ನಟಿ ರೀಷ್ಮಾ ನಾಣಯ್ಯ-ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸಂಬಂಧಿಗಳು, ಹೇಗೆ?
ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುತ್ತಿರುವ ಏಕ್ ಲವ್ ಯಾ ಬೆಡಗಿ ರೀಷ್ಮಾ ನಾಣಯ್ಯ ಅವರ ಕುರಿತು ಹೊಸ ವಿಚಾರವೊಂದು ಹೊರಬಿದ್ದಿದೆ. ಮೂಲತಃ ಕೊಡಗಿನವರಾದ ರೀಷ್ಮಾ ನಾಣಯ್ಯ ಅವರು ಬೆಂಗಳೂರು ಮಾಜಿ ಪೊಲೀಸ್ ಕಮೀಷನರ್ ಹಾಗೂ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಈ ವಿಚಾರ ರಿವೀಲ್ ಆಗಿದ್ದು, ರೀಷ್ಮಾ ಹಾಗೂ ಭಾಸ್ಕರ್ ರಾವ್ ಅವರು ಬಂಧುತ್ವ ಹೇಗೆ? ಎನ್ನುವ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ.
ಕೊಡಗಿನ ಕುವರಿ ನಟಿ ರೀಷ್ಮಾ ನಾಣಯ್ಯ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಬಳಿಕ ಸ್ಟಾರ್ ನಟರ ಸಿನಿಮಾಗಳಲ್ಲಿ ರೀಷ್ಮಾ ಬ್ಯುಸಿಯಾಗಿದ್ದಾರೆ. ಉಪೇಂದ್ರ, ಧ್ರುವ ಸರ್ಜಾ ಅವರೊಂದಿಗೆ ತೆರೆ ಹಂಚಿಕೊಂಡು ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೀಗ ಅವರು ಭಾಸ್ಕರ್ ರಾವ್ ಅವರ ನೆಂಟರೂ ಆಗಿದ್ದಾರೆ.

ಭಾರತೀಯ ರಾಜಕಾರಣಿ ಮತ್ತು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಅವರು 2 ಆಗಸ್ಟ್ 2019 ರಿಂದ 1 ಆಗಸ್ಟ್ 2020 ರವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಹೌದು, ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಪುತ್ರ ಅನಿರುದ್ಧ್ ಅವರು ರೀಷ್ಮಾ ಅವರ ಮನೆಯ ಅಳಿಯನಾಗಿದ್ದಾರೆ. ಅಂದರೆ ರೀಷ್ಮಾ ನಾಣಯ್ಯ ಅಕ್ಕನನ್ನು ಅನಿರುದ್ಧ್ ಮದುವೆಯಾಗಿದ್ದಾರೆ. ನಟಿ ರೀಷ್ಮಾ ಅವರ ಅಕ್ಕ ವಿಷ್ಮಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಮೂಲಕ ಎರಡೂ ಕುಟುಂಬಗಳ ನಡುವೆ ಬಂಧುತ್ವ ಏರ್ಪಟ್ಟಿದೆ. ಇತ್ತೀಚೆಗೆ ವಸಂತನಗರದ ಕೊಡವ ಸಮಾಜದಲ್ಲಿ ಇವರ ಮದುವೆ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ಅಕ್ಕನ ಮದುವೆಯಲ್ಲಿ ರೀಷ್ಮಾ ಫುಲ್ ಮಿಂಚಿದ್ದಾರೆ. ಮದುವೆಯ ಫೋಟೊ, ವಿಡಿಯೋಗಳು ವೈರಲ್ ಆಗಿವೆ.

17 ವಯಸ್ಸಿನಲ್ಲೇ ರೀಷ್ಮಾ ಏಕ್ ಲವ್ ಯಾ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಈ ಸಿನಿಮಾ ರಿಲೀಸ್ ಆದಾಗ 18 ವರ್ಷವಾಗಿತ್ತು. ಇದಾದ ನಂತರ ರಾಣಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಾನ ದಾರಿಯಲ್ಲಿ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಉಪೇಂದ್ರ ಅವರ ಯುಐ ಸಿನಿಮಾದಲ್ಲಿ ಟ್ರೋಲ್ ಆಗುತ್ತೆ ಸಾಂಗ್ ಮೂಲಕ ರೀಷ್ಮಾ ಗಮನಸೆಳೆದಿದ್ದರು. ಸದ್ಯ ಅವರು ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಸದ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಭಾಸ್ಕರ್ ರಾವ್ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು. ತಾವೇ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯದತ್ತ ಮಾಡಿದ್ದರು. ಹಿರಿಯ ಐಪಿಎಸ್ ಅಧಿಕಾರಿಯಾದ ಭಾಸ್ಕರ್ ರಾವ್ ಅವರು 2019ರಿಂದ 2020ರವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.












Click it and Unblock the Notifications