರ್ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದರು. ಪ್ರೀತಿಸಿ ಮದುವೆಯಾದ ಯುವ ರಾಜ್‌ಕುಮಾರ್, ಬಳಿಕ ಸಪ್ತಮಿ ಗೌಡ ಹಿಂದೆ ಬಿದ್ದಿದ್ದಾರೆ' ಎಂದು ಗಂಭೀರವಾಗಿ ಆರೋಪಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications