Viral: ಅಳಿಲಿನ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಪುಟಾಣಿಗಳು: ಇಂತಹ ಮಕ್ಕಳನ್ನ ಬೆಳೆಸಬೇಕು ಎಂದ ನಟಿ ರಮ್ಯಾ

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ಹರಿದಾಡುತ್ತವೆ. ಆದರೆ ಕೆಲವು ವಿಡಿಯೋಗಳು ನಮ್ಮ ಮನಸ್ಸಿನ ತಂತಿಯನ್ನು ಮೀಟುವಂತಿರುತ್ತವೆ. ಅಂತಹದ್ದೇ ಒಂದು ಅಪರೂಪದ ಹಾಗೂ ಅಷ್ಟೇ ಭಾವುಕ ಮುಗ್ಧ ಮಕ್ಕಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇದು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರ ಮನ ಗೆದ್ದಿದೆ.

'ರಾಮು' ಎಂಬ ಅಳಿಲಿಗೆ ಮಕ್ಕಳ ಕಣ್ಣೀರಿನ ವಿದಾಯ

ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಕ್ಕಳ ಗುಂಪೊಂದು ತಮಗೆ ಹತ್ತಿರವಾಗಿದ್ದ 'ರಾಮು' ಹೆಸರಿನ ಅಳಿಲು ಸತ್ತಾಗ ಅದರ ಅಂತ್ಯಕ್ರಿಯೆ ಮಾಡಿರುವ ಹೃದಯಸ್ಪರ್ಶಿ ದೃಶ್ಯವಿದೆ. ಮನುಷ್ಯರು ಸತ್ತಾಗ ಹೇಗೆ ಶಾಸ್ತ್ರೋಕ್ತವಾಗಿ, ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುತ್ತಾರೋ, ಅದೇ ರೀತಿ ಈ ಪುಟಾಣಿಗಳು ಅಳಿಲಿನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Actress Ramya

ವಿಡಿಯೋದಲ್ಲಿ ಸಣ್ಣದೊಂದು ಸಮಾಧಿ ಅಗೆದು, ಅದರಲ್ಲಿ ಹೂವುಗಳನ್ನು ಇಟ್ಟು ಅಳಿಲನ್ನು ಮಲಗಿಸಲಾಗಿದೆ. ಈ ವೇಳೆ ಪಕ್ಕದಲ್ಲಿದ್ದ ಮಕ್ಕಳು "ಕೊನೆಯ ಬಾರಿ ರಾಮು ಮುಖ ನೋಡು" ಎಂದಾಗ, ಅಲ್ಲೇ ಇದ್ದ ಪುಟ್ಟ ಹುಡುಗನೊಬ್ಬ ತನ್ನ ಗೆಳೆಯನನ್ನು ಕಳೆದುಕೊಂಡ ದುಃಖ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಕೊನೆಯಲ್ಲಿ ಮಕ್ಕಳೂ ಸೇರಿದಂತೆ ಎಲ್ಲರೂ "ರಾಮು ಮತ್ತೆ ಹುಟ್ಟಿ ಬಾ..." ಎಂದು ಆ ಪುಟ್ಟ ಜೀವಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಕ್ಕಳ ಈ ಮೂಕ ಪ್ರಾಣಿ ಪ್ರೇಮ ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

Ramya Divya Spandana: ಬೀದಿ ನಾಯಿಗಳ ಹಿಂಸೆಗೆ ವಿರೋಧ: ರಸ್ತೆಗಿಳಿದು ಕಣ್ಣೀರು ಹಾಕಿದ ನಟಿ ರಮ್ಯಾ, ಇಲ್ಲಿದೆ ವೈರಲ್ ವಿಡಿಯೋ
Ramya Divya Spandana: ಬೀದಿ ನಾಯಿಗಳ ಹಿಂಸೆಗೆ ವಿರೋಧ: ರಸ್ತೆಗಿಳಿದು ಕಣ್ಣೀರು ಹಾಕಿದ ನಟಿ ರಮ್ಯಾ, ಇಲ್ಲಿದೆ ವೈರಲ್ ವಿಡಿಯೋ

ಮಕ್ಕಳ ಪ್ರೇಮಕ್ಕೆ ಫಿದಾ ಆದ ನಟಿ ರಮ್ಯಾ

ಈ ಭಾವುಕ ವಿಡಿಯೋ ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿ ರಮ್ಯಾ (ಸ್ಪಂದನಾ) ಅವರ ಗಮನ ಸೆಳೆದಿದೆ. ವಿಡಿಯೋ ನೋಡಿ ಮನಸೋತ ರಮ್ಯಾ ಅವರು ಕಮೆಂಟ್ ಮಾಡುವ ಮೂಲಕ ಮಕ್ಕಳ ಮುಗ್ಧತೆಯನ್ನು ಕೊಂಡಾಡಿದ್ದಾರೆ. "ನಮ್ಮ ಭೂಮಿಯ ಉತ್ತಮ ಭವಿಷ್ಯಕ್ಕಾಗಿ ನಾವು ಇಂತಹ ಮಕ್ಕಳನ್ನು ಬೆಳೆಸಬೇಕು. ನನ್ನ ಕಡೆಯಿಂದ ನಿಮ್ಮೆಲ್ಲರಿಗೂ ತುಂಬಾ ಪ್ರೀತಿ" ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಪ್ರಾಣಿಗಳ ಪರ ಸದಾ ಧ್ವನಿ ಎತ್ತುವ ರಮ್ಯಾ

ನಟಿ ರಮ್ಯಾ ಅವರಿಗೆ ಪ್ರಾಣಿಗಳೆಂದರೆ ಅಪಾರ ಪ್ರೀತಿ ಮತ್ತು ಕಾಳಜಿ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ಅವರು ಮೂಕ ಜೀವಿಗಳ ಹಕ್ಕುಗಳ ಪರವಾಗಿ ಸರಣಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಬೀದಿನಾಯಿಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ರಮ್ಯಾ ಬಹಿರಂಗವಾಗಿಯೇ ಖಂಡಿಸಿದ್ದರು. "ಅವುಗಳು ಕೂಡ ನಮ್ಮಂತೆಯೇ ಜೀವಿಗಳು, ಅವಕ್ಕೂ ಬದುಕುವ ಹಕ್ಕಿದೆ" ಎಂದು ಧ್ವನಿ ಎತ್ತಿದ್ದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೀದಿನಾಯಿಗಳ ಮೇಲಿನ ದೌರ್ಜನ್ಯ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಖುದ್ದಾಗಿ ಭಾಗವಹಿಸಿದ್ದ ರಮ್ಯಾ, ಮೂಕ ಜೀವಿಗಳ ಕಷ್ಟವನ್ನು ನೆನೆದು ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದರು. ಅಳಿಲಿನ ಸಾವಿಗೆ ಮರುಗಿದ ಮಕ್ಕಳ ಈ ವಿಡಿಯೋ ಇಂದಿನ ಜಗತ್ತಿನಲ್ಲಿ ಪ್ರೀತಿ ಮತ್ತು ಕರುಣೆ ಇನ್ನು ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ರಮ್ಯಾ ಅವರ ಕಮೆಂಟ್ ಬಳಿಕ ಮತ್ತಷ್ಟು ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+