Rakshitha Prem: ಕಿಚ್ಚ ಸುದೀಪ್ ನನ್ನ ಫಸ್ಟ್& ಕ್ಲೋಸ್ ಫ್ರೆಂಡ್- ನಟಿ ರಕ್ಷಿತಾ ಪ್ರೇಮ್
ಕನ್ನಡ ಚಿತ್ರರಂಗದಲ್ಲಿ ಅನೇಕ ನಟ-ನಟಿಯರ ನಡುವೆ ಒಳ್ಳೆಯ ಸ್ನೇಹ ಹಾಗೂ ಉತ್ತಮ ಬಾಂಧವ್ಯ ಇದೆ. ಜೊತೆಗೆ ಸಿನಿಮಾ ಮಾಡಿದವರು, ತಮಗೆ ಅವಕಾಶಗಳನ್ನು ಕೊಟ್ಟವರು, ಸೆಟ್‌ನಲ್ಲಿ ಆಕಸ್ಮಾತ್ ಆಗಿ ಪರಿಚಯವಾಗಿ ಜೀವನಕ್ಕೆ ತುಂಬಾ ಕ್ಲೋಸ್ ಆದವರು ಹೀಗೆ ಕೆಲವರು ತಮ್ಮ ಕ್ಷೇತ್ರದಲ್ಲಿಯೇ ಬೆಸ್ಟ್ ಫ್ರೆಂಡ್‌ಗಳನ್ನು ಹೊಂದಿದ್ದಾರೆ. ಹೀಗೆಯೇ ನಟಿ ರಕ್ಷಿತಾ ಪ್ರೇಮ್ ಕೂಡ ಚಿತ್ರರಂಗದಲ್ಲಿ ಕೆಲವು ಆತ್ಮೀಯ ಸ್ನೇಹಿತರನ್ನು ಹೊಂದಿದ್ದು ತಮ್ಮ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
Rapid Rashmi ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ನಟಿ ರಕ್ಷಿತಾ ಪ್ರೇಮ್, ಕನ್ನಡ ಚಿತ್ರರಂಗದಲ್ಲಿ ನನ್ನ ಮೊದಲ ಫ್ರೆಂಡ್ ಸುದೀಪ್. ನನ್ನ ಎರಡನೇ ಸಿನಿಮಾ ಧಮ್ ಇದ್ದಿದ್ದು ಹೀಗಾಗಿ ನನ್ನ ಫಸ್ಟ್ ಫ್ರೆಂಡ್ ಕೆ. ಕಿಚ್ಚ ಸುದೀಪ್ ಅವರನ್ನು ನಾನು ಕೆ ಅಂತಾ ಕಳೆಯುತ್ತೇನೆ. ಅವರು ನನಗೆ ತುಂಬಾ ಕ್ಲೋಸ್ ಎಂದರು.

ಅವರನ್ನು ಬಿಟ್ಟರೆ ದರ್ಶನ್. ದರ್ಶನ್ ಮತ್ತು ನಾನು ಒಟ್ಟಿಗೆ ಕೆಲಸ ಮಾಡುವಾಗ ನನಗೆ ಅವರ ಜೊತೆ ಮಾತನಾಡಲು ತುಂಬಾ ಭಯ ಆಗುತ್ತಿತ್ತು. ಅವಾಗ ಅಷ್ಟು ಕ್ಲೋಸ್ ಇರಲಿಲ್ಲ ನಾವು. ಅವರಿಗೂ ಅದೇ ಭಯ ಇತ್ತು. ಗುರುಗಳ ಮಗಳು ತುಂಬಾ ಮರ್ಯಾದೆ ಕೊಡಬೇಕು ಎನ್ನುವುದೆಲ್ಲಾ ಇತ್ತು.
ಅದಾದ ಮೇಲೆ ನಾವು ತುಂಬಾ ಕ್ಲೋಸ್ ಆದೆವು. ಮೂರು ದಿನಕ್ಕೆ ಒಂದು ಸರಿ ಕಾಲ್ ಮಾಡಿ ಆರಾಮಾಗಿದ್ದೇವಾ ಎಂದು ವಿಚಾರಿಸುತ್ತಿದ್ದೆವು. ನಮ್ಮ ಮಧ್ಯೆ ಅಂತಹ ಬಾಂಧವ್ಯ ಇತ್ತು ಎಂದು ನಟ ದರ್ಶನ್ ಜೊತೆಗಿನ ಸ್ನೇಹ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಇವರಿಬ್ಬರನ್ನು ಬಿಟ್ಟು ನನ್ನ ಮೊದಲ ನಿರ್ದೇಶಕ ಪುರಿ ಜಗನ್ನಾಥ್ ನನ್ನ ಒಳ್ಳೆ ಸ್ನೇಹಿತ. ನಾವು ಎಲ್ಲಾ ವಿಚಾರಗಳನ್ನು ಮಾತನಾಡುತ್ತೇವೆ. ಪುರಿ ಜಗನ್ನಾಥ್ ನನ್ನ ಫ್ಯಾಮಿಲಿ ಇದ್ದಂತೆ. ಪ್ರೇಮ್‌ಗೂ ಕೂಡ ಅವರು ತುಂಬಾ ಕ್ಲೋಸ್. ಪ್ರೇಮ್ ರೆಕಾರ್ಡಿಂಗ್‌ಗೆ ಹೋದಾಗ ಅವರ ಮನೆಗೆ ಹೋಗಿ ಊಟ ಎಲ್ಲಾ ಮಾಡಿ ಬರುತ್ತಾರೆ ಎಂದರು.
ಇವರೆಲ್ಲರನ್ನೂ ಬಿಟ್ಟರೆ ಜಗಪತಿ ಬಾಬು ನನ್ನ ಕ್ಲೋಸ್ ಫ್ರೆಂಡ್. ನನಗೆ ಚಿತ್ರರಂಗದಲ್ಲಿ ಅನೇಕರು ಕ್ಲೋಸ್ ಫ್ರೆಂಡ್ಸ್ ಇದ್ದಾರೆ. ಇನ್ನು ಶಿವಣ್ಣ ಅವರ ಬಗ್ಗೆ ತುಂಬಾ ಗೌರವ ಇದೆ. ಅವರು ನಿಜಕ್ಕೂ ವಂಡರ್‌ಫುಲ್. ಅವರ ಹತ್ತಿರ ಮಾತನಾಡುವಾಗ ಸಿಕ್ಕಿ ತುಂಬಾ ಸಮಯ ಆಯ್ತು ಅಂತಾ ಅನಿಸೋದೇ ಇಲ್ಲ. ಅವರು ಕೂಡ ನನ್ನ ಆತ್ಮೀಯರು ನಟಿ ರಕ್ಷಿತಾ ಪ್ರೇಮ್ ಎಂದು ಹೇಳಿದ್ದಾರೆ.












Click it and Unblock the Notifications