ಕಿಚ್ಚ ಸುದೀಪ್ ಜೊತೆಗೆ ನಟಿಸಿದ್ದ ಕನ್ನಡದ ನಾಯಕಿ ಬಾಳಲಿ ಬಿರುಕು
ಬೆಂಗಳೂರು, ಏಪ್ರಿಲ್ 02: ಐಪಿಎಸ್ ಅಧಿಕಾರಿ ಪುತ್ರಿಯಾಗಿರುವ ರನ್ಯಾ ಬಣ್ಣದ ಲೋಕದಲ್ಲಿ ಜನಪ್ರಿಯರಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ 'ಮಾಣಿಕ್ಯ' ಚಿತ್ರದಲ್ಲಿ ನಾಯಕ ನಟಿಯಾಗಿ ರಾನ್ಯಾ ನಟಿಸಿದ್ದರು. ಮಾಣಿಕ್ಯ ಚಿತ್ರದಲ್ಲಿ ಮಾನಸಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ರನ್ಯಾ ರಾವ್ ಅವರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ನಟ ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾದ ನಟಿ ರನ್ಯಾ ರಾವ್‌ನನ್ನು ಬಂಧಿಸಲಾಗಿದೆ.
ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ದುಬೈನಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ 14.8 ಕೆ.ಜಿ ಚಿನ್ನಾಭರಣ ಅಕ್ರಮವಾಗಿ ತಂದಿದ್ದ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 03 ಸೋಮವಾರ ತಡರಾತ್ರಿ ಬಂಧಿಸಲಾಗಿತ್ತು. ಸದ್ಯ ನಟಿ ರನ್ಯಾ ರಾವ್ ಅವರನ್ನ ಬಂಧಿಸಲಾಗಿದ್ದು, ಜೈಲಿನಲ್ಲಿರುವ ರನ್ಯಾ ರಾವ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ನಟ ಕಿಚ್ಚ ಸುದೀಪ್ ಜೊತೆಗೆ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ ನಂತರ ಜೂನ್ 2015 ರಲ್ಲಿ ಎರಡನೇ ಚಿತ್ರ ಮತ್ತು ಮೊದಲ ತಮಿಳು ಚಿತ್ರ ವಾಗಾ ಗೆ ಸಹಿ ಹಾಕಿದ್ದರು, ಇದಾದ ನಂತರ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿಯನಯದ ಪಟಾಕಿ ಸಿನಿಮಾದಲ್ಲಿ ಕಾಣಿಸಿಕೊಂಡರು. ಇನ್ನೂ ವಿಕ್ರಮ್ ಪ್ರಭು ಜೊತೆ ನಟಿಸಿದ್ದಾರೆ . 2017 ರಲ್ಲಿ ಬಿಡುಗಡೆಯಾದ ಕನ್ನಡದ ಹಾಸ್ಯ ಚಿತ್ರ ಪಟಾಕಿಯಲ್ಲಿ , ಅವರು ಪತ್ರಕರ್ತೆ ಸಂಗೀತಾ ಪಾತ್ರವನ್ನು ನಿರ್ವಹಿಸಿದರು. ಗಣೇಶ್ ನಿರ್ವಹಿಸಿದ ಪೊಲೀಸ್ ಅಧಿಕಾರಿಯ ಪ್ರೇಯಸಿ ಪಾತ್ರ ಆಗಿತ್ತು.
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಾಲ್ಕೈದು ತಿಂಗಳ ಹಿಂದೆ ರನ್ಯಾ ರಾವ್ ಅವರು ಮದುವೆಯಾಗಿದ್ದರು, ಮದುವೆಯಾದಾಗಿನಿಂದ ರನ್ಯಾ ಜೊತೆಗೆ ಒಂದಲ್ಲ ಒಂದು ನೋವು ಅನುಭವಿಸಿತ್ತಾ ಅಂತರ ಕಾಯ್ದುಕೊಂಡಿದ್ದ ಪತಿ ಜತೀನ್ ಹುಕ್ಕೇರಿ ಅವರು ಇದೀಗ ರನ್ಯಾ ರಾವ್ ಅವರಿಗೆ ಗುಡ್‌ಬೈ ಹೇಳಲು ನಿರ್ಧಾರ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ಜೈಲಲ್ಲಿರುವ ಆರೋಪಿ, ನಟಿ ರನ್ಯಾ ರಾವ್ ಅವರಿಗೆ ಇಂದು ಪತಿ ಜತೀನ್ ಹುಕ್ಕೇರಿ ಅವರು ಡಿವೋರ್ಸ್ ನೀಡುತ್ತಿದ್ದಾರೆ. ಇಂದು(ಏಪ್ರಿಲ್ 02, ಬುಧವಾರ) ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದೇನೆ ಎಂದುರನ್ಯಾ ರಾವ್ ಪತಿ ಜತೀನ್ ಹುಕ್ಕೇರಿ ಅವರು ಮಾಹಿತಿ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾದ ನಟಿ ರನ್ಯಾ ರಾವ್ ಅವರು ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಅಲ್ಲದೇ ರನ್ಯಾ ರಾವ್‌ಗೆ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡಿದೆ. ಜಾಮೀನು ಸಿಗದ ಟೆನ್ಷನ್ ಮಧ್ಯೆ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮದುವೆಯಾದ ದಿನದಿಂದಲೂ ಹಲವು ಸಂಕಷ್ಟಗಳನ್ನ ಅನುಭವಿಸಿರುವ ರನ್ಯಾ ರಾವ್ ಪತಿ ಇದೀಗ ಡಿವೋರ್ಸ್ ಗೆ ಮುಂದಾಗಿದ್ದಾರೆ. ಮದುವೆಯಾದಾಗಿನಿಂದ ಜಿತೀನ್ ಹಾಗೂ ರನ್ಯಾ ರಾವ್ ಜೊತೆಗೆ ಒಂದಲ್ಲ ಒಂದು ಭಿನ್ನಾಭಿಪ್ರಾಯಗಳಿತ್ತು. ಕೆಲವು ತಿಂಗಳಿಂದ ಇಬ್ಬರು ಅಂತರ ಕಾಯ್ದುಕೊಂಡಿದ್ದರು. ಇದೀಗ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಸಿಕ್ಕಿಬಿದ್ದಿರುವ ರನ್ಯಾ ರಾವ್ ಅವರ ಜೊತೆಗಿನ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ರನ್ಯಾ ಅವರ ಪತಿ ಜಿತೀನ್ ಅವರು ಮುಂದಾಗಿದ್ದಾರೆ.












Click it and Unblock the Notifications