Actress Rakshitha: ನಟ 'ಅಪ್ಪು' ಹಾಗೂ ದರ್ಶನ್ ಬಗ್ಗೆ ರಕ್ಷಿತಾ ಪ್ರೇಮ್ ಏನ್ ಹೇಳಿದ್ರು ಗೊತ್ತಾ?
Rakshitha: ನಟಿ ರಕ್ಷಿತಾ ಪ್ರೇಮ್ ಸಿನಿಮಾದಲ್ಲಿ ನಟನೆಗೆ ಭಾರೀ ಬೇಡಿಕೆ ಇತ್ತು. ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಇವರ ಮೊದಲ ಚಿತ್ರವಾಗಿದೆ. ಈ ಕ್ಷಣಗಳನ್ನು ಜೀ ಕನ್ನಡದಲ್ಲಿ ಪ್ರಸಾರವಾಗುವ ಡಿಕೆಡಿ (ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್) ವಿಶೇಷ ಶೋನಲ್ಲಿ ರಕ್ಷಿತಾ ಪ್ರೇಮ್ ಹಂಚಿಕೊಂಡಿದ್ದಾರೆ. ಇದೇ ವೇಳೆ ನಟ ದರ್ಶನ್ ಬಗ್ಗೆ ನೆನೆದು ಭಾವುಕ ಮಾತುಗಳನ್ನಾಡಿದ್ದಾರೆ. ಮಾಹಿತಿ ಇಲ್ಲಿದೆ ನೋಡಿ.
ಡಿಕೆಡಿ ವಿಶೇಷ ಶೋನಲ್ಲಿ ಗಿಲ್ಲಿ & ಗಗನ ಅವರು ಅಪ್ಪು ಅಭಿನಯದ ಅಭಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಅಪ್ಪು ಹಾಗೂ ಸುಂಟರಗಾಳಿ ಸಿನಿಮಾದ ಬಗ್ಗೆ ರಕ್ಷಿತಾ ಪ್ರೇಮನ್ ಅವರು ಮಾತನಾಡಿದ್ದಾರೆ. ದೊಡ್ಮನೆಯಿಂದಲೇ ಕನ್ನಡ ಸಿನಿಮಾ ರಂಗಕ್ಕೆ ಬಂದ ರಕ್ಷಿತಾ ಜೀವನದಲ್ಲಿ ಅಲ್ಲಿ ಅಪ್ಪು ಮೊದಲ ಚಿತ್ರ ಆಗಿದೆ. ಚಿತ್ರದ ಮೊದಲು ಹಾಡಿನ ಬಗ್ಗೆನೂ ವಿಶೇಷ ಪ್ರೀತಿಯಿದೆ. ಎಲ್ಲಿಂದ ಆರಂಭವೋ ಅನ್ನೋ ಹಾಡಿನ ಮೂಲಕವೇ ಫಸ್ಟ್ ಕ್ಯಾಮರಾ ಫೇಸ್ ಮಾಡಿರುವುದಾಗಿ ವೇದಿಕೆಯಲ್ಲಿ ರಕ್ಷಿತಾ ಪ್ರೇಮ್ ನೆನಪಿಸಿಕೊಂಡಿದ್ದಾರೆ. ಈ ವೇಳೆ ಸುಂಟರಗಾಳಿ ಸಿಸಿಮಾವನ್ನು ಕೂಡ ನೆನೆದಿದ್ದಾರೆ.

"ಈಗ ನಾನು ತುಂಬಾ ನೆನೆಸಿಕೊಳ್ಳುದು ಅಂದ್ರೆ ಅಪ್ಪು. ನನ್ನ ಲೈಫ್‌ನಲ್ಲಿ ಶೂಟ್ ಮಾಡಿದ ಎಲ್ಲಿಂದ ಆರಂಭವೋ ಮೊದಲನೆ ಹಾಡಾಗಿದೆ. ಅಪ್ಪು ರಿಲೀಸ್ ಆಗಿ 23 ವರ್ಷಗಳು ಆಯಿತು. ಅದು ಒಂದು ಉತ್ತಮ ನೆನಪಾಗಿ ಉಳಿದುಕೊಂಡಿದೆ. ನನ್ನ ಸಿನಿಮಾ ಕೆರಿಯರ್ ಮುಗಿದಿದ್ದು ಸುಂಟರಗಾಳಿ ಜೊತೆ. ಆಗ ನನಗೆ ಹಾಗೂ ದರ್ಶನ್‌ಗೆ ತುಂಬಾ ಇಷ್ಟ ಪಡೋರು," ಎಂದು ಹೇಳಿದ್ದಾರೆ.
ಹಾಗೆಯೇ ಇದೇ ವೇಳೆ ನಟಿ ರಕ್ಷಿತಾ ಪ್ರೇಮ್ ಅವರು ನಟ ದರ್ಶನ್ ಅಭಿನಯದ ಸುಂಟರಗಾಳಿ ಸಿನಿಮಾದ ನಿನ್ನಾಣೆ.. ನಿನ್ನಾಣೆ ಎಂಬ ಹಾಡಿಗೆ ವೇದಿಕೆ ಮೇಲೆ ಅಕುಲ್ ಬಾಲಾಜಿ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದರು.
ಅಪ್ಪು ಸಿನಿಮಾದಲ್ಲಿ ಒಂದು ಹಾಡಿದೆ. ಹಿಮಾಲಯದ ಹಿನ್ನೆಲೆಯಲ್ಲಿಯೇ ಈ ಒಂದು ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಎಲ್ಲಿಂದ ಆರಂಭವೋ ಎನ್ನುವ ಹಾಡಿಗಾಗಿಯೇ ರಕ್ಷಿತಾ ಪ್ರೇಮ್ ಫಸ್ಟ್ ಕ್ಯಾಮರಾ ಫೇಸ್ ಮಾಡಿದ್ದಾರೆ. ಈ ಹಾಡಿನ ಮೂಲಕವೇ ಅಭಿ ಚಿತ್ರದ ಚಿತ್ರೀಕರಣ ಶುರು ಆಗಿದೆ. ಈ ಒಂದು ಹಾಡು ನನ್ನ ಫಸ್ಟ್ ಡೇ ಶೂಟಿಂಗ್ ಆಗಿತ್ತು. ಈ ಹಾಡಿನ ಮೂಲಕವೇ ಅಭಿ ಚಿತ್ರದ ಶೂಟಿಂಗ್ ಶುರು ಆಗಿತ್ತು. ಇದು ನನ್ನ ಜೀವನದ ಮಹತ್ವದ ಸಿನಿಮಾ ಆಗಿದೆ ಎಂದು ರಕ್ಷಿತಾ ಹೇಳಿದ್ದಾರೆ.
ಇನ್ನು ಸುಂಟಗಾಳಿ ಸಿನಿಮಾನ ನನ್ನ ಸಿನಿಮಾ ಕ್ಯಾರಿಯರ್‌ನ್ ಕೊನೇ ಸಿನಿಮಾವಾಗಿದೆ. ದರ್ಶನ್ ಮತ್ತು ನನ್ನ ಬಗ್ಗೆ ಕೂಡ ಜನ ಮೆಚ್ಚಿಕೊಂಡಿದ್ದರು ಎಂದು ಹೇಳಿದರು. ಇನ್ನು ಅಯ್ಯ, ಮಂಡ್ಯ, ಸುಂಟರಗಾಳಿ, ಕಲಾಸಿಪಾಳ್ಯ ಹೀಗೆ ದರ್ಶನ್ ಜೊತೆ ರಕ್ಷಿತಾ ಪ್ರೇಮ್ ಸಿನಿಮಾ ಮಾಡಿದ್ದಾರೆ. ಈ ಮೂಲಕ ಜನರ ಮನಸ್ಸನ್ನು ಗೆದ್ದಿದ್ದರು.
ಹಾಗೆಯೇ ರಕ್ಷಿತಾ ಪ್ರೇಮ್ ಅವರನ್ನು ದರ್ಶನ್ ತಮ್ಮ ಗುರುಗಳ ಮಗಳು ಎಂದು ಹೆಚ್ಚು ಗೌರವ ಕೊಡುತ್ತಿದ್ದರು. ಬಿ.ಸಿ.ಗೌರಿಶಂಕರ್ ಪುತ್ರಿ ರಕ್ಷಿತಾ ಅಲ್ವೇ? ಹಾಗೇನೆ ದರ್ಶನ್ ಇದೇ ಗೌರಿಶಂಕರ್ ಅವರ ಬಳಿಯೇ ಕೆಲಸ ಮಾಡಿದ್ದರು. ಆದ್ದರಿಂದ ಆ ಗೌರವವನ್ನು ಹಾಗೆಯೇ ಉಳಿಸಿಕೊಂಡಿದ್ದರು. ಸ್ಟಾರ್ ಆದ್ಮೇಲೂ ನಮ್ಮ ಗುರುಗಳ ಮಗಳು ಅಂತಲೂ ದರ್ಶನ್ ಹೇಳಿರುವ ಉದಾಹರಣಡಗಳೂ ಇವೆ.
ಇನ್ನು ಇದೀಗ ನಟ ದರ್ಶನ್ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದದ್ದಾರೆ. ಇಂದು (ಸೆಪ್ಟೆಂಬರ್ 23) ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾಯಲಯದ ತೀರ್ಪು ಏನು ಬರಲಿದೆ ಎಂದು ಕಾದುನೋಡಬೇಕಿದೆ.












Click it and Unblock the Notifications